Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಹುಡುಗರೇ ಹೀಗೆ, ಕೊಂಚ ಡಿಫರೆಂಟಾಗಿಯೇ ಆಲೋಚಿಸುತ್ತಾರೆ!
ನಿಸರ್ಗ ನೀಡಿರುವ ಆಕರ್ಷಣೆ ಗಂಡು ಹೆಣ್ಣುಗಳಲ್ಲಿ ಭಿನ್ನವಾಗಿರುತ್ತದೆ. ಪುರುಷರು ಮಹಿಳೆಯರಲ್ಲಿ ಸೌಂದರ್ಯ, ಕಾಮ, ಮೈಕಟ್ಟು ಮೊದಲಾದವುಗಳಿಗೆ ಹೆಚ್ಚು ಆಕರ್ಷಿತರಾದರೆ ಮಹಿಳೆಯರು ಪುರುಷರ ಗಡಸುತನ, ಸಾಮಾಜಿಕ ಸ್ಥಾನ, ಗೌರವ ಮೊದಲಾದವುಗಳಿಗೆ ಹೆಚ್ಚು ಆಕರ್ಷಿತಳಾಗುತ್ತಾಳೆ.
ಗಂಡನ್ನು ಆಕರ್ಷಿಸಲು ನಿಸರ್ಗ ಪ್ರತಿ ಜೀವಿಗೂ ಒಂದು ಪರಿಯನ್ನು ನೀಡಿದೆ ಅಂತೆಯೇ ಮಹಿಳೆಯರಲ್ಲಿ ಸೌಂದರ್ಯ, ದನಿ ಮೊದಲಾದವುಗಳನ್ನು ನೀಡಿದೆ. ಇವುಗಳನ್ನು ವೈಭವೀಕರಿಸುವ ಮೂಲಕ ತನ್ನ ಪುರುಷರ ಆಕರ್ಷಣೆ ಪಡೆಯಲು ಆಕೆ ಯತ್ನಿಸುತ್ತಾಳೆ. ಮಾದಕ ಉಡುಪು, ದನಿ, ಮನೋಭಾವ, ಒಟ್ಟಾರೆ ತನ್ನ ವ್ಯಕ್ತಿತ್ವದ ಮೂಲಕ ಗಂಡಿನ ದೃಷ್ಟಿ ಪಡೆಯಲು ಯತ್ನಿಸುತ್ತಾಳೆ.
ವಾಸ್ತವವಾಗಿ ಇವೆಲ್ಲವೂ ಬಾಹ್ಯ ಆಕರ್ಷಣೆಗಳಾಗಿದ್ದು ಅಂತಿಮವಾಗಿ ವ್ಯಕ್ತಿಯ ನಿಜವಾದ ಅಂತರ್ಯವೇ ಸಂಬಂಧದ ಮೂಲವಾಗಿದೆ. ಹೃದಯದಾಳದಿಂದ ವ್ಯಕ್ತವಾಗುವ ಪ್ರೀತಿ, ವಿಶ್ವಾಸ, ಜೀವನವಿಡೀ ಸುಖದುಃಖಗಳಲ್ಲಿ ಭಾಗಿಯಾಗುವ ಭರವಸೆ ಮೊದಲಾದವು ಕಣ್ಣಿಗೆ ತಕ್ಷಣಕ್ಕೆ ಕಾಣದ ಗುಣಗಳು.
ಇದೇ ಕಾರಣಕ್ಕೆ ಹಿರಿಯರು ಹೇಳಿರುವುದು: 'ಗುಣ ನೋಡಿ ಹೆಣ್ಣು ಕೊಡು' ಎಂದು. ಆದರೂ ಪುರುಷರು ಹೆಣ್ಣಿನ ಬಾಹ್ಯ ಲಕ್ಷಣಗಳಿಗೆ ಮರುಳಾಗದ ಕ್ಷಣವೇ ಇಲ್ಲ. ಇದು ಕ್ಷಣಿಕ, ತಮಗೆ ಅನ್ವಯವಾಗುವುದೇ ಇಲ್ಲ ಎಂದಿದ್ದರೂ ಪುರುಷರ ದೃಷ್ಟಿ ಸುತ್ತಮುತ್ತಲ ಮಹಿಳೆಯರತ್ತ ಬೀಳುತ್ತಲೇ ಇರುತ್ತದೆ. ಬನ್ನಿ, ಇವರು ಏನನ್ನು ಬಯಸಿ ನೋಟ ಬೀರುತ್ತಾರೆ ಎಂಬುದನ್ನು ಅರಿಯೋಣ....

ಮುಗ್ಧತೆ
ಮುಗ್ಧ ಬಾಲಕಿಯರು ಅತಿ ಆಕರ್ಷಕರಾಗಿದ್ದು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಚಿಕ್ಕ ಹುಡುಗಿಯರು ಅತ್ತಿತ್ತ ಓಡಾಡುತ್ತಿದ್ದರೆ ಅವರಿಂದ ಗಮನ ಬೇರೆಡೆ ಹರಿಯುವುದು ಕಷ್ಟ.

ನಾಚಿಕೆ ಸ್ವಭಾವ
ನಾಚಿಕೆ ಹೆಣ್ಣಿನ ಸಹಜ ಒಡವೆ ಎಂದು ಭಾವಿಸಲಾಗುತ್ತದೆ. ನಾಚಿಕೊಳ್ಳುವ ಹೆಣ್ಣುಮಕ್ಕಳನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಯಾವುದಾದರೂ ಒಪ್ಪಿಗೆ ಸೂಚಿಸುವಾಗ ಮೌನವಾಗಿದ್ದು ನಾಚಿಕೊಂಡಿದ್ದನ್ನು ಇಂದಿಗೂ ಹೌದು ಎಂಬುದಾಗಿಯೇ ಪರಿಗಣಿಸಲಾಗುತ್ತದೆ.

ಹೆಣ್ಣು ದನಿ
ಸಾಮಾನ್ಯವಾಗಿ ಹೆಂಗಸರ ದನಿ ಕೀರಲಾಗಿರುತ್ತದೆ. ಕೀರಲು ದನಿಯನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಹೆಚ್ಚಿನ ಸಂಸ್ಥೆಗಳ ಗ್ರಾಹಕ ವಿಭಾಗದ ಉದ್ಯೋಗಿಗಳಾಗಿ ಮಹಿಳೆಯರನ್ನೇ ನಿಯೋಜಿಸಲಾಗುತ್ತದೆ. ಎಷ್ಟೋ ಸಲ ಈ ದನಿಗೇ ಮರುಳಾಗಿ ವ್ಯಾಪಾರ ಕುದುರಿಸಿರುವುದೂ ಇದೆ. ಅಂತೆಯೇ ಟೆಲಿಫೋನ್ ಮೂಲಕ ವ್ಯಾಪಾರ ಮಾಡುವವರ ದನಿ ಇಂಪಾಗಿರಬೇಕು ಎಂದೇ ಮೊದಲು ಶರತ್ತು ಒಡ್ಡಲಾಗುತ್ತದೆ.

ಪೆದ್ದುತನ
ಎಷ್ಟೋ ಸಲ ಮಹಿಳೆಯರು ಪೆದ್ದುಪೆದ್ದಾಗಿ ವರ್ತಿಸುತ್ತಾರೆ. ಅಂದರೆ ಇದು ಅರ್ಥವಾಗಲಿಲ್ಲ, ಇದನ್ನು ಹೇಗೆ ಉಪಯೋಗಿಸುವುದು ಎಂಬ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳಲು ಯತ್ನಿಸುವ ಪರಿ ಪುರುಷರಿಗೆ ಇಷ್ಟ. ಇದು ಏಕಾಗಿ ಹೀಗೆ ಎಂದು ಮನಃಶಾಸ್ತ್ರಜ್ಞರು ತಿಳಿದುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ.

ದೇಹದ ಓರೆಕೋರೆಗಳು
ಸೊಂಟ ತೆಳುವಾಗಿದ್ದು ನಡು ಅಗಲವಾಗಿರುವ ಮಹಿಳೆಯರ ದೇಹಸೌಷ್ಟವ ಪುರುಷರಿಗೆ ಇಷ್ಟ. ಈ ಸೌಷ್ಟವದ ಮಹಿಳೆ ಅತಿ ಹೆಚ್ಚಿನ ಪುರುಷರ ಗಮನ ಸೆಳೆಯುತ್ತಾಳೆ. ಹೀಗಾಗಬೇಕು ಎಂದೇ ಹಿಂದೆ ಇಂಗ್ಲೆಂಡ್ ಮತ್ತು ಇತರ ಯೂರೋಪಿಯನ್ ರಾಷ್ಟ್ರಗಳಲ್ಲಿ ನಡುವಿಗೆ ಬಿಗಿಯಾಗಿ ಇರುವಂತಹ ಮತ್ತು ಸೊಂಟದಿಂದ ಕೆಳಗೆ ವಿಶಾಲವಾಗಿರುವ ಉಡುಪುಗಳನ್ನೇ ತೊಡಲಾಗುತ್ತಿತ್ತು.

ಆತ್ಮವಿಶ್ವಾಸ
ನಾಲ್ಕು ಜನರ ಎದುರು ಆತ್ಮವಿಶ್ವಾಸದಿಂದ ಮಾತನಾಡುವ ಮಹಿಳೆಯರು ಹೆಚ್ಚಿನ ಪುರುಷರ ಗಮನ ಸೆಳೆಯುತ್ತಾರೆ.

ಸ್ವತಂತ್ರತೆ
ಯಾವುದೇ ಹಂಗಿಲ್ಲದೇ, ಯಾರದೇ ಲಗಾಮಿಗೆ ಒಳಗಾಗದೇ ತನ್ನ ಜೀವನವನ್ನು ಸ್ವತಃ ನಿಭಾಯಿಸುವ ಅಥವಾ ತನ್ನ ನಿತ್ಯದ ಕೆಲಸಗಳಿಗೆ ಇನ್ನೊಬ್ಬರಿಗೆ ಹೊರೆಯಾಗಿರದ ಮಹಿಳೆಯರನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ.

ಬುದ್ಧಿವಂತಿಕೆ
ಎಷ್ಟೋ ಮಹಿಳೆಯರಿಗೆ ತಮ್ಮ ಬುದ್ಧಿವಂತಿಕೆಯೇ ಕೆಲವು ಪುರುಷರ ಆಕರ್ಷಣೆಯ ಕಾರಣ ಎಂದು ಗೊತ್ತಿರುವುದಿಲ್ಲ. ಸಾಮಾನ್ಯವಾಗಿ ಬುದ್ದಿವಂತ ಮಹಿಳೆಯರು ತಮಗಿಂತಲೂ ಬುದ್ದಿವಂತರಾದ ಪುರುಷರನ್ನೇ ಹೆಚ್ಚು ಇಷ್ಟ ಪಡುವ ಕಾರಣ ಎಲ್ಲರ ಗಮನ ಸೆಳೆಯುವತ್ತ ತಮ್ಮ ನಿರ್ಲಕ್ಷ್ಯವನ್ನು ತೋರುವುದನ್ನೇ ಪರಿಗಣಿಸಿ ಉಳಿದವರು ದೂರವೇ ಉಳಿಯುತ್ತಾರೆ.



Click it and Unblock the Notifications