Latest Updates
-
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಹಳೆಯ ಜಮಾನದ ಟ್ರಿಕ್ಸ್‌ಗೆ, ಹುಡುಗಿಯರು ಬಗ್ಗುವುದಿಲ್ಲ ಕಣ್ರೀ!
ಒಂದು ಕಾಲವಿತ್ತು, ಮಹಿಳೆಯರನ್ನು ಆಕರ್ಷಿಸಲೆಂದೇ ಕೆಲವರು ಕಷ್ಟಪಟ್ಟು ಸಿಗರೇಟು ಸೇದುತ್ತಿದ್ದರು. ಕೆಲವು ವಿವಾಹಿತರಿಗಂತೂ ಅವರ ಪತ್ನಿಯರೇ ಎಲ್ಲರೆದುರು ಸಿಗರೇಟು ಸೇದುವಂತೆ ಮನೆಯಲ್ಲಿ ಆಜ್ಞಾಪಿಸಿದ್ದೂ ಇದೆ. ಎಪ್ಪತ್ತರ ದಶಕದಲ್ಲಿ ಇದು ಅತ್ಯಂತ ಸಾಮಾನ್ಯವಾಗಿತ್ತು. ಆದರೆ ಕಾಲ ಬದಲಾದಂತೆ ಈಗ ಮಹಿಳೆಯರಿಗೆ ಈ ದುರಭ್ಯಾಸದ ಬಗ್ಗೆ ತಿಳಿದಿದ್ದು ಸಿಗರೇಟು ಸೇದುವುದನ್ನಾಗಲೀ ಸೇದುವವರನ್ನಾಗಲೀ ಅವರು ಇಷ್ಟಪಡುವುದಿಲ್ಲ. ಇದೇ ತರಹದ ಇನ್ನೂ ಹಲವಾರು ತಂತ್ರಗಳಿದ್ದವು,
ಅಂದರೆ ಶರ್ಟಿನ ಗುಂಡಿಗಳನ್ನು ಹೊಟ್ಟೆಯವರೆಗೆ ತೆರೆದಿಡುವುದು, ಪಾದಗಳ ಬಳಿ ಸ್ಕರ್ಟಿನಷ್ಟು ಅಗಲವಾಗಿರುವ ಬೆಲ್ ಬಾಟಂ ಪ್ಯಾಂಟ್ ತೊಡುವುದು, ಬೈಕಿನಲ್ಲಿ ಹೋಗುತ್ತಿರುವಾಗ ನಿಲ್ಲಬೇಕಾದರೆ ಎಕ್ಸಿಲೇಟರ್ ಜೋರಾಗಿ ಎಳೆದೂ ಬಿಟ್ಟೂ ಎಳೆದೂ ಬಿಟ್ಟು ಮಾಡುವುದು ಇತ್ಯಾದಿ. ಈಗ ನಗು ಬರಿಸುವ ಈ ತಂತ್ರಗಳೆಲ್ಲಾ ಎಪ್ಪತ್ತು ಎಂಭತ್ತರ ದಶಕದಲ್ಲಿ ಸರ್ವೇ ಸಾಮಾನ್ಯವಾಗಿದ್ದವು. ನಂಬಿಕೆ ಬರಲಿಲ್ಲ ಎಂದರೆ ಅಂದಿನ ವಿಷ್ಣುವರ್ಧನ್ ರಜನೀಕಾಂತ್ ದ್ವಾರಕೀಶ್ ರವರ ಕನ್ನಡ ಚಿತ್ರಗಳನ್ನು ನೋಡಿ.
ವ್ಯಾಯಾಮ ಮಾಡುವವರು ಮಾಂಸಖಂಡಗಳು ಕೊಂಚ ಹುರಿಗಟ್ಟಿದ ಕೂಡಲೇ ಇದನ್ನು ತೋರ್ಪಡಿಸಲೆಂದೇ ಅತಿ ಬಿಗಿಯಾದ ಟೀ ಶರ್ಟ್ ತೊಡುವುದು, ಅತಿ ಕಿರಿಯ ತೋಳು ಇರುವ ಶರ್ಟ್ ತೊಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ಬ್ಯಾಂಕ್ ಬ್ಯಾಲೆನ್ಸ್ ಇದ್ದರೆ, ದುಬಾರಿ ಮತ್ತು ಚಿತ್ರವಿಚಿತ್ರ ವಿನ್ಯಾಸಗಳಿರುವ ಕಾರುಗಳಿರುವುದು, ಸಮಾಜದಲ್ಲಿ ದೊಡ್ಡ ಹುದ್ದೆಯಲ್ಲಿರುವುದು ಮೊದಲಾದವೆಲ್ಲಾ ಒಂದು ಕಾಲದಲ್ಲಿ
ನಿಜವಾಗಿಯೂ ಮಹಿಳೆಯರನ್ನು ಆಕರ್ಷಿಸುತ್ತಿದ್ದವು. ಆದರೆ ಇಂದು ಮಹಿಳೆಯರು ಹೆಚ್ಚು ವಿದ್ಯಾವಂತರೂ ಪ್ರಜ್ಞಾವಂತರೂ ಆಗಿರುವ ಕಾರಣ ಇಂತಹ ತಂತ್ರಗಳಿಗೆ ಯಾವುದೇ ಮಹತ್ವ ನೀಡುವುದಿಲ್ಲ. ಬನ್ನಿ, ಇಂದಿನ ಆಧುನಿಕ ಮಹಿಳೆಯರು ಯಾವ ತಂತ್ರಗಳನ್ನು ಇಷ್ಟಪಡುವುದಿಲ್ಲ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ಹಣ
ಇಂದು ಹೆಚ್ಚಿನ ಮಹಿಳೆಯರು ವಿದ್ಯಾವಂತರಾಗಿದ್ದು ತಮ್ಮ ಸ್ವಸಾಮರ್ಥ್ಯಗಳ ಮೇಲೆ ಅವಲಂಬಿತರಾಗಿ ಉದ್ಯೋಗಿಗಳೂ ಆಗುತ್ತಿದ್ದಾರೆ. ತಮ್ಮ ಸ್ವಂತ ಗಳಿಕೆಯಿಂದಲೇ ತಮ್ಮ ಮತ್ತು ತಮ್ಮ ಕುಟುಂಬದ ಪಾಲನೆಯನ್ನೂ ಮಾಡುತ್ತಿದ್ದಾರೆ. ಆದ್ದರಿಂದ ಇವರಿಗೆ ಪುರುಷನ ಹಣ ಒಂದು ಆಕರ್ಷಣೆಯಾಗಿ ಉಳಿದಿಲ್ಲ. ಇಂದು ಪುರುಷನ ಹಣವನ್ನು ನೋಡಿ ಮೋಡಿಗೊಳಗಾಗುವ ಮಹಿಳೆಯರು ಇರಬಹುದು, ಆದರೆ ಇವರ ಸಂಖ್ಯೆ ಸ್ವಾಭಿಮಾನಿ ಮಹಿಳೆಯರಿಗೆ ಹೋಲಿಸಿದರೆ ನಗಣ್ಯವಾಗಿದೆ.

ಹುರಿಗಟ್ಟಿದ ಸ್ನಾಯುಗಳು
ಒಂದು ವೇಳೆ ಬುದ್ಧಿವಂತ ಪುರುಷನಲ್ಲಿ ಉತ್ತಮ ದೇಹದಾರ್ಢ್ಯವಿದ್ದು ಸಮಾಜದಲ್ಲಿಯೂ ಉತ್ತಮ ನಡವಳಿಕೆ ಹೊಂದಿದ್ದರೆ ಇವರು ಖಂಡಿತವಾಗಿಯೂ ಮಹಿಳೆಯರ ಗಮನ ಸೆಳೆಯುತ್ತಾರೆ. ಆದರೆ ಕೇವಲ ಹುರಿಗಟ್ಟಿದ ಮಾಂಸಖಂಡಗಳು ಮಾತ್ರವೇ ಕಾರಣವಾಗಲಾರದು. ಆದರೆ ಇಂದಿಗೂ ಹೆಚ್ಚಿನ ಪುರುಷರು ಹುರಿಗಟ್ಟಿದ ಸ್ನಾಯುಗಳೇ ಮಹಿಳೆಯರ ಆಕರ್ಷಣೆ ಪಡೆಯುತ್ತವೆ ಎಂದು ನಂಬಿದ್ದಾರೆ. ಈ ದಿನಗಳು ಎಂದೋ ಸರಿದು ಹೋಗಿವೆ.

ಉಡುಗೊರೆಗಳು
ನಿಮ್ಮ ಸ್ನೇಹಿತರೊಂದಿಗಿನ, ಬಂಧು ಬಾಂಧವರೊಡನ ಬಾಂಧವ್ಯವನ್ನು ಹೆಚ್ಚಿಸಲು ಉಡುಗೊರೆಗಳು ಖಂಡಿತಾ ನೆರವಾಗುತ್ತವೆ. ಪವಿತ್ರ ಕುರಾನ್ ನಲ್ಲಿಯೂ, ಬೈಬಲ್ ನಲ್ಲಿಯೂ, ವೇದಗಳಲ್ಲಿಯೂ ನಿಮ್ಮ ಪ್ರೀತಿಪಾತ್ರರನ್ನು ನೋಡಲು ಹೋಗುವಾಗ ಉಡುಗೊರೆಯೊಂದನ್ನು ಖಂಡಿತಾ ಕೊಂಡು ಹೋಗಿ ಎಂದು ತಿಳಿಸಲಾಗಿದೆ. ಆದರೆ ಇಂದು ಮಹಿಳೆಯರು ಉಡುಗೊರೆಗಾಗಿ ಹಾತೊರೆದು ಕುಳಿತಿಲ್ಲ. ಅಷ್ಟೇ ಅಲ್ಲ, ಅಪರಿಚಿತರಿಂದ ಉಡುಗೊರೆ ಪಡೆಯುವುದು ಅಪಾಯಕರ ಎಂದು ತಿಳಿದು ಭಯಭೀತರಾಗುತ್ತಾರೆ ಕೂಡಾ.

ರೌಡಿಪಟ್ಟ
ಕೆಲವು ಜಾನಪದ ಕಥೆಗಳಲ್ಲಿ ಕಥಾನಾಯಕ ರೌಡಿಯೂ ಆಗಿರುತ್ತಾನೆ, ಅಂದರೆ ದುಷ್ಟರನ್ನು ಸದೆಬಡಿದು ಸಾಮಾನ್ಯ ಜನರಿಗೆ ನೆರವಾಗುತ್ತಾನೆ. ಈ ನಡವಳಿಕೆ ವಿಶೇಷವಾಗಿ ಚಿಕ್ಕ ಹುಡುಗಿಯರ ಮನದಲ್ಲಿ ಅಚ್ಚುಬಿಟ್ಟಿರುತ್ತದೆ. ಇವರು ಗುಪ್ತವಾಗಿ ಇಂತಹ ನಡವಳಿಕೆಗಳನ್ನು ಇಷ್ಟಪಡುತ್ತಿರುತ್ತಾರೆ. ಅಂತೆಯೇ ಸಮಾಜದಲ್ಲಿ ರೌಡಿಗಳಂತೆ ವರ್ತಿಸುವ ವರ್ತನೆಯನ್ನು ಹೆಚ್ಚು ಗಮನಿಸುತ್ತಾರೆ. ಇದನ್ನೇ ಪ್ರೇರಣೆಯನ್ನಾಗಿ ಕಂಡುಕೊಂಡ ಪಡ್ಡೆ ಹುಡುಗರು ರೌಡಿತನಕ್ಕೆ ಇಳಿಯುತ್ತಾರೆ. ಆದರೆ ಇಂದಿನ ಮಹಿಳೆಯರು ಎಷ್ಟೋ ಪ್ರೌಢರಾಗಿದ್ದು ರೌಡಿಗಳ ವರ್ತನೆಯನ್ನು ಇಷ್ಟಪಡುವುದಿರಲಿ, ಸೂಕ್ತ ಬುದ್ಧಿ ಕಲಿಸಲೂ ಶಕ್ತರಿದ್ದಾರೆ..!

ಎಲೆಕ್ಟ್ರಾನಿಕ್ ಉಪಕರಣಗಳು
ಒಂದು ಕಾಲದಲ್ಲಿ ಸೋನಿ ವಾಕ್ಮನ್ ಕೇಳುತ್ತಾ ಓಡಾಡುವುದು ಒಂದು ಗೀಳಾಗಿತ್ತು. ಜನರು ನೋಡಲಿ ಎಂದೇ ಬೆಂಗಳೂರಿನಾದ್ಯಂತ ಅದರಲ್ಲೂ ಎಂಜಿ ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ವಾಕ್ಮನ್ ಕೇಳುತ್ತಾ ಓಡಾಡುವವರಿದ್ದರು. ವಾಸ್ತವವೆಂದರೆ ಇವರಲ್ಲಿ ಹೆಚ್ಚಿನವರು ಕೇವಲ ಹೆಡ್ ಫೋನನ್ನು ಮಾತ್ರ ಕಿವಿಗೆ ಸಿಕ್ಕಿಸಿ ಅದರ ಪಿನ್ನನ್ನು ಜೇಬಿನೊಳಗಿಟ್ಟು ಎದುರಿನವರ ಗಮನ ಸೆಳೆಯಲು ಯತ್ನಿಸುತ್ತಿದ್ದರು. ಅಂದರೆ ಜೇಬಿನಲ್ಲಿ ವಾಕ್ಮನ್ ಇರುತ್ತಲೇ ಇರಲಿಲ್ಲ..! ಆದರೆ ಇಂದು ವಾಕ್ಮನ್ ಬಿಡಿ, ದುಬಾರಿ ವರ್ತು ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಹೋದರೂ ಮಹಿಳೆಯರು ಇದಕ್ಕೆ ಯಾವುದೇ ಗಮನ ನೀಡುವುದಿಲ್ಲ.

ಜನಪ್ರಿಯತೆ
ಸಾಮಾನ್ಯವಾಗಿ ಖ್ಯಾತ ವ್ಯಕ್ತಿಗಳು ಜನರ ನಡುವೆ ಬರುತ್ತಿದ್ದಂತೆಯೇ ಹೆಚ್ಚಿನ ಗಮನ ಪಡೆಯುತ್ತಾರೆ. ಅಭಿಮಾನಿಗಳು ಮುತ್ತಿಕೊಂಡು ಆಟೋಗ್ರಾಫ್ ಗಾಗಿ ಪೀಡಿಸುತ್ತಾರೆ. ಆದರೆ ಜನಪ್ರಿಯತೆ ಮಹಿಳೆಯರನ್ನು ಸೆಳೆಯಲು ಹಿಂದಿನಂತೆ ಸಮರ್ಥವಾಗಿಲ್ಲ. ವ್ಯಕ್ತಿ ಎಷ್ಟೇ ಜನಪ್ರಿಯನಿರಲಿ, ಅವರ ಅಭಿಮಾನಿಯಾಗಿರಲು ಇಷ್ಟಪಡುತ್ತಾರೆಯೇ ವಿನಃ ಅದಕ್ಕೂ ಹೆಚ್ಚು ಇನ್ನೇನೂ ಅಲ್ಲ. ಅವರು ಪುರುಷರಲ್ಲಿ ಉತ್ತಮ ಗುಣಗಳನ್ನೇ ನೋಡಲು ಇಷ್ಟಪಡುತ್ತಾರೆ.



Click it and Unblock the Notifications











