Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಪ್ರಥಮ ಭೇಟಿಯಲ್ಲಿ, ಆತನ ಆಲೋಚನೆ ಬೇರೆಯೇ ಇರುತ್ತದೆ!
ಹೆಣ್ಣನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂದಾಗ ಮನೆಯಲ್ಲಿ ಸಡಗರದೊಂದಿಗೆ ಸೌಂದರ್ಯದ ಅಂಗಡಿಯೊಂದೂ ತೆರೆದುಕೊಳ್ಳುತ್ತದೆ. ಮನೆಯ ಮಹಿಳೆಯರೆಲ್ಲಾ ಹಣ್ಣಿನ ಅಲಂಕಾರ, ಗಂಡಿನ ಕಡೆಯವರು ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಪಾಠಗಳ ಮೂಲಕ ಹೆಣ್ಣನ್ನು ಗಂಡು ಒಪ್ಪಲು ತಯಾರಾಗುವಂತೆ ಸಿದ್ಧಪಡಿಸುತ್ತಾರೆ. ಅದರಲ್ಲೂ ಅಲಂಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
ಗಂಡಿಗೆ ವಿದ್ಯೆ, ಹೆಣ್ಣಿಗೆ ಸೌಂದರ್ಯವೇ ಭೂಷಣ ಎಂಬ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಎಷ್ಟೇ ಪರಿಣಿತರಿಂದ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಂಡು ಹೋದರೂ ಗಂಡು ಕೇವಲ ಆ ಸೌಂದರ್ಯವನ್ನು ಮೆಚ್ಚಿ ಒಪ್ಪುತ್ತಾನೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಸೌಂದರ್ಯಕ್ಕೂ ಮಿಗಿಲಾಗಿ ಪುರುಷರು ಹೆಣ್ಣಿನ ಗುಣಗಳಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಕಂಡುಬರುತ್ತಿದೆ. ಇದನ್ನೆಲ್ಲಾ ವಿವಾಹದ ಮೊದಲೇ ಇತ್ಯರ್ಥ ಮಾಡಿಕೊಳ್ಳಿ!
ವಾಸ್ತವವಾಗಿ ಹೆಣ್ಣಿನ ದೇಹಸೌಂದರ್ಯ ಪ್ರಮುಖ ಪಾತ್ರ ವಹಿಸುತ್ತದಾದರೂ ಇದೊಂದೇ ಒಪ್ಪಿಗೆಗೆ ಕಾರಣವಾಗಲಾರದು. ಸಾಮಾನ್ಯವಾಗಿ ಮಹಿಳೆಯರು ಅಕ್ಕಪಕ್ಕದ ಪುರುಷರು ತಮ್ಮ ವಕ್ಷಸ್ತಲವನ್ನೇ ವೀಕ್ಷಿಸುತ್ತಾರೆ ಎಂಬ ಭಾವನೆ ಹೊಂದಿರುತ್ತಾರೆ. ಒಂದು ತರಹದಲ್ಲಿ ಇದು ನಿಜ ಸಹಾ. ರಸ್ತೆಯಲ್ಲಿ ಮಹಿಳೆಯರು ಸಾಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಸಾಗುತ್ತಿರುವ ಪುರುಷರನ್ನು ಗಮನಿಸಿದರೆ ಅವರ ದೃಷ್ಟಿ ಎಲ್ಲಿ ನೆಟ್ಟಿರುತ್ತದೆ ಎಂಬುದನ್ನು ಗಮನಿಸಬಹುದು.
ಇದು ವಿಶ್ವವ್ಯಾಪಿಯಾಗಿದ್ದು ಪುರುಷರ ವಂಶವಾಹಿನಿಯಲ್ಲಿಯೇ ಇದೆ. ಆದರೆ ಎಲ್ಲರೂ ಈ ಪ್ರವೃತ್ತಿ ಹೊಂದಿರುವುದಿಲ್ಲ. ಪ್ರೌಢ ಮತ್ತು ಪ್ರಬುದ್ಧರಾಗುತ್ತಿದ್ದಂತೆಯೇ ಈ ಅಭ್ಯಾಸಗಳೆಲ್ಲಾ ತನ್ನಿಂತಾನೇ ಮಾಯವಾಗುತ್ತದೆ. ಆದರೆ ವಿವಾಹವಾಗುವ ಗಂಡು ತನ್ನ ಸಂಗಾತಿಯಾಗುವವಳಲ್ಲಿ ಸೌಂದರ್ಯಕ್ಕೂ ಹೊರತಾಗಿ ಏನನ್ನು ನೋಡುತ್ತಾನೆ ಎಂಬ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ನೀಡಲಿದೆ...

ನಗು
ಅಳುವ ಗಂಡಸನ್ನು, ನಗುವ ಹೆಂಗಸನ್ನು ನಂಬಬಾರದಂತೆ. ಆದರೆ ಹೆಣ್ಣನ್ನು ನೋಡಲು ಬರುವ ಗಂಡನ್ನು ಮೊತ್ತ ಮೊದಲಾಗಿ ಆಕರ್ಷಿಸುವುದು ಆಕೆಯ ನಗು. ಅಲ್ಲದೇ ನಕ್ಕಾಗ ಕೆನ್ನೆಯಲ್ಲಿ ಚಿಕ್ಕ ಗುಳಿ ಬಿದ್ದರೆ ಗಂಡು ಆ ಗುಳಿಯಲ್ಲಿ ಬಿದ್ದ ಎಂದೇ ಲೆಕ್ಕ.

ಕಣ್ಣುಗಳು
ಗಂಡಿನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹೆಣ್ಣನ್ನು ಹೆಚ್ಚಿನವರು ಪ್ರಥಮ ನೋಟದಲ್ಲಿಯೇ ಮೆಚ್ಚಿಕೊಳ್ಳುತ್ತಾರೆ. ಆದ್ದರಿಂದ ಒಂದು ವೇಳೆ ನೀವು ಕನ್ನಡಕ ಧರಿಸುವವರಾಗಿದ್ದರೆ ಇದರ ಬದಲಿಗೆ ಕಾಂಟಾಕ್ಟ್ ಲೆನ್ಸ್ ಗಳನ್ನು ಮರೆಯದೇ ಧರಿಸಿ. ಸನ್ ಗ್ಲಾಸ್ ಸರ್ವಥಾ ಧರಿಸಬೇಡಿ. ನಿಮ್ಮ ಕಣ್ಣುಗಳಿಗೆ ಪೂರಕವಾದ ಕೊಂಚವೇ ಮೇಕಪ್ ಸಾಕು. ಢಾಳಾದ ಮೇಕಪ್ ಗಂಡಿನ ಗಮನ ಸೆಳೆಯಲು ಸಮರ್ಥವಾದರೂ ಆಕರ್ಷಣೆ ಪಡೆಯಲು ವಿಫಲವಾಗುತ್ತದೆ. ಅಂದರೆ ವಿರುದ್ದವಾಗಿಯೂ ಕೆಲಸ ಮಾಡಬಹುದು. ಆದ್ದರಿಂದ ಅಗತ್ಯಕ್ಕೆ ತಕ್ಕಷ್ಟು ಮಾತ್ರ, ಸೂಕ್ತವಾದ ಕಣ್ಣಿನ ಮೇಕಪ್ ಸಾಕು.

ಸುವಾಸನೆ
ಮಹಿಳೆಯರು ಅತಿ ಗಾಢ ಸುವಾಸನೆ ಬೀರುತ್ತಾ ಬಂದರೆ ಇದನ್ನು ಹೆಚ್ಚಿನ ಪುರುಷರು ಮೆಚ್ಚುವುದಿಲ್ಲ. ಆದರೆ ಬೆವರಿನ ದುರ್ಗಂಧ ಬಾರದಂತೆ ಅತಿ ಎಚ್ಚರಿಕೆ ವಹಿಸಬೇಕು. ಬೆವರಿನ ದುರ್ಗಂಧವನ್ನು ಯಾವ ಪುರುಷನೂ ಸಹಿಸುವುದಿಲ್ಲ. ಆದರೆ ಸ್ವಚ್ಛವಾದ ಶರೀರದಿಂದ ಹೊಮ್ಮುವ ನಸು ಸುಗಂಧವನ್ನು ಖಂಡಿತಾ ಮೆಚ್ಚುತ್ತಾರೆ.

ಹಲ್ಲುಗಳು
ಒಂದು ವೇಳೆ ನಿಮ್ಮ ಮೈಮಾಟ ಚೆನ್ನಾಗಿದ್ದು ಹಲ್ಲುಗಳು ಸ್ವಚ್ಛವಾಗಿಲ್ಲದಿದ್ದರೆ ನಿಮ್ಮ ಅಷ್ಟೂ ಶ್ರಮ ವ್ಯರ್ಥವಾದಂತೆ. ಏಕೆಂದರೆ ಸ್ವಚ್ಛವಾದ ಹಲ್ಲುಗಳಿಲ್ಲದ ಅಥವಾ ಬಾಯಿಯ ದುರ್ಗಂಧ ಹೊಮ್ಮುತ್ತಿರುವ ಯುವತಿಯನ್ನು ಯಾವುದೇ ಪುರುಷ ಒಪ್ಪಲಾರ. ಅಷ್ಟೇ ಏಕೆ ನಿಮ್ಮನ್ನು ಕನಸಿನಲ್ಲಿಯೂ ಚುಂಬಿಸಲು ಅತ ಬಯಸುವುದಿಲ್ಲ.

ಕೂದಲು
ಮಹಿಳೆಯರ ನೀಳವಾದ ಮತ್ತು ಕಾಂತಿಯುಕ್ತ ಕೂದಲು ಪುರುಷರಿಗೆ ಬಹಳ ಇಷ್ಟ. ಆದ್ದರಿಂದ ನಿಮ್ಮ ಕೂದಲನ್ನು ಸಾಧ್ಯವಾದಷ್ಟು ಸ್ವಚ್ಛವಾಗಿ ಕಂಡೀಶನರ್ ಬಳಸಿ ಸೌಮ್ಯಗೊಳಿಸಿ ಕಾಂತಿಯುಕ್ತವಾಗಿಸಿ. ಅದರಲ್ಲೂ ಉದ್ದ ಕೂದಲಿದ್ದರೆ ಜಡೆಕಟ್ಟದೇ ಸಡಿಲವಾಗಿ ಬಿಡಿ. ಮುಂಗುರುಳು ಮುಖದ ಮೇಲೆ ನಸುವಾಗಿ ಬೀಳುತ್ತಿದ್ದು ಮಂದವಾಗಿ ಬೀಸುವ ಗಾಳಿಗೂ ಓಲಾಡುವಂತಿರಬೇಕು. ಈ ಪರಿಗೆ ಮರುಳಾಗದ ಪುರುಷನೇ ಇಲ್ಲ.



Click it and Unblock the Notifications