Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಬಂಧಗಳ ಬಗ್ಗೆ ಇರುವ ಕೊಂಚ ಇಂಟರೆಸ್ಟಿಂಗ್ ಸಂಗತಿ
ಸಂಬಂಧ ಎನ್ನುವುದು ಒಂದು ಮಧುರ ಬಾಂಧವ್ಯ. ಅದಕ್ಕೆ ಕಾಳಜಿ, ಪ್ರೀತಿ, ಗೌರವ, ಪ್ರಾಮಾಣಿಕತೆ ಮತ್ತು ಸಹಾನುಭೂತಿಗಳ ಅಗತ್ಯವಿರುತ್ತದೆ. ಸಂಬಂಧಗಳು ಕೊಡು ಕೊಳ್ಳುವಿಕೆಯನ್ನು ಹೊಂದಿರುತ್ತವೆ. ಯಾವ ಸಂಬಂಧವು ಕೊಡುವುದಕ್ಕಿಂತ ತೆಗೆದುಕೊಳ್ಳುವುದು ಹೆಚ್ಚಾಗಿರುತ್ತವೆಯೋ, ಆ ಸಂಬಂಧದಲ್ಲಿ ಮಧುರ ಬಾಂಧವ್ಯ ಕಡಿಮೆಯಾಗುತ್ತದೆ. ಸಂಬಂಧವನ್ನು ಉಳಿಸಿಕೊಂಡರೆ ಮಾತ್ರ ಉಳಿಯುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ.
ಭಾರತದಲ್ಲಿ ಸಂಬಂಧಗಳು ಭಾವನಾತ್ಮಕವಾಗಿರುತ್ತವೆ ಎಂಬ ಭಾವನೆ ಇತ್ತೀಚೆಗೆ ಕಡಿಮೆಯಾಗಿದೆ. ಇದು ಈಗ ಹಣ, ದೈಹಿಕ ಅಗತ್ಯವಾಗಿ ನಿಂತಿದೆ ಎಂದು ಬಹುತೇಕರಿಗೆ ಈಗಾಗಲೇ ತಿಳಿದಿದೆ. ಅದರಲ್ಲೂ ನಗರ ಪ್ರದೇಶದಲ್ಲಿ 90% ಸಂಬಂಧಗಳು ಈ ಕಾರಣಕ್ಕಾಗಿಯೇ ಇರುತ್ತವೆ.

ಹೊಂದಾಣಿಕೆಯಿಲ್ಲದ ಸಂಬಂಧ
ನಗರಗಳಲ್ಲಿ ಕೇವಲ ನೆಪ ಮಾತ್ರಕ್ಕೆ ಸಂಬಂಧದಲ್ಲಿರುವ ಅಥವಾ ಹೊಂದಾಣಿಕೆಯಿಲ್ಲದ ಸಂಬಂಧಗಳು ಇರುತ್ತವೆ. ಈ ಬಗೆಯ ಸಂಬಂಧವು ನಗರಗಳಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂತಹ ಸಂಬಂಧವು ಪ್ರತಿಯೊಬ್ಬರಿಗೂ ಮಾರಕವಾಗಿರುತ್ತವೆ. ಅಂತಹವುಗಳಲ್ಲಿ ಬಾಳುವ ಬದಲಿಗೆ, ಇಬ್ಬರೂ ಸೇರಿ ಒಂದು ನಿರ್ಧಾರಕ್ಕೆ ಬಂದು ಆ ಸಂಬಂಧವನ್ನು ಕಡಿದುಕೊಳ್ಳುವುದು ಉತ್ತಮ.
ಹಣದ ಮೇಲೆ ಆಧಾರಪಟ್ಟಿರುವ ಸಂಬಂಧ
ಕೆಲವೊಂದು ಸಂಬಂಧಗಳಲ್ಲಿ ಹಣವೇ ಮುಖ್ಯವಾಗಿರುತ್ತದೆ. ಹೆಂಗಸರನ್ನು ಸಂತೋಷಪಡಿಸುವಷ್ಟು ಹಣವು ಗಂಡಸಿನ ಬಳಿ ಇಲ್ಲವಾದಲ್ಲಿ ಆ ಸಂಬಂಧವು ತುಂಬಾ ದಿನಗಳ ಕಾಲ ಜೀವಂತವಾಗಿರುವುದಿಲ್ಲ. ಆ ಪರಿಸ್ಥಿತಿಯಲ್ಲಿ ಆ ಹೆಂಗಸು ಅವನ ಜೊತೆಗೆ ಬಾಳಲು ಇಷ್ಟಪಡದೆ ಸಂಬಂಧವನ್ನು ಕಡಿದುಕೊಳ್ಳುತ್ತಾಳೆ. ಸಂಬಂಧದಲ್ಲಿ ಹಣವೇ ಮುಖ್ಯ ಎಂಬ ಭಾವನೆಯು ಎಂದಿಗೂ ಒಳ್ಳೆಯದಲ್ಲ.
ತಮ್ಮದೇ ಮನೋಧರ್ಮಕ್ಕೆ ಅಂಟಿಕೊಂಡಿರುವ ಸಂಬಂಧ
ಕೆಲವೊಂದು ಹೆಂಗಸರು ಆಳುವ ಮನೋಧರ್ಮವನ್ನು ರೂಢಿಸಿಕೊಂಡಿರುತ್ತಾರೆ. ಸಂಬಂಧದಲ್ಲಿ ತಮ್ಮದೇ ಆದ ಸ್ವಂತ ಮನೋಧರ್ಮವನ್ನು ಹೊಂದುವುದು ಸಂಬಂಧದ ಆರೋಗ್ಯಕ್ಕೆ ಹಾನಿಕಾರಕ. ಒಂದು ವೇಳೆ ಮಹಿಳೆಯು ಯಾವಾಗಲು ಬೇಡಿಕೆ ಇಡುವ ಮತ್ತು ಆದೇಶಿಸುವ ಗುಣವನ್ನು ಹೊಂದಿದ್ದರೆ, ಆಕೆ ಗಂಡನ್ನು ಆಳುವ ಗುಣವನ್ನು ಹೊಂದಿ ಬಿಡುತ್ತಾಳೆ. ಆಗ ಆಕೆ ತನ್ನ ಮಾತೇ ನಡೆಯಬೇಕು ಎಂದು ಹಠ ಹಿಡಿಯುತ್ತಾಳೆ, ಆಗ ಗಂಡಸು ಆದವನು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ.
ಪೋಷಕರ ಮಾತಿಗೆ ಬೆಲೆ ನೀಡುವ ಸಂಬಂಧ
ಲಿವ್ ಇನ್ ಸಂಬಂಧ
ಇದು ಸಹ ಭಾರತದಲ್ಲಿ ಇರುವ 6 ಬಗೆಯ ಸಂಬಂಧದ ಬಗೆಗಳಲ್ಲಿ ಒಂದಾಗಿದೆ. ಒಂದು ವರದಿಯ ಪ್ರಕಾರ ಸುಮಾರು 90% ಜನ ತಾವು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಬೇಕು ಎಂದು ಬಯಸುತ್ತಾರಂತೆ. ಈ ಸಂಬಂಧವು ಮದುವೆ ಎಂದು ಪರಿಗಣಿಸದಿದ್ದರು ಸಹ, ಅದು ಮದುವೆಗೆ ತೀರಾ ಸನಿಹದ್ದಾಗಿರುತ್ತದೆ. ಇದು ಮದುವೆಯಷ್ಟು ಜವಾಬ್ದಾರಿಗಳನ್ನು ಹೊಂದಿರುವುದಿಲ್ಲ ಎಂದು ಇದಕ್ಕೆ ಸುಮಾರು ಜನ ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಾರೆ.
ಸಮಯದ ಕೊರತೆ ಇರುವ ಸಂಬಂಧ
ಸಂಬಂಧಗಳು ಸಮಯಾವಕಾಶದ ಕೊರತೆ ಎದುರಿಸಿದರೆ, ಸತ್ತು ಹೋಗುತ್ತವೆ. ಇಬ್ಬರು ದುಡಿಯುವಾಗ ಕುಳಿತು ಮಾತನಾಡುವಷ್ಟು ಪುರುಸೊತ್ತು ಇಲ್ಲದಿದ್ದಾಗ, ಯಾವ ಭಾವನೆ, ಕಷ್ಟ-ಸುಖವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಹೇಳಿ. ಕೆಲಸದ ಒತ್ತಡವು ಇವರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಸಂಬಂಧವು ಸುಗಮವಾಗಿ ಸಾಗಬೇಕು ಎಂದರೆ ಇಬ್ಬರಿಗೂ ಸ್ವಲ್ಪ ಬಿಡುವು ಇರಬೇಕು. ಒಟ್ಟಿಗೆ ಕಾಫಿ, ತಿಂಡಿ, ಊಟ ಮಾಡುವಷ್ಟು!



Click it and Unblock the Notifications



