Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಎಷ್ಟೇ ಕ್ಲೋಸ್ ಇದ್ದರೂ, ಅವನು ಇದೆಲ್ಲಾ ಅವಳಿಂದ ಮುಚ್ಚಿಡುತ್ತಾನೆ!
ಮಹಿಳೆಯರಲ್ಲಿ ಗುಟ್ಟುಗಳು ಉಳಿಯುವುದಿಲ್ಲವೆನ್ನುವ ಮಾತಿದೆ. ಏನೇ ಗುಟ್ಟಿನ ವಿಷಯಗವಾಗಿದ್ದರೂ ಮಹಿಳೆಯರು ಅದನ್ನು ಒಂದಲ್ಲ ಒಂದು ದಿನ ಹೊರಹಾಕಿಯೇ ಹಾಕುತ್ತಾರೆ. ಅವರ ಮನಸ್ಸಿನಲ್ಲಿ ಯಾವುದೇ ಗುಟ್ಟು ಸುರಕ್ಷಿತವಲ್ಲ. ಅದೇ ಪುರುಷರು ಕೆಲವೊಂದು ವಿಷಯಗಳನ್ನು ಮುಚ್ಚಿಡಲು ತುಂಬಾ ಪ್ರಯತ್ನ ಮಾಡುತ್ತಾರೆ. ಆದರೆ ಇದು ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಒಂದಂತೂ ಸತ್ಯ ಪುರುಷರು ಕೆಲವೊಂದು ಗುಟ್ಟುಗಳನ್ನು ಮಹಿಳೆಯರಿಂದ ಮುಚ್ಚಿಡುತ್ತಾರೆ.
ಯಾಕೆಂದರೆ ಈ ಗುಟ್ಟುಗಳು ಮಹಿಳೆಯರಿಗೆ ಗೊತ್ತಾದರೆ ಅದರಿಂದ ಪುರುಷರ ಜೀವನ ಗೊಂದಲದಲ್ಲಿ ಸಿಲುಕಬಹುದು. ಈ ಕಾರಣದಿಂದಾಗಿಯೇ ಪುರುಷರು ಏನೇ ಆದರೂ ಕೆಲವು ಗುಟ್ಟನ್ನು ಮಾತ್ರ ತಮ್ಮಲ್ಲೇ ಇಟ್ಟುಕೊಂಡಿರುತ್ತಾರೆ. ಪುರುಷರು ಯಾವ್ಯಾವ ಗುಟ್ಟುಗಳನ್ನು ಮಹಿಳೆಯರಿಂದ ಮುಚ್ಚಿಡುತ್ತಾರೆ ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದೆ....

ನೀನು ನಿಜಕ್ಕೂ ಸುಂದರವಾಗಿಯೇ ಕಾಣುತ್ತೀ!!
ಶೇಕಡಾ 90ರಷ್ಟು ಪುರುಷರು ಪ್ರತಿಯೊಬ್ಬ ಮಹಿಳೆಗೂ ಇದೇ ರೀತಿಯ ಪ್ರಶಂಸೆ ಕೊಡುತ್ತಾರೆ. ಒಂದು ಅಧ್ಯಯನದ ಪ್ರಕಾರ ಪುರುಷರು ಪ್ರತಿಯೊಬ್ಬ ಮಹಿಳೆಗೂ ನೀನು ತುಂಬಾ ಸುಂದರವಾಗಿದ್ದಿ ಎನ್ನುವ ಪ್ರಶಂಸೆ ಕೊಡುತ್ತಾರೆ ಎಂದು ತಿಳಿದುಬಂದಿದೆ.

ಪ್ರೀತಿಯ ಉದಾಸೀನತೆ
ಕೆಲವು ಪುರುಷರು ಏನೂ ಮಾಡದೆ ಸುಮ್ಮನೆ ಹಾಗೆ ಕುಳಿತಿರುತ್ತಾರೆ. ಕೆಲವು ಪುರುಷರು ತುಂಬಾ ಶಾಂತಿಯಿಂದ ಸಮಯ ಕಳೆಯಲು ಬಯಸಿದರೆ ಇನ್ನು ಕೆಲವು ಪುರುಷರು ಸಂಪೂರ್ಣ ದಿನ ಮಲಗಿ, ತಿನ್ನುತ್ತಾ ಅಥವಾ ಕುಡಿಯುತ್ತಾ ಕಳೆಯಲು ಬಯಸುವರು. ಈ ಸಮಯದಲ್ಲಿ ಅವರಿಗೆ ಕರೆ ಮಾಡಿದರೂ ಅವರು ತುಂಬಾ ವ್ಯಸ್ತರಾಗಿರುವಂತೆ ತೋರಿಸಿಕೊಡುವರು. ಆತ ಕೆಲವು ಸಮಯ ಮಲಗುವ ತಯಾರಿಯಲ್ಲಿರುತ್ತಾನೆ.

ಎಲ್ಲಾ ತಿರಸ್ಕಾರಗಳು ಸ್ವೀಕಾರ
ನಿಮ್ಮನ್ನು ಪ್ರೀತಿಸುತ್ತಿರುವ ವ್ಯಕ್ತಿ ಹಿಂದೆ ಹಲವಾರು ಮಂದಿಗೆ ಪ್ರೀತಿ ಪ್ರಸ್ತಾವ ಮಾಡಿ ತಿರಸ್ಕಾರ ಎದುರಿಸಿರಬಹುದು. ಆದರೆ ಯಾವತ್ತೂ ಇಂತಹ ತಿರಸ್ಕಾರದ ಬಗ್ಗೆ ಮಾತನಾಡಲ್ಲ. ಆತ ತನ್ನ ಮೇಲೆ ಎಷ್ಟು ಮಂದಿ ಮಹಿಳೆಯರು ಕಣ್ಣಿಟ್ಟಿದ್ದರು ಎಂದು ಮಾತ್ರ ಹೇಳುತ್ತಾನೆ.

ವಿವರ ಕಳಕೊಳ್ಳುವುದು
ಪುರುಷರು ಕೆಲವು ಸಲ ವಿವರ ಕಳೆದುಕೊಳ್ಳುವರು. ಪುರುಷರು ಕೆಲವು ದೊಡ್ಡ ವಿಷಯಗಳ ಬಗ್ಗೆ ಗಮನಹರಿಸುವರು. ಆದರೆ ಸಣ್ಣ ವಿಚಾರ ಮರೆತುಬಿಡುವರು. ಇದರಿಂದಾಗಿ ಅವರಿಗೆ ನೀಡಿರುವ ಪ್ರತಿಯೊಂದು ಕೆಲಸವು ಗೊಂದಲದಿಂದ ಇರುವುದು.

ಅಸಂಬದ್ಧ ವಿಚಾರಗಳ ಬಗ್ಗೆ ಚಿಂತಿಸಿ ಖುಷಿ
ಹಲವಾರು ಸಮಸ್ಯೆಗಳು ಹಾಗೂ ಜವಾಬ್ದಾರಿಗಳು ಹೆಗಲ ಮೇಲಿರುವಾಗ ಪುರುಷರು ಇದರ ಬಗ್ಗೆ ಯೋಚನೆ ಮಾಡುತ್ತಾ ಇರುವರು. ಆದರೆ ಅವರಿಗೆ ವಿಶ್ರಾಂತಿ ಸಿಕ್ಕಿದಾಗ ಅವರು ಕೆಲವು ಅಸಂಬದ್ಧ ವಿಚಾರಗಳ ಬಗ್ಗೆ ಚಿಂತಿಸುವರು. ಕೆಲವರು ಅಶ್ಲೀಲ ಚಿತ್ರಗಳ ಬಗ್ಗೆ ಚಿಂತಿಸುವುದರಿಂದ ತಪ್ಪಿಸಿಕೊಳ್ಳುವರು!

ಪುರುಷ ಸ್ಕ್ಯಾನ್ ಮಾಡಬಲ್ಲ!
ಪುರುಷರು ಪ್ರತಿಯೊಬ್ಬ ಮಹಿಳೆಯನ್ನು ಸ್ಕ್ಯಾನ್ ಮಾಡಬಲ್ಲ. ಸುಂದರವಾಗಿರುವ ಮಹಿಳೆಯರನ್ನು ಪುರುಷರು ಎಲ್ಲಾ ರೀತಿಯಿಂದಲೂ ಸ್ಕ್ಯಾನ್ ಮಾಡಬಲ್ಲರು.

ಪುರುಷರಿಗೂ ಭೀತಿಯಿದೆ
ಕೆಲವು ಪುರುಷರು ತಾವು ತುಂಬಾ ಧೈರ್ಯಶಾಲಿಗಳೆಂದು ತೋರಿಸಿಕೊಳ್ಳುವರು. ಆದರೆ ಅವರು ಒಳಗಿಂದ ತುಂಬಾ ಹೆದರುಪುಕ್ಕಲರು. ಕೆಲವು ಪುರುಷರು ಯಾವುದೇ ಕಾರಣವಿಲ್ಲದೆ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾ ಇರುವರು.

ಪುರುಷರಿಗೂ ಬೆಂಬಲ ಬೇಕು
ಪುರುಷರಿಗೂ ಭಾವನಾತ್ಮಕವಾಗಿ ಬೆಂಬಲ ಬೇಕಿರುವುದು. ಅದರೆ ಇದನ್ನು ಕೇಳಲು ಅವರು ಹಿಂಜರಿಯುವರು. ಪುರುಷರು ಒಳಗಿನಿಂದ ಉರಿಯುತ್ತಾ ಇದ್ದರೂ ಹೊರಗಿಂದ ತುಂಬಾ ಖುಷಿಯಲ್ಲಿರುವಂತೆ ತೋರಿಸಿಕೊಡುವರು.



Click it and Unblock the Notifications