Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲೈಫ್‌ನಲ್ಲಿ ಸುಂದರ ಹುಡುಗಿಯನ್ನು ಪಡೆಯುವ ಗುಂಗಿನಲ್ಲಿ....
ಯೌವನವೇ ಹಾಗೆ, ಅದೊಂದು ರೀತಿ ನಶೆ ಎನ್ನಬಹುದು. ಎಲ್ಲವೂ ತನಗೆ ಸಿಗಬೇಕು ಎನ್ನುವ ಆಸೆ ಅಲ್ಲಿರುತ್ತದೆ. ಅದರಲ್ಲೂ ಹುಡುಗಿಯರ ವಿಷಯದಲ್ಲಿ ಯೌವನವು ಹುಡುಗರನ್ನು ಏನೇನೋ ಮಾಡಿಬಿಡುತ್ತದೆ. ಈ ಸಮಯದಲ್ಲಿ ತನಗೊಬ್ಬಳು ಗೆಳತಿ ಬೇಕು. ಆಕೆ ಬೇರೆಯವರಿಗಿಂತ ತುಂಬಾ ಭಿನ್ನವಾಗಿರಬೇಕು ಎನ್ನುವ ಆಸೆಗಳು ಸಹಜವಾಗಿರುತ್ತದೆ. ತುಂಬಾ ಸುಂದರವಾಗಿರುವ ಹುಡುಗಿ ಬೇಕೆಂದು ಪ್ರತಿಯೊಬ್ಬ ಯುವಕರ ಆಸೆಯಾಗಿರುತ್ತದೆ. ಆದರೆ ಎಲ್ಲರಿಗೂ ತಮ್ಮ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಕೆಲವೊಂದು ಸುಂದರ ಹಾಗೂ ಸೆಕ್ಸಿಯಾಗಿರುವ ಹುಡುಗಿಯರು ಶ್ರೀಮಂತ ಹಾಗೂ ತುಂಬಾ ಸ್ಮಾರ್ಟ್ ಇರುವ ಹುಡುಗರ ಬಲೆಗೆ ಮಾತ್ರ ಬೀಳುತ್ತಾರೆ. ಉಳಿದ ಹುಡುಗರು ತಮ್ಮ ಆಸೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುತ್ತಿರುತ್ತಾರೆ. ಸುಂದರವಾಗಿರುವ ಹುಡುಗಿಯನ್ನು ಪಡೆಯುವಂತಹ ಅವಕಾಶ ಸಿಕ್ಕಿದರೆ ನೀವು ಏನು ಮಾಡುತ್ತೀರಿ? ನಿಮ್ಮ ಕಾಲೇಜು ಅಥವಾ ಕಚೇರಿಯಲ್ಲೇ ಸುಂದರವಾಗಿರುವ ಹುಡುಗಿ ನಿಮಗೆ ಸಿಗುವ ಅವಕಾಶವಿದ್ದರೆ ಯುವಕರ ಮನಸ್ಸಿನಲ್ಲಿ ಏನು ಓಡುತ್ತದೆ. ಆಕೆ ಕೇವಲ ನಿಮ್ಮ ಸ್ನೇಹಿತೆ ಮಾತ್ರ ಆಗುತ್ತೇನೆ ಎಂದರೆ ಮುಂದೆ ಏನಾಗಬಹುದು ಎಂದು ಓದಿಕೊಳ್ಳಿ....

ಫ್ಯಾಷನ್ ಬಟ್ಟೆಗಳನ್ನು ಧರಿಸುತ್ತೀರಿ
ನೀವು ಹಠಾತ್ ಆಗಿ ನಿಮ್ಮ ಸ್ಟೈಲ್, ಕೂದಲು ಹಾಗೂ ದೇಹದ ದುರ್ಗಂಧದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೀರಿ.

ಸ್ನೇಹಿತರ ಮುಂದೆ ಕೊಚ್ಚಿಕೊಳ್ಳುತ್ತೀರಿ
ಆಕೆಯನ್ನು ನಿಮ್ಮ ಸ್ನೇಹಿತೆಯಾಗಿ ಮಾಡಿರುವುದು ಹೇಗೆ ಎನ್ನುವ ಕಥೆಯನ್ನು ಸ್ನೇಹಿತರ ಮುಂದೆ ಹೇಳಿಕೊಳ್ಳುತ್ತೀರಿ. ನಿಮ್ಮಿಬ್ಬರ ಸ್ನೇಹದ ಬಗ್ಗೆ ನಿಮ್ಮದೇ ಆದ ಕಥೆ ಕಟ್ಟುತ್ತೀರಿ. ನಿಮ್ಮ ಗೆಳೆಯರಿಗೆ ಆಕೆ ಕೇವಲ ನಿಮ್ಮ ಸ್ನೇಹಿತೆ ಎಂದು ತಿಳಿದಿರದೆ ಇರುವ ಕಾರಣ ಅವರೆಲ್ಲರೂ ನಿಮ್ಮ ಕಥೆಯನ್ನು ನಂಬುತ್ತಾರೆ.

ಒಳಗೊಳಗೆ ಕುದಿಯುತ್ತಾ ಇರುತ್ತೀರಿ
ಕೇವಲ ಆಕೆಯ ಗೆಳೆಯನಾಗಿರುವ ಕಾರಣಕ್ಕೆ ನಿಮಗೆ ಮನಸ್ಸಿನಲ್ಲೇ ನೋವು ಇರುತ್ತದೆ. ಇದರಿಂದ ನಿಮ್ಮ ಮನಸ್ಸು ಆಕೆಯನ್ನು ಗರ್ಲ್ ಫ್ರೆಂಡ್ ಮಾಡುವುದು ಹೇಗೆಂದು ಯೋಚಿಸುತ್ತಿರುತ್ತದೆ.

ದೇವರಲ್ಲಿ ಬೇಡುತ್ತೀರಿ
ನಿಮ್ಮನ್ನು ಬಾಯ್ ಫ್ರೆಂಡ್ ಮಾಡಿಕೊಳ್ಳಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ನೀವು ದೇವರಿಗೆ ಮೊರೆ ಹೋಗದೆ ಬೇರೇನು ಮಾಡಲು ಸಾಧ್ಯ?

ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತೀರಿ
ಆಕೆಯೊಂದಿಗೆ ಒಂದು ಸಲ ಸೆಲ್ಫಿ ತೆಗೆಸಿಕೊಂಡು ಮೊಬೈಲ್ ನಲ್ಲಿದ್ದರೆ ಅದನ್ನು ಜೀವಮಾನವಿಡಿ ನಿಮ್ಮ ಗೆಳೆಯರಿಗೆ ತೋರಿಸಿಕೊಂಡು ಕೊಚ್ಚಿಕೊಳ್ಳಬಹುದು ಎನ್ನುವ ಬಯಕೆ. ಆದರೆ ನೀವು ಜತೆಯಾಗಿ ಸೆಲ್ಫಿ ತೆಗೆಯಲು ಹೋದಾಗ ಆಕೆ ದೂರ ತಳ್ಳಿ ಕೇವಲ ಆಕೆಯ ಸೆಲ್ಫಿ ಮಾತ್ರ ತೆಗೆಯುತ್ತಾಳೆ.

ಆಕೆಯ ಗುಣಗಾನ
ಮಹಿಳೆಯರನ್ನು ಹೊಗಳಿದರೆ ಅವರು ಬಲೆಗೆ ಬೀಳುತ್ತಾರೆಂದು ನೀವು ಅಂದುಕೊಂಡಿರುತ್ತೀರಿ. ಇದರಿಂದಾಗಿ ಪ್ರತಿಯೊಂದು ಮಾತಿನಲ್ಲೂ ನೀವು ಆಕೆಯನ್ನು ಪ್ರಶಂಸಿಸುತ್ತಾ ಇರುತ್ತೀರಿ. ಮಹಿಳೆಯರು ಹೊಗಳುವುದನ್ನು ಇಷ್ಟಪಡುತ್ತಾರೆ. ಆದರೆ ಕೇವಲ ಹೊಗಳುವುದಕ್ಕೆ ಮಾತ್ರ ನಿಮ್ಮ ಬಲೆಗೆ ಬೀಳುವುದಿಲ್ಲ.

ದುರಾಲೋಚನೆ
ಸುಂದರ ಯುವತಿಯು ನಿಮ್ಮ ಗೆಳತಿಯಾಗಿದ್ದರೆ ಆಗ ನಿಮ್ಮ ಮನಸ್ಸನ್ನು ನಿಯಂತ್ರಣ ಮಾಡಿಕೊಳ್ಳುವುದು ತುಂಬಾ ಕಷ್ಟ. ಪ್ರತಿ ಕ್ಷಣವೂ ನಿಮ್ಮ ಮನಸ್ಸು ಆಕೆಯ ಓರೆಕೋರೆಗಳ ಬಗ್ಗೆಯೇ ಚಿಂತಿಸುತ್ತಿರುತ್ತದೆ.



Click it and Unblock the Notifications
