Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಮಹಿಳೆಯರು ಬಹಳ ಬೇಗನೇ ಭಾವುಕರಾಗುತ್ತಾರಂತೆ!
ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಅದು ನಮ್ಮನ್ನು ಮತ್ತಷ್ಟು ಕೊರೆಯುತ್ತಾ ಇರುತ್ತದೆ. ಅದೇ ಭಾವನೆಗಳನ್ನು ವ್ಯಕ್ತಪಡಿಸಿದರೆ ಆಗ ನಮ್ಮ ಮನಸ್ಸು ಹಗುರವಾಗುತ್ತದೆ. ಪ್ರತಿಯೊಬ್ಬರಲ್ಲೂ ಭಾವನೆಗಳು ಇದ್ದೇ ಇರುತ್ತದೆ. ಅದನ್ನು ವ್ಯಕ್ತಪಡಿಸುವ ರೀತಿ ಮಾತ್ರ ಭಿನ್ನವಾಗಿರುತ್ತದೆ. ಪುರುಷರು ಹಾಗೂ ಮಹಿಳೆಯರು ಭಾವನೆಗಳನ್ನು ವ್ಯಕ್ತಪಡಿಸುವ ಮಾರ್ಗಗಳು ಬೇರೆಬೇರೆ. ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿದ್ದರೆ, ಪುರುಷರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ತುಂಬಾ ಕಡಿಮೆ. ಏನೇ ಹೇಳಿ, ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆಗೂ ಮೀರಿದ್ದು!
ಮಹಿಳೆಯರು ಭಾವನಾತ್ಮಕವಾಗಿರುವುದು ಅವರಿಗೆ ಹುಟ್ಟಿನಿಂದ ಬಂದ ಬಳುವಳಿ ಎನ್ನಬಹುದು. ಆದರೆ ಎಲ್ಲಾ ಮಹಿಳೆಯರು ಹೀಗೆ ಎಂದಲ್ಲ. ಕೆಲವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದೇ ಇಲ್ಲ. ಬಾಲ್ಯದ ಪರಿಸ್ಥಿತಿ, ಮೆದುಳಿನ ಕೆಮಿಸ್ಟ್ರಿ ಮತ್ತು ಇತರ ಹಲವಾರು ವಿಷಯಗಳು ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿ ಇರಲು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರ ಬಗ್ಗೆ ತಿಳಿದುಕೊಳ್ಳುವ....

ಬೆಳೆದಿರುವುದೇ ಹಾಗೆ...
ಕೆಲವು ಕುಟುಂಬಗಳಲ್ಲಿ ಹುಡುಗಿಯರಿಗೆ ಬೇರೆಯವರ ಬಗ್ಗೆ ಮೊದಲು ಯೋಚಿಸಬೇಕು ತಮ್ಮ ಬಗ್ಗೆ ಬಳಿಕ ಎನ್ನುವ ನೀತಿ ಪಾಠವನ್ನು ಹೇಳಿಕೊಡಲಾಗುತ್ತದೆ. ಅವರು ಪ್ರತಿಯೊಂದನ್ನು ತ್ಯಾಗ ಮಾಡಬೇಕಾಗುತ್ತದೆ. ಇದರಿಂದಾಗಿ ಅವರು ಹೆಚ್ಚು ಭಾವನಾತ್ಮಕವಾಗುತ್ತಾರೆ. ತಮ್ಮ ಯಶಸ್ಸು ಮತ್ತು ಅಭಿವೃದ್ಧಿ ಕಡೆಗೆ ಗಮನಹರಿಸುವಂತಹ ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರುವುದಿಲ್ಲ.

ಹಾರ್ಮೋನು
ಕೆಲವು ಕಾರಣಗಳಲ್ಲಿ ತಿಂಗಳ ಮುಟ್ಟು ಇದಕ್ಕೆ ಕಾರಣವಾಗಿರಬಹುದು. ಮುಟ್ಟಿನ ವೇಳೆ ಹೆಚ್ಚು ಭಾವನಾತ್ಮಕವಾಗಲು ಈಸ್ಟ್ರೋಜನ್ ಕಾರಣವಾಗಿರಬಹುದು.

ಸಾಮಾಜಿಕ ಒತ್ತಡ
ಕೆಲವೊಂದು ಸಂದರ್ಭದಲ್ಲಿ ಸಾಮಾಜಿಕ ಒತ್ತಡವು ಭಾವನಾತ್ಮಕವಾಗಿರಲು ಕಾರಣ. ಮಹಿಳೆಯ ಮೇಲೆ ಅತಿಯಾದ ನಿರೀಕ್ಷೆಗಳನ್ನು ಹೇರಿರುವ ಕಾರಣದಿಂದ ಎಲ್ಲಾ ಮೂಲೆಗಳಿಂದ ಪ್ರತೀ ಕ್ಷಣವು ಒತ್ತಡ ಇದ್ದೇ ಇರುತ್ತದೆ. ಈ ಒತ್ತಡವು ಕೆಲವೊಮ್ಮೆ ಭಾವನೆಗಳನ್ನು ಸ್ಫೋಟ ಮಾಡಬಹುದು.

ಆಘಾತ
ಹಿಂದಿನ ಆಘಾತಗಳು ಕೆಲವೊಂದು ಸಂದರ್ಭಗಳಲ್ಲಿ ಭಾವನೆಗಳಿಗೆ ಕಾರಣವಾಗಿರಬಹುದು. ಮಹಿಳೆಯರು ಯಾಕೆ ಭಾವನಾತ್ಮಕವಾಗಿರುತ್ತಾರೆ ಎಂದು ತಿಳಿದುಕೊಳ್ಳುವುದು ತುಂಬಾ ಕಷ್ಟ. ಆದರೆ ಹಿಂದಿನ ಯಾವುದೋ ಘಟನೆಗಳು ಅವರನ್ನು ಆಗಾಗ ಕಾಡುತ್ತಲಿರಬಹುದು.

ಅನುಕಂಪ
ಮಹಿಳೆಯರು ಸ್ವಾಭಾವಿಕವಾಗಿ ಅನುಕಂಪವುಳ್ಳವರು. ಯಾರಿಗಾದರೂ ನೆರವು ಬೇಕಾದಾಗ ಅವರು ಅನುಕಂಪದಿಂದ ನೆರವಿಗೆ ಮುಂದೆ ಬರುತ್ತಾರೆ.



Click it and Unblock the Notifications