Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆತನ ವಾಟ್ಸಪ್ ಚಾಟ್‌ನಲ್ಲೇ ಪ್ರೇಮದ ಸಂದೇಶವಿದೆ!
ಒಬ್ಬ ವ್ಯಕ್ತಿ ನಿಮ್ಮನ್ನು ಇಷ್ಟಪಡುತ್ತಿದ್ದಾನೆ ಎಂದು ತಿಳಿಯುವುದು ಬಹಳ ಸುಲಭ. ಆತನ ಅಂಗ ಭಾಷೆಯು ಅದನ್ನು ನಿಮಗೆ ಸುಲಭವಾಗಿ ಅರ್ಥವಾಗುವಂತೆ ಮಾಡುತ್ತದೆ. ನಿಮ್ಮ ಜೊತೆಗೆ ಆತ ಮಾತನಾಡುವಾಗ ನಿಮ್ಮನ್ನು ಹೇಗೆ ನೋಡುತ್ತಾನೆ. ನಿಮಗೆ ಎಷ್ಟು ಗೌರವ ನೀಡುತ್ತಾನೆ. ಇತ್ಯಾದಿ ಇತ್ಯಾದಿ ಮಾರ್ಗಗಳಿಂದ ಆತನ ಪ್ರೀತಿಯನ್ನು ನೀವು ಅರ್ಥ ಮಾಡಿಕೊಳ್ಳಬಹುದು.
ಆದರೆ ಬರೀ ವಾಟ್ಸಪ್ ಮೂಲಕ ಆತನ ಭಾವನೆಯನ್ನು ಅದು ಹೇಗೆ ಅರ್ಥ ಮಾಡಿಕೊಳ್ಳುವುದು? ಬನ್ನಿ ಅದನ್ನು ನಾವು ನಿಮಗೆ ಹೇಳಿ ಕೊಡುತ್ತೇವೆ. ಆತ ನಿಮ್ಮನ್ನು ಇಷ್ಟಪಡುತ್ತಿರುವುದು ನಿಮಗೂ ಖುಷಿಕೊಟ್ಟಲ್ಲಿ, ಅದನ್ನು ಮುಂದಿನ ಹಂತಕ್ಕೆ ಹೇಗೆ ತೆಗೆದುಕೊಂಡು ಹೋಗುವುದು ಎಂದು ನಾವು ನಿಮಗೆ ತಿಳಿಸುತ್ತೇವೆ. ಪ್ರೀತಿಯೂ ಕೂಡ ಮಾದಕ ದ್ರವ್ಯದಂತೆಯೇ, ಸ್ವಲ್ಪ ಹುಷಾರು!
ಆತ ಸಂಭಾಷಣೆಯನ್ನು ಮುಂದುವರಿಸಲು ಹವಣಿಸುತ್ತಾನೆ
ಆತ ನಿಮ್ಮ ಜೊತೆಗೆ ಮಾತನಾಡಲು ಮಾತ್ರ ನೋಡುವುದಿಲ್ಲ. ಅದನ್ನು ಆದಷ್ಟು ಹಿಗ್ಗಿಸಲು ನೋಡುತ್ತಾನೆ. ಒಂದು ವೇಳೆ ನಿಮ್ಮ ಮಾತುಕತೆ ಬೋರ್ ಆಗಲು ಆರಂಭಿಸಿದರೆ ಆತ ನಿಮಗೆ ಫೋಟೋಗಳನ್ನು, ಹಾಡುಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸುತ್ತಾ ಇರುತ್ತಾನೆ. ಅದು ನಿಮಗೆ ಕುತೂಹಲಕಾರಿಯಾಗಿಯೂ ಅದೇ ಸಮಯಕ್ಕೆ ರೊಮ್ಯಾಂಟಿಕ್ ಆಗಿಯೂ ಇರುವಂತೆ ಆತ ನೋಡಿಕೊಳ್ಳುತ್ತಾನೆ.

ನಿಮ್ಮ ಬಗ್ಗೆ ಕಾಳಜಿ ತೋರಿಸುತ್ತಾನೆ
ಆತ ಎದ್ದ ಕೂಡಲೆ ಮಾಡುವ ಮೊದಲ ಕೆಲಸವೇನೆಂದರೆ ನಿಮಗೆ ಗುಡ್ ಮಾರ್ನಿಂಗ್ ಸಂದೇಶವನ್ನು ಕಳುಹಿಸುವುದು. ಆಮೇಲೆ ಕಾಫಿ, ತಿಂಡಿ ಅದು ಇದು ಪ್ರಶ್ನೆಗಳು ಬರುತ್ತಲೆ ಇರುತ್ತವೆ. ಇಡೀ ದಿನ ನೀವು ತಿಂದಿರಾ? ಬಿಟ್ಟಿರಾ ಇತ್ಯಾದಿ ಪ್ರಶ್ನೆಗಳು ನಿಮಗೆ ಆತನ ಕಡೆಯಿಂದ ಬರುತ್ತಲೆ ಇರುತ್ತವೆ. ನೀವು ಇನ್ನೇನು ನಿದ್ದೆ ಮಾಡಬೇಕು ಎನ್ನುವಷ್ಟರಲ್ಲಿ ಆತನಿಂದ ಗುಡ್‌ನೈಟ್ ಸಂದೇಶ ಕೂಡ ಬಂದಿರುತ್ತದೆ! ಪ್ರೀತಿ ವಿಚಾರದಲ್ಲಿ, ಹುಡುಗರು ಸೀರಿಯಸ್ ಆಗಿರುತ್ತಾರಂತೆ!
ಆತ ತಕ್ಷಣ ನಿಮಗೆ ಪ್ರತಿಕ್ರಿಯಿಸುತ್ತಾನೆ
ನೀವು ಒಂದು ಸಂದೇಶ ಕಳುಹಿಸಿದ ಕೂಡಲೆ ಮಿಂಚಿನ ವೇಗದಲ್ಲಿ ಆತನ ಪ್ರತಿಕ್ರಿಯೆ ನಿಮ್ಮನ್ನು ತಲುಪುತ್ತದೆ. ಆತ ಬ್ಯುಸಿಯಾಗಿರಲಿ, ಇಲ್ಲದಿರಲಿ, ಆತನ ಪ್ರತಿಕ್ರಿಯೆಗೆ ಯಾವುದೇ ತಡೆ ಇರುವುದಿಲ್ಲ.
ಆತನ ಸಂದೇಶಗಳು ದೀರ್ಘವಾಗಿರುತ್ತವೆ ಮತ್ತು ವಿವರಣಾತ್ಮಕವಾಗಿರುತ್ತವೆ
ನಿಜ ಆತ ನಿಮ್ಮನ್ನು ಇಷ್ಟಪಟ್ಟಿದ್ದಲ್ಲಿ, ಆತ ಯಾವತ್ತಿಗೂ ಸಣ್ಣ ಸಂದೇಶಗಳನ್ನು ಕಳುಹಿಸುವುದಿಲ್ಲ. ಸುದೀರ್ಘವಾದ ಸಂದೇಶಗಳು ನಿಮಗೆ ಆತನ ಕಡೆಯಿಂದ ಬರುತ್ತಿರುತ್ತವೆ. ಆತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾಗ ಇಲ್ಲವೇ ಆತನ ಬಗ್ಗೆ ನೀವು ಗಮನ ನೀಡಬೇಕೆಂದಾಗ ಮಾತ್ರ ಸಣ್ಣ ಸಂದೇಶಗಳನ್ನು ಕಳುಹಿಸುತ್ತಾನೆ.
ಸಮಯವಲ್ಲದ ಸಮಯದಲ್ಲೂ ಆತ ನಿಮಗೆ ಸಂದೇಶ ಕಳುಹಿಸುತ್ತಾನೆ
ನಿಮ್ಮ ಕೆಲಸದ ಸಮಯ ಗೊತ್ತಿದ್ದರೂ, ನಿಮ್ಮ ಮಲಗುವ ಸಮಯ ಗೊತ್ತಿದ್ದರೂ, ಆತ ನಿಮಗೆ ಸಂದೇಶ ಕಳುಹಿಸುತ್ತಲೆ ಇರುತ್ತಾನೆ. ಆತ ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ಸಂದೇಶದ ಮೂಲಕ ನಿಮಗೆ ತೋರಿಸುತ್ತಲೆ ಇರುತ್ತಾನೆ. ಇನ್ನೂ ಕೆಲವೊಮ್ಮೆ ಹಾರ್ಟ್‌ಗಳು, ಮುತ್ತುಗಳು ಸಹ ನಿಮಗೆ ಆತನಿಂದ ಸಂದೇಶದ ರೂಪದಲ್ಲಿ ಬರುತ್ತವೆ. ಆಕೆ ನಗೆ ಬೀರಿದರೆ, ಅದನ್ನೇ ಪ್ರೀತಿ ಅಂದುಕೊಳ್ಳುವುದೇ?
ಸಿಕ್ಕಾಪಟ್ಟೆ ಎಮೋಟಿಕಾನ್ ಕಳುಹಿಸುತ್ತಾನೆ
ಸಿಕ್ಕಾಪಟ್ಟೆ ಸ್ಮೈಲಿಗಳು ಆತನ ಸಂದೇಶದಲ್ಲಿ ತುಂಬಿ ತುಳುಕುತ್ತಿರುತ್ತವೆ.



Click it and Unblock the Notifications

