Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಆ ಮಧುರ ಕ್ಷಣಗಳು, ನೆನೆಸಿಕೊಂಡರೇ ಮೈ ಜುಂ ಎನ್ನುತ್ತದೆ!
ಜೀವನದಲ್ಲಿ ಹಲವಾರು ಸಲ ನಮಗೆ ಸಂತೋಷದ ಕ್ಷಣಗಳು ಬರುತ್ತದೆ. ಇದನ್ನು ನಾವು ಮನಸ್ಸಿನ ಆಳದಿಂದ ಆನಂದಿಸುತ್ತೇವೆ....ಅದೇ ರೀತಿ ಸಂಬಂಧದಲ್ಲೂ ಕೆಲವೊಂದು ಸಂತೋಷದ ಕ್ಷಣಗಳು ಇರುತ್ತದೆ..ಬನ್ನಿ ಅದು ಯಾವುದು ಎಂಬುದನ್ನು ಮೆಲುಕುಹಾಕುವ...
ಜೀವನದಲ್ಲಿ ಸುಖ ದುಃಖವೆನ್ನುವುದು ಸಮಾನವಾಗಿರುತ್ತದೆ ಎನ್ನುವ ಮಾತಿದೆ. ಆದರೆ ಅದೆರಡನ್ನು ಯಾವ ರೀತಿಯಲ್ಲಿ ನಾವು ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಜೀವನದಲ್ಲಿ ಹಲವಾರು ಸಲ ನಮಗೆ ಸಂತೋಷದ ಕ್ಷಣಗಳು ಬರುತ್ತದೆ. ಇದನ್ನು ನಾವು ಮನಸ್ಸಿನ ಆಳದಿಂದ ಆನಂದಿಸುತ್ತೇವೆ. ಗರ್ಲ್ ಫ್ರೆಂಡ್ ಹತ್ತಿರ ಹೀಗೆಲ್ಲಾ ಹೇಳಬೇಡಿ, ಆಕೆಗೆ ಆಗ್ಬರಲ್ಲ!
ಯಾವುದೇ ಗುರಿಯನ್ನು ತಲುಪಿದಾಗ ಅಥವಾ ಇನ್ನಿತರ ಯಾವುದೇ ಸಾಧನೆ ಮಾಡಿದಾಗ ಇದು ಸಹಜ. ಅದೇ ರೀತಿ ಸಂಬಂಧದಲ್ಲೂ ಕೆಲವೊಂದು ಸಂತೋಷದ ಕ್ಷಣಗಳು ಇರುತ್ತದೆ. ಸಂಬಂಧದಲ್ಲಿ ಎಲ್ಲವೂ ಸರಿಯಾಗಿ ಸಾಗುತ್ತಾ ಇದ್ದರೆ ಆಗ ಪ್ರತಿಯೊಂದು ಕ್ಷಣವೂ ಸಂತೋಷದಾಯಕವಾಗಿರುತ್ತದೆ. ಸಂಬಂಧದಲ್ಲಿ ಅತೀ ಹೆಚ್ಚು ಆಚರಿಸಲ್ಪಡುವಂತಹ ಕೆಲವೊಂದು ಕ್ಷಣಗಳ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಯುವ.....

ಮೊದಲ ಡೇಟ್
ಯಾವುದೇ ವ್ಯಕ್ತಿಯ ಕಡೆ ಆಕರ್ಷಣೆ ಇರುವುದು ಸಹಜ. ಅದೇ ವ್ಯಕ್ತಿ ಡೇಟಿಂಗ್ ಗೆ ಒಪ್ಪಿಕೊಂಡಾಗ ಆಗುವಂತಹ ಸಂತೋಷ ಅಷ್ಟಿಷ್ಟಲ್ಲ. ಇದು ಜೀವನದ ವಿಶೇಷ ಕ್ಷಣವಾಗಿರಬಹುದು.

ಪ್ರೀತಿಯ ಪ್ರಸ್ತಾವ ಮಾಡಿದಾಗ
ಕೆಲವು ತಿಂಗಳುಗಳ ಕಾಲ ನೀವು ಡೇಟಿಂಗ್ ಮಾಡಿದ ಬಳಿಕ ಆತ ಅಥವಾ ಆಕೆ ನಿಮ್ಮೊಂದಿಗೆ ಜೀವನ ಸಾಗಿಸಲು ಸೂಕ್ತವೆಂದು ತಿಳಿಯುತ್ತದೆ. ಈ ವೇಳೆ ನೀವು ಪ್ರೀತಿಯ ಪ್ರಸ್ತಾಪವನ್ನಿಡುತ್ತೀರಿ. ಅದನ್ನು ಎದುರಿನ ವ್ಯಕ್ತಿ ಸ್ವೀಕರಿಸಿದಾಗ ಅದು ಜೀವನದ ಮತ್ತೊಂದು ಸಂತೋಷದ ಕ್ಷಣವಾಗಿರುತ್ತದೆ. ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?

ಮೊದಲ ಕಿಸ್
ಯಾವುದೇ ಸಂಬಂಧದ ಅತೀ ಪ್ರಮುಖ ಘಟ್ಟವೆಂದರೆ ಮೊದಲ ಸಲ ತುಟಿಗಳು ಸಂಗಾತಿಯ ತುಟಿಗಳನ್ನು ಸೇರಿಕೊಳ್ಳುವುದು. ಆ ಕ್ಷಣದಲ್ಲಿ ಸಿಗುವಂತಹ ನಶೆಯು ಯಾವುದೇ ಮಾದಕ ದ್ರವ್ಯ ಕೂಡ ನೀಡಲು ಸಾಧ್ಯವಿಲ್ಲ....ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

ಮದುವೆ ದಿನ
ಮದುವೆ ದಿನದಂದು ನಿಮ್ಮ ಸಂಬಂಧವು ಸುರಕ್ಷಿತವೆಂದು ನಿಮಗೆ ಅನಿಸುತ್ತದೆ. ಈ ಕ್ಷಣ ಆನಂದಬಾಷ್ಪವು ಕಣ್ಣುಗಳಿಂದ ಬರಬಹುದು.

ಮಗುವಿನ ಜನನ
ನಿಮ್ಮ ಮಗುವಿನ ಜನನವು ಜೀವನದ ಅತ್ಯಂತ ಸಂತೋಷದ ಕ್ಷಣವಾಗಿರುತ್ತದೆ. ಆ ದಿನದಿಂದಲೇ ನಿಮ್ಮ ಜೀವನವು ಸಂಪೂರ್ಣ ಬದಲಾಗಿ ಹೋಗುತ್ತದೆ.



Click it and Unblock the Notifications