Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಭಾವನಾತ್ಮಕ ಸಂಬಂಧ, ತಪ್ಪು ದಾರಿಗೂ ಸೆಳೆಯಬಹುದು!
ಹಲವರು ಸಂಬಂಧಗಳಿಗೆ ಬೆಲೆ ನೀಡುತ್ತಾರೆ. ಅದು ಹಣಕಾಸಿನ ಸಂಬಂಧವಾಗಿರಬಹುದು, ಸ್ನೇಹ ಸಂಬಂಧವಾಗಿರಬಹುದು, ವ್ಯವಹಾರದ ಸಂಬಂಧವಾಗಿರಬಹುದು. ಇನ್ನೂ ಕೆಲವರು ದೈಹಿಕ ಸಂಬಂಧಕ್ಕೆ ಬೆಲೆ ನೀಡುತ್ತಾರೆ. ಆದರೆ ಕೆಲವರು ಇರುತ್ತಾರೆ ಅವರು ಕೇವಲ ಭಾವನಾತ್ಮಕ ಸಂಬಂಧಕ್ಕೆ ಬೆಲೆ ನೀಡುತ್ತಾರೆ. ಭಾವನಾತ್ಮಕವಾಗಿ ಒಬ್ಬರಿಗೆ ಹತ್ತಿರವಾಗುವ ಇವರು ತಮ್ಮ ಭಾವನೆಗಳನ್ನು ಇವರೊಂದಿಗೆ ಹಂಚಿಕೊಳ್ಳಲು ಮತ್ತು ಆ ಭಾವನಾತ್ಮಕ ಕೊಡು ಕೊಳ್ಳುವಿಕೆಗೆ ಹೆಚ್ಚಿನ ಬೆಲೆ ನೀಡುತ್ತಾರೆ.
ಗಂಡ-ಹೆಂಡತಿ ನಡುವೆ ಈ ಭಾವನಾತ್ಮಕ ಸಂಬಂಧ ಇದ್ದರೆ, ಒಳ್ಳೆಯದು. ಆದರೆ ದಂಪತಿಗಳಲ್ಲಿ ಒಬ್ಬರು ಯಾರೋ ಒಬ್ಬರ ಜೊತೆಗೆ ಈ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡರೆ, ಅದರಿಂದ ನಿಮ್ಮ ದಾಂಪತ್ಯವು ಹಾಳಾಗಿ ಹೋಗುತ್ತದೆ. ತಜ್ಞರ ಪ್ರಕಾರ ದಾಂಪತ್ಯವನ್ನು ಹಾಳು ಮಾಡುವಲ್ಲಿ, ಎಲ್ಲಾ ಬಗೆಯ ಸಂಬಂಧಗಳಿಗಿಂತ ಅತಿ ಹೆಚ್ಚು ಅಪಾಯಕಾರಿಯಾದುದು ಈ ಭಾವನಾತ್ಮಕ ಸಂಬಂಧವಂತೆ. ಸುಮಾರು 15% ಮದುವೆಗಳು ಈ ಬಗೆಯ ಸಂಬಂಧಗಳನ್ನು ಇರಿಸಿಕೊಂಡ ಕಾರಣದಿಂದಾಗಿ ಹಾಳಾಗುತ್ತವೆಯಂತೆ.
ಹಾಗಾಗಿಯೇ ಭಾವನಾತ್ಮಕ ಸಂಬಂಧವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯಿಂದ ಉದಾಸೀನಕ್ಕೆ ಒಳಗಾದಾಗ ಈ ರೀತಿ ಅವರು ಇತರರ ಕುರಿತು ಆಕರ್ಷಿತರಾಗುತ್ತಾರೆ. ಬನ್ನಿ ಈ ಭಾವನಾತ್ಮಕ ಸಂಬಂಧಗಳು ಹೇಗಿರುತ್ತವೆ, ಮತ್ತು ಅವುಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತಾಗಿ ತಿಳಿದುಕೊಳ್ಳೋಣ...

ಆಕೆ ಇನ್ನೊಬ್ಬರ ಕುರಿತಾಗಿ ಗಾಢವಾದ ಸ್ನೇಹವನ್ನು ಬೆಳೆಸಿಕೊಳ್ಳುತ್ತಾಳೆ
ಒಂದು ವೇಳೆ ನಿಮ್ಮ ಸಂಗಾತಿಯು ಇನ್ನೊಬ್ಬರ ಜೊತೆಗೆ ಗಾಢವಾದ ಸ್ನೇಹವನ್ನು ಬೆಳೆಸಿಕೊಂಡರೆ, ಅದು ಆಕೆಯ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳುವುದರ ಮೊದಲ ಸಂಕೇತವಾಗಿರುತ್ತದೆ. ಆಕೆಯು ಭಾವನಾತ್ಮಕವಾಗಿ ಸಂಬಂಧವನ್ನು ಬೆಳೆಸಿಕೊಳ್ಳುವ ವ್ಯಕ್ತಿಯು ಆಕೆಯ ನೆರೆಹೊರೆಯ ವ್ಯಕ್ತಿ ಅಥವಾ ಸಹೋದ್ಯೋಗಿ ಅಥವಾ ಇನ್ಯಾವುದೋ ಒಬ್ಬ ವ್ಯಕ್ತಿಯಾಗಿರಬಹುದು.

ಆ ವ್ಯಕ್ತಿಯ ಜೊತೆಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಆದ್ಯತೆ ನೀಡುತ್ತಾಳೆ
ಯಾವಾಗ ಹೆಂಗಸು ಒಬ್ಬ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತಾಳೋ, ಆಗ ಆಕೆ ಅವನೊಂದಿಗೆ ತನ್ನ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಲು ಆರಂಭಿಸುತ್ತಾಳೆ. ಯಾರೊಂದಿಗೂ ಹಂಚಿಕೊಳ್ಳದೆ ಇರುವ ಭಾವನೆಗಳನ್ನು ಸಹ ಈತನ ಜೊತೆಗೆ ಹಂಚಿಕೊಳ್ಳಲು ಆಕೆ ಶುರು ಮಾಡುತ್ತಾಳೆ.

ಅವರು ಡೇಟ್‌ಗಳನ್ನು ಯೋಜನೆ ಮಾಡುತ್ತಾರೆ
ಅಲ್ಲಿ ಇಲ್ಲಿ ಸುತ್ತಾಡಲು ಆರಂಭಿಸುವ ಇವರು, ವಾರಾಂತ್ಯ, ಹಬ್ಬ-ಹರಿದಿನ, ವಿಶೇಷ ದಿನ ಹೀಗೆ ನಾನಾ ಕಾರಣಗಳನ್ನು ಅಡ್ಡ ಇಟ್ಟುಕೊಂಡು ಮತ್ತೆ ಮತ್ತೆ ಭೇಟಿಯಾಗುತ್ತಾ ಇರುತ್ತಾರೆ.

ಆಕೆ ಆತನನ್ನು ಮುಟ್ಟಲು ಹಿಂಜರಿಯುವುದಿಲ್ಲ
ನಿಮ್ಮ ಹೆಂಡತಿ ಒಬ್ಬ ವ್ಯಕ್ತಿಯನ್ನು ಮುಟ್ಟಲು, ಕೈ ಹಿಡಿದುಕೊಳ್ಳಲು ಆರಂಭಿಸಿದರೆ ಆಕೆ ಆತನೊಂದಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತಿದ್ದಾಳೆ ಎಂದರ್ಥ.

ನೀವು ಜಗಳವಾಡಿದಾಗ ಆಕೆ ಅಳುತ್ತಾಳೆ
ಎಲ್ಲಾ ಹೆಂಗಸರು ಜಗಳವಾಡಿದಾಗ ಅಳುತ್ತಾರೆ ಎಂದು ಭಾವಿಸಬೇಡಿ. ನಿಮ್ಮ ಸಂಗಾತಿ ನಿಮ್ಮಿಂದ ಭಾವನಾತ್ಮಕವಾಗಿ ದೂರವಾಗಿ ಮತ್ತೊಬ್ಬರಿಗೆ ಹತ್ತಿರವಾದಾಗ, ನಿಮ್ಮ ಜೊತೆಗೆ ಸಣ್ಣ ಸಣ್ಣ ವಿಚಾರಕ್ಕೂ ಜಗಳವಾಡಿ, ಕಣ್ಣಲ್ಲಿ ನೀರು ಹಾಕಿಕೊಳ್ಳುತ್ತಾಳೆ.

ಏನೋ ತಪ್ಪಾಗಿರುವ ಹಾಗೆ ತೋರುತ್ತದೆ
ನಿಮ್ಮ ಮನಸ್ಸು ನಿಮ್ಮ ಸಂಗಾತಿಯು ಕುರಿತಾಗಿ ಏನೋ ತಪ್ಪಾಗಿದೆ ಎಂದು ನಿಮಗೆ ಅನಿಸುತ್ತಾ ಇರುತ್ತದೆ. ಕೆಲವೊಂದು ಸಂಕೇತಗಳು ನಿಮ್ಮ ಹೆಂಡತಿ ಆಕೆಯ ಆಫೀಸಿನ ಸಹೋದ್ಯೋಗಿಯ ಜೊತೆಗೆ ಹೆಚ್ಚು ಅನ್ಯೋನ್ಯತೆಯಿಂದ ಇರಲು ಆರಂಭಿಸಿರುವುದು ನಿಮಗೆ ಗೊತ್ತಾಗುತ್ತದೆ.



Click it and Unblock the Notifications
