Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಚಳ್ಳೇ ಹಣ್ಣು ತಿನಿಸುವುದರಲ್ಲಿ, ಹುಡುಗಿಯರೇ ನಂ 1...!
ಸಂಗಾತಿಯನ್ನು ಆರಿಸಿಕೊಳ್ಳುವುದು ಬಹಳ ಕ್ಲಿಷ್ಟಕರವಾದ ಆದರೆ ಮಹತ್ವವಾದ ಕೆಲಸ. ಇಂದು ಹೆಚ್ಚಿನ ಯುವಜನತೆ ತಮ್ಮ ಮನೋಭಾವಕ್ಕೆ ತಕ್ಕಂತಹ ವ್ಯಕ್ತಿಗಳನ್ನೇ ವರಿಸಲು ಇಷ್ಟಪಡುತ್ತಾರೆ. ಆದರೆ ಅವರು ಬಯಸುವ ಎಲ್ಲಾ ಗುಣಗಳು ಒಬ್ಬರಲ್ಲಿಯೇ ಸಿಗುವುದು ಕಷ್ಟ. ದ್ರೌಪದಿಗೇ ಎಲ್ಲಾ ಗುಣಗಳಿರುವ ಒಂದೇ ಪತಿ ನೀಡಲಾಗದೇ ಆ ಗುಣಗಳನ್ನು ಭಗವಂತ ಐದು ಪತಿಯರ ಮೂಲಕ ನೀಡಲಿಲ್ಲವೇ? ಹಳೆಯ ಜಮಾನದ ಟ್ರಿಕ್ಸ್‌ಗೆ, ಹುಡುಗಿಯರು ಬಗ್ಗುವುದಿಲ್ಲ ಕಣ್ರೀ!
ಹೀಗಿರುವಾಗ ಈ ಯುಗದಲ್ಲಿ ಇವರು ಬಯಸುವ ಗುಣಗಳೆಲ್ಲಾ ಒಂದೇ ವ್ಯಕ್ತಿಯಲ್ಲಿ ಸಿಗುವುದು ಅಸಾಧ್ಯ. ಅಂತೆಯೇ ಕೆಲವರು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳನ್ನು ತಮ್ಮ ಆಯ್ಕೆಯಲ್ಲಿ ಇರಿಸಿಕೊಂಡು ಗುಣಗಳನ್ನು ತುಲನೆ ಮಾಡುತ್ತಾ ಇವರಲ್ಲಿ ತಮಗೆ ಯಾರು ಹೆಚ್ಚು ಸೂಕ್ತ ಎಂಬ ಲೆಕ್ಕಾಚಾರದಲ್ಲಿರುತ್ತಾರೆ.
ಈ ತುಲನೆಯನ್ನು ಪರೀಕ್ಷಿಸಲು ನಿಮ್ಮ ಚರ್ಯೆಯನ್ನು ಆಕೆ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿರುತ್ತಾಳೆ. ಬಹಳ ಪರೀಕ್ಷೆಗಳ ಬಳಿಕ ಕಡೆಗೆ ಒಂದಿಬ್ಬರು ಆಕೆಯ ಕಣದಲ್ಲಿ ಉಳಿದಿರುತ್ತಾರೆ. ಇಬ್ಬರಲ್ಲಿ ಒಬ್ಬರನ್ನು ತನ್ನ ಅಂತಿಮ ಆಯ್ಕೆ ಎಂದು ನಿರ್ಧರಿಸಿದರೂ ಎರಡನೆಯ ವ್ಯಕ್ತಿಗೆ ಆ ಬಗ್ಗೆ ಹೇಳದೇ ಪರ್ಯಾಯವಾದ ಆಯ್ಕೆಯಾಗಿ ಇಟ್ಟಿರುತ್ತಾಳೆ. ಒಂದು ವೇಳೆ ಪ್ರಥಮ ಆಯ್ಕೆಯ ವ್ಯಕ್ತಿಯಿಂದ ಯಾವುದಾದರೂ ಆಕೆಗೆ ಇಷ್ಟವಿಲ್ಲದ ಅಚಾತುರ್ಯ ನಡೆದರೆ ಆಕೆ ಆತನನ್ನು ಬಿಟ್ಟು ಪರ್ಯಾಯವ್ಯಕ್ತಿಯನ್ನು ಆಯ್ದುಕೊಳ್ಳುತ್ತಾಳೆ. ಹುಡುಗಿ ಸಹವಾಸ ಮಾಡಿ- ಇಂಗು ತಿಂದ ಮಂಗನಂತೆ ಆಗಬೇಡಿ
ಒಂದು ವೇಳೆ ನಿಮ್ಮಿಬ್ಬರಿಗಿಂತಲೂ ಉತ್ತಮ ಗುಣಗಳು ಮೂರನೆಯ ವ್ಯಕ್ತಿಯಲ್ಲಿ ಕಂಡರೆ ನಿಮ್ಮಿಬ್ಬರಿಯೂ ಸಲಾಂ ಹೊಡೆದು ಅತ್ತ ಕಡೆ ಹೊರಳುತ್ತಾಳೆ. ಒಂದು ವೇಳೆ ನಿಮ್ಮ ಪರಿಸ್ಥಿತಿ ಪರ್ಯಾಯವ್ಯಕ್ತಿಯದ್ದಾಗಿದ್ದು ನಿಮಗೆ ಇದರ ಬಗ್ಗೆ ಅರಿವೇ ಇರದಿದ್ದರೆ ಕೆಳಗಿನ ಸಂಜ್ಞೆಗಳು ನಿಮ್ಮನ್ನು ನಿರಾಶೆಯಿಂದ ಕಾಪಾಡಲಿವೆ, ಮುಂದೆ ಓದಿ...

ಸಂಜ್ಞೆ #1
ಆಕೆ ನಿಮ್ಮನ್ನು ಕಂಡಾಗ ನಕ್ಕು ಲೋಕಾಭಿರಾಮವಾಗಿ ಮಾತನಾಡಿದರೂ ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳುವುದಿಲ್ಲ. ತನ್ನ ಸುಖದ ಅಥವಾ ದುಃಖದ ಯಾವುದೇ ಮಾಹಿತಿಗಳನ್ನು ನೀಡುವುದಿಲ್ಲ. ನಿಮ್ಮ ಯಾವುದೇ ಮಾತುಗಳಿಗೆ ಶುಷ್ಕವಾಗಿ ಪ್ರತಿಕ್ರಿಯೆ ನೀಡುತ್ತಾಳೆ ಹಾಗೂ ಯಾವುದೇ ಭಾವನೆ ಆವರಿಸದಂತೆ ತಡೆಯುತ್ತಾಳೆ

ಸಂಜ್ಞೆ #2
ಆಕೆ ಸದಾ ತನ್ನದೇ ಲೋಕದಲ್ಲಿರುತ್ತಾಳೆ. ಒಂದು ವೇಳೆ ಬೇರಾವುದೋ ಕಾರಣದಿಂದ ಸಾಂತ್ವಾನ ಬೇಕಿದ್ದರೆ ಮಾತ್ರ ನಿಮ್ಮ ಸಹಾಯಕ್ಕಾಗಿ ಹತ್ತಿರ ಬಂದಿರುತ್ತಾಳೆ.

ಸಂಜ್ಞೆ #3
ನೀವು ಆಕೆಯೊಂದಿಗೆ ಮಾತನಾಡುತ್ತಿರುವಾಗ ಆಕೆ ಇನ್ನಾರ ಜೊತೆಗೆ ಮೆಸೇಜ್ ಅಥವಾ ಕರೆಯಲ್ಲಿ ಮಗ್ನಳಾಗಿರುತ್ತಾಳೆ ಮತ್ತು ತಾನು ಯಾರೊಂದಿಗೆ ಸಂವಹಿಸುತ್ತಿದ್ದೆ ಎಂಬುದನ್ನು ಸರ್ವಥಾ ಹೇಳುವುದಿಲ್ಲ. ನೀವು ಕೇಳಿದರೂ ತನ್ನ ಸ್ನೇಹಿತೆಯೋ, ನಿಮಗೆ ಸಂಬಂಧಿಸಿದ್ದಲ್ಲ ಎಂದೋ ಹೇಳಿ ಮೂರನೆಯ ವ್ಯಕ್ತಿಯ ಬಗ್ಗೆ ನಿಮಗಿದ್ದ ಕುತೂಹಲಕ್ಕೆ ಪರದೆ ಎಳೆಯುವಂತೆ ವರ್ತಿಸುತ್ತಾಳೆ.

ಸಂಜ್ಞೆ #4
ಒಂದು ವೇಳೆ ಆಕೆ ಯಾವುದೋ ದುಃಖದಲ್ಲಿದ್ದಂತೆ ಕಂಡುಬಂದು ನೀವು ಈ ದುಃಖಕ್ಕೆ ಕಾರಣವೇನೆಂದು ಕೇಳಿದರೆ ಕೇವಲ ಕಣ್ಣೀರು ಹಾಕುತ್ತಾಳಷ್ಟೇ ಹೊರತು ಇದಕ್ಕೆ ಕಾರಣವನ್ನು ಹೇಳುವುದಿಲ್ಲ. ಎಚ್ಚರ! ಈ ಕಣ್ಣೀರು ನಿಮ್ಮನ್ನು ಹೆದರಿಸಲು ಉದುರಿಸಿರುವ ಟೈಂ ಬಾಂಬುಗಳು.

ಸಂಜ್ಞೆ #5
ಒಂದು ವೇಳೆ ನೀವು ಆಕೆಯನ್ನು ಬಿಟ್ಟು ಬಿಡುವುದಾಗಿ ಹೆದರಿಸಿದರೆ ಆಕೆ ತಕ್ಷಣ ಎಲ್ಲರ ಗಮನ ನಿಮ್ಮೆಡೆಗೆ ಹರಿಯುವಂತೆ ನಾಟಕವಾಡುತ್ತಾಳೆ. ಏಕೆಂದರೆ ಆಕೆಗೆ ನಿಮಗಿಂತಲೂ ಉತ್ತಮ ವ್ಯಕ್ತಿ ದೊರಕುವವರೆಗೂ ನಿಮ್ಮನ್ನು ತನ್ನ ಗಾಳದಿಂದ ಬಿಟ್ಟುಬಿಡಲು ಇಷ್ಟವಿಲ್ಲ.

ಸಂಜ್ಞೆ #6
ಒಂದು ವೇಳೆ ಅಚಾನಕ್ಕಾಗಿ ನೀವು ಸುತ್ತಮುತ್ತಲಿರುವ ಇತರ ಮಹಿಳೆಯರತ್ತ ಗಮನ ಹರಿಸಿದರೆ ಈಕೆ ನಿಮ್ಮನ್ನು ಮಾನಸಿಕವಾಗಿ ಬೆದರಿಸುತ್ತಾಳೆ. ಏಕೆಂದರೆ ತನ್ನ ಇನ್ನೊಬ್ಬ ವ್ಯಕ್ತಿ ತನ್ನವನಾಗುವ ಬಗ್ಗೆ ಖಚಿತಗೊಳ್ಳುವವರೆಗೂ ನೀವು ಆಕೆಯ ತೆಕ್ಕೆಯಲ್ಲಿರುವುದು ಆಕೆಗೆ ಬೇಕಾಗಿದೆ. ಅದು ಬಿಟ್ಟು ನೀವು ಬೇರೆ ಹೆಣ್ಣಿನತ್ತ ನೋಡಿದರೆ ಆಕೆ ಸಹಿಸುವುದಿಲ್ಲ.

ಸಂಜ್ಞೆ #7
ಒಂದು ವೇಳೆ ಆಕೆ ಇನ್ನೊಬ್ಬ ಪುರುಷನೊಂದಿಗೆ ಹೆಚ್ಚಿನ ನಿಕಟತೆ ತೋರಿದರೆ ಮತ್ತು ಇದು ನಿಮ್ಮ ಗಮನಕ್ಕೆ ಬಂದರೆ ಇದನ್ನಾಕೆ ಆತ ತನ್ನ ಉತ್ತಮ ಸ್ನೇಹಿತ ಮಾತ್ರ ಎಂಬ ಮಾತುಗಳ ಮೂಲಕ ನಿಮ್ಮನ್ನು ಸಂತೈಸಲು ಯತ್ನಿಸುತ್ತಾಳೆ. ಏಕೆಂದರೆ ಇದು ಆಕೆ ಇಬ್ಬರಲ್ಲಿ ಉತ್ತಮರು ಯಾರು ಎಂದು ಮಾಡುವ ಆಯ್ಕೆಪ್ರಕ್ರಿಯೆಯ ಒಂದು ಭಾಗವಾಗಿರಬಹುದು.

ಸಂಜ್ಞೆ #8
ಒಂದು ದಿನ, ಸೂಕ್ತ ಸಮಯದಲ್ಲಿ ಆಕೆ ನಿಮಗೆ ಯಾವುದೇ ಭಾವನೆಗಳಿಲ್ಲದೇ ನೇರವಾಗಿ ಗುಡ್ ಬೈ ಹೇಳಿ ಹೊರಡಬಹುದು. ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ ತನ್ನ ಮದುವೆಯ ಕರೆಯೋಲೆ ಕೊಟ್ಟು ಮದುವೆಗೆ ಖಂಡಿತಾ ಬನ್ನಿ ಎಂದು ಆಹ್ವಾನಿಸಬಹುದು.



Click it and Unblock the Notifications