ಹುಡುಗಿಯ ಹೃದಯ ಗೆಲ್ಲಬೇಕೆಂದರೆ, ಇಂತಹ ಟ್ರಿಕ್ಸ್ ಪ್ರಯತ್ನಿಸಿ

By Arshad

ಹದಿಹರೆಯಕ್ಕೆ ಬರುತ್ತಿದ್ದಂತೆಯೇ ವಿರುದ್ಧ ಲಿಂಗಿಗಳ ಬಗ್ಗೆ ಕುತೂಹಲ ಮತ್ತು ಆಕರ್ಷಣೆ ಸಹಜ. ಯುವತಿಯರನ್ನು ತಮ್ಮತ್ತ ಆಕರ್ಷಿಸಲು ಯುವಕರಲ್ಲಿ ಇಂತಹದ್ದೇ ಎಂಬ ಪ್ರತ್ಯೇಕವಾದ ನಿಮಯವಿಲ್ಲ. ಸಮಯ ಸಮಯಕ್ಕೆ ಅದು ಬದಲಾಗುತ್ತಾ ಇರುತ್ತದೆ. ಹೆಚ್ಚಿನವರು ಸುಂದರವಾಗಿ ಕಾಣುವಂತೆ ಉಡುಪು ತೊಟ್ಟರೆ ಆಕರ್ಷಿತರಾಗುತ್ತಾರೆ ಎಂದು ನಂಬಿದ್ದರೆ ಕೆಲವರು ಮಾತುಗಳಲ್ಲಿ ಮೋಡಿ ಮಾಡುತ್ತೇವೆ ಎಂದು ಭಾವಿಸಿದ್ದಾರೆ. ಮದುವೆ ಮುಂಚೆ ಡೇಟಿಂಗ್, ಸರಿಯೋ? ತಪ್ಪೋ?

ಶ್ರೀಮಂತ ಯುವಕರಂತೂ ತಮ್ಮ ಹಣವನ್ನು ಖರ್ಚುಮಾಡುವ ಮೂಲಕ ಯುವತಿಯರ ಮನ ಗೆಲ್ಲಲು ಯತ್ನಿಸಿದರೆ ಬೈಕ್ ಸವಾರರು ಅನಗತ್ಯವಾಗಿ ದೊಡ್ಡದಾಗಿ ಶಬ್ಧ ಮಾಡುತ್ತಾ, ಅಸಂಬದ್ಧವಾಗಿ ಮತ್ತು ಅಪಾಯಕಾರಿಯಾದ ಸ್ಟಂಟ್‌ಗಳನ್ನು ಮಾಡಿದರೆ ಯುವತಿಯರು ಓಡಿ ತಮ್ಮ ಹಿಂದೆ ಕುಳಿತುಕೊಳ್ಳುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಇವೆಲ್ಲಾ ಒಂದು ಕ್ಷಣಿಕ ಆಕರ್ಷಣೆಗಳೇ ಹೊರತು ಯಾವುದೇ ಯುವತಿ ಈ ಎಡಬಿಡಂಗಿ ಕ್ರಮಗಳನ್ನು ಬಯಸುವುದಿಲ್ಲ. ಪ್ರತಿ ಯುವತಿಯೂ ತನ್ನ ಪ್ರಿಯಕರನಾಗುವವನಲ್ಲಿ ಕೆಲವು ಗುಣಗಳನ್ನು ಕಂಡು ಮೆಚ್ಚುತ್ತಾಳೆ. ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!

ಒಂದು ವೇಳೆ ನೀವೂ ಯಾವುದಾದರೂ ಯುವತಿಯನ್ನು ಮನಸಾರೆ ಪ್ರೇಮಿಸುತ್ತಿದ್ದು ಆಕೆಯ ಹೃದಯ ಗೆಲ್ಲಬೇಕೆಂದರೆ ಎಡಬಿಡಂಗಿ ಕ್ರಮಗಳನ್ನು ಬಿಟ್ಟು ಆಕೆ ಮೆಚ್ಚುವಂತೆ ನಡೆದುಕೊಳ್ಳಬೇಕು. ಆಕೆ ಬಯಸುವ ಗುಣಗಳು ನಿಮ್ಮಲ್ಲಿದ್ದರೆ ಆಕೆ ಖಂಡಿತಾ ನಿಮ್ಮ ಬಳಿ ಬರುವಳು. ಇದುವರೆಗೆ ಮಾಡಿದ ನಿಮ್ಮ ಪ್ರಯತ್ನಗಳು ನೀರಿನಲ್ಲಿ ಹೋಮ ಏಕಾಯಿತು ಎಂಬುದನ್ನು ಕೆಳಗಿನ ಸ್ಲೈಡ್ ಶೋ ವಿವರಿಸಲಿದೆ, ಮುಂದೆ ಓದಿ..

ನೀವೇ ಆಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು

ನೀವೇ ಆಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು

ಬಹುತೇಕ ಹೆಚ್ಚಿನ ಒಂಟಿ ಯುವಕರಿಗೆ ಅರ್ಥವಾಗದ ವಿಷಯವೇ ಇದು. ಸಾಮಾನ್ಯವಾಗಿ ಯಾವುದೇ ಯುವತಿ ನಿಮ್ಮಲ್ಲಿ ಕೊಂಚ ಸಲಿಗೆ ತೋರಿದರೆ ಆಕೆ ನಿಮ್ಮನ್ನು ಪ್ರೀತಿಸುತ್ತಾಳೆ ಎಂದು ಸರ್ವಥಾ ಅರ್ಥವಲ್ಲ. ಆದ್ದರಿಂದ ಯಾವುದೇ ಯುವತಿ ನಿಮ್ಮೊಂದಿಗೆ ಸ್ನೇಹದಿಂದ್ದರೆ ನಿರ್ಮಲ ಸ್ನೇಹವನ್ನೇ ಪ್ರಕಟಿಸಿ, ವಿನಃ ಹುಸಿ ಪ್ರಯಣವನ್ನಲ್ಲ.

ನಿಮ್ಮ ನಗೆಹನಿಗಳು ಪಿಚ್ಚಾಗಿರಬಹುದು

ನಿಮ್ಮ ನಗೆಹನಿಗಳು ಪಿಚ್ಚಾಗಿರಬಹುದು

ಜೋಕುಗಳನ್ನು ಹೇಳುವುದರಿಂದ ಹೆಣ್ಣಿನ ಹೃದಯ ಗೆಲ್ಲಬಹುದು ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಮಾತಿನ ನಡುವೆ ಹಾಸ್ಯದ ಚಟಾಕಿ ಮತ್ತು ಸಾಂದರ್ಭಿಕ ಜೋಕುಗಳನ್ನೇ ಯುವತಿಯರು ಮೆಚ್ಚುತ್ತಾರೆಯೇ ಹೊರತು ಒಂದರ ಹಿಂದೊಂದು ಇಂಟರ್ನೆಟ್ ನಿಂದ ಕಾಪಿ ಮಾಡಿದ ಸರ್ದಾರ್ಜಿ ಜೋಕುಗಳಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ನಗೆಹನಿಗಳು ಪಿಚ್ಚಾಗಿರಬಹುದು

ನಿಮ್ಮ ನಗೆಹನಿಗಳು ಪಿಚ್ಚಾಗಿರಬಹುದು

ಒಂದು ವೇಳೆ ಈ ತರಹದ ಪ್ರಯತ್ನ ನಡೆಸಿದ್ದರೆ ನಿಮ್ಮ ಹಿನ್ನಡೆಗೆ ಇದೊಂದು ಪ್ರಮುಖ ಕಾರಣವಾಗಿದೆ.

ನೀವು ತುಂಬಾ ಹತಾಶರಾದಂತೆ ತೋರುತ್ತಿರಬಹುದು

ನೀವು ತುಂಬಾ ಹತಾಶರಾದಂತೆ ತೋರುತ್ತಿರಬಹುದು

ಹತಾಶೆಯ ಮುಖ ಹೊತ್ತ ಯಾವುದೇ ಯುವಕನನ್ನು ಯುವತಿಯರು ಇಷ್ಟಪಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಎದೆಗುಂದದೆ ನಿಲ್ಲುವ, ಆತ್ಮವಿಶ್ವಾಸ ಪ್ರಕಟಿಸುವ, ಸಂಭಾವ್ಯದ ಬಗ್ಗೆಯೇ ಚಿಂತಿಸುವ ಮತ್ತು ವಿಚಾರ ವಿನಿಮಯ ಮಾಡಿಕೊಳ್ಳುವ ಮತ್ತು ಅದರಂತೆಯೇ ನಡೆದುಕೊಳ್ಳುವ ವ್ಯಕ್ತಿಗಳನ್ನು ಯುವತಿಯರು ಇಷ್ಟಪಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೀವು ತುಂಬಾ ಹತಾಶರಾದಂತೆ ತೋರುತ್ತಿರಬಹುದು

ನೀವು ತುಂಬಾ ಹತಾಶರಾದಂತೆ ತೋರುತ್ತಿರಬಹುದು

ಚಿಕ್ಕ ಸೋಲಿಗೂ ಹತಾಶರಾದರೆ ಇನ್ನೂ ಜೀವನದಲ್ಲಿ ಬರುವ ದೊಡ್ಡ ದೊಡ್ಡ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬ ಅನುಮಾನ ವ್ಯಕ್ತವಾಗುತ್ತದೆ. ತಡಮಾಡದೇ ಅವರು ನಿಮ್ಮನ್ನು ದೂರವಾಗಿಸುತ್ತಾರೆ.

ನಿಮ್ಮ ದಿನಚರಿ, ವಸ್ತುಗಳು ಅಚ್ಚುಕಟ್ಟಾಗಿ ಇಲ್ಲದಿರುವುದು

ನಿಮ್ಮ ದಿನಚರಿ, ವಸ್ತುಗಳು ಅಚ್ಚುಕಟ್ಟಾಗಿ ಇಲ್ಲದಿರುವುದು

ಮಹಿಳೆಯರಿಗೆ ಅಚ್ಚುಕಟ್ಟುತನ ಎಲ್ಲೆಲ್ಲೂ ಇರಬೇಕೆಂದು ಬಯಸುತ್ತಾರೆ. ಯಾವುದೇ ಮನೆಯಲ್ಲಿ ಮಹಿಳೆಯರಿದ್ದರೆ ಆ ಮನೆ ಚೊಕ್ಕಟವಾಗಿ, ಒಪ್ಪ ಓರಣವಾಗಿರುವುದನ್ನು ಗಮನಿಸಬಹುದು. ಅದೇ ಒಂಟಿ ಜೀವಿಗಳ ಕೋಣೆ ಈಗತಾನೇ ಬಿರುಗಾಳಿ ಬೀಸಿ ಎರಾಬಿರ್ರಿ ಎಸೆದಂತಿರುತ್ತದೆ. ಇದನ್ನು ಯಾವುದೇ ಯುವತಿ ಸಹಿಸುವುದಿಲ್ಲ. ತನ್ನ ಮನೆಯ ಅಚ್ಚುಕಟ್ಟುತನವನ್ನೇ ಆಕೆ ಬಯಸುತ್ತಾಳೆ.

X
Desktop Bottom Promotion