Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ನಂಬಿಕೆ ದ್ರೋಹ, ಹುಡುಗಿಯರಿಗೆ ಇಷ್ಟ, ಹುಡುಗರಿಗೆ ಕಷ್ಟ!
ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲೇನಿದೆ ಎಂಬುದನ್ನು ಅರಿಯಲಾಗದು ಎಂಬ ಸುಭಾಷಿತವೊಂದಿದೆ. ಸಾಮಾನ್ಯವಾಗಿ ಮೋಸ ಮಾಡುವುದರಲ್ಲಿ, ಅಥವಾ ನಂಬಿಕೆ ದ್ರೋಹ ಮಾಡುವಲ್ಲಿ ಮಹಿಳೆಯರೇ ಮುಂದು ಎಂದು ಇತ್ತೀಚಿನ ಒಂದು ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಎಷ್ಟು ಎಂದರೆ ಸರಾಸರಿ ನೂರರಲ್ಲಿ ಕನಿಷ್ಠ ಎಪ್ಪತ್ತೆಂಟು. ಅದರಲ್ಲೂ ಈ ತರಹ ಮೋಸ ಮಾಡುವುದು ಅವರಿಗೆ ತುಂಬಾ ಇಷ್ಟವಾದ ಕೆಲಸ. ಸಮೀಕ್ಷೆಯಲ್ಲಿ ಇನ್ನೂ ಕೆದಕಿದ ಮಾಹಿತಿಗಳ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಮೋಸ ಮಾಡುವುದರಲ್ಲಿ ಹೆಚ್ಚು ಚಾಣಾಕ್ಷರೂ, ಅನುಭವಿಗಳೂ ಆಗಿರುತ್ತಾರೆ. ಇದಕ್ಕೆ ಕಾರಣಗಳನ್ನು ಕೆದಕಿದ ಸಮೀಕ್ಷೆ ನಡೆಸಿದ ಸಂಸ್ಥೆಗೆ ಹಲವು ರೋಚಕ ಸಂಗತಿಗಳು ಕಂಡುಬಂದಿವೆ.
ಮಹಿಳೆಯರು ಮೋಸ ಮಾಡಲು ಪ್ರಮುಖ ಕಾರಣವೆಂದರೆ ಶಾರೀರಿಕ ಸಾಮೀಪ್ಯದ ಕೊರತೆ ಮತ್ತು ಅವರ ಪ್ರಸ್ತುತ ವಿವಾಹ ಅಥವಾ ಸಂಬಂಧದಲ್ಲಿ ಅವರು ಕಂಡುಕೊಂಡಿರುವ ಕೊರತೆಗಳು ಅಥವಾ ಕುಂದುಗಳು. ತಮಗೆ ಸಿಗದೇ ಇರುವ, ಮತ್ತು ಇತರರಲ್ಲಿರುವ ಐಹಿಕ ಅಥವಾ ಶಾರೀರಿಕ (ಸೌಂದರ್ಯ, ಮೈಕಟ್ಟು ಇತ್ಯಾದಿ) ಸಂಪತ್ತು ತಮ್ಮಲ್ಲಿಲ್ಲದ ಕೊರತೆಯನ್ನು ಹೇಗಾದರೂ ಮಾಡಿ ಗಳಿಸುವ ಹಪಾಹಪಿಯೇ ಮೋಸಕ್ಕೆ ಇನ್ನೊಂದು ಕಾರಣ.
ಗಾಬರಿ ಪಡುಸುವಂತಹ ಇನ್ನೊಂದು ಮಾಹಿತಿ ಎಂದರೆ ಕೇವಲ ಕುಹಕ ವಿನೋದ ಪಡೆಯಲು ಕೆಲವರು ಮಾಡುವ ಹುನ್ನಾರಗಳು. ಉದಾಹರಣೆಗೆ ಇಲ್ಲದ ವಿಷಯಗಳನ್ನು ಗಂಡಹೆಂಡಿರ ನಡುವೆ ಇರುವಂತೆ ಬಿಂಬಿಸಿ ಆ ಗಂಡಹೆಂಡಿರ ನಡುವೆ ಹುಳಿಹಿಂಡಿ ಜಗಳಕ್ಕೇರುವುದನ್ನು ಮರೆಯಲ್ಲಿ ನಿಂತು ಸಂತೋಷಿಸುವ ವಿಕೃತ ಮನಸ್ಸು. ಇನ್ನು ಪ್ರೀತಿ, ಪ್ರೇಮದ ಗುಂಗಿನಲ್ಲಿ, ಮೋಸ ಹೋಗಬೇಡಿ
ಇನ್ನೂ ಕೆಲವರಲ್ಲಿ ಮಹತ್ವಾಕಾಂಕ್ಷೆಯೇ ಜೀವನದ ಪ್ರಮುಖ ಆದ್ಯತೆಯಾಗಿದ್ದು ಇದಕ್ಕಾಗಿ ಏನೂ ಮಾಡಲು ತಯಾರಿರುತ್ತಾರೆ. ಇದರಲ್ಲಿ ಏನೂ ಎಂಬ ವ್ಯಾಖ್ಯಾನೆಯಲ್ಲಿ ಮೋಸವೂ ಸೇರಿದೆ. ಈ ವಿಷಯದ ಬಗ್ಗೆ ಕೆಲವು ಅಮೂಲ್ಯ ಮತ್ತು ಗಾಬರಿಪಡಿಸುವ ಸತ್ಯಸಂಗತಿಗಳನ್ನು ನಿಮ್ಮ ಮುಂದಿಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ. ನಿಮ್ಮ ಅಕ್ಕಪಕ್ಕದಲ್ಲಿರುವವರು ತಮ್ಮ ಸುಂದರ ಮತ್ತು ಕಪಟ ಮಾತುಗಳಿಂದ ನಿಮಗೆ ಅರಿವೇ ಇಲ್ಲದಂತೆ ನಿಮ್ಮನ್ನು ಮೋಸದ ಸುಳಿಯಲ್ಲಿ ಸಿಲುಕಿಸುತ್ತಿರಬಹುದು. ಆದ್ದರಿಂದ ಈ ಬಗ್ಗೆ ಎಚ್ಚರ ತಾಳಲು ಈ ಲೇಖನ ಅಗತ್ಯವೂ ಅನಿವಾರ್ಯವೂ ಆಗಿದೆ. ಬನ್ನಿ, ಕೆಳಗಿನ ಸ್ಲೈಡ್ ಶೋ ಮೂಲಕ ಈ ಅನಿವಾರ್ಯತೆಯನ್ನು ನೀಗಿಸೋಣ...

ತಮ್ಮ ಸಂಗಾತಿಯ ಬಗ್ಗೆ ಬೇಸರದ ಭಾವ ಬೆಳೆಸಿಕೊಂಡಿರುತ್ತಾರೆ
ಖಾಲಿ ಮನಸ್ಸು ಸೈತಾನನ ಕಾರ್ಯಾಗಾರ ಎಂಬ ಸುಭಾಷಿತವೊಂದಿದೆ. ಸಾಮಾನ್ಯವಾಗಿ ವಿವಾಹದ ಮೊದಮೊದಲು ಚೆನ್ನಾಗಿಯೇ ಇದ್ದ ಮಹಿಳೆಯರು ದಿನಗಳೆದಂತೆ ತಮ್ಮ ಪತಿಯ ಅದೇ ರಾಗ ಅದೇ ಹಾಡು ಕೇಳುತ್ತಾ ಬೋರುಹೊಡೆಯತೊಡಗುತ್ತಾರೆ. ಕಡೆಕಡೆಗೆ ಅವರ ಮನಸ್ಸು ಬೇರೆ ಸಂಭಾವ್ಯ ಸುಖ ಸಂಪತ್ತು ಮತ್ತು ಬಯಕೆಗಳನ್ನು ಪೂರೈಸಿಕೊಳ್ಳಲು ಬೇರೆ ಮಾರ್ಗದ ಕಡೆ ಯೋಚಿಸತೊಡಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಂಗಾತಿಯ ಬಗ್ಗೆ ಬೇಸರದ ಭಾವ ಬೆಳೆಸಿಕೊಂಡಿರುತ್ತಾರೆ
ಈ ಯೋಚನೆಯಲ್ಲಿ ಅನಿವಾರ್ಯವಾಗಿ ಪತಿದೇವನನ್ನು ನಿರ್ಲಕ್ಷಿಸಲೇಬೇಕಾಗುತ್ತದೆ. ಕಡೆಗೊಂದು ದಿನ ನಿಧಾನವಾಗಿ ಮೋಸದ ಒಂದು ಕುಡಿ ಮೊಳಕೆಯೊಡೆಯುತ್ತದೆ. ನಂತರ ಗಿಡವಾಗಿ ಹೆಮ್ಮರವಾಗಿ ಹಬ್ಬುತ್ತದೆ. ಪತಿದೇವರಿಗೆ ಈ ಸತ್ಯ ಕಂಡುಬಂದಾಗ ತಡವಾಗಿರುತ್ತದೆ. ಆದ್ದರಿಂದ ಇದರಿಂದ ಮುಕ್ತಿ ಪಡೆಯಲು ಪರಸ್ಪರರು ಮನಸ್ಸನ್ನು ತೆರೆದು ಸಮಾಲೋಚಿಸಿ ಜೀವನ ನಡೆಸುವುದೊಂದೇ ಪರಿಹಾರವಾಗಿದೆ.

ಜೀವನದಲ್ಲಿ ಸಂಭ್ರಮವನ್ನೇ ಅಪೇಕ್ಷಿಸುತ್ತಿರುತ್ತಾರೆ
ಪ್ರತಿ ಮಹಿಳೆಯೂ ತನ್ನ ಪತಿಯಲ್ಲಿ ವಿಶೇಷ ಗುಣಗಳನ್ನು ಅಪೇಕ್ಷಿಸುತ್ತಾಳೆ. ಈ ಗುಣಗಳಲ್ಲಿ ಮಾನವೀಯ ಮೌಲ್ಯವಿದ್ದಷ್ಟೂ ಪತಿಯ ಬಗ್ಗೆ ಅಭಿಮಾನ ಹೆಚ್ಚುತ್ತಾ ಹೋಗುತ್ತದೆ. ಆದರೆ ಕೆಲವು ಮಹಿಳೆಯರು ಈ ಗುಣಗಳು ಧನ, ಕನಕ, ಐಶ್ವರ್ಯ, ಪ್ರಸಿದ್ಧಿ ಮೊದಲಾದವುಗಳ ರೂಪದಲ್ಲಿರಬೇಕೆಂದೇ ಅಪೇಕ್ಷಿಸುತ್ತಾರೆ. ಇವುಗಳನ್ನು ಹೊಂದುವುದೇ ಜೀವನದ ಸಂಭ್ರಮ ಎಂದು ಭಾವಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀವನದಲ್ಲಿ ಸಂಭ್ರಮವನ್ನೇ ಅಪೇಕ್ಷಿಸುತ್ತಿರುತ್ತಾರೆ
ಒಂದು ವೇಳೆ ಪತಿಯಿಂದ ಇವು ದೊರಕದೇ ಇದ್ದರೆ ಇವುಗಳನ್ನೇ ಉದಾಹರಿಸಿ ಮೂದಲಿಕೆ ಪ್ರಾರಂಭವಾಗುತ್ತದೆ. ದಿನಗಳೆದಂತೆ ಧನದ ಹಪಾಹಪಿ ಹೆಚ್ಚಾಗುತ್ತಾ ಮೋಸದ ಕಡೆ ಮನ ಸೆಳೆಯುತ್ತದೆ. ಒಂದು ವೇಳೆ ಮೂದಲಿಕೆ ಅವ್ಯಾಹತವಾಗಿದ್ದರೆ ಈ ಬಗ್ಗೆ ಗಮನ ಹರಿಸುವುದು ಅಗತ್ಯ.

ಹಣದ ಬಯಕೆ ಮೋಸಕ್ಕೆ ಕಾರಣ
ಹಣವು ಸಭ್ಯ ಸೋಗು ಹಾಕಿದ ಸೈತಾನನ ರೂಪ ಎಂದು ಇನ್ನೊಂದು ಸುಭಾಷಿತ ತಿಳಿಸುತ್ತದೆ. ಸಾಮಾನ್ಯವಾಗಿ ತನಗೇನು ಬೇಕೆಂದು ಮಹಿಳೆಯರು ಸ್ಪಷ್ಟವಾಗಿ ಹೇಳಿದರೂ ಪತಿಯ ಆದಾಯ ಇದಕ್ಕೆ ಪೂರಕವಾಗಿದ್ದರೆ ಮೋಸಕ್ಕೆ ಅವಕಾಶವಿರುವುದಿಲ್ಲ. ಆದರೆ ಪತ್ನಿಯ ಬೇಡಿಕೆ, ಅದರಲ್ಲೂ ಹಣದ ಬೇಡಿಕೆ ಪತಿಯ ಗಳಿಕೆಯ ಸಾಮರ್ಥ್ಯಕ್ಕೆ ಮೀರಿದ್ದರೆ ಪತ್ನಿಯ ಮನಸ್ಸು ಮೋಸ ಮಾಡುವತ್ತ ಪ್ರೇರಣೆ ಪಡೆಯುತ್ತದೆ. ಪತಿಗಿಂತಲೂ ಹೆಚ್ಚು ಸಂಪಾದಿಸುವ ಪುರುಷರನ್ನು ಗಾಳಕ್ಕೆ ಕೆಡವುವ, ತನ್ಮೂಲಕ ಪತಿಗೆ ಮೋಸ ಮಾಡುವ ಹುನ್ನಾರ ಪ್ರಾರಂಭವಾಗುತ್ತದೆ.

ಯಶಸ್ಸಿಗೆ ಮೆಟ್ಟಿಲಾಗಿ ಪಡೆಯಲು
ಜೀವನದಲ್ಲಿ ಏನಾದರೊಂದನ್ನು ಸಾಧಿಸಬೇಕೆಂದಿರುವ ಮಹಿಳೆಯರು ಇದಕ್ಕಾಗಿ ಏನನ್ನೂ ಮಾಡಲು ತಯಾರಿರುತ್ತಾರೆ. ಇದರಲ್ಲಿ ಪತಿಗೆ ಮೋಸ ಮಾಡುವುದೂ ಒಂದು. ಸಾಮಾನ್ಯವಾಗಿ ಚಿತ್ರರಂಗ ಮೊದಲಾದ ಅತಿ ಹೆಚ್ಚಿನ ಆದಾಯದ ವೃತ್ತಿಗಳಲ್ಲಿ ಖ್ಯಾತಿ ಪಡೆಯಲು ತಮ್ಮ ಪತಿಯರಿಗೆ ಮೋಸ ಮಾಡುವುದು ಆಯಾ ರಂಗದ ಹಿರಿಯರೇ ಒಪ್ಪಿಕೊಂಡ ಸತ್ಯವಾಗಿದೆ. casting couch ಎಂಬ ಪದ ಬಂದಿದ್ದೇ ಹೀಗೆ.

ತಮಗಾದ ಮೋಸಕ್ಕೆ ಪ್ರತಿಮೋಸದ ಮೂಲಕ ಪ್ರತೀಕಾರ
ಕೆಲವು ಕುಟುಂಬಗಳಲ್ಲಿ ಮನೆಯ ಹಿರಿಯರೇ ಮೋಸ ಮಾಡುವ ಪ್ರವೃತ್ತಿಯವರಾಗಿದ್ದು ಮಕ್ಕಳಿಗೇ ಒಂದು ರೀತಿಯಲ್ಲಿ ಮೋಸ ಮಾಡುತ್ತಿರುತ್ತಾರೆ. ಉದಾಹರಣೆಗೆ ಸಂಬಳ ತಂದು ಮನೆಗೆ ಕೊಡುವ ಯುವತಿಯನ್ನು ಮೂವತ್ತಾದರೂ ಮದುವೆ ಮಾಡಲು ಗಂಡು ನೋಡದೇ ಸತಾಯಿಸುತ್ತಾ ಆಕೆಯ ಆದಾಯದಿಂದ ಸುಖಕರ ಜೀವನವನ್ನು ನಡೆಸುತ್ತಿರುತ್ತಾರೆ. ಈ ಮೋಸಕ್ಕೆ ಪ್ರತಿಯಾಗಿ ಆ ಯುವತಿ ತಾನು ಮೆಚ್ಚಿದ ಯುವಕನನ್ನು ಗುಟ್ಟಾಗಿ ಮದುವೆಯಾಗಿ ಸೇಡು ತೀರಿಸಿಕೊಳ್ಳುತ್ತಾಳೆ. ಇದೊಂದು ನ್ಯಾಯಕ್ಕೆ ನ್ಯಾಯ, ಮೋಸಕ್ಕೆ ಮೋಸ ಎಂಬ ರೀತಿಯಲ್ಲಿ ಸಮಾಜ ಒಪ್ಪಿಕೊಳ್ಳುವ ಬಗೆಯಾಗಿದೆ. ನಿಮಗೇನನಿಸಿತು?

ಸೇಡಿನ ಮನೋಭಾವ
ಸಾಮಾನ್ಯವಾಗಿ ತಮ್ಮನ್ನು ಮೋಸ ಮಾಡಿದ ಪುರುಷನ ಮೇಲೆ ಸೇಡು ತೀರಿಸಿಕೊಳ್ಳಲು ಮೋಸದ ದಾರಿಯನ್ನು ಹಿಡಿದ ಮಹಿಳೆಯರು ಈ ಮೋಸದಾಟದಲ್ಲಿ ಹೊಸತನ ಮತ್ತು ಹೊಸ ಸಂಭ್ರಮವನ್ನು ಕಂಡುಕೊಳ್ಳುತ್ತಾರೆ. ಕುಟಿಲ ಬುದ್ಧಿ ಇನ್ನಷ್ಟು ಚುರುಕಾಗುತ್ತಾ ಮೋಸದಾಟ ಎಷ್ಟು ಹೆಚ್ಚಾಗುತ್ತದೆ ಎಂದರೆ ಎಷ್ಟೋ ಪ್ರಕರಣಗಳಲ್ಲಿ ಕೊಲೆಗಳೂ ನಡೆದಿವೆ. ವ್ಯಂಗ್ಯವೆಂದರೆ ತಮ್ಮ ಮೋಸದ ಬುದ್ಧಿಗೆ ಯಾವುದೇ ವಿಷಾದ ತೋರದ ಇವರಿಗೆ ಈ ಬಗ್ಗೆ ಹೆಮ್ಮೆಯೇ ಇರುತ್ತದೆ. ಸಾಯುವವರೆಗೂ ಇವರ ಮೋಸ ನಡೆಯುತ್ತಲೇ ಇರುತ್ತದೆ.



Click it and Unblock the Notifications











