Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಡುಗಿ ಸಹವಾಸ ಮಾಡಿ- ಇಂಗು ತಿಂದ ಮಂಗನಂತೆ ಆಗಬೇಡಿ
ಪ್ರತಿ ಪುರುಷನಿಗೂ ತನ್ನ ಜೀವನಸಂಗಾತಿಯಾಗುವವಳಲ್ಲಿ ಕೆಲವು ಗುಣಗಳು ಪ್ರಮುಖವಾಗಿ ಬೇಕಾಗಿರುತ್ತವೆ. ಅಂತಹ ಗುಣಗಳನ್ನು ಕಂಡಾಗ ಆತ ಆಕೆಯನ್ನು ತನ್ನವಳನ್ನಾಗಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದರೂ ಬರಬರುತ್ತಾ ಈತನ ಪ್ರಯತ್ನಗಳನ್ನು ಆಕೆ ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಸಂಭವವೇ ಹೆಚ್ಚು. ಕೇವಲ ಒಂದು ಮುಗುಳ್ನಗೆಯ ಮೂಲಕ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯನ್ನು ತರುಣಿಯರಿಗೆ ಯಾರೂ ಕಲಿಸಿಕೊಡಬೇಕಾಗಿಯೇ ಇಲ್ಲ. ಆದರೆ ಕೆಲವರು ಮಾತ್ರ ಪುರುಷರ ಈ ಪ್ರಯತ್ನದ ಬಗ್ಗೆ ಒಲವು ತೋರಿ ಕೊಂಚವೇ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಾರೆ.
ಆದರೆ ಇದಕ್ಕಿಂತ ಹೆಚ್ಚೇನೂ ಆಗುವುದಿಲ್ಲ. ಆಕೆ ನಿಮ್ಮನ್ನು ನಿರಾಕರಿಸುವುದೂ ಇಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಏಕೆಂದರೆ ನಿಮ್ಮ ಮುಂದಿನ ನಡೆಗಳನ್ನು ಗಮನಿಸುತ್ತಾ ಆಕೆ ಈತನ ಇರಾದೆಯೇನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲು ಯತ್ನಿಸುತ್ತಾಳೆ. ಒಂದು ವೇಳೆ ಆಕೆಗೆ ನಿಮ್ಮಲ್ಲಿ ಯಾವುದೇ ಆಸಕ್ತಿ ಇಲ್ಲದಿದ್ದರೆ ನಿಮಗೆ ನೇರವಾಗಿ ಇಲ್ಲ ಎಂದು ಹೇಳದೇ ಮುಂದೆಂದಾದರೂ ನಿಮ್ಮಿಂದ ಯಾವುದಾದರೂ ಸಹಾಯ ಬೇಕಾಗಿ ಬಂದರೆ ಎಂಬ ದೂ(ದು)ರಾಲೋಚನೆಯಿಂದ ನಿಮ್ಮನ್ನೊಂದು ಕಾರಿನ ಸ್ಟೆಪ್ನಿ ಟೈರಿನಂತೆ ಪರಿಗಣಿಸುತ್ತಾಳೆ.
ಇದನ್ನು ಅರಿಯದ ನೀವು ನಾಳೆ ನಾಡಿದ್ದಿರಲ್ಲೇ ಆಕೆ ತನಗೆ ಒಪ್ಪಿಗೆ ನೀಡುತ್ತಾಳೆ ಎಂದು ಕಾಯುತ್ತಾ ನಿಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ಆಕೆಗಾಗಿ ಪೋಲು ಮಾಡುತ್ತಾ ಕಡೆಗೆ ಇಂಗು ತಿಂದ ಮಂಗನಂತಾಗುವುದು ಖಚಿತ. ಹೀಗಾಗುವುದು ಬೇಡ ಎಂದಿದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ, ಆಕೆಯನ್ನು ಹಿಂಬಾಲಿಸುವುದನ್ನು ಬಿಟ್ಟು ನಿಮ್ಮ ನೈಜ ಗುರಿಗಳ ಕಡೆಗೆ ಗಮನ ನೀಡಿ...

ಆಕೆ ನಿಮ್ಮೊಂದಿಗೆ ಆಟವಾಡುತ್ತಿರಬಹುದು
ನೀವು ಆಕೆಯ ಹಿಂದೆ ಬಿದ್ದಿರುವ ಪರಿ ಆಕೆಗೆ ಒಂದು ಆಟವಾಡುವ ಅವಕಾಶದಂತೆ ಕಂಡುಬರುತ್ತದೆ. ನೀವು ಆಕೆಯನ್ನೇ ಗಮನಿಸುತ್ತಿರುವುದು, ಹಿಂಬಾಲಿಸುತ್ತಿರುವುದು ಮೊದಲಾದ ಕ್ರಮಗಳಿಂದ ಆಕೆಗೆ ಸಂತೋಷವಾದರೂ ನಿಮಗೆ ನೇರವಾಗಿ 'ನನ್ನನ್ನು ಹಿಂಬಾಲಿಸಬೇಡ' ಎಂದು ಸ್ಪಷ್ಟವಾಗಿ ಹೇಳದೇ ನಿಮ್ಮನ್ನು ಆಟವಾಡಿಸುತ್ತಿರುತ್ತಾಳೆ.

ಆಕೆಯೇ ಮಾತನ್ನೆಂದೂ ಪ್ರಾರಂಭಿಸುವುದಿಲ್ಲ
ನೀವು ಒಂದು ವೇಳೆ ಆಕೆಯನ್ನು ಮಾತನಾಡಿಸಲು ಇಡಿಯ ದಿನ ಅವಕಾಶಕ್ಕಾಗಿ ಕಾಯುತ್ತಿದ್ದದುದರ ಅರಿವಿದ್ದರೂ ಅವಶ್ಯಕ ಮಾತುಕತೆಯನ್ನೂ ಆಕೆ ನಿಮ್ಮಲ್ಲಿ ಆಡಲಾರಳು. ಬದಲಿಗೆ ಪ್ರಥಮ ಮಾತು ನಿಮ್ಮಿಂದಲೇ ಬರಲಿ ಎಂಬ ಧೋರಣೆ ಅನುಸರಿಸುತ್ತಾಳೆ. ಒಂದು ವೇಳೆ ತಿಂಗಳುಗಳ ಕಾಲ ನೀವು ಆಕೆಯ ಒಂದು ಮಾತಿಗಾಗಿ ಕಾದಿದ್ದರೂ ನೀವೇ ಪ್ರಾರಂಭಿಸಬೇಕು ಎಂದುಕೊಂಡಿದ್ದರೆ ಆಕೆಯಿಂದ ದೂರ ಸರಿಯಲು ಇದು ಸೂಕ್ತವಾದ ಸೂಚನೆಯಾಗಿದೆ.

ಆಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾಳೆ, ಆದರೂ...
ಆಕೆ ನಿಮ್ಮಲ್ಲಿ ಅನುರಕ್ತಳಾಗಿದ್ದಾಳೆ ಎಂಬ ಹಲವು ಸೂಚನೆಗಳನ್ನು ನೀಡುತ್ತಾಳೆ. ಆದರೆ ಅದಕ್ಕೂ ಮುಂದೆ ಮುಂದುವರೆಯಲು ಯಾವುದೇ ಉತ್ಸಾಹ ತೋರದಿರುವುದು ಆಕೆ ನಿಮ್ಮನ್ನು ಕೇವಲ ಟೈಂ ಪಾಸ್ ಅಥವಾ ಸಮಯ ಕಳೆಯುವ ಮೋಜಿಗಾಗಿ ಉಪಯೋಗಿಸಿಕೊಳ್ಳುತ್ತಿದ್ದಾಳೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

ಆಕೆ ನಿಮ್ಮ ಸಂದೇಶಗಳಿಗೆ ಉತ್ತರಿಸಲು ಉತ್ಸಾಹ ತೋರುವುದಿಲ್ಲ
ನಿಮ್ಮ ಕಡೆಯಿಂದ ಆಕೆಗೆ ಹೋದ ನೂರಾರು ಸಾವಿರಾರು ಸಂದೇಶಗಳಿಗೆ ಆಕೆ ಸ್ಪಂದಿಸುವುದಿಲ್ಲ, ಬದಲಿಗೆ ಕೇವಲ ಹೌದು ಇಲ್ಲ, ಈಗ ಬೇಡ ಇಂತಹ ಚುಟುಕಾದ ಉತ್ತರಗಳನ್ನೇ ನೀಡಿ ನಿಮ್ಮನ್ನು ಸತಾಯಿಸುತ್ತಾಳೆ. ಈಕೆಯ ಉತ್ತರಗಳಲ್ಲಿಯೂ ಯಾವುದೇ ಉತ್ಸಾಹ, ಆತುರ, ಕಾತುರ ಏನೂ ಇರುವುದಿಲ್ಲ. ಬದಲಿಗೆ ನಿಮ್ಮ ಸಂದೇಶಗಳು ಬರುವುದು ನಿಂತರೆ ಸಾಕಪ್ಪಾ ಎಂಬ ಧೋರಣೆಯಿಂದ ಚುಟುಕು ಉತ್ತರ ನೀಡಿರುತ್ತಾಳೆ.

ಆಕೆ ನಿಮ್ಮೊಂದಿಗೆ ಕಾಲ ಕಳೆಯಲು ಉತ್ಸಾಹ ತೋರುವುದಿಲ್ಲ
ಬನ್ನಿ ಕಾಫಿ ಕುಡಿಯೋಣ, ಊಟ ಮಾಡೋಣ ಎಂಬ ನಿಮ್ಮ ಆಹ್ವಾನಗಳನ್ನು ಆಕೆ ನಯವಾಗಿಯೇ ನಿರಾಕರಿಸುತ್ತಾಳೆ. ಆಕೆ ಊಟ ಮಾಡಿಲ್ಲದಿರುವುದು ಗೊತ್ತಿದ್ದರೂ ಆಕೆಯಿಂದ ಈಗ ತಾನೇ ಊಟ ಆಯಿತು ಎಂಬ ಉತ್ತರ ಬಂದರೆ ಆಕೆಯನ್ನು ಮರೆತು ನಿಮ್ಮ ಗುರಿಯತ್ತ ಗಮನ ನೀಡುವುದು ಜಾಣತನದ ಕ್ರಮ.

ಆಕೆಗೆ ತನ್ನ ಜಗತ್ತೇ ಪ್ರಮುಖವಾಗಿರುತ್ತದೆ
ಹೆಚ್ಚಿನ ಸಮಯದಲ್ಲಿ ಆಕೆ ತನ್ನದೇ ಪ್ರಪಂಚದಲ್ಲಿ ಮುಳುಗಿರುತ್ತಾಳೆ. ಆಕೆಗೆ ತನ್ನ ಸ್ನೇಹಿತರು, ತನ್ನ ಕುಟುಂಬ, ತನ್ನ ಹವ್ಯಾಸವೇ ಮುಖ್ಯವಾಗಿರುತ್ತದೆ. ಇವುಗಳಲ್ಲೆಲ್ಲಾದರೂ ನಿಮ್ಮ ಅಗತ್ಯ ಕಂಡುಬರಬಹುದೆಂದೇ ನಿಮ್ಮನ್ನೊಂದು ಅಗತ್ಯ ಸಹಾಯಕ್ಕಾಗಿ ಪರಿಗಣಿಸಿರುತ್ತಾಳೆಯೇ ವಿನಃ ಆಕೆಯ ಯಾವುದೇ ಕನಸಿನಲ್ಲಿ ನೀವು ಇರುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಕೆಯ ಸಹವಾಸ ಬಿಟ್ಟುಬಿಡಿ...
ಇವುಗಳಲ್ಲಿ ಯಾವುದೇ ಒಂದು ಕ್ರಿಯೆ ನಿಮ್ಮ ಗಮನಕ್ಕೆ ಬಂದರೂ ನಿಮ್ಮ ಚಲನವಲನವನ್ನು ಬದಲಿಸುವುದು ಉತ್ತಮ. ಹಿಂಬಾಲಿಸುವ ಮೂಲಕ ಗುಣವನ್ನು ಅರಿಯಲಾಗದು. ಇದಕ್ಕೆ ಪರಸ್ಪರ ವಿಶ್ವಾಸ, ಪ್ರೀತಿ, ತ್ಯಾಗ ಮನೋಭಾವ, ಹಂಚಿ ತಿನ್ನುವ, ಸುಖ ದುಃಖಗಳಿಗೆ ಸಮಾನವಾಗಿ ಭಾಗಿಯಾಗುವ, ಜೀವನಪರ್ಯಂತ ಜೊತೆ ನೀಡುವವರಾಗಿರಬೇಕು.



Click it and Unblock the Notifications
