Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಗಡ್ಡ ಬಿಟ್ಟ ಪುರುಷರನ್ನು, ಮಹಿಳೆಯರು ತುಂಬಾ ಇಷ್ಟಪಡುತ್ತಾರಂತೆ!
ಕೆಲವು ಮಹಿಳೆಯರಿಗೆ ಎರಡು ದಿನಕ್ಕಿಂತ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ನೀಡಿದರೂ ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ!
ಈಗ ಬಹುತೇಕ ಪುರುಷರು ರಗಡ್ ಲುಕ್ ಎಂದು ಗಡ್ಡ ಮತ್ತು ಮೀಸೆಯನ್ನು ಉರಿಗೊಳಿಸುವುದನ್ನು ನೀವು ನೋಡಿರಬಹುದು. ಮಹಿಳೆಯರು ಈ ಲುಕ್ ಅನ್ನು ಇಷ್ಟಪಡುತ್ತಾರೆ ಎಂದೇ ಪುರುಷರು ಈ ಲುಕ್ ಅನ್ನು ಬಯಸುವುದು. ಆದರೆ ಸಾಮಾನ್ಯವಾಗಿ ಒಂದು ನೀತಿ ಇದೆ ಮಹಿಳೆಯರಿಗೆ ಗಡ್ಡವನ್ನು ಕಂಡರೆ ಆಗುವುದಿಲ್ಲ. ಅದರಲ್ಲೂ ಹೆಂಡತಿಯರು ಗಂಡನ ಕೆನ್ನೆಯ ಮೇಲೆ ಸ್ವಲ್ಪ ಕೂಳೆ ಬಂದರೂ ಚುಂಬಿಸುವಾಗ ಮತ್ತು ಮುದ್ದಾಡುವಾಗ ಕಿರಿಕಿರಿಗೆ ಒಳಗಾಗಿ ಗಂಡನಿಗೆ ಒಂದು ಏಟು ಸಹ ಬಿಟ್ಟು ಶೇವ್ ಮಾಡಿ ಎಂದು ಹೇಳುತ್ತಾರೆ. ಗಡ್ಡ ಬೆಳೆಸಲು ನೀರು-ಗೊಬ್ಬರದ ಅಗತ್ಯವಿಲ್ಲ..!
ಆದರೆ ಕೆಲವು ಮಹಿಳೆಯರು ಈಗ ಇರುವ ಟ್ರೆಂಡ್ ಅನ್ನು ತನ್ನ ಸಂಗಾತಿ ಸಹ ಪಾಲಿಸಬೇಕು ಎಂದು ಗಡ್ಡ ಬೆಳೆಸಲು ಪ್ರೋತ್ಸಾಹಿಸುತ್ತಾರೆ. ಈ ಬಗೆಯ ಗಡ್ಡಗಳು ಕುರುಚಲು ಕಾಡಿನಂತೆ ಅಡ್ಡಾದಿಡ್ಡಿ ಬೆಳೆದಿರುವುದಿಲ್ಲ. ಅದನ್ನು ಚೆನ್ನಾಗಿ ಟ್ರಿಮ್ ಮಾಡಿ, ಶಾಂಪೂ ಮತ್ತು ಕಂಡೀಶನ್ ಹಾಕಿ ಬೆಳೆಸಲಾಗಿರುತ್ತದೆ. ಬನ್ನಿ ಈ ಗಡ್ಡಪ್ಪಂದಿರ ಕುರಿತು ಮಹಿಳೆಯರ ಅಭಿಪ್ರಾಯಗಳನ್ನು ತಿಳಿದುಕೊಳ್ಳೋಣ....

ವಾಸ್ತವ #1
ಕೆಲವು ಸಂಶೋಧನೆಗಳ ಪ್ರಕಾರ ಗಡ್ಡವನ್ನು ಇಷ್ಟಪಡುವ ಮಹಿಳೆಯರ ತಂದೆ, ಅಜ್ಜ ಅಥವಾ ಆಕೆಯ ಆಪ್ತರಲ್ಲಿ ಯಾರಾದರೂ ಗಡ್ಡವನ್ನು ಹೊಂದಿದ್ದು ಆ ವ್ಯಕ್ತಿತ್ವವನ್ನು ಆಕೆ ತನ್ನ ಪುರುಷನಲ್ಲಿಯೂ ಕಾಣಬಯಸುತ್ತಾಳೆ. ಇದು ಗಡ್ಡವನ್ನು ಇಷ್ಟಪಡಲು ಪ್ರಮುಖವಾದ ಕಾರಣವಾಗಿದೆ.

ವಾಸ್ತವ #2
ಹಲವಾರು ಸಮೀಕ್ಷೆಗಳಲ್ಲಿ ಮಹಿಳೆಯರು ಗಡ್ಡವು ತಮ್ಮ ಕೆನ್ನೆಯ ತ್ವಚೆಯನ್ನು ತರಚುವ ಅನುಭವ ತಮಗೆ ಇಷ್ಟ, ಹಾಗಾಗಿ ನಾವು ಗಡ್ಡವನ್ನು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ.

ವಾಸ್ತವ #3
ಗಡ್ಡವು ಮುಖದ ವಿಸ್ತರಸಿದ ಭಾಗವಾಗಿ ಕಾಣುತ್ತದೆ. ಇದರಿಂದಾಗಿ ಮುಖವು ಸ್ನಾಯುಗಳಿಂದ ಕೂಡಿದಂತೆ ಕಾಣುತ್ತದೆ. ಇದು ಮಹಿಳೆಯರನ್ನು ಸುಪ್ತವಾಗಿ ಆಕರ್ಷಿಸುತ್ತದೆ.

ವಾಸ್ತವ #4
ಗಡ್ಡವು ಪ್ರಬುದ್ಧತೆಯ ಸಂಕೇತ. ಬಹುತೇಕ ಮಹಿಳೆಯರು ಪ್ರಬುದ್ಧ ವ್ಯಕ್ತಿಯ ಜೊತೆಗೆ ಇರುವುದು ಸುರಕ್ಷಿತ ಎಂದು ಭಾವಿಸುತ್ತಾರೆ.

ವಾಸ್ತವ #5
ಗಡ್ಡ ಇರುವ ಮತ್ತು ಗಡ್ಡ ಇಲ್ಲದಿರುವ ವ್ಯಕ್ತಿಗಳಿಬ್ಬರನ್ನು ನೀವು ಹೋಲಿಸಿ ನೋಡಿದಾಗ ಗಡ್ಡ ಇರುವ ವ್ಯಕ್ತಿಯು ತುಂಬಾ ಸದೃಢನಾಗಿ ಕಾಣುತ್ತಾನೆ.

ವಾಸ್ತವ #6
ಕೆಲವು ಮಹಿಳೆಯರು ಚೆನ್ನಾಗಿ ಶೇವ್ ಮಾಡಿದ ಪುರುಷರನ್ನು ಹೆಣ್ಣಿನಂತೆ ಕಾಣುತ್ತಾನೆ ಎಂದು ತಿರಸ್ಕರಿಸುತ್ತಾರೆ.



Click it and Unblock the Notifications
