Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಆ ಒಂದು ರಾತ್ರಿ ಕಳೆಯುವ ಭೀತಿ ಮಾತ್ರ ಇದ್ದೇ ಇರುತ್ತದೆ!
ಪರಸ್ಪರ ಪರಿಚಯವಾಗಿ ಹತ್ತಿರವಾದವರ ಜತೆ ಒಂದು ರಾತ್ರಿ ಕಳೆಯುವುದು ತುಂಬಾ ಸಾಮಾನ್ಯ ವಿಚಾರ. ಇಲ್ಲಿ ಯಾವುದೇ ಅಂಜಿಕೆ, ಆತಂಕವಿರುವುದಿಲ್ಲ. ಇಬ್ಬರಿಗೂ ಪರಸ್ಪರ ಪರಿಚಯವಿರುವುದರಿಂದ ಯಾವುದೇ ಭಯ ಕಾಡುವುದಿಲ್ಲ. ಆದರೆ ಹೊಸ ವ್ಯಕ್ತಿಗಳೊಂದಿಗೆ ಒಂದು ರಾತ್ರಿಯನ್ನು ಕಳೆಯಬೇಕಾದರೆ ಆಗ ಆತಂಕ ಹಾಗೂ ಸಂತೋಷ ಎರಡೂ ಆಗುತ್ತದೆ.
ಆದರೆ ಕೆಲವರಿಗೆ ಕಳೆದ ಸಮಯವನ್ನು ಕೆಲವು ದಿನಗಳ ಕಾಲ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಹಲವಾರು ದಿನಗಳ ನಿದ್ರೆ ಕೂಡ ಹಾಳಾಗಬಹುದು. ಅಂಜಿಕೆ, ಸಂತೋಷ, ಪಶ್ಚಾತ್ತಾಪ, ಗೊಂದಲ ಮತ್ತು ಹಲವಾರು ಮಿಶ್ರ ಪ್ರತಿಕ್ರಿಯೆಗಳು ನಿಮ್ಮನ್ನು ಕಾಡಬಹುದು. ಹೊಸ ವ್ಯಕ್ತಿಯೊಂದಿಗೆ ಸಮಯ ಕಳೆಯಲು ಬಯಸಿದ್ದರೆ ಏನು ಮಾಡಬೇಕೆನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ನೀವು ತಯಾರಾಗದೆ ಇದ್ರೆ ಮುಂದೂಡಿ
ಹೊಸ ಸಂಗಾತಿಯನ್ನು ಮುಟ್ಟಲು ಅಥವಾ ಅವರು ನಿಮ್ಮನ್ನು ಸ್ಪರ್ಶಿಸುವಾಗ ಅಂಜಿಕೆಯಾಗುತ್ತಾ ಇದ್ದರೆ ಮೊದಲು ದೈಹಿಕ ಹಾಗೂ ಮಾನಸಿಕವಾಗಿ ಇದಕ್ಕೆ ತಯಾರಾಗಿದೆ. ಆ ರಾತ್ರಿಯನ್ನು ಕಳೆಯಲು ನಿಮ್ಮ ಮನಸ್ಸು ತಯಾರಿಲ್ಲದೆ ಇದ್ದರೆ ಸ್ವಲ್ಪ ಸಮಯ ಕೇಳಿ.

ಬೆತ್ತಳಾಗಲು ತಯಾರಾಗಿದ್ದೀರಾ?
ಆ ರಾತ್ರಿಯ ಸಮಯವು ನಿಮ್ಮಲ್ಲಿ ಪ್ರೀತಿ ಕೂಡ ಮೂಡಿಸಬೇಕು. ಇದಕ್ಕೆ ತಯಾರಾಗಿದ್ದೀರಾ? ನೀವು ಸಂಪೂರ್ಣವಾಗಿ ಇದಕ್ಕೆ ತಯಾರಾಗದೆ ಇದ್ದರೆ ಅದನ್ನು ಆನಂದಿಸಲು ಸಾಧ್ಯವಿಲ್ಲ. ಹೊಸ ಸ್ಪರ್ಶಕ್ಕೆ ನಿಮ್ಮ ದೇಹವು ಸ್ಪಂದಿಸದೆ ಇದ್ದರೆ ಎದುರಿನ ವ್ಯಕ್ತಿಗೂ ನಿರಾಶೆಯಾಗಬಹುದು. ಆ ವ್ಯಕ್ತಿಯ ಜತೆ ನೀವು ಆರಾಮದಾಯಕವಾಗಿ ಇಲ್ಲದಿದ್ದರೆ ಮನಸ್ಸಿನಲ್ಲಿ ಅದು ಕಾಡುತ್ತಾ ಇರುತ್ತದೆ.
ಹಿರಿಯರೇ ನಿಶ್ಚಯಿಸಿದ ಮದುವೆ, ಆದರೆ ಆ ಮೊದಲ ರಾತ್ರಿ....

ಆದ್ಯತೆ ಬಗ್ಗೆ ಮಾತನಾಡಿ
ಕೆಲವೊಂದು ಜಾಗಗಳನ್ನು ಮುಟ್ಟಿದಾಗ ನಿಮಗೆ ಕೋಪ ಬರುತ್ತದೆಯಾ? ಇನ್ನೊಂದು ಕಡೆ ಮುಟ್ಟಿದಾಗ ನಿಮಗೆ ತುಂಬಾ ಸಂತೋಷವಾಗುತ್ತದೆಯಾ? ಈ ವಿಚಾರದ ಬಗ್ಗೆ ನೀವು ಸಂಗಾತಿಯೊಂದಿಗೆ ಮಾತನಾಡಿ.

ಚಿಂತೆಯಿದೆಯಾ?
ಗರ್ಭ ಧರಿಸುವ ಅಥವಾ ಕಾಂಡೋಮ್ ನಿಂದ ಅಲರ್ಜಿಯಾಗುವ ಬಗ್ಗೆ ಚಿಂತೆಯಿದ್ದರೆ ಇದರ ಬಗ್ಗೆ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ.

ಸ್ಥಳದ ಮಹತ್ವ ಯಾಕೆ?
ಒತ್ತಡದಿಂದ ಮುಕ್ತರಾಗದೆ ಇದ್ದರೆ ನಿಮಗೆ ಬೆರೆಯಲು ಸಾಧ್ಯವಾಗುವುದಿಲ್ಲ. ನೀವು ಆರಾಮವಾಗಿರಬಲ್ಲ ಹಾಗೂ ಯಾವುದೇ ಪ್ರತಿಬಂಧಗಳು ಇಲ್ಲದೆ ಇರುವಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ನಿಮಗೆ ಭಯ ಹಾಗೂ ಸಿಕ್ಕಿಹಾಕೊಳ್ಳುತ್ತೇವೆಂಬ ಭೀತಿಯಿದ್ದರೆ ಆ ಸ್ಥಳದಲ್ಲಿ ನಿಮಗೆ ಮೊದಲ ಅನುಭವದ ಸುಖ ಸಿಗಲು ಸಾಧ್ಯವೇ ಇಲ್ಲ.

ಅಂತ್ಯಕ್ಕಿಂತ ಆರಂಭ ಮುಖ್ಯ
ಲೈಂಗಿಕ ಕ್ರಿಯೆಗೆ ಮುನ್ನ ನಡೆಸುವ ಆಟದಲ್ಲಿ ಶೇ.80ರಷ್ಟು ತೊಡಗಿಸಿಕೊಳ್ಳಬೇಕು. ಮೊದಲೇ ಯೋಚನೆ ಮಾಡಿಕೊಳ್ಳದೆ ಈ ಆಟದಲ್ಲಿ ತುಂಬಾ ಚೆನ್ನಾಗಿ ಪಾಲ್ಗೊಳ್ಳಿ.

ಪ್ರದರ್ಶನದ ಬಗ್ಗೆ ಚಿಂತೆ ಬಿಟ್ಟುಬಿಡಿ
ಇಂದಿನ ದಿನಗಳಲ್ಲಿ ಪ್ರತಿಯೊಂದು ಪ್ರದರ್ಶನದ ಮೇಲೆ ನಿರ್ಭರವಾಗಿರುತ್ತದೆ. ವಿದ್ಯಾರ್ಥಿಯಾಗಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸುವ ಬಗ್ಗೆ, ಬಳಿಕ ವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಯಾವಾಗಲೂ ಚಿಂತೆ ಮಾಡಿರುವುದು ಸಾಕು. ಆದರೆ ಈಗ ಎಲ್ಲವನ್ನು ಬಿಟ್ಟು ಆ ಕ್ಷಣಗಳನ್ನು ಆನಂದಿಸಿ. ಮೊದಲ ಸಲ ನೀವು ಯಾರ ಎದುರಿಗಾದರೂ ನಗ್ನವಾಗುತ್ತಲಿದ್ದರೆ ಈ ವಿಷಯಗಳನ್ನು ಗಮನದಲ್ಲಿರಿಸಿ.



Click it and Unblock the Notifications
