ಲವ್ ಬ್ರೇಕ್‌ ಅಪ್‌ ಆದರೇನಂತೆ? ಪ್ರಪಂಚವೇನೂ ಮುಳುಗಿ ಹೋಗಲ್ಲ!

By: Deepak
Subscribe to Boldsky

ಪ್ರೀತಿ ಎಷ್ಟು ಮಧುರವೋ ಅದು ಮುರಿದು ಬಿದ್ದಾಗ ಆಗುವ ನೋವು ಸಹ ಅಷ್ಟೇ ಯಾತನಾಮಯ. ಬ್ರೇಕ್ ಅಪ್ ಸಮಯವನ್ನು ನಿಭಾಯಿಸುವುದು ಹೇಳಿದಷ್ಟು ಸುಲಭವಾಗಿರುವುದಿಲ್ಲ. ಅದರಲ್ಲಿಯೂ ನೀವು ಭಗ್ನ ಪ್ರೇಮಿಯಾದಲ್ಲಿ ಅದನ್ನು ನಿಭಾಯಿಸುವುದು ಅಷ್ಟೇನು ಸುಲಭವಾಗಿರುವುದಿಲ್ಲ. ಸ್ವಾಭಾವಿಕವಾಗಿ ಪ್ರೀತಿಗೆ ನಾವು ತುಂಬಾ ಸಮಯ ಮತ್ತು ಬೆಲೆ ಹಾಗು ಕಾಳಜಿಯನ್ನು ನೀಡುತ್ತೇವೆ.

ಅದೆಲ್ಲಾ ಮಾಡುವುದು ಸಂಬಂಧವನ್ನು ಉಳಿಸಿಕೊಳ್ಳಲು. ಆದರೆ ನಿಮ್ಮೆಲ್ಲ ಪ್ರಯತ್ನಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿಬಿಟ್ಟರೆ ಅದರಿಂದ ಆಗುವ ನೋವು ಅಷ್ಟಿಷ್ಟಲ್ಲ. ಹಲವಾರು ಜನರು ಬ್ರೇಕ್-ಅಪ್ ಆದ ನಂತರ ಖಿನ್ನತೆಗೆ ಒಳಗಾಗಿಬಿಡುತ್ತಾರೆ. ಇದು ಏಕೆ ಆಗುತ್ತೆ ಎಂದರೆ ಅವರು ತಮ್ಮ ಸಂಗಾತಿಯನ್ನು ಬಿಟ್ಟು ಮುಂದಿನ ಜೀವನವನ್ನು ಕಳೆಯಲು ಅವರು ಮಾನಸಿಕ ಸಿದ್ಧರಾಗಿರುವುದಿಲ್ಲ. ಈ ನೋವಿನಿಂದ ಅವರು ಹೊರ ಬರಲು ಹಲವಾರು ಹಾನಿಕಾರಕ ದಾರಿಗಳನ್ನು ಅವರು ಅನುಸರಿಸಬಹುದು. 

ಅವಳು ಹೋದಳೆಂದು, ಹೀಗೆ ಮಾಡಬಹುದೇ?

ಆದರೆ ಒಂದು ವಿಚಾರ ನೆನಪಿಡಿ ಒಮ್ಮೊಮ್ಮೆ ಬ್ರೇಕ್ ಅಪ್ ಸಹ ಒಳ್ಳೆಯದಕ್ಕೆ ಆಗುತ್ತದೆ. ಒಮ್ಮೊಮ್ಮೆ ಇಬ್ಬರೂ ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಸಿದ್ಧರಾಗಿರುವುದಿಲ್ಲ ಹಾಗು ಸಂಬಂಧದಲ್ಲಿ ಅವರಿಗೆ ಆಸಕ್ತಿ ಕಡಿಮೆಯಾಗಿರುತ್ತದೆ. ಇಂದು ನಾವು ಇಂತಹ ಬ್ರೇಕಪ್ ಸಂಭವಿಸಿದಾಗ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಇಂತಹ ಕಠಿಣ ಸನ್ನಿವೇಶ ನಿಮ್ಮ ಜೀವನದಲ್ಲಿ ಬರುವುದು ಬೇಡ ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಇವುಗಳನ್ನು ತಿಳಿದುಕೊಳ್ಳಿ. ಮುಂದೆ ಓದಿ..... 

ನಿಮ್ಮ ಮಾಜಿ ಸಂಗಾತಿಯನ್ನು ಹಿಂಬಾಲಿಸಲು ಹೋಗಬೇಡಿ!

ನಿಮ್ಮ ಮಾಜಿ ಸಂಗಾತಿಯನ್ನು ಹಿಂಬಾಲಿಸಲು ಹೋಗಬೇಡಿ!

ಸಂಬಂಧದಲ್ಲಿ ಒಂದಾಗುವುದು ಎಷ್ಟು ಸಹಜವೋ? ಬೇರ್ಪಡುವುದು ಸಹ ಅಷ್ಟೇ ಸಹಜ! ಅದನ್ನು ಆರೋಗ್ಯಕರವಾಗಿ ಸ್ವೀಕರಿಸಿ. ಬ್ರೇಕಪ್ ಆದ ನಂತರ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಿಸಲು ಹೋಗಬೇಡಿ. ನಿಮ್ಮ ಸ್ನೇಹಿತರು ಅವರ ಬಗ್ಗೆ ಮಾತನಾಡಬಹುದು. ಅದರ ಕುರಿತು ಗಮನವಹಿಸಬೇಡಿ, ನೀವು ನಿಮ್ಮ ಸಂತೋಷವನ್ನು ಮಾತ್ರ ನೋಡಿಕೊಳ್ಳಿ. ಅವರ ಕುರಿತಾಗಿ ಚಿಂತೆಯನ್ನು ಬಿಡಿ. ನಿಮ್ಮ ಸಂಗಾತಿ ನಿಮ್ಮಿಂದ ದೂರವಾಗಿ ನೊಂದುಕೊಂಡಿದ್ದಾರೆ ಅಥವಾ ಖುಷಿಯಾಗಿದ್ದಾರೆ ಎಂದು ಯಾವುದೇ ಮಾತು ಕೇಳಿದರೂ ನಿಮಗೆ ಬೇಸರವಾಗಬಹುದು. ಹಾಗಾಗಿ ಅವರ ಕುರಿತು ತಲೆಕೆಡಿಸಿಕೊಳ್ಳಬೇಡಿ.

ಅವರಷ್ಟಕ್ಕೇ ಅವರನ್ನು ಬಿಟ್ಟುಬಿಡಿ...

ಅವರಷ್ಟಕ್ಕೇ ಅವರನ್ನು ಬಿಟ್ಟುಬಿಡಿ...

ಒಮ್ಮೆ ಬೇರ್ಪಟ್ಟ ಮೇಲೆ ಹೇಗಾದರೂ ಮಾಡಿ ಮತ್ತೆ ಸಂಬಂಧವನ್ನು ಮರುಸ್ಥಾಪಿಸಲು ಮನಸ್ಸು ಬಯಸಬಹುದು. ಆದರೆ ಹೀಗೆ ಮಾಡಿದಾಗ ಅದರಲ್ಲಿ ಭಾವನೆಗಳ ಕೊರತೆ ಇರುವುದನ್ನು ನೀವು ಬಹುಬೇಗ ಗುರುತಿಸುತ್ತೀರಿ. ಹೀಗೆ ಮಾಡುವುದರಿಂದ ನೀವು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತೀರಿ ಅಷ್ಟೇ. ಜೊತೆಗೆ ನೀವು ನಿಮ್ಮ ಸಂಗಾತಿಯನ್ನು ಸಹ ಮತ್ತೆ ಘಾಸಿಗೊಳಿಸುತ್ತೀರಿ.

ಬ್ರೇಕ್‌ಅಪ್ ನಂತರ ಸಾಮಾಜಿಕ ಜಾಲತಾಣಗಳಿಂದ ದೂರವಿರಿ!

ಸಿನಿಮಾವೇ ಬೇರೆ-ನಿಜ ಜೀವನವೇ ಬೇರೆ...

ಸಿನಿಮಾವೇ ಬೇರೆ-ನಿಜ ಜೀವನವೇ ಬೇರೆ...

ಸಿನಿಮಾಗಳಲ್ಲಿ ಹೀಗೆ ಇರುವುದನ್ನು ನೋಡಲು ಚೆನ್ನಾಗಿರುತ್ತದೆ; ಆದರೆ ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲ ಬಿಡಿ. ಒಂದು ವೇಳೆ ನಿಮ್ಮ ಹಿಂದಿನ ಸಂಗಾತಿ ಬಗ್ಗೆ ನಿಮಗೆ ಇನ್ನೂ ಒಳ್ಳೆಯ ಭಾವನೆ ಇದ್ದಲ್ಲಿ, ಅವರು ಹೊಸ ಸಂಬಂಧವನ್ನು ಆರಂಭಿಸಿದ ತಕ್ಷಣ ನಿಮ್ಮ ಮನಸ್ಸಿಗೆ ಘಾಸಿಯಾಗುತ್ತದೆ.

ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಕಾಲ ಕಳೆಯಿರಿ

ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಕಾಲ ಕಳೆಯಿರಿ

ನಿಮ್ಮ ಮುರಿದುಬಿದ್ದ ಸಂಬಂಧದ ಕುರಿತು ಆಲೋಚನೆ ಮಾಡುವ ಬದಲಿಗೆ, ನಿಮ್ಮ್ ಪ್ರೀತಿ ಪಾತ್ರರ ಜೊತೆಗೆ ಕಾಲ ಕಳೆಯಿರಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ನಿಮಗೆ ಈ ನೋವಿನಿಂದ ಹೊರ ಬರಲು ಸಹಾಯ ಮಾಡುತ್ತಾರೆ.

ಸ್ವಲ್ಪ ಹೊತ್ತು ಏಕಾಂತವಾಗಿರಿ....

ಸ್ವಲ್ಪ ಹೊತ್ತು ಏಕಾಂತವಾಗಿರಿ....

ನಿಮಗೆ ಎಂದು ಸ್ವಲ್ಪ ಏಕಾಂತವನ್ನು ಇರಿಸಿಕೊಳ್ಳಿ. ನಿಮಗೆ ಇಷ್ಟವಾದ ಕೆಲಸವನ್ನು ಈ ಅವಧಿಯಲ್ಲಿ ಮಾಡಿ.

ತಪ್ಪನ್ನು ಅರಿತು, ಮುಂದಿನ ಜೀವನದ ಬಗ್ಗೆ ಆಲೋಚಿಸಿ

ತಪ್ಪನ್ನು ಅರಿತು, ಮುಂದಿನ ಜೀವನದ ಬಗ್ಗೆ ಆಲೋಚಿಸಿ

ಬ್ರೇಕಪ್ ಆಯಿತು ಎಂದು ಚಿಂತಿಸುವ ಬದಲಿಗೆ ಬ್ರೇಕಪ್‌ಗೆ ಕಾರಣವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ತಪ್ಪು ನಿಮ್ಮಿಂದಲೇ ಆಗಿದ್ದಲ್ಲಿ, ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ನಿಮ್ಮ ಮುಂದಿನ ಭವಿಷ್ಯವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ಮುಂದೆ ಸಂಬಂಧವನ್ನು ಭದ್ರಪಡಿಸಿಕೊಳ್ಳಬಹುದು.

ಲವಲವಿಕೆಯಿಂದಿರಿ...

ಲವಲವಿಕೆಯಿಂದಿರಿ...

ಜಿಮ್‌ಗೆ ಹೋಗಿ, ಹಾಡು ಹಾಡಿ ಇತ್ಯಾದಿ ಮಾಡಿ, ಒಟ್ಟಿನಲ್ಲಿ ಸಂತೋಷವಾಗಿರಿ. ಚೆನ್ನಾಗಿ ಅಲಂಕಾರ ಮಾಡಿಕೊಳ್ಳಿ. ಕುಡಿಯುವುದು ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುವ ಬದಲಿಗೆ ಸಂತೋಷವಾಗಿ ಇರಲು ಪ್ರಯತ್ನಿಸಿ.

ಬ್ರೇಕಪ್ ಆದ ತಕ್ಷಣ ಪ್ರಪಂಚ ಮುಳುಗಿ ಹೋಗುವುದಿಲ್ಲ ನೆನಪಿರಲಿ...

ಬ್ರೇಕಪ್ ಆದ ತಕ್ಷಣ ಪ್ರಪಂಚ ಮುಳುಗಿ ಹೋಗುವುದಿಲ್ಲ ನೆನಪಿರಲಿ...

ನೀವು ಸಂತೋಷವಾಗಿರಲು ಇನ್ನೊಬ್ಬರನ್ನು ಅವಲಂಬಿಸಬೇಡಿ. ನಿಮ್ಮ ಸಂತೋಷ ಸ್ವಾವಲಂಬಿಯಾಗಿರಲಿ. ಬ್ರೇಕಪ್ ಆದ ತಕ್ಷಣ ಪ್ರಪಂಚ ಮುಳುಗಿ ಹೋಗುವುದಿಲ್ಲ. ಸ್ವಲ್ಪ ಆರಾಮವಾಗಿರಿ ಎಲ್ಲವೂ ಸರಿ ಹೋಗುತ್ತದೆ. ನಿಮಗೆ ಹೊಂದಿಕೊಳ್ಳುವ ಮತ್ತೊಬ್ಬರು ಸಿಕ್ಕೇ ಸಿಕ್ಕುತ್ತಾರೆ.

English summary

Do's and Don’ts To Remember After A Break-up!

Many people go into denial and depression after a break-up. This is because they will not be able to cope up with the fact that their ex is no longer a part of their lives. They may resort to detrimental ways to help them cope with it or to rectify what has happened. But one must realize that break-ups are sometimes for the good. It happened because one or both of the parties involved realized that carrying on with the relationship is not for the best interests of either of them.
Subscribe Newsletter