Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಸ್ವಲ್ಪ ತಾಳಿ, ಗಂಡನ ಪ್ರೀತಿಯ ಮೇಲೆ ಸಂಶಯ ಪಡಬೇಡಿ
ಪ್ರೀತಿಯಲ್ಲಿರುವ ಜೋಡಿಗೆ ತಮ್ಮ ಸಂಗಾತಿಯ ಉತ್ತಮ ಗುಣಗಳೇ ಕಂಡುಬರುತ್ತವೆಯೇ ಹೊರತು ಅವಗುಣಗಳಲ್ಲ. ಕೆಲವೊಮ್ಮೆ ಪ್ರೀತಿಸುವವರು ನಿಮ್ಮಲ್ಲಿರುವ ಅಥವಾ ನಿಮ್ಮಿಂದ ಸಿಗಬಹುದಾದ ಲಾಭಕ್ಕಾಗಿ ಪ್ರೀತಿಸುವ ನಾಟಕ ಮಾಡುತ್ತಿದ್ದಿರಬಹುದು. ಈ ಪ್ರೀತಿ ನಿಜವಾದದ್ದೇ ಅಲ್ಲವೇ ಎಂದು ಕಂಡುಹಿಡಿಯುವುದು ಹೇಗೆ? ನಿಜವಾದ ಪ್ರೀತಿ ಜನ್ಮಾಂತರವಾಗಿದ್ದು ನಿಮ್ಮನ್ನು ಪ್ರೀತಿಸುವವರು ಜೀವನಪೂರ್ತಿ ನಿಮ್ಮನ್ನು ಪ್ರೀತಿಸಬಲ್ಲರೇ ಎಂದು ಈಗ ಕಂಡುಕೊಳ್ಳುವುದು ಹೇಗೆ? ಸಾಮಾನ್ಯವಾಗಿ ಪುರುಷರು ಪ್ರೀತಿಯ ವಿಷಯ ಬಂದಾಗ ಸುಲಭವಾಗಿ ತೋರ್ಪಡಿಸಿಕೊಳ್ಳದ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಇದನ್ನೇ ಕನ್ನಡದಲ್ಲಿ ಅಮ್ಮನ ದುಃಖ ಕಾಣುತ್ತದೆ, ಅಪ್ಪನ ದುಃಖ ಕಾಣುವುದಿಲ್ಲ ಎಂದು ಗಾದೆರೂಪದಲ್ಲಿ ಹೇಳಲಾಗಿದೆ.
ಒಂದು ವೇಳೆ ನಿಮ್ಮನ್ನು ಪ್ರೀತಿಸುತ್ತಿರುವ ಪುರುಷ ನಿಮ್ಮನ್ನು ಯಾವುದೇ ಸ್ವಾರ್ಥವಿಲ್ಲದೇ ನಿಮ್ಮನ್ನು ಅಪಾರವಾಗಿ ಪ್ರೀತಿಸುವವರಾಗಿದ್ದರೆ ನಿಮಗಿಂತ ಅದೃಷ್ಟವಂತರು ಇನ್ನೊಬ್ಬರಿಲ್ಲ. ಆದರೆ ಇದನ್ನು ಅವರು ಮಹಿಳೆಯರಷ್ಟು ಸುಲಭವಾಗಿ ತೋರ್ಪಡಿಸುವವರೂ ಅಲ್ಲ. ಆದರೆ ನಿಮ್ಮನ್ನು ತಮ್ಮ ಆದ್ಯತೆಯನ್ನಾಗಿಸಿ ಸದಾ ನಿಮ್ಮೊಂದಿಗಿದ್ದು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಇವರ ಚರ್ಯೆಯನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಅವರ ಪ್ರೀತಿ ಎಷ್ಟು ಆಳವಾಗಿದೆ ಎಂದು ಕಂಡುಹಿಡಿಯಬಹುದು. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ನಿಮ್ಮ ತೀರ್ಮಾನವನ್ನು ಬಲಪಡಿಸಲು ನೆರವಾಗುತ್ತದೆ. ಗಂಡನ ಪ್ರೀತಿ ಇತ್ತೀಚೆಗೆ ಮರೀಚಿಕೆಯಾಗುತ್ತಿದೆಯೇ?

ನಿಮ್ಮ ಬಗ್ಗೆ ಆತ ಕಾಳಜಿ ವಹಿಸುತ್ತಾನೆ
ನಿಮ್ಮ ಸಂತೋಷ ಹಾಗೂ ಕ್ಷೇಮವೇ ಆತನಿಗೆ ಆದ್ಯತೆಯ ವಿಷಯಗಳಾಗಿದ್ದು ನೀವು ಎಲ್ಲಾ ರೀತಿಯಲ್ಲಿ ಸುರಕ್ಷಿತರು ಎಂದು ಆತ ಪ್ರಮಾಣಿಸಿಕೊಳ್ಳುತ್ತಾ ಇರುತ್ತಾನೆ. ನಿಮ್ಮ ತಲೆಬುಡವಿಲ್ಲದ ಚಿಕ್ಕಂದಿನ ಅನುಭವಗಳು, ಅಜ್ಜಿ ಹೇಳಿದ ಕಥೆಗಳು ಮೊದಲಾದವನ್ನು ಕಿವಿಗೊಟ್ಟು ಕೇಳುತ್ತಾನೆ. ಅಷ್ಟೇ ಅಲ್ಲ, ನಿಮಗೆ ಇಷ್ಟವಾದ ಅಡುಗೆಯನ್ನು ತಯಾರಿಸುತ್ತಾನೆ ಇಲ್ಲದಿದ್ದರೆ ಇದನ್ನು ಒದಗಿಸಲು ಪ್ರಯತ್ನ ಪಡುತ್ತಾನೆ. ನೀವು ಸುಸ್ತಾಗಿದ್ದ ದಿನ ನಿಮಗೆ ಯಾವುದೇ ಕೆಲಸವನ್ನು ಮಾಡಲು ಬಿಡದೇ ನಿಮ್ಮ ಕೆಲಸಗಳನ್ನು ವಹಿಸಿಕೊಳ್ಳುತ್ತಾನೆ.
ತನ್ನ ದಿನಚರಿಯ ಬಗ್ಗೆ ಸದಾ ನಿಮಗೆ ತಿಳಿಸುತ್ತಾ ಇರುತ್ತಾನೆ
ಸಾಮಾನ್ಯವಾಗಿ ಪುರುಷರು ತಮ್ಮ ಆಗುಹೋಗುಗಳು, ದಿನಚರಿಯ ಬಗ್ಗೆ ಎಲ್ಲರಿಗೂ ಹೇಳುತ್ತಾ ಇರುವುದಿಲ್ಲ. ಆದರೆ ನಿಮಗೆ ಮಾತ್ರ ತಮ್ಮ ದಿನಚರಿ ಅಥವಾ ಕಾರ್ಯಕ್ರಮಗಳ ಬಗ್ಗೆ ಸಂದೇಶ ಕಳುಹಿಸುತ್ತಾ ಇರುತ್ತಾರೆ. ವಿಶೇಷವಾಗಿ ಪ್ರಯಾಣದ ಅವಧಿಯಲ್ಲಿ ತಾವು ಹೊರಟ, ತಲುಪಿದ ವಿಷಯವನ್ನು ಎಸ್ಮೆಮ್ಮೆಸ್ ಅಥವಾ ಇತರ ಮಾಧ್ಯಮದ ಮೂಲಕ ತಿಳಿಸುತ್ತಾ ಇರುತ್ತಾರೆ.
ಕಾಮವೇ ಆತನಿಗೆ ಸರ್ವಸ್ವವಲ್ಲ
ಸಾಮಾನ್ಯವಾಗಿ ಕಾಮಕ್ಕೆ ಪುರುಷರೇ ಹೆಚ್ಚು ಒಲವು ತೋರುತ್ತಾರೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ದಂಪತಿಗಳ ಮಧ್ಯೆ ಪ್ರಣಯವಿದ್ದರೇ ಜೀವನ ಸುಖಕರ ಎಂದು ತಿಳಿದಿರುತ್ತಾರೆ. ಆದರೆ ನಿಮ್ಮ ಪುರುಷ ನಿಮ್ಮನ್ನು ಓರ್ವ ವಿಶೇಷ ವ್ಯಕ್ತಿಯ ರೂಪದಲ್ಲಿ ನೋಡುತ್ತಾ ಜೀವನದಲ್ಲಿ ವಿವಿಧ ಮಜಲಿನ ಸಂತೋಷಗಳನ್ನು ನಿಮಗೆ ನೀಡಲು ಉತ್ಸುಕರಾಗಿರುತ್ತಾರೆ. ಉದಾಹರಣೆಗೆ ವಿದೇಶ ಪ್ರವಾಸ, ಕ್ಯಾಂಡೆಲ್ ಲೈಟ್ ಡಿನ್ನರ್ ಇತ್ಯಾದಿಗಳ ಮೂಲಕ ನಿಮ್ಮನ್ನು ಸಂತೋಷವಾಗಿರಿಸಲು ಪ್ರಯತ್ನಿಸುತ್ತಿರುತ್ತಾರೆ.
ಆತ ತನ್ನ ಗುಟ್ಟಿನ ವಿಷಯಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಾನೆ
ಆತ ನಿಮ್ಮೊಂದಿಗೆ ತಡರಾತ್ರಿಯವರೆಗೆ ಹರಟೆ ಹೊಡೆಯಲು ಇಚ್ಛಿಸುತ್ತಾನೆ. ಈ ಹರಟೆಯಲ್ಲಿ ಬರುವ ವಿಷಯಗಳು ಅತಿ ಗುಟ್ಟಿನದ್ದಾಗಿದ್ದು ನಿಮ್ಮಿಬ್ಬರ ನಡುವೆ ಮಾತ್ರವೇ ಸವಿನೆನಪುಗಳಾಗಿ ಇರುವಂತಹದ್ದಾಗಿರುತ್ತವೆ. ನಿಮ್ಮಲ್ಲಿ ಈ ಸಮಯದಲ್ಲಿ ಮಾಡಿದ ಆಣೆ ಭಾಷೆಗಳನ್ನು ಆತ ಜೀವನಪೂರ್ತಿ ನಿಭಾಯಿಸುತ್ತಾನೆ ಎಂದರೆ ಆತ ನಿಮ್ಮನ್ನು ಆಳವಾಗಿ ಪ್ರೀತಿಸುತ್ತಾನೆ ಎಂದು ತಿಳಿದುಕೊಳ್ಳಬೇಕು.



Click it and Unblock the Notifications

