Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಇನ್ನು ನಿಮ್ಮ ಗಂಡನ ಗಮನ ಬೇರೆಡೆ ಹರಿಯುವುದಿಲ್ಲ ನೋಡಿ!
ಕಂಪ್ಯೂಟರ್ ಮತ್ತು ಮೊಬೈಲ್ ಯುಗದಲ್ಲಿ ಸಂಬಂಧಗಳಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ! ಅಷ್ಟೇ ಏಕೆ ಸಂಬಂಧಗಳ ಬಗ್ಗೆ ಯೋಚಿಸಲು ಇಂದು ಜನರಲ್ಲಿ ಸಮಯವೇ ಇಲ್ಲದಿರುವುದು ವಿಪರ್ಯಾಸವೇ ಸರಿ. ಅದರಲ್ಲೂ ಕೆಲಸ ಮಾಡುವಂತಹ ಶೇ. 90ರಷ್ಟು ಜನರಿಗೆ ಹೇಗೆ ಜೀವನ ಸಾಗಿಸಬೇಕೆಂದೇ ಗೊತ್ತಿಲ್ಲ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಸಂಬಂಧ ಮುರಿಯಲು, ಅನುಮಾನದ ಪಿಶಾಚಿಯೇ ಸಾಕು!
ಇದು ನಿಜವಾಗಿರಬಹುದು. ಯಾಕೆಂದರೆ ಕಚೇರಿಯಿಂದ ಬಂದು ಮನೆ ಸೇರಿದರೆ ಕೈಯಲ್ಲಿ ಮೊಬೈಲ್ ಇರುತ್ತದೆ. ಅತ್ತ ಇತ್ತ ಕಡೆಯಿಂದ ಮೆಸೇಜ್‌ಗಳ ವಿನಿಮಯ ರಾತ್ರಿ ಮಲಗುವ ತನಕವೂ ಆಗುತ್ತಿರುತ್ತದೆ. ಈ ನಡುವೆ ಕುಟುಂಬದ ಇತರ ಸದಸ್ಯರ ಜತೆ ಮಾತನಾಡಲು ಸಮಯವೇ ಇರುವುದಿಲ್ಲ. ಆದರೆ ನಾವು ಪ್ರೀತಿಸುತ್ತಿರುವಂತವರನ್ನು ಕಡೆಗಣಿಸಲು ಆರಂಭಿಸಿದಾಗ ನಮಗೆ ಮುಂದೆ ದೊಡ್ಡ ಸಮಸ್ಯೆ ಎದುರಾಗುವುದರಲ್ಲಿ ಸಂದೇಹವೇ ಇಲ್ಲ. ಸಂಬಂಧವೆನ್ನುವುದು ಕೊಡು-ಕೊಳ್ಳುವಿಕೆ. ಭಾವನಾತ್ಮಕ ಸಂಬಂಧ, ತಪ್ಪು ದಾರಿಗೂ ಸೆಳೆಯಬಹುದು!
ನೀವು ಎಷ್ಟು ಸಮಯ ನಿಮ್ಮ ಪ್ರೀತಿಪಾತ್ರರಿಗೆ ಮೀಸಲಿಡುತ್ತೀರಾ ಅದಕ್ಕಿಂತ ಎರಡುಪಟ್ಟು ಹೆಚ್ಚಿನ ಸಮಯವನ್ನು ಅವರು ನಿಮಗಾಗಿ ಮೀಸಲಿಡುತ್ತಾರೆ. ನೀವು ಅವರ ಕಡೆ ಗಮನಹರಿಸುವುದನ್ನು ನಿಲ್ಲಿಸಿದಾಗ ಅವರ ಮನಸ್ಸಿಗೆ ತುಂಬಾ ಆಘಾತವಾಗುವುದು. ಇದರಿಂದಾಗಿ ಮನೆಯಲ್ಲಿರುವ ನಮ್ಮ ಪ್ರೀತಿಪಾತ್ರರಿಗೆ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡುವುದು ತುಂಬಾ ಮುಖ್ಯವಾಗಿದೆ. ಆಕೆ ಅಥವಾ ಆತ ನಿಮಗಾಗಿ ಸಮಯ ನೀಡಲು ವಿಫಲವಾದರೆ ಆಗ ನೀವೇ ಅವರ ಗಮನವನ್ನು ಸೆಳೆಯಬೇಕು. ಇಲ್ಲಿರುವ ಕೆಲವೊಂದು ಸಲಹೆಗಳನ್ನು ಪಡೆದುಕೊಂಡು ನಿಮ್ಮ ಪ್ರೀತಿಪಾತ್ರರ ಗಮನಸೆಳೆಯುವುದು ಹೇಗೆ ಎಂದು ತಿಳಿದುಕೊಳ್ಳಿ.

ಸೆಕ್ಸಿಯಾಗಿ ಬಟ್ಟೆ ಧರಿಸಿ
ನಿಮ್ಮ ಪತಿಯ ಗಮನವನ್ನು ಸೆಳೆಯಬೇಕೆಂದರೆ ಆಗ ನೀವು ಸೆಕ್ಸಿಯಾಗಿ ಬಟ್ಟೆ ಧರಿಸಿಕೊಳ್ಳಬೇಕು. ಇದರಿಂದಾಗಿ ನಿಮ್ಮಿಂದ ದೂರವಾದ ಗಮನ ಮತ್ತೆ ನಿಮ್ಮ ಕಡೆ ವಾಲುವುದು.

ದಿನವಿಡಿ ಕರೆ ಮಾಡುತ್ತಲಿರಿ
ನೀವು ದಿನವಿಡಿ ಆತನಿಗೆ ಕರೆ ಮಾಡುತ್ತಲಿದ್ದರೆ ಆಗ ಆತನ ವಿಶ್ವದಲ್ಲಿ ನೀವು ಕೂಡ ಇದ್ದೀರಿ ಎನ್ನುವುದು ತಿಳಿಯಲಿದೆ. ಆತ ನಿಮ್ಮೊಂದಿಗೆ ಸಮಯ ಕಳೆಯುವಂತೆ ಹಾಗೂ ಆ ಸಮಯವು ಮೌಲ್ಯಯುತವಾಗುವಂತೆ ನೋಡಿಕೊಳ್ಳಿ.

ನೀವು ಬೇಕೆನ್ನುವಂತೆ ಮಾಡಿ
ಮಹಿಳೆಗೆ ಪುರುಷನು ಬೇಕೆಂದು ಅನಿಸಿದಾಗ ಅದು ಆತನನ್ನು ವಿಶ್ವದ ತುತ್ತ ತುದಿಯಲ್ಲಿ ಇರುವಂತೆ ಮಾಡುತ್ತದೆ. ಆತನ ಗಮನ ಸೆಳೆದು ಯಾವಾಗಲೂ ಆತ ನಿಮಗೆ ಬೇಕೆನ್ನುವಂತೆ ಮಾಡಿ. ಆತನಿಗೆ ಇಷ್ಟವಾಗುವಂತಹ ಕೆಲಸವನ್ನು ಮಾಡುತ್ತಲಿರಿ. ಆಗ ಆತನಿಗೆ ವಿಶೇಷ ಭಾವನೆಯಾಗುತ್ತದೆ.

ಅಚ್ಚರಿ ಮೂಡಿಸಿ
ಅಚ್ಚರಿ ಎನ್ನುವುದು ಯಾರಿಗೆ ಇಷ್ಟವಿಲ್ಲ ಹೇಳಿ? ತಮ್ಮ ವ್ಯಸ್ತ ಕೆಲಸದಿಂದ ಹೊರಗೆ ಬಂದು ನಿಮ್ಮ ಕಡೆ ಗಮನಹರಿಸಬೇಕೆಂದಾದರೆ ಆಗ ನೀವು ಆತನಿಗೆ ಏನಾದರೂ ಅಚ್ಚರಿ ಮೂಡಿಸಿ. ಅದು ನಿಮಗೆ ಮುಖ್ಯವೆಂದು ಆತನಲ್ಲಿ ಭಾವನೆ ಮೂಡುವಂತಾಗಲಿ.

ರಾತ್ರಿಗೆ ತಯಾರಾಗಿ
ನಾವು ಏನು ಹೇಳುತ್ತಲಿದ್ದೇವೆಂದು ನಿಮಗೆ ಅರ್ಥವಾಗಿದ್ದರೆ ರಾತ್ರಿಗೆ ತಯಾರಾಗಿ. ರಾತ್ರಿ ತಡವಾಗಿ ದಣಿದು ಬರುವ ಗಂಡನಿಗಾಗಿ ನೀವು ಒಳ್ಳೆಯ ಮಸಾಜ್ ಮಾಡಿ ಆತನನ್ನು ಉಲ್ಲಾಸಿತನಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಪತಿಯ ಗಮನ ಸೆಳೆಯಲು ಇದು ಒಳ್ಳೆಯ ವಿಧಾನ.

ಫ್ಲರ್ಟ್ ಮಾಡಿ
ಹಲವಾರು ಮಹಿಳೆಯರು ತಮ್ಮ ಸಂಬಂಧದಲ್ಲಿ ಗಮನ ಸೆಳೆಯಲು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ ಫ್ಲರ್ಟಿಂಗ್ ಬಗ್ಗೆ ನೀವು ಚಿಂತಿಸುತ್ತಿದ್ದರೆ ಇದು ಹೆಚ್ಚಾಗದಂತೆ ನೋಡಿಕೊಳ್ಳಿ. ನಿಮ್ಮ ಜತೆಗಾರರೊಂದಿಗೆ ನೀವು ಇಟ್ಟುಕೊಂಡಿರುವ ಸಂಬಂಧವು ಇದರಿಂದ ಹಾಳಾಗಬಹುದು.



Click it and Unblock the Notifications