Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊದಲ ಡೇಟಿಂಗ್, ಎಂದಿಗೂ ಸವಿ ನೆನಪಿನ ಬುತ್ತಿ ಆಗಿರಲಿ...
ಜೀವನ ಸಂಗಾತಿಯನ್ನು ಮೊದಲ ಸಲ ಭೇಟಿಯಾಗಲು ಹೋದಾಗ ನೀವು ತುಂಬಾ ಭೀತಿಯಲ್ಲಿ ಇರುತ್ತೀರಿ. ಇದು ನಿಮಗೊಂದು ಅಗ್ನಿಪರೀಕ್ಷೆಯೆನ್ನಬಹುದು. ಯಾಕೆಂದರೆ ಈ ಭೇಟಿ ನಿಮ್ಮಿಬ್ಬರ ಜೀವನವನ್ನೇ ಬದಲಾಯಿಸಲಿದೆ. ಇಲ್ಲಿನ ಪ್ರತಿಯೊಂದು ಕ್ಷಣಗಳು ನಿಮಗೆ ನೆನಪಿರುತ್ತದೆ ಮತ್ತು ಜೀವನದ ಅಂತ್ಯದ ತನಕ ಇದನ್ನು ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತೀರಿ. ಮದುವೆ ಮುಂಚೆ ಡೇಟಿಂಗ್, ಸರಿಯೋ? ತಪ್ಪೋ?
ಆದರೆ ಮೊದಲ ಸಲ ಜೀವನ ಸಂಗಾತಿಯನ್ನು ಭೇಟಿಯಾಗಲು ಹೋಗುವಾಗ ಕೆಲವೊಂದು ವಿಷಯಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನೀವು ಅತಿಯಾಗಿ ಪ್ರೀತಿಸುವವರನ್ನು ಬಿಟ್ಟುಕೊಡಲು ಬಯಸದೆ ಇರುವ ಕಾರಣದಿಂದಾಗಿ ಕೆಲವೊಂದು ತಪ್ಪುಗಳು ಮತ್ತು ಕೆಟ್ಟಗುಣಗಳನ್ನು ಹೇಳಿಕೊಳ್ಳುವುದೇ ಇಲ್ಲ. ತುಂಬಾ ಸಭ್ಯರಂತೆ ಇರುತ್ತೀರಿ. ಪ್ರೀತಿಸುವವರು ಕೈಬಿಡುತ್ತಾರೆ ಎನ್ನುವ ಭೀತಿ ಕೂಡ ಇದರ ಹಿಂದಿರುತ್ತದೆ. ಡೇಟಿಂಗ್ ಮಾಡಿದರೂ ಕಷ್ಟ ಮಾಡದಿದ್ದರೂ ಕಷ್ಟ!
ಆದರೆ ಇಂತಹ ಸಂಬಂಧದಲ್ಲಿ ಮುಂದುವರಿಯುವುದು ಎಷ್ಟು ಸರಿ? ಸಂಗಾತಿಯು ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಕೊಂಡಾಗ ಮಾತ್ರ ಮುಂದಿನ ಜೀವನ ಸರಿಯಾದ ರೀತಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಇಂತಹ ಸಂಬಂಧದಲ್ಲಿ ನಿಮ್ಮ ತಪ್ಪುಗಳನ್ನು ಮುಚ್ಚಲು ಯಾವುದೇ ಪರದೆ ಹಾಕಬೇಕಿಲ್ಲ. ಸಂಬಂಧವೆಂದರೆ ಪರಸ್ಪರರ ಸರಿತಪ್ಪುಗಳನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು. ಹೀಗಿದ್ದಾಗ ಸಂಗಾತಿಯನ್ನು ಭೇಟಿಯಾಗಲು ಹೋಗುವಾಗ ಹೆದರಬೇಕಾದ ಅಗತ್ಯವೇ ಇಲ್ಲ.

ಚಿಂತೆ ಬಿಡಿ-ಕೂಲ್ ಆಗಿರಿ!
ನಿಮ್ಮನ್ನು ಈಗಲೇ ಸ್ವೀಕರಿಸಲಾಗಿರುತ್ತದೆ. ಇದರಿಂದ ನೀವು ಹೆಚ್ಚು ಶ್ರಮವಹಿಸದೆ ಎಲ್ಲವನ್ನು ನಿಭಾಯಿಸಬಹುದಾಗಿದೆ. ಇದರಿಂದ ಡೇಟಿಂಗ್‌ಗೆ ಮೊದಲು ಆರಾಮವಾಗಿರಿ.

ಸಂಗಾತಿಯ ಮುಂದೆ ನಟಿಸುವ ಅಗತ್ಯವಿಲ್ಲ
ಈಗಾಗಲೇ ನಿಮ್ಮನ್ನು ಸ್ವೀಕರಿಸುವ ವ್ಯಕ್ತಿಯನ್ನು ಸೆಳೆಯುವ ಪ್ರಯತ್ನ ಮಾಡುವುದಾದರೂ ಯಾಕೆ? ಸಂಗಾತಿಯ ಮುಂದೆ ನಟಿಸುವ ಅಗತ್ಯವಿಲ್ಲ. ನಿಮ್ಮತನ ತೋರಿಸಿಕೊಳ್ಳಿ.

ಸೌಂದರ್ಯಕ್ಕೆ ಇತಿಮಿತಿ ಇರಲಿ
ಅತಿಯಾಗಿ ಸೌಂದರ್ಯ ಪ್ರದರ್ಶಿಸಬೇಕೆಂದಿಲ್ಲ. ಯಾಕೆಂದರೆ ಪ್ರತೀ ಕ್ಷಣವು ನಾವು ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಕೆಲವೊಂದು ಸಲ ನೀವು ಸುಂದರವಾಗಿ ಕಾಣಬಹುದು ಮತ್ತು ಕೆಲವೊಮ್ಮೆ ನಿಮ್ಮ ಚರ್ಮವು ನಿದ್ರೆಯ ಕೊರತೆಯಿಂದಾಗಿ ಜೋತು ಬಿದ್ದಿರುವಂತೆ ಕಾಣಬಹುದು. ಇದರಿಂದ ಅತಿಯಾಗಿ ಮೇಕಪ್ ಮಾಡಿಕೊಂಡು ಸೌಂದರ್ಯ ಪ್ರದರ್ಶಿಸಬೇಕೆಂದಿಲ್ಲ. ಸ್ವಾಭಾವಿಕ ಸೌಂದರ್ಯ ತೋರಿಸಿದರೆ ತುಂಬಾ ಒಳ್ಳೆಯದು.

ಅಂತರಾಳದ ಪ್ರೀತಿಯೇ ಸಾಕು..
ಆತ ಅಥವಾ ಆಕೆ ನಿಮ್ಮ ಒಳಮನಸ್ಸನ್ನು ಅರ್ಥ ಮಾಡಿಕೊಂಡಿರುತ್ತಾನೆ/ಳೆ. ಇದು ನಿಮ್ಮ ವ್ಯಕ್ತಿತ್ವದ ಸತ್ಯ ಮತ್ತು ಮೂಲತತ್ವ. ಇದು ತಿಳಿದಿರುವ ಕಾರಣದಿಂದಾಗಿ ನಿಮ್ಮ ಬಾಹ್ಯ ತೋರಿಕೆಯು ಸಂಬಂಧವನ್ನು ಮುರಿಯಲು ಅಥವಾ ಬೇರ್ಪಡಿಸಲು ಸಾಧ್ಯವಿಲ್ಲ.

ಇಲ್ಲಿ ಅಹಂಗೆ ಆಸ್ಪದ ಬೇಡ...
ಪರಸ್ಪರರ ಸಂಗದಲ್ಲಿ ಉತ್ತಮ ಭಾವನೆಯಲ್ಲಿರುವುದು ಡೇಟಿಂಗ್‌ನ ಮೊದಲ ಉದ್ದೇಶ. ನಿಮ್ಮ ಅಹಂ ಮತ್ತು ಪರಸ್ಪರರ ಅಹಂನ್ನು ತೃಪ್ತಿಪಡಿಸುವ ಭೇಟಿ ಇದಲ್ಲ.

ಸ್ವೀಕಾರ-ಲೆಕ್ಕಾಚಾರ!
ಸ್ವೀಕಾರವು ಹೃದಯದಿಂದ ಮತ್ತು ಲೆಕ್ಕಾಚಾರವು ತಲೆಯಿಂದ ಬರುತ್ತದೆ. ಆತ ತುಂಬಾ ಲೆಕ್ಕಾಚಾರದ ಅಥವಾ ಆಕೆ ತುಂಬಾ ಲೆಕ್ಕಾಚಾರ ಮಾಡುತ್ತಲಿದ್ದರೆ ಸ್ವೀಕಾರ ಸಾಧ್ಯವಿಲ್ಲ. ನಿಮ್ಮನ್ನು ಆತ/ಆಕೆ ಸಂಪೂರ್ಣವಾಗಿ ಸ್ವೀಕರಿಸಿದ್ದರೆ ಲೆಕ್ಕಾಚಾರಗಳೆಲ್ಲವನ್ನು ಬದಿಗಿಡಿ.



Click it and Unblock the Notifications
