Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರೀತಿ ನಿಜವಾಗಿದ್ದರೆ, ಇಲ್ಲಿ ಮೋಸಕ್ಕೆ ಆಸ್ಪದವಿಲ್ಲ..!
ಗಂಡು ಮತ್ತು ಹೆಣ್ಣಿನ ಸಂಬಂಧ ಅದು ಜನುಮ ಜನುಮದ ಸಂಬಂಧವೆನ್ನಬಹುದು. ಈ ಸಂಬಂಧಕ್ಕೆ ತನ್ನದೇ ಆದಂತಹ ಅರ್ಥವಿದೆ. ಇದನ್ನು ಹಲವಾರು ರೀತಿಯಲ್ಲಿ ಬಣ್ಣಿಸಬಹುದು. ಆದರೆ ಸಂಬಂಧಕ್ಕೆ ಪಾವಿತ್ರ್ಯತೆ ಇರುತ್ತದೆ. ಕೆಲವೊಂದು ಸಲ ಸಂಬಂಧದಲ್ಲಿ ಗಂಡು ಅಥವಾ ಹೆಣ್ಣು ಸ್ವಲ್ಪ ಸಮಯದವರೆಗೆ ದೂರವಿರಲು ಬಯಸುತ್ತಾರೆ. ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು. ಹೆಣ್ಣೊಬ್ಬಳು ಸಂಬಂಧದಿಂದ ಸ್ವಲ್ಪ ದೂರವಿರಬೇಕೆಂದು ಬಯಸಿದರೆ ಗಂಡಿನಲ್ಲಿ ಅಸುರಕ್ಷಿತ ಭಾವನೆಯಿಂದಾಗಿ ಹಲವಾರು ಪ್ರಶ್ನೆಗಳು ಏಳಲು ಪ್ರಾರಂಭಿಸುತ್ತದೆ.
ಆಕೆಗೆ ಸಂಬಂಧ ಇಷ್ಟವಿಲ್ಲವೇ? ಆಕೆ ಬೇರೆ ಯಾರನ್ನೋ ಪ್ರೀತಿಸುತ್ತಿದ್ದಾಳೆಯಾ? ನನ್ನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಾಳೆಯಾ ಎನ್ನುವ ಹಲವಾರು ಪ್ರಶ್ನೆಗಳು ಪುರುಷರಲ್ಲಿ ಬರುತ್ತದೆ. ಇದಕ್ಕೆ ಅವರಲ್ಲಿನ ಅಸುರಕ್ಷಿತ ಭಾವನೆಯೂ ಕಾರಣವಾಗಿದೆ. ನಿಮ್ಮ ಪ್ರೀತಿ ನಿಜವಾಗಿದ್ದರೆ ಮತ್ತು ಹೃದಯದಲ್ಲಿ ಒಳ್ಳೆಯ ಭಾವನೆಗಳಿದ್ದರೆ ಇಂತಹ ಪ್ರಶ್ನೆಗಳು ಬರುವುದಿಲ್ಲ.
ನಿಮ್ಮ ಪ್ರೀತಿ ನಿಜವಾಗಿದ್ದರೆ ಯಾರೂ ನಿಮಗೆ ಮೋಸ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಪ್ರೀತಿ ನಿಜವಾಗಿದ್ದರೂ ಮೋಸ ಮಾಡುತ್ತಿದ್ದರೆ ಅಂತಹ ಸಂಬಂಧದಿಂದ ದೂರ ಉಳಿಯುವುದೇ ಒಳ್ಳೆಯದು. ಯಾಕೆಂದರೆ ಪ್ರೀತಿಯ ಮೌಲ್ಯ ಗೊತ್ತಿಲ್ಲದವರೊಂದಿಗೆ ಉಳಿದು ಪ್ರಯೋಜನವಿಲ್ಲ. ಸಂಬಂಧದಿಂದ ಕೆಲವು ಸಮಯ ದೂರ ಹೋದರೆ ಅದು ಆರೋಗ್ಯಕಾರಿ. ಅದು ಹೇಗೆನ್ನುವುದನ್ನು ತಿಳಿದುಕೊಳ್ಳಿ.

ಕಾಡುವ ಗೊಂದಲ...
ಕೆಲವೊಮ್ಮೆ ಗೊಂದಲವು ಇದಕ್ಕೆ ಕಾರಣವಾಗಿರಬಹುದು. ಜೀವನದಲ್ಲಿ ತಾನು ಯಾವ ಕಡೆ ಸಾಗುತ್ತಿದ್ದೇನೆ ಮತ್ತು ಈ ಸಂಬಂಧದಲ್ಲಿ ನನ್ನ ಪಾತ್ರವೇನು ಎಂದು ತಿಳಿಯದೆ ಇದ್ದರೆ ಆಕೆಗೆ ವಿಶ್ರಾಂತಿ ಬೇಕಾಗುತ್ತದೆ. ಆಕೆಗೆ ಸ್ಪಷ್ಟವಾಗುವ ತನಕ ಆಕೆಯನ್ನು ಏಕಾಂಗಿಯಾಗಿ ಬಿಟ್ಟುಬಿಡಿ.

ವೈಯಕ್ತಿಕತೆ
ಸಂಬಂಧದಲ್ಲಿ ಬರುವ ಹಲವಾರು ಬೇಡಿಕೆಗಳಿಂದ ಆಕೆ ತುಂಬಿ ಹೋಗಿರುವಾಗ ಆಕೆಗೆ ವೈಯಕ್ತಿಕತೆ ಬೇಕಾಗಿರಬಹುದು. ಆಕೆಗೆ ವೈಯಕ್ತಿಕತೆ ನೀಡಿ. ಇಲ್ಲವಾದಲ್ಲಿ ಆಕೆ ಕೋಪದಿಂದ ಎಲ್ಲಾ ತಪ್ಪನ್ನು ನಿಮ್ಮ ಮೇಲೆ ಹಾಕಿಬಿಡಬಹುದು.

ಪ್ರೀತಿಯಾ ಅಥವಾ ಆಕರ್ಷಣೆಯ ಎಂದು ತಿಳಿಯಲು
ಕೆಲವೊಂದು ಸಲ ಕೇವಲ ಆಕರ್ಷಣೆ ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಕೆಲವೊಂದು ಸಲ ನೀವು ಯಾರೊಂದಿಗಾದರೂ ಮಲಗಲು ಬಯಸುತ್ತಿದ್ದರೆ ಅದು ಪ್ರೀತಿಯಾಗಿರದೆ ಕೇವಲ ಆಕರ್ಷಣೆಯಾಗಿರಬಹುದು. ಯಾರೊಂದಿಗೂ ಆಕರ್ಷಣೆಗೆ ಒಳಗಾಗುವುದು ತಪ್ಪಲ್ಲ. ಆದರೆ ಇದರ ಬಗ್ಗೆ ಸ್ಪಷ್ಟತೆ ಬೇಕು. ಆಕರ್ಷಣೆಯಾ ಅಥವಾ ಪ್ರೀತಿಯಾ ಎಂದು ತಿಳಿಯಲು ಸ್ವಲ್ಪ ಸಮಯ ಸಂಬಂಧದಿಂದ ದೂರ ಇರಬೇಕಾಗುತ್ತದೆ.

ನಿಮ್ಮನ್ನು ಪರೀಕ್ಷಿಸುತ್ತಿರಬಹುದು
ಆಕೆ ಇಲ್ಲದೆ ನೀವು ಎಷ್ಟು ದಿನ ಇರಬಲ್ಲಿರಿ ಎಂದು ತಿಳಿಯಲು ಆಕೆ ನಿಮ್ಮನ್ನು ಪರೀಕ್ಷಿಸುತ್ತಿರಬಹುದು. ಇಂತಹ ವಿಷಯವಾದರೆ ಯಾವಾಗಲೊಮ್ಮೆ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮೆಸೇಜ್ ಮಾಡಿ.

ಭವಿಷ್ಯದ ಬಗ್ಗೆ ನಿರ್ಧಾರಕ್ಕೆ
ಆಕೆ ನಿಮ್ಮೊಂದಿಗೆ ಭವಿಷ್ಯವನ್ನು ನಿರ್ಧರಿಸಲು ಹೀಗೆ ಮಾಡಿರಬಹುದು. ಇದಕ್ಕಾಗಿ ಆಕೆಗೆ ಸ್ವಲ್ಪ ಸಮಯ ಬೇಕಾಗಬಹುದು. ಆಕೆ ನಿಮ್ಮೊಂದಿಗಿನ ಭವಿಷ್ಯವನ್ನು ಯೋಚಿಸಿ ಅದ್ಭುತವೆನಿಸಬಹುದು. ಆಕೆಗೆ ಸ್ವಲ್ಪ ಸಮಯ ನೀಡಿ.

ವಿಶ್ಲೇಷಣೆ
ಒಬ್ಬ ವ್ಯಕ್ತಿಯನ್ನು ತುಂಬಾ ದಿನ ನೋಡಿದ ಬಳಿಕ ಆತನನ್ನು ವಿಶ್ಲೇಷಿಸಲು ಏಕಾಂಗಿಯಾಗಿ ಸಮಯ ಬೇಕಾಗುತ್ತದೆ. ಇದರಿಂದ ಆ ಸಂಬಂಧದಲ್ಲಿನ ಸಂತೋಷದ ಕ್ಷಣಗಳು ಮತ್ತು ನೋವಿನ ಕ್ಷಣಗಳನ್ನು ವಿಶ್ಲೇಷಿಸಿದ ಬಳಿಕ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ಇದಕ್ಕಾಗಿ ಏಕಾಂಗಿಯಾಗಿ ಸಮಯ ಕಳೆಯಬೇಕಾಗುತ್ತದೆ.



Click it and Unblock the Notifications
