Latest Updates
-
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಸಂಬಂಧದಲ್ಲಿ ಏನೆಲ್ಲಾ ನಡೆದು ಹೋಗುತ್ತದೆ ನೋಡಿ...
ನಿಸರ್ಗ ಹೆಣ್ಣಿನಲ್ಲಿ ಸೌಂದರ್ಯವನ್ನೂ ಗಂಡಿನಲ್ಲಿ ಆಸೆಯನ್ನೂ ನೀಡುವ ಮೂಲಕ ಆಕರ್ಷಣೆ ಪಡೆಯುವಂತೆ ಮಾಡಿದೆ. ಅಂತೆಯೇ ಸಹಜವಾಗಿ ಮಹಿಳೆಯರ ಸೌಂದರ್ಯದತ್ತ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ. ಒಂದು ವೇಳೆ ನಿಮ್ಮ ಸೌಂದರ್ಯ ಅಥವಾ ಮೈಮಾಟವೂ ನಿಮ್ಮ ಪುರುಷನ ಗಮನ ಸೆಳೆಯುವಲ್ಲಿ ವಿಫಲವಾಗುತ್ತಿದ್ದರೆ ಈ ಲೇಖನ ನಿಮಗೆ ಅತ್ಯಂತ ಸೂಕ್ತವಾಗಿದೆ. ಸಂಬಂಧ ಪ್ರಾರಂಭವಾದ ಹೊಸತದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಮತ್ತು ಸುಂದರವಾಗಿರುತ್ತದೆ.
ಈತನೇ ನನಗೆ ಸೂಕ್ತ ಜೀವನಸಂಗಾತಿಯಾಗಲು ಅರ್ಹ ವ್ಯಕ್ತಿ ಎಂಬ ಭಾವನೆ ಬೆಳೆಯತೊಡಗುತ್ತದೆ. ನಿಧಾನವಾಗಿ "ಈತನನ್ನು ವರಿಸುವುದರಿಂದ ಯಾರೂ ನನ್ನನ್ನು ತಡೆಯಲಾರರು" ಎಂಬಲ್ಲಿಗೆ ಬಂದು ಮುಟ್ಟುತ್ತದೆ. ಆದರೆ ಈ ಸಮಯದಲ್ಲಿಯೇ ಯಾವುದೋ ಮಾಯೆಯಂತೆ ನಿಮ್ಮ ಆದರ್ಶ ಪುರುಷನ ವರ್ತನೆಯಲ್ಲಿ ಧಿಡೀರನೇ ಬದಲಾವಣೆ ಕಂಡುಬರುತ್ತದೆ. ಆತನಿಗೆ ನಿಮ್ಮಲ್ಲಿ ಈಗ ಆಕರ್ಷಣೆ ಉಳಿದಿಲ್ಲ ಎಂಬ ವರ್ತನೆ ಕಂಡುಬರುತ್ತದೆ. ದೈಹಿಕವೇ ಆಗಲಿ, ಮಾನಸಿಕವೇ ಆಗಲಿ, ಸಂಬಂಧ ಕುಸಿಯತೊಡಗುತ್ತದೆ.
ಒಂದು ಸಮೀಕ್ಷೆಯ ಮೂಲಕ ಬಹುತೇಕ ಎಲ್ಲಾ ಸಂಬಂಧಗಳು ಪ್ರಾರಂಭದಲ್ಲಿ ರೋಚಕವಾಗಿದ್ದು ಕಡೆಗೊಂದು ದಿನ ಧಿಡೀರನೇ ಕುಸಿದು ಬಿಡುತ್ತದೆ. ಇದು ಸಂಗಾತಿಗಳಲ್ಲಿ ಅಧೀರತೆ ಮೂಡಿಸುತ್ತದೆ. ಈ ಪರಿಸ್ಥಿತಿಗೆ ಕೇವಲ ಪುರುಷರು ಮಾತ್ರ ಕಾರಣರು ಎಂದು ಹೇಳಲು ಸಾಧ್ಯವಿಲ್ಲ. ಈ ಬದಲಾವಣೆಗೆ ಕಾರಣವೇನು ಎಂಬ ಪ್ರಶ್ನೆಗೆ ತಜ್ಞರು ನೀಡಿರುವ ಉತ್ತರಗಳ ಸಂಗ್ರಹವನ್ನೇ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದ್ದು ಇದು ನಿಮ್ಮ ಮುಂದಿನ ತೀರ್ಮಾನವನ್ನು ಬಲಪಡಿಸಲಿದೆ....

ಪುರುಷರು ಉತ್ಸಾಹ ಕಳೆದುಕೊಳ್ಳುತ್ತಾರೆ
ಸಾಮಾನ್ಯವಾಗಿ ಪುರುಷರಿಗೆ ಯಾವುದಾದರೊಂದು ವಸ್ತು ಅಥವಾ ಸಾಧನೆಯನ್ನು ಸಾಧಿಸುವುದೇ ಮುಖ್ಯವಾಗಿದ್ದು ಇದು ಸಾಧಿಸಿದ ಬಳಿಕ ಅವರ ಗಮನ ಅದರತ್ತ ಗೌಣವಗುತ್ತದೆ. ಉದಾಹರಣೆಗೆ ದುಬಾರಿ ಬೈಕ್ ಬೇಕೆಂದು ಹಠ ಹಿಡಿದು ಕೊಂಡು ಕೆಲದಿನ ತಿರುಗಾಡಿದ ಬಳಿಕ ಮೂಲೆಗೆ ಹಾಕುವುದನ್ನು ಗಮನಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುರುಷರು ಉತ್ಸಾಹ ಕಳೆದುಕೊಳ್ಳುತ್ತಾರೆ
ಅಂತೆಯೇ ತನ್ನ ಮನಸ್ಸಿಗೆ ಇಷ್ಟವಾದ ಮಹಿಳೆಯ ಹೃದಯಗೆಲ್ಲಲೆಂದೇ ಹಠತೊಟ್ಟು ಆಕೆಯ ಹಿಂದೆ ಬೀಳುವ ಮೂಲಕ, ಕಡೆಗೂ ಆಕೆಯ ಅಭಿಮಾನಕ್ಕೆ ಭಾಗಿಯಾಗಿ ಬಂಧನಕ್ಕೆ ಒಳಗಾದ ಬಳಿಕ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಮಹಿಳೆಯರು ತಮ್ಮಲ್ಲಿ ಇನ್ನೂ ಏನೋ ಇದೆ ಎಂಬಂತೆ ವರ್ತಿಸಿ ಇದನ್ನು ಕಂಡುಹಿಡಿಯುವಂತೆ ಸವಾಲು ಎಸೆಯುವ ಮೂಲಕ ಅವರನ್ನು ಬಹಳ ಕಾಲ ತಮ್ಮ ಆಕರ್ಷಣೆಯಲ್ಲಿಯೇ ಇರಿಸಿಕೊಳ್ಳಬಹುದು.

ಥಟ್ಟನೇ ವೈವಾಹಿಕ ಬಂಧನಕ್ಕೆ ಒಳಗಾಗಬೇಡಿ
ಒಂದು ವೇಳೆ ನಿಮ್ಮ ಸಂಬಂಧ ಇತ್ತೀಚೆಗೆ ಪ್ರಾರಂಭವಾಗಿದ್ದು ಇನ್ನೂಪಕ್ವಗೊಂಡಿದ್ದರೆ ನಿಮ್ಮಲ್ಲಿ ಆಸಕ್ತಿ ಕಳೆದುಕೊಂಡಿರಲು ಆತನಿಗೆ ಬೇರೆಯೇ ಕಾರಣಗಳಿರಬಹುದು ಮತ್ತು ಇವುಗಳು ಸಕಾರಣವೂ ಆಗಿರಬಹುದು. ಉದಾಹರಣೆಗೆ ಆಪ್ತರಲ್ಲಿ ಯಾರಾದರೂ ಆಸ್ಪತ್ರೆ ಸೇರಿರುವುದು ಇತ್ಯಾದಿ. ಆದ್ದರಿಂದ ನಯಮಾತುಗಳಲ್ಲಿ ಇದನ್ನು ಅರಿಯಲು ಯತ್ನಿಸಿ. ಇದರ ಬದಲಿಗೆ ಬೇಗನೇ ವಿವಾಹಬಂಧನಕ್ಕೆ ಒಳಗಾಗಲು ಒತ್ತಡ ಹೇರಬೇಡಿ. ಈ ಕ್ರಮದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಸಾಕಷ್ಟು ಸಮಯಾವಕಾಶ ನೀಡಿ ಇಬ್ಬರೂ ವಿವಾಹಬಂಧನಕ್ಕೆ ಸಿದ್ಧ ಎಂದ ಬಳಿಕವೇ ಹಿರಿಯರ ಅನುಮತಿ ಮತ್ತು ಆಶೀರ್ವಾದ ಪಡೆದು ಬಂಧನಕ್ಕೆ ಒಳಗಾಗಿ.

ಆಕರ್ಷಣೆಗೆ ಕಾರಣವಾಗಿರುವುದನ್ನು ಸಮಾಪ್ತಿಗೊಳಿಸುವುದು
ನಿಮ್ಮ ಪುರುಷ ನಿಮ್ಮ ಯಾವ ಗುಣವನ್ನು ಅಥವಾ ಪರಿಯನ್ನು ಗಮನಿಸಿ ನಿಮ್ಮಲ್ಲಿ ಆಕರ್ಷಿತನಾಗಿದ್ದಾನೆ ಎಂದು ಕಂಡುಕೊಳ್ಳಿ. ಏಕೆಂದರೆ ಕೆಲವೊಮ್ಮೆ ನಿಮ್ಮ ವಸ್ತ್ರ, ಕೇಶಾಲಂಕಾರ, ಮುಖದ ಮೇಕಪ್ ಅಥವಾ ಇನ್ನಾವುದೋ ಪರಿಯನ್ನು ಆತ ಮೆಚ್ಚಿಕೊಂಡಿರಬಹುದು. ಆದರೆ ಸಂಬಂಧ ಚಿಗುರುವಾಗ ಈ ಪರಿಯನ್ನು ನೀವು ವ್ಯಕ್ತಪಡಿಸದೇ ಇದ್ದರೆ ಆತ ನಿಮ್ಮಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಒಂದು ವೇಳೆ ಐಬು ಮುಚ್ಚಿಕೊಳ್ಳಲು ಬಳಸಿದ ವಸ್ತುಗಳೂ ಇದಕ್ಕೆ ಕಾರಣವಾಗಬಹುದು. ಉದಾಹರಣೆಗೆ ಬಣ್ಣದ ಕಾಂಟಾಕ್ಟ್ ಲೆನ್ಸ್ ಅನ್ನೇ ನಿಜವಾದುದುದೆಂದು ತಿಳಿದೇ ಆತ ನಿಮ್ಮನ್ನು ಮೆಚ್ಚಿಕೊಂಡಿರಬಹುದು. ಆದರೆ ಇದು ಕೃತಕ ಎಂದು ಗೊತ್ತಾದರೆ ಆತನ ಆಕರ್ಷಣೆಗೆ ಕಾರಣವೇ ಇಲ್ಲವಾಗಬಹುದು. ಆದರೆ ಯಾವುದಕ್ಕೂ ಸಂಬಂಧ ಪಕ್ವಗೊಳ್ಳುವ ಮುನ್ನವೇ ಇವನ್ನು ಸ್ಪಷ್ಟಪಡಿಸುವುದು ಮುಖ್ಯ.

ನೀವು ಸ್ಥೂಲಕಾಯರಾಗುತ್ತಿರುವುದು
ವಿಶ್ವದ ಪ್ರತಿ ಪುರುಷನ ಕನಸಿನ ಕನ್ಯೆ ಬಳುಕುವ ಬಳ್ಳಿಯಾಗಿರುತ್ತಾಳೆ. ಅದು ಬಿಟ್ಟು ನಿಮ್ಮ ದೇಹ ಧಡೂತಿಯಾಗುತ್ತಾ ಹೋದರೆ ಯಾರಿಗೂ ಇಷ್ಟವಾಗದೇ ಹೋಗಬಹುದು. ಸಂಬಂಧದಲ್ಲಿರುವವರು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಗಮನಿಸಿ ಈಗಲೇ ಇಷ್ಟು ಸ್ಥೂಲಕಾಯದವಳಾದರೆ ಮುಂದೆ ಇನ್ನೆಷ್ಟು ದಪ್ಪನಾಗಬೇಡ ಎಂಬ ಲೆಕ್ಕಾಚಾರ ಹಾಕಲು ತೊಡಗುತ್ತಾರೆ. ಈ ಲೆಕ್ಕಾಚಾರವನ್ನು ನಿಮ್ಮ ಸ್ಥೂಲಕಾಯ ದಿನಗಳೆದಂತೆ ಪಕ್ಕಾಗೊಳಿಸುತ್ತಾ ಹೋದಂತೆಯೇ ನಿಮ್ಮ ಬಗ್ಗೆ ಆತನ ಆಕರ್ಷಣೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಸ್ಥೂಲಕಾಯ ಆವರಿಸದಂತೆ ಕ್ರಮ ಕೈಗೊಳ್ಳಿ.

ನಿಮ್ಮ ಮಾತೇ ಹೆಚ್ಚಾಗಿರಬಹುದು
ನಮ್ಮೆಜಮಾನ್ರಿಗೆ ಮಾತು ನಿಂತು ಹೋಗಿದೆ ಎಂದು ಮಹಿಳೆಯೊಬ್ಬಳು ವೈದ್ಯರ ಬಳಿ ಕರೆತಂದರಂತೆ. ವೈದ್ಯರು ಅವರನ್ನು ಪರೀಕ್ಷಿಸಿ ಅವರಿಗೇನೂ ಆಗಿಲ್ಲ, ಅವರಿಗೆ ಮಾತನಾಡಲು ಅವಕಾಶ ನೀಡಿದರೆ ಸಾಕು ಎಂದರಂತೆ. ನಗು ಬರಿಸುವ ಜೋಕು ಆದರೂ ಎಷ್ಟೋ ಕುಟುಂದಲ್ಲಿ ಈ ಸಮಸ್ಯೆ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಮಾತೇ ಹೆಚ್ಚಾಗಿರಬಹುದು
ಆದ್ದರಿಂದ ನಿಮ್ಮ ಮಾತುಗಳು ಅನವರತವಾಗಿದ್ದು ನಿಮ್ಮ ಪುರುಷನಿಗೆ ತನ್ನ ಮಾತುಗಳನ್ನು ಆಡಲು ಅವಕಾಶವೇ ಇಲ್ಲವಾದಲ್ಲಿ ಆತ ನಿಮ್ಮಲ್ಲಿ ಆಕರ್ಷಣೆ ಕಳೆದುಕೊಳ್ಳುವುದು ದಿಟವಾಗಿದೆ. ಆದ್ದರಿಂದ ಇಬ್ಬರೂ ಸಮಾನವಾಗಿ ಮಾತನಾಡುವ, ಇನ್ನೊಬ್ಬರು ಆಡಿದ ಮಾತುಗಳನ್ನು ಕೇಳಿಸಿಕೊಳ್ಳುವ, ಪರಸ್ಪರ ಸಮಾನವಾಗಿ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕವೇ ಸಂಬಂಧವನ್ನು ಸುಂದರವಾಗಿಸಬಹುದು.



Click it and Unblock the Notifications











