Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈಗೆಲ್ಲಾ ವರ್ತಿಸಿದರೆ, ಬಾಯ್‌ಫ್ರೆಂಡ್‌ಗೆ ಖಂಡಿತ ಇಷ್ಟವಾಗಲ್ಲ!
ಮನುಷ್ಯನಿಗೆ ಕಿರಿಕಿರಿಯೆನ್ನುವುದು ಆಗದ ವಿಚಾರ. ತಾಯಿ ಗರ್ಭದಲ್ಲಿರುವಾಗಲೇ ನಾವು ಕಿರಿಕಿರಿಯನ್ನು ಸಹಿಸಿಕೊಂಡಿರುವುದಿಲ್ಲ, ಅಂತಹದರಲ್ಲಿ ಅವರು-ಇವರು ಕಿರಿಕ್ ಮಾಡಿದರೆ ಸುಮ್ಮನಿರುತ್ತೇವೆಯೇ? ಕೆಲವೊಮ್ಮೆ ಹೆಂಗಸರು ಗಂಡಸರಿಗೆ ಸಿಕ್ಕಾಪಟ್ಟೆ ಕಿರಿಕಿರಿಯನ್ನುಂಟು ಮಾಡುತ್ತಾರೆ. ಅದರಲ್ಲೂ ಸಂಬಂಧದಲ್ಲಿ ಕಿರಿಕಿರಿಯುಂಟು ಮಾಡುವುದು ಆ ಸಂಬಂಧದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕೆಲವೊಮ್ಮೆ ನಿಮ್ಮ ಬಾಯ್‌ಫ್ರೆಂಡ್ ನಿಮ್ಮ ಕರೆಗಳಿಗೆ ಮತ್ತು ಸಂದೇಶಗಳಿಗೆ ಏಕೆ ಅಷ್ಟು ಬೇಗ ಸ್ಪಂದಿಸುತ್ತಾರೆ ಎಂದು ಆಲೋಚಿಸಿದ್ದೀರಾ?
ಏಕೆಂದರೆ ಅವರು ನಿಮ್ಮ ಮೇಲೆ ಇರುವ ಕಾಳಜಿಯಿಂದ ಅದನ್ನು ಮಾಡುತ್ತಾರೆ. ನಿಮಗೆ ಏನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಇರುತ್ತದೆ. ಆದರೆ ನೀವು ಇದ್ದಕ್ಕಿದ್ದಂತೆ ಅವರ ಕುರಿತು ಆಲೋಚಿಸುವುದನ್ನು ಬಿಟ್ಟು ಬಿಟ್ಟಿರುತ್ತೀರಿ. ಕೆಲವೊಮ್ಮೆ ಹೀಗೆ ಆದರೆ ಪರವಾಗಿಲ್ಲ. ಮತ್ತೆ ಮತ್ತೆ ಆದಾಗ ಮಾತ್ರ ನಿಮ್ಮ ಹುಡುಗ ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತಾನೆ. ಇದು ಅವನಿಗೆ ಕಿರಿಕಿರಿಯುಂಟು ಮಾಡುತ್ತದೆ.
ನೀವು ಆತನಿಗೆ ಸಮಯವನ್ನು ನೀಡಲಿಲ್ಲವಾದರೆ, ಆತನಿಗೆ ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳಿದರೆ, ಆತನ ಅಮ್ಮನ ಕುರಿತಾಗಿ ಕೆಟ್ಟದಾಗಿ ಮಾತನಾಡಿದರೆ, ಆತನ ಸ್ನೇಹಿತರ ವಿಚಾರದಲ್ಲಿ ತಲೆದೂರಿಸಿದರೆ ಆತನಿಗೆ ಕಿರಿಕಿರಿಯುಂಟಾಗುತ್ತದೆ. ಬರೀ ಇದಕ್ಕೆ ಕಿರಿಯುಂಟಾಗುತ್ತದೆ ಎಂದು ಭಾವಿಸಬೇಡಿ. ಇನ್ನೂ ಹಲವಾರು ವಿಚಾರಗಳು ಆತನಿಗೆ ಕಿರಿಕಿರಿಯುಂಟು ಮಾಡುತ್ತದೆ. ಬನ್ನಿ ಅವು ಯಾವುವು ಎಂದು ತಿಳಿದುಕೊಂಡು ಬರೋಣ....

ಡೇಟಿಂಗ್ ಮುಂದೂಡಿದಾಗ
ನಿಮ್ಮ ಜೊತೆ ಕಾಲ ಕಳೆಯಲು ಆತ ಡೇಟಿಂಗ್ ಅನ್ನು ಮಾಡಲು ಕರೆದರೆ, ಕ್ಷುಲ್ಲಕ ಕಾರಣಗಳನ್ನು ನೀಡಿ ಮುಂದೂಡಿದಾಗ, ಆತನಿಗೆ ಕಿರಿಕಿರಿಯುಂಟಾಗುವುದಿಲ್ಲವೇನು?

ವಿಪರೀತ ಕಾಳಜಿ
ಕೆಲವೊಂದು ಹುಡುಗಿಯರು ಕುಂತಾಗ ನಿಂತಾಗ ತಮ್ಮ ಹುಡುಗರ ಕುರಿತು ವಿಚಾರಿಸಿಕೊಳ್ಳುತ್ತಾ ಇರುತ್ತಾರೆ. ಇದು ನೋಡಲು ನಾಟಕೀಯವಾಗಿ ಮತ್ತು ಕೃತಕವಾಗಿ ಕಾಣುತ್ತದೆ. ಹುಡುಗರಿಗೆ ತಮ್ಮ ಕುರಿತಾಗಿ ಕಾಳಜಿ ತೋರುವವರು ಎಂದರೆ ಇಷ್ಟ. ಆದರೆ ವಿಪರೀತ ಕಾಳಜಿ ತೋರುವವರು ಅವರಿಗೆ ಬೇಸರ ತರಿಸುತ್ತಾರೆ.

ನಿಮ್ಮ ಅಪ್ಪನ ಮೇಲಿನ ಕಡು ಪ್ರೀತಿ
ಕೆಲವು ಹುಡುಗಿಯರಿಗೆ ಅಪ್ಪ ಎಂದರೆ ಸರ್ವಸ್ವ. ಅವರ ಅಪ್ಪನ ಮುಖಸ್ತುತಿ ಹೇಗೆ ಮಾಡುತ್ತಾರೆ ಎಂದರೆ ಹುಡುಗ ಇರಲಿ, ಅಕ್ಕ ಪಕ್ಕದಲ್ಲಿ ಯಾರೇ ಇದ್ದರು ಕಿರಿಕಿರಿಯಾಗುತ್ತದೆ. ತನ್ನ ಹುಡುಗಿಗೆ ತಾನೇ ಹೀರೋ ಆಗಿರಬೇಕು ಎಂದು ಬಯಸುವವನಿಗೆ ಇದರಿಂದ ಕಿರಿಕಿರಿಯುಂಟಾಗದೆ ಏನಾಗುತ್ತದೆ.

ಮಾತು ಮನೆ ಕೆಡಿಸಿತು
ವಿಪರೀತ ಮಾತನಾಡುವ ಹುಡುಗಿಯರು ಹುಡುಗರಿಗೆ ಇಷ್ಟವಾಗುತ್ತಾರೆ. ಆದರೆ ಆ ವಿಪರೀತ ಎನ್ನುವುದು ಹತೋಟಿಗೆ ಬರಲಿಲ್ಲವಾದರೆ, ಅವರಿಗೆ ಬೇಸರವಾಗುತ್ತದೆ. ಈತ ಯಾವುದೋ ವಿಚಾರವಾಗಿ ನಿಮ್ಮೊಂದಿಗೆ ಮಾತನಾಡಲು ಬಂದಾಗ ಸಹ ನೀವು ವಿಪರೀತ ಮಾತನಾಡುತ್ತಿದ್ದರೆ, ಆಗ ಅವರಿಗೆ ಕಿರಿಕಿರಿಯಾಗುತ್ತದೆ.

ವಾದ ವಾಗ್ವಾದ
ಕೆಲವು ಹುಡುಗಿಯರು ವಾದಗಳನ್ನು ವಿಪರೀತಕ್ಕೆ ತೆಗೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಹುಡುಗರು ಸಹ ಅದನ್ನೆ ಮಾಡುತ್ತಾರೆ. ಆದರೆ ಕಡೆಗೆ ಏನಾಗುತ್ತದೆ ಎಂದರೆ, ಅಪ್ಸರೆಯಂತಹ ಹುಡುಗಿಯು ಸಹ ವಾದ ಮಾಡುತ್ತಾ, ಹಲ್ಲು ಕಚ್ಚಿಕಂಡು, ಮುಖ ಊದಿಟ್ಟುಕೊಂಡು ಇರುವ ಹುಡುಗಿಯರು ಹುಡುಗರಿಗೆ ಕಿರಿಕಿರಿಯುಂಟು ಮಾಡುತ್ತಾರೆ.

ಯಾವಾಗಲು ಫೋನ್,,,,,,
ಕೆಲವು ಹುಡುಗಿಯರು ಯಾವಾಗಲು ಫೋನ್ ಮಾಡುತ್ತಾ ಇರುತ್ತಾರೆ. ತಿಂದಾ? ನಾನು ಇದನ್ನು ತಿಂದೆ!, ಯಾವ ಬಟ್ಟೆ ಹಾಕಿಕೊಳ್ಳಲಿ? ನೀನು? ಇತ್ಯಾದಿ, ಇತ್ಯಾದಿ ಫೋನ್ ಬರುತ್ತಲೇ ಇರುತ್ತದೆ, ಅರೆ ರಿಂಗ್ ಆಯಿತು ನೋಡಿ!. ಇದು ಹುಡುಗರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.

ಮುತ್ತು ಕೊಡಲು ಹಿಂದೇಟು ಹಾಕಿದಾಗ
ಒಂದು ಮುತ್ತಿಗಾಗಿ ಆತ ಎಲ್ಲಿಂದಲೋ, ನಿಮ್ಮನ್ನು ನೋಡಿ, ಒಂದು ಮುತ್ತು ಕೊಡಲು ಬಂದಾಗ ಅದಕ್ಕೆ ನೀವು ನೋ ಎಂದಾಗ! ಆತನಿಗೆ ಕಿರಿಕಿರಿಯುಂಟಾಗುತ್ತದೆ. ಇದೇ ಮೊದಲ ಬಾರಿಗೆ ಮುತ್ತು ಕೊಡಲು ಹಿಂದೇಟು ನೀವು ಹಾಕಿದಾಗ ಆತನಿಗೆ ಬೇಸರವಾಗುವುದಿಲ್ಲ. ಆದರೆ ಹಿಂದೆ ನೀವು ಮುತ್ತು ಕೊಟ್ಟು, ಇತ್ತೀಚೆಗೆ ಕೊಡಲು ಹಿಂದೇಟು ಹಾಕಿದಾಗ ಹುಡುಗರಿಗೆ ಕಿರಿಕಿರಿಯುಂಟು ಮಾಡುತ್ತದೆ.



Click it and Unblock the Notifications
