Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆಕೆ ನಗೆ ಬೀರಿದರೆ, ಅದನ್ನೇ ಪ್ರೀತಿ ಅಂದುಕೊಳ್ಳುವುದೇ?
ಪ್ರೀತಿಯೇ ಹಾಗೆ ಎಂತವರನ್ನು ಏನೇನೋ ಮಾಡಿ ಬಿಡುತ್ತದೆ. ಅದರಲ್ಲೂ ಆಕರ್ಷಣೆ ಎನ್ನುವುದು ಇದೆಯೆಲ್ಲಾ ಅದು ಹಲವಾರು ಹುಚ್ಚಾಟಗಳನ್ನು ಆಡಿಸುತ್ತದೆ. ನಾವು ಯಾರದೋ ಕಣ್ಣಿನಲ್ಲಿ ಆಕರ್ಷಣೆ ಕಂಡಿರುತ್ತೇವೆ. ಅದನ್ನೇ ಪ್ರೀತಿಯೆಂದು ತಿಳಿದುಕೊಂಡು ಅದರ ಹಿಂದೆಯೇ ತಿರುಗುತ್ತಾ ಇರುತ್ತೇವೆ. ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!
ಆದರೆ ಅಂತಿಮವಾಗಿ ಒಂದು ದಿನ ಅದು ಪ್ರೀತಿಯಲ್ಲ, ಸಮಯ ವ್ಯರ್ಥ ಮಾಡಿಕೊಂಡೆ ಎಂದು ತಿಳಿಯುತ್ತದೆ. ಆಕರ್ಷಣೆಯೇ ಹಾಗೆ. ಅದು ಯಾರಲ್ಲೂ ಉಂಟಾಗಬಹುದು. ಹುಡುಗಿಯನ್ನು ನೋಡಿದ ತಕ್ಷಣ ಆಕೆಯನ್ನೇ ಪ್ರೀತಿಸಬೇಕು ಎಂದೆನಿಸಬಹುದು.

ಕೆಲವು ದಿನ ಆಕೆಯ ಹಿಂದೆ ಓಡಾಡಬಹುದು. ಆದರೆ ಅದು ಕೇವಲ ಆಕರ್ಷಣೆ ಎಂದು ತಿಳಿದಾಗ ಸುಮ್ಮನಾಗಬೇಕಾಗುತ್ತದೆ. ಕೆಲವೊಂದು ಸಂಬಂಧಗಳು ಮುಂದೆ ಸಾಗುವುದೇ ಇಲ್ಲ. ಅದು ನಿಂತಲ್ಲೇ ನಿಂತಿರುತ್ತದೆ. ನಿಮಗೂ ಅದರಿಂದ ನೋವಾಗಬಹುದು,ಆದರೆ ಯಾವುದು ಆಕರ್ಷಣೆ ಮತ್ತು ಯಾವುದು ನಿಜವಾದ ಪ್ರೀತಿ ಎಂದು ತಿಳಿದುಕೊಂಡರೆ ಮುಂದೆ ನಿಮ್ಮ ಸಮಯ ವ್ಯರ್ಥವಾಗುವುದು ತಪ್ಪುತ್ತದೆ.
ಆಕೆ ನಕ್ಕಾಗ ನಿಮ್ಮಲ್ಲಿ ಆಕರ್ಷಣೆ
ನಿಮ್ಮ ಊರಾಗಿರಬಹುದು ಅಥವಾ ಕೆಲಸ ಮಾಡುವ ಸ್ಥಳವೇ ಆಗಿರಬಹುದು. ಒಬ್ಬಳು ಹುಡುಗಿ ನಗೆ ಬೀರಿದರೆ ಅದು ಕೇವಲ ಸ್ನೇಹ ಅಥವಾ ಪರಿಚಯದ ನಗೆಯಾಗಿರಬಹುದು. ಬೇರೇನೂ ಅಲ್ಲ. ನೀವು ಆ ವ್ಯಕ್ತಿಯ ಕಡೆ ಯಾವುದೇ ಭಾವನೆಗಳನ್ನು ಇಟ್ಟುಕೊಂಡರೆ ಅದು ಸಮಯ ವ್ಯರ್ಥ ಮಾಡಿಕೊಂಡಂತೆ. ಯಾಕೆಂದರೆ ಈ ಕಥೆ ಇಲ್ಲಿಂದ ಮುಂದೆ ಸಾಗುವುದೇ ಇಲ್ಲ. ಮೊದಲ ಪ್ರೀತಿಯ ಸಿಹಿ-ಕಹಿ ನೆನಪು ಎಂದಿಗೂ ಶಾಶ್ವತ!
ಮಾತಿನ ಆಕರ್ಷಣೆ
ಕೆಲವು ವ್ಯಕ್ತಿಗಳು ನಿಮ್ಮೊಂದಿಗೆ ಮಾತನಾಡುತ್ತಿರಬಹುದು. ಅವರು ನಿಮ್ಮೊಂದಿಗೆ ಮಾತನಾಡುವುದನ್ನು ಇಷ್ಟಪಡುತ್ತಿರಬಹುದು. ಇದಕ್ಕಿಂತ ಹೆಚ್ಚೇನೂ ಇಲ್ಲ. ಕಾಫಿ ಕುಡಿಯುತ್ತಾ ನಿಮ್ಮೊಂದಿಗೆ ಮಾತನಾಡುವುದನ್ನು ಇಷ್ಟಪಡಬಹುದೇ ಹೊರತು ನಿಮ್ಮನ್ನು ಪ್ರೀತಿಸುವುದನ್ನು ಯೋಚಿಸುವುದಿಲ್ಲ. ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?
ನಿಮ್ಮನ್ನು ನೋಡುತ್ತಿರುವುದೇ ಆಕರ್ಷಣೆ
ನೀವು ಅವರ ಮುಂದೆ ಸಾಗುತ್ತಲಿದ್ದರೆ ಆಗ ನಿಮ್ಮನ್ನು ನೋಡುವುದು ಕೆಲವರಿಗೆ ಇಷ್ಟವಾಗಬಹುದು. ಅವರು ಕೇವಲ ನಿಮ್ಮನ್ನು ನೋಡಲು ಮಾತ್ರ ಬಯಸುತ್ತಾರೆ. ನೀವು ಅವರಲ್ಲಿ ಪ್ರೀತಿ ಮೂಡಿದೆ ಎಂದು ಭಾವಿಸಿದರೆ ಖಂಡಿತವಾಗಿಯೂ ಸಮಯ ವ್ಯರ್ಥ ಮಾಡುತ್ತಲಿದ್ದೀರಿ.
ಸ್ನೇಹಿತರೊಂದಿಗೆ ಆಕರ್ಷಣೆ
ಕೆಲವರಿಗೆ ಸ್ನೇಹ ಮಾತ್ರ ಬೇಕಿರುತ್ತದೆ. ಬೇರೇನೂ ಅಲ್ಲ. ಅವರು ಸ್ನೇಹಕ್ಕಿಂತ ಹೆಚ್ಚಾಗಿ ಬೇರೇನನ್ನೂ ನೀಡುವುದು ಇಲ್ಲ. ಇಂತಹವರಲ್ಲಿ ಪ್ರೀತಿಯ ಭಾವನೆ ಬೆಳೆಸುವುದು ಸಮಯ ವ್ಯರ್ಥ ಮಾಡಿಕೊಂಡಂತೆ. ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ...



Click it and Unblock the Notifications




