Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಗಂಡು ಮತ್ತು ಹಣ್ಣಿನ ನಡುವೆ ಈ ಅಪಾರ್ಥಕಲ್ಪನೆ ಏಕೆ?
ಹೆಚ್ಚಿನ ಮಹಿಳೆಯರಲ್ಲಿ ಇರುವ ಸಾಮಾನ್ಯ ನಂಬಿಕೆ ಎಂದರೆ "ಈ ಗಂಡಸರೇ ಹೀಗೆ" ಅಂತೆಯೇ ಪುರುಷರಲ್ಲಿ ಸಾಮಾನ್ಯವಾಗಿರುವ ನಂಬಿಕೆ ಎಂದರೆ "ಈ ಹೆಂಗಸರನ್ನು ಅರ್ಥಮಾಡಿಕೊಳ್ಳಲಿಕ್ಕೆ ಭಗವಂತನಿಂದಲೂ ಸಾಧ್ಯವಿಲ್ಲ". ಶಾರೀರಿಕವಾಗಿಯೂ ಮಾನಸಿಕವಾಗಿಯೂ ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಅಪಾರ ವ್ಯತ್ಯಾಸಗಳಿವೆ. ಒಂದೇ ವಿಷಯದ ಕುರಿತು ಇಬ್ಬರ ಆಲೋಚನೆಗಳೂ ಬೇರೆ ಬೇರೆ ರೀತಿ ಇರುತ್ತವೆ.
ಇದಕ್ಕನುಗುಣವಾಗಿ ವರ್ತಿಸುವ ಮತ್ತು ಪ್ರತಿಕ್ರಿಯಿಸುವ ಪರಿಯೂ ಬೇರೆ ಬೇರೆಯಾಗಿರುತ್ತದೆ. ಇದು ಕೆಲವೊಮ್ಮೆ ತಪ್ಪುಗ್ರಹಿಕೆಗೆ ಕಾರಣವಾಗಬಹುದು. ಎಷ್ಟೋ ಸಲ ಹೇಗೆ ಮಾಡಬಹುದು ಎಂದುಕೊಂಡು ಆ ಕೆಲಸ ಇನ್ನೊಬ್ಬರು ಮಾಡದೇ ಇರುವುದು ಹಲವು ಅಪಾರ್ಥಗಳಿಗೆ ಎಡೆಮಾಡಿಕೊಡುತ್ತದೆ. ಅದರಲ್ಲೂ ಪತಿಗೆ ಅಥವಾ ಪತ್ನಿಗೆ ತಿಳಿಯದಂತೆ ಅಥವಾ ತಿಳಿಸುವ ಅಗತ್ಯವಿಲ್ಲದಂತೆ ಕಂಡ ವಿಷಯಗಳ ಕುರಿತಾದ ಚಟುವಟಿಕೆಯ ಬಗ್ಗೆ ತಿಳಿದಾಕ್ಷಣ ಕುತೂಹಲ ಅತ್ಯಂತ ಹೆಚ್ಚಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು, ಭಾವಾವೇಶ ಇತ್ಯಾದಿ. ಈ ಬಗ್ಗೆ ಮನಃಶಾಸ್ತ್ರಜ್ಞರು ಹಲವಾರು ಸಂಶೋಧನೆ ನಡೆಸಿದ್ದು ಕೆಲವಾರು ರೋಚಕ ಮಾಹಿತಿಗಳನ್ನು ನೀಡಿದ್ದಾರೆ. ಇವುಗಳಲ್ಲಿ ಪ್ರಮುಖವಾದುದನ್ನು ಸಂಗ್ರಹಿಸಿ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಮನಸ್ಸು ಕ್ಷೋಭೆಗೊಂಡಿದ್ದಾಗ
ಈ ಸಮಯದಲ್ಲಿ ಪುರುಷರು ಒಂಟಿತನವನ್ನು ಬಯಸುತ್ತಾರೆ. ಒಂಟಿಯಾಗಿದ್ದು ತನ್ನ ಬಗ್ಗೆ ವಿಮರ್ಶಿಸುವುದು, ಎಲ್ಲಿ ತಪ್ಪಾಗಿದೆ ಎಂದು ಅಂದಾಜಿಸುವುದು ಪುರುಷರ ಚಿಂತನೆಯ ಮುಖ್ಯ ವಿಷಯಗಳಾಗಿರುತ್ತವೆ. ಇದೇ ವೇಳೆ ಮಹಿಳೆಯರು ಮನಸ್ಸು ಕ್ಷೋಭೆಗೊಂಡಿದ್ದ ಸಮಯದಲ್ಲಿ ಇತರರೊಂದಿಗೆ ಸಮಾಲೋಚಿಸಿ ತಮ್ಮ ಮನಸ್ಸನ್ನು ಹಗುರಗೊಳಿಸಲು ಯತ್ನಿಸುತ್ತಾರೆ. ಒಂಟಿತನ ಇವರ ಮನಸ್ಸನ್ನು ಇನ್ನಷ್ಟು ಕ್ಷೋಭೆಗೊಳಿಸುತ್ತದೆ.

ಪುರುಷರು ನೇರವಾಗಿ ಹೇಳಬಲ್ಲವರಾಗಿದ್ದಾರೆ
ಆಗಬಹುದು, ಸರಿ ಎಂಬ ಮಾತು ಪುರುಷರಿಂದ ಬಂದರೆ ಇದು ನಿಜವಾಗಿಯೂ ಆಗತ್ತದೆ ಎಂದೇ ಇದರ ಅರ್ಥವಾಗಿರುತ್ತದೆ. ಆದರೆ ಮಹಿಳೆಯರು ಆಗಬಹುದು ಎಂದು ಹೇಳಿದರೆ ಇದು ಆಗಲೂ ಬಹುದು, ಆಗದಿರಲೂಬಹುದು. ಮಹಿಳೆಯರು ಸದಾ ಪುರುಷರೇ ಯಾವುದಾದರೂ ಸರಿ ಇಲ್ಲದಿದ್ದುದಕ್ಕೆ ಕಾರಣವನ್ನು ಹುಡುಕಬೇಕೆಂದು ಬಯಸುತ್ತಾರೆ. ಇದೇ ವೇಳೆ ಪುರುಷರು ಹೀಗೆ ಮಾಡುವುದಿಲ್ಲ, ಏಕೆಂದರೆ ಇವರು ಮಹಿಳೆಯರು ಕೂಡಾ ತಮ್ಮಂತೆಯೇ ನೇರವಾದ ಉತ್ತರವನ್ನು ನೀಡುತ್ತಾರೆ ಎಂದುಕೊಂಡಿರುತ್ತಾರೆ.

ಪುರುಷರು ಸಾಮಾನ್ಯವಾಗಿ ಪ್ರಶ್ನೆಗಳ ಸರಮಾಲೆ ಸುರಿಸುವುದಿಲ್ಲ
ಯಾವುದಾದರೊಂದು ಗಂಭೀರ ಮತ್ತು ಕ್ಲಿಷ್ಟವಾದ ಸಮಸ್ಯೆಯನ್ನು ಪರಾಮರ್ಶಿಸಿದ ಬಳಿಕ ಈ ವಿಷಯವನ್ನು ಇನ್ನಷ್ಟು ಎಳೆಯಲು ಇಚ್ಛಿಸುವುದಿಲ್ಲ. ಆದರೆ ಮಹಿಳೆಯರು ಇದಕ್ಕೆ ತದ್ವಿರುದ್ಧವಾಗಿ ವಿಷಯದ ಪರಾಮರ್ಶೆ ಮುಗಿದ ಬಳಿಕವೂ ಹಲವು ಅನುಮಾನಗಳನ್ನು ಹೊಂದಿದ್ದು ಇವನ್ನು ಪರಿಹರಿಸಿಕೊಳ್ಳಲು ಕೊನೆಯೇ ಇರದ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾರೆ.

ಇನ್ನೊಬ್ಬರ ಮಾತುಗಳನ್ನು ಕೇಳುವುದು
ಸಾಮಾನ್ಯವಾಗಿ ಮಹಿಳೆಯರ ದೂರು ಎಂದರೆ ಅವರು ಮಾತನಾಡುವಾಗ ಪುರುಷರು ಗಮನಕೊಟ್ಟು ಕೇಳುವುದಿಲ್ಲ ಎಂಬುದು. ತಾವು ಮಾತನಾಡುತ್ತಿರುವಾಗ ಸುಮ್ಮನೇ ಕುಳಿತಿದ್ದು ಕೇಳಿದಂತೆ ನಟಿಸುತ್ತಿರುತ್ತಾರೆ ಎಂದೇ ಹೆಚ್ಚಿನ ಮಹಿಳೆಯರು ದೂರುತ್ತಾರೆ. ಒಂದು ವೇಳೆ ನಡು ನಡುವೆ ಪುರುಷರು ಇವರನ್ನು ತಡೆದು ಕೆಲವು ಪ್ರಶ್ನೆಗಳನ್ನು ಕೇಳಿದರೆ ಮಾತ್ರ ತಮ್ಮ ಮಾತುಗಳನ್ನು ಕೇಳುತ್ತಾರೆ ಎಂದು ಹೆಚ್ಚಿನವರು ನಂಬಿದ್ದಾರೆ.

ಪುರುಷರು ಭಾವಿಸುತ್ತಾರೆ, ಮಹಿಳೆಯರು ಖಚಿತಪಡಿಸಿಕೊಳ್ಳುತ್ತಾರೆ
ಹಿಂದೆ ಸಂವಹನ ಕಾಗದಪತ್ರಗಳ ಮುಖಾಂತರ ಇದ್ದಾಗ ಮಕ್ಕಳಿಗೆ ತಂದೆ ಬರೆಯುವ ಪತ್ರದಲ್ಲಿ ಹೀಗಿರುತ್ತಿತ್ತು "ಮಕ್ಕಳೇ, ನೀವು ಅಲ್ಲಿ ಸುಖವಾಗಿದ್ದೇನೆ ಎಂದು ಭಾವಿಸುತ್ತೇನೆ" ಅದೇ ತಾಯಿ ಬರೆಯುವ ಪತ್ರದಲ್ಲಿ ಹೀಗಿರುತ್ತಿತ್ತು. "ಮಕ್ಕಳೇ, ನೀವು ಅಲ್ಲಿ ಸುಖವಾಗಿದ್ದೀರಿ ಎಂದು ಮುಂದಿನ ಪತ್ರದಲ್ಲಿ ಬರೆಯಿರಿ" ಪುರುಷರು ಸಾಮಾನ್ಯವಾಗಿ ಹೆಚ್ಚಿನ ವಿಷಯಗಳನ್ನು ಸರಿ ಎಂದು ಭಾವಿಸಿಕೊಂಡು ಮುಂದುವರೆಯುತ್ತಾರೆ. ಆದರೆ ಮಹಿಳೆಯರು ಯಾವುದೇ ವಿಷಯವನ್ನು ಖಚಿತಪಡಿಸಿಕೊಂಡೇ ಮುಂದುವರೆಯುತ್ತಾರೆ.

ಪುರುಷರು ಚುಟುಕಾದ ಉತ್ತರ ನೀಡುತ್ತಾರೆ
ಒಂದು ವೇಳೆ ಪುರುಷರಿಗೆ "ಇಂದಿನ ದಿನ ಹೇಗಿತ್ತು" ಎಂದು ಪ್ರಶ್ನಿಸಿದರೆ "ಚೆನ್ನಾಗಿತ್ತು" ಎಂಬ ಉತ್ತರ ಸಾಮಾನ್ಯವಾಗಿದೆ. ಆದರೆ ಇದೇ ಪ್ರಶ್ನೆಯನ್ನು ಮಹಿಳೆಯರಿಗೆ ಕೇಳಿದರೆ ಇದು ಪ್ರಶ್ನೆ ಕೇಳಿದವರ ಸ್ನೇಹ ಅಥವಾ ಸಂಬಂಧವನ್ನು ಅನುಸರಿಸಿ ಐದು ನಿಮಿಷದ ಅಥವಾ ಐದು ಘಂಟೆಯ ಉತ್ತರ ಸಿಗುತ್ತದೆ. ಅಪರಿಚಿತರೇನಾದರೂ ಕೇಳಿದರೆ ಇವರು ದುರುಗುಟ್ಟಿ ನೋಡುವ ಪರಿ 'ನಿನಗೇಕೆ ಇದರ ಉಸಾಬರಿ' ಎಂಬ ಅರ್ಥದ ಬಾಣವನ್ನು ಎಸೆಯುತ್ತಾರೆ.



Click it and Unblock the Notifications











