Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಒಂದು ವೇಳೆ ಆತ ನಿಮ್ಮ ತುಟಿಯನ್ನೇ ನೋಡುತ್ತಿದ್ದರೆ.....
ಸಾಮಾನ್ಯವಾಗಿ, ಗಂಡಸು ಒಂದು ಹೆಂಗಸನ್ನು ಇಷ್ಟಪಡುತ್ತಾನೆ. ಅದಕ್ಕೆ ನಾನಾ ಕಾರಣಗಳು ಇರುತ್ತವೆ. ಕೇವಲ ಆಂತರಿಕ ಗುಣಗಳನ್ನು ನೋಡಿಯೇ ನಿಮ್ಮನ್ನು ಇಷ್ಟಪಡಬೇಕು ಎಂದೇನಿಲ್ಲ. ಅದರ ಬದಲಿಗೆ ಆತ ನಿಮ್ಮ ಬಾಹ್ಯ ಸೌಂದರ್ಯವನ್ನೆ ಹೆಚ್ಚಾಗಿ ನೋಡಿ ಇಷ್ಟಪಡುವ ಸಾಧ್ಯತೆಗಳು ಇರುತ್ತವೆ. ಕೆಲವೊಮ್ಮೆ ಎರಡನ್ನು ನೋಡಿ ಇಷ್ಟಪಡುವ ಗಂಡಸರು ಇರುತ್ತಾರೆ. ಬಾಹ್ಯ ಆಕರ್ಷಣೆಯೆ ಗಂಡಸನ್ನು ಸೆಳೆಯುವ ಪ್ರಮುಖ ಸಾಧನ ಎಂದು ಇಡೀ ಜಗತ್ತಿಗೆ ಗೊತ್ತು. ನೀವು ಸಹ ಗಮನಿಸಿರಬಹುದು.
ಒಬ್ಬ ವ್ಯಕ್ತಿ ಅಥವಾ ಬಹುತೇಕ ಗಂಡಸರು ನಿಮ್ಮನ್ನು ನೋಡುವಾಗ ನಿಮ್ಮ ದೇಹದ ಒಂದು ಭಾಗವನ್ನು ಹೆಚ್ಚಾಗಿ ನೋಡುತ್ತಾರೆ. ಅದರಲ್ಲೂ ಕೆಲವರು ನಿಮ್ಮ ತುಟಿಯನ್ನೆ ನೋಡುತ್ತಿರಬಹುದು. ಏಕೆ ಎಂದು ಆಶ್ಚರ್ಯಪಡುತ್ತಿದ್ದೀರಾ? ಅದನ್ನು ನಾವು ತಿಳಿಸುತ್ತೇವೆ. ಒಬ್ಬ ಅಪರಿಚಿತ ವ್ಯಕ್ತಿ ನಿಮ್ಮ ತುಟಿಯನ್ನು ನೋಡಿದರೆ ನಿಮಗೆ ಅದರಿಂದ ಕಿರಿಕಿರಿಯಾಗಬಹುದು. ಆದರೆ ಅದೇ ನಿಮ್ಮ ಬಾಯ್‌ಫ್ರೆಂಡ್ ನಿಮ್ಮ ತುಟಿಯನ್ನು ನೋಡಿದರೆ ಅದರಿಂದ ನಿಮಗೆ ಖುಷಿ ಮತ್ತು ಹೆಮ್ಮೆ ಎರಡೂ ಆಗಬಹುದು. ಬನ್ನಿ ಇನ್ನು ತಡ ಮಾಡದೆ ಇದರ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳೋಣ...

ಕಾರಣ#1
ಅವನು ನಿಮ್ಮ ತುಟಿಗೆ ಮುತ್ತು ಕೊಡಬೇಕೆಂದು ಬಯಸುತ್ತಾನೆ. ಹೌದು, ಅದು ಅವನ ಆಸೆ. ನೀವು ಅವನ ಜೊತೆಗೆ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಲ್ಲಿ, ಆತ ಹಾಗೆ ನೋಡುತ್ತಿದ್ದರೆ, ಆತ ನಿಮಗೆ ಮುತ್ತು ಕೊಡಲು ಆಲೋಚಿಸುತ್ತಿದ್ದಾನೆ ಎಂದರ್ಥ.

ಕಾರಣ#2
ನಿಮ್ಮ ತುಟಿಗೆ ಹಾಕಿರುವ ಆ ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಆತನಿಗೆ ಪ್ರೇರೇಪಣೆ ನೀಡಿರಬಹುದು. ಹೌದು, ಇದು ಸಹ ಒಂದು ಕಾರಣವಾಗಿರಬಹುದು. ಈ ಜಗತ್ತಿನಲ್ಲಿ ಆ ಬಣ್ಣವು ನಿಮ್ಮ ತುಟಿಗಿಂತ ಬೇರೆ ಕಡೆ ಅಷ್ಟು ಚೆನ್ನಾಗಿ ಆತನಿಗೆ ಕಾಣದೆ ಇರಬಹುದು. ಅದನ್ನು ನಿಮಗೆ ಹೇಳಲು ಅವನ ಆಸೆ, ಆದರೆ ನೀವು ಎಲ್ಲಿ ಅವನಿಗೆ ಅವನ ಕೆಲಸ ನೋಡಿಕೋ ಎಂದು ಹೇಳುತ್ತೀರೋ ಎಂದು ಭಯ.

ಕಾರಣ#3
ನೀವು ಏನು ಹೇಳುತ್ತಿದ್ದೀರೋ, ಅದನ್ನು ಆತ ಗಾಢವಾಗಿ ಕೇಳುತ್ತಿದ್ದಾನೆ. ಆದರೆ ನಿಮ್ಮ ಸಂವಾದ ಮುಂದುವರಿದಂತೆಲ್ಲಾ ಆತ ನಿಮ್ಮನ್ನು ನೋಡುವುದನ್ನು ಮರೆತು ನೀವು ಏನು ಹೇಳುತ್ತಿದ್ದೀರೋ ಎಂದು ತಿಳಿದುಕೊಳ್ಳಲು ನಿಮ್ಮ ತುಟಿಯನ್ನೆ ನೋಡಲು ಆರಂಭಿಸುತ್ತಾನೆ.

ಕಾರಣ#4
ನೀವು ಅವನ ತಲೆ ತಿನ್ನಲು ಆರಂಭಿಸಿದಾಗ, ಅದನ್ನು ನಿಲ್ಲಿಸಲು ಆತ ಮಾಡುವ ಒಂದು ಕಾರ್ಯ ಇದು. ನಿಮ್ಮ ತುಟಿಯನ್ನೆ ನೋಡುತ್ತಾ ಇದ್ದರೆ, ನೀವು ಮಾತು ನಿಲ್ಲಿಸುತ್ತೀರಿ ಎಂಬುದು ಅವರ ಅನಿಸಿಕೆ. ಇದು ನಿಜವೂ ಆಗುತ್ತದೆ!

ಕಾರಣ#5
ಆತ ನಿಮ್ಮನ್ನು ಪ್ರೀತಿಸುತ್ತಾನೆ. ಅದಕ್ಕೆ ಆತನಿಗೆ ನಿಮ್ಮ ತುಟಿಯನ್ನು ನೋಡುವ ಅಧಿಕಾರ ಇರುತ್ತದೆ. ಆತ ಅತಿ ಶೀಘ್ರದಲ್ಲಿಯೇ ನಿಮ್ಮ ಹೃದಯವನ್ನು ಸಹ ಗೆಲ್ಲುತ್ತಾನೆ, ಅದಕ್ಕಾಗಿಯೆ ಆತ ನಿಮ್ಮ ತುಟಿಯನ್ನು ಅಷ್ಟು ಧೈರ್ಯದಿಂದ ನೋಡುತ್ತಿದ್ದಾನೆ.

ಕಾರಣ#6
ಆತನಿಗೆ ನಿಮ್ಮ ಕಣ್ಣನ್ನು ನೋಡುವಷ್ಟು ಧೈರ್ಯ ಇಲ್ಲ. ಅದಕ್ಕಾಗಿ ಆತ ನಿಮ್ಮ ತುಟಿಯನ್ನು ನೋಡುತ್ತಿದ್ದಾನೆ. ಕಣ್ಣನ್ನು ನೋಡುವ ಪ್ರಯತ್ನದಲ್ಲಿ ಸೋತು, ಅದರ ಅಕ್ಕ ಪಕ್ಕದ ಅಂಗಗಳನ್ನು ನೋಡುತ್ತಾ, ಆ ತುಟಿಯ ಸೌಂದರ್ಯಕ್ಕೆ ಮನಸೋತಿರುತ್ತಾನೆ.

ಕಾರಣ#7
ಗಂಡಸರು ಮೂರ್ಖರು. ಯಾರನ್ನು ಎಲ್ಲಿ ನೋಡಬೇಕು ಎಂದು ಗೊತ್ತಿರುವುದಿಲ್ಲ. ಸಂವಾದ ಮಾಡುವಾಗ ವಿನಾ ಕಾರಣ ನಿಮ್ಮ ತುಟಿಯನ್ನು ನೋಡಲು ಆರಂಭಿಸಿ ಬಿಡುತ್ತಾರೆ. ಸಂವಾದ ಮಾಡುವಾಗ ಎಲ್ಲಿ ನೋಡಬೇಕು ಎಂಬ ಪರಿಜ್ಞಾನವಿಲ್ಲದಿರುವುದೇ ಇದಕ್ಕೆ ಕಾರಣ.

ಕಾರಣ#8
ನಿಮ್ಮ ತುಟಿ ತುಂಬಾ ಸುಂದರವಾಗಿರುತ್ತದೆ. ಹೌದು, ನಿಮ್ಮ ತುಟಿ ಅತ್ಯಂತ ಸುಂದರವಾಗಿದ್ದರೆ, ನೋಡುವವರು ಗಂಡಸರಾಗಿದ್ದಲ್ಲಿ, ಅವರು ಅದನ್ನು ನೋಡುವುದನ್ನು ಮುಂದುವರಿಸಿಯೇ ತೀರುತ್ತಾರೆ.



Click it and Unblock the Notifications