Latest Updates
-
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
20ರ ವಯಸ್ಸಿನಲ್ಲಿ ಮದುವೆ, ಮಾಡಿಕೊಂಡರೆ ಸಕತ್ ಲಾಭ!
ಮದುವೆ ಎಂದರೆ ಸಾಕು ಅದೇನೋ ರೋಮಾಂಚನ. ಅದೇನೋ ಕನಸುಗಳು ಮತ್ತು ಭರವಸೆಗಳು ನಮ್ಮನ್ನು ಆವರಿಸಿಬಿಡುತ್ತವೆ. ಮದುವೆಯ ಕುರಿತಾಗಿ ನಾವು ನಮ್ಮದೇ ಆಗಿರುವ ಕಲ್ಪನೆಗಳು ಮತ್ತು ಭಾವನೆಗಳನ್ನು ಹೊಂದಿರುತ್ತೇವೆ. ಅದಕ್ಕೆಂದೆ ಮದುವೆಯನ್ನು ಮುಂದಕ್ಕೆ ತಳ್ಳುತ್ತೇವೆ. ಜೀವನದಲ್ಲಿ ತಡವಾಗಿ ಮದುವೆಯಾಗುತ್ತೇವೆ. ಇದಕ್ಕೆ ಹಣಕಾಸು, ಸಾಮಾಜಿಕ ಸ್ಥಾನಮಾನ, ವೃತ್ತಿ, ಭದ್ರತೆ ಇತ್ಯಾದಿ ಕಾರಣಗಳನ್ನು ನಮಗೆ ನಾವೇ ನೀಡಿಕೊಂಡಿರುತ್ತೇವೆ.
ಆದರೆ ಒಮ್ಮೆ ಅವುಗಳನ್ನೆಲ್ಲಾ ಪಕ್ಕಕ್ಕಿಡಿ, 20ರ ಹರೆಯದಲ್ಲಿ ಮದುವೆಯಾಗುವುದರಿಂದ ನಿಮಗೆ ಏನೆಲ್ಲಾ ಲಾಭ ಸಿಕ್ಕುತ್ತದೆ ಎಂಬುದರ ಬಗ್ಗೆ ಆಲೋಚಿಸಿದ್ದೀರಾ? ಹೌದು 20ರ ಹರೆಯದಲ್ಲಿ, ನೀವು ಓದುತ್ತಿರುವುದು ಸತ್ಯ. ಅಧ್ಯಯನಗಳ ಪ್ರಕಾರ ಜನರು ಮದುವೆಯನ್ನು 30ರ ನಂತರ ಮಾಡಿಕೊಳ್ಳೋಣ ಎಂದು ಆಲೋಚಿಸುತ್ತಾರಂತೆ. ಆಗ ಅವರು ತಮ್ಮ ವೃತ್ತಿಯಲ್ಲಿ
ನೆಲೆಯೂರಿರುತ್ತಾರೆ ಮತ್ತು ತಮ್ಮ ಗುರಿಗಳನ್ನು ಸಾಧಿಸಿರುತ್ತಾರೆ ಆದರೆ ಇವುಗಳನ್ನು ಸಾಧಿಸುವ ನಿಟ್ಟಿನಲ್ಲಿ ನೀವು ನಿಮ್ಮ ಜೀವನದ ಬಹುಮುಖ್ಯ ಸಂಗತಿಯ ಕುರಿತಾಗಿ ಉದಾಸೀನ ಮಾಡಿರುತ್ತೀರಿ, ಅದೇ ಮದುವೆ. ನಿಮ್ಮ ಜೀವನದಲ್ಲಿ ನೀವು ವೃತ್ತಿ ಮತ್ತು ಕನಸುಗಳ ಬೆನ್ನತ್ತಿ ಹೋದರೆ, ಇತ್ತ ನಿಮ್ಮ ಜೀವನದಲ್ಲಿ ಕಾಣಬಹುದಾಗಿದ್ದ ವೈವಾಹಿಕ ಸುಖಗಳನ್ನು ತಪ್ಪಿಸಿಕೊಳ್ಳುತ್ತೀರಿ.
ಅದರಲ್ಲೂ ನಿಮ್ಮದೇ ವಯಸ್ಸಿನ ಹುಡುಗ-ಹುಡುಗಿ ಮದುವೆಯಾಗಿ ಕಂಡಿರುವ ಪ್ರಮುಖ ಸಂಗತಿಗಳನ್ನು ಸಹ ನಿಮ್ಮ ಬಾಳಿನಲ್ಲಿ ನೀವು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಒಂದು ವಿಚಾರ ನೆನಪಿಡಿ, ನೀವು ಮದುವೆಯಾಗಿ ಸಹ ಜೀವನದಲ್ಲಿ ಯಶಸ್ವಿಯಾಗಬಹುದು. ಪ್ರೀತಿಯು ನಿಮ್ಮ ಜೀವನದಲ್ಲಿ ಹಲವಾರು ಸುಧಾರಣೆಗಳನ್ನು ತರಬಲ್ಲದು. ನಿಮ್ಮ ಜೀವನದ ಅರ್ಧ ಭಾಗ ಆರಂಭವಾಗುವುದೇ ಮದುವೆಯ ನಂತರ. ಅಸಲಿಗೆ ನಿಮ್ಮ ಜೀವನವನ್ನು ನೀವು ಆರಂಭಿಸುವುದೇ ಮದುವೆಯ ನಂತರ. ಹಾಗಾಗಿ 20 ರ ಹರೆಯದಲ್ಲಿ ಮದುವೆಯಾದರೆ ಸಿಕ್ಕುವ ಪ್ರಯೋಜನಗಳ ಕುರಿತು ಒಮ್ಮೆ ತಿಳಿದುಕೊಂಡು ಬರೋಣ ಬನ್ನಿ...

ಒಟ್ಟಿಗೆ ಜೀವನವನ್ನು ಎದುರಿಸುತ್ತೀರಿ
ನೀವು ಬೇಗ ಮದುವೆಯಾದರೆ ನೀವು ಮತ್ತು ನಿಮ್ಮ ಸಂಗಾತಿಯು ಒಟ್ಟಿಗೆ ಜೀವನವನ್ನು ಎದುರಿಸುತ್ತೀರಿ. ಜೀವನದ ಹೊಸ ಹೊಸ ಸವಾಲುಗಳಿಗೆ ಒಟ್ಟಿಗೆ ಪರಿಹಾರವನ್ನು ಹುಡುಕುತ್ತೀರಿ. ಒಟ್ಟಿಗೆ ಹೊಸ ಹೊಸ ಸಾಹಸಗಳನ್ನು ಮಾಡಬಹುದು. ಈ ನಿಟ್ಟಿನಲ್ಲಿ ನೀವು ನಿಮ್ಮ ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.

ಒಟ್ಟಿಗೆ ಜೀವನವನ್ನು ಎದುರಿಸುತ್ತೀರಿ
20ರ ಹರೆಯದಲ್ಲಿ ಮದುವೆಯಾದರೆ ಗಂಡ-ಹೆಂಡತಿ ಎಂಬ ಭಾವನೆಗಿಂತ, ತಮ್ಮ ಬಾಳ ಸಂಗಾತಿ ಎಂಬ ಭಾವನೆಯೆ ನಿಮಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ನಿಮಗೆ ಸಮಸ್ಯೆ ಬಂದಾಗ ಮೊದಲು ನೀವು ನಿಮ್ಮ ಸಂಗಾತಿಯ ಕಡೆಗೆ ನೋಡುತ್ತೀರಿ. ನಿಮ್ಮ ಇಬ್ಬರ ಆಸಕ್ತಿಗಳು ಬಹುಬೇಗ ಒಂದೇ ಹಾದಿಯಲ್ಲಿ ಸಾಗುತ್ತವೆ.

ಹಣವಿಲ್ಲವೇ? ಚಿಂತೆಯೇ ಇಲ್ಲ!
ಆಗ ತಾನೇ ಓದು ಮುಗಿಸಿ, ಒಂದು ಸಣ್ಣ ಕೆಲಸವನ್ನು ಗಿಟ್ಟಿಸಿಕೊಂಡು ಮದುವೆಯಾಗಿರುತ್ತೀರಿ ಎಂದು ಭಾವಿಸಿ. ನಿಮ್ಮ ಕೈಯಲ್ಲಿ ದುಡ್ಡಿಲ್ಲ, ಅದಕ್ಕಾಗಿ ಚಿಂತೆ ಮಾಡಬೇಡಿ. ನಿಮ್ಮ ಸ್ಥಿತಿ ನಿಮ್ಮ ಸಂಗಾತಿಗೆ ಗೊತ್ತಿರುತ್ತದೆ. ನೀವು ಇಂದಲ್ಲ ನಾಳೆ ಸಾಧನೆಯ ಉನ್ನತಿಗೆ ತಲುಪುತ್ತೀರಿ ಎಂದು ಅವರು ನಂಬುತ್ತಾರೆ. ಉಳಿಸಿರುವ ಸಣ್ಣ ಮಟ್ಟದ ಹಣವೇ ಸಾಕು ನಿಮ್ಮ ಸಂತೋಷಕ್ಕೆ, ಸ್ಟಾರ್ ಹೋಟೆಲ್‌ಗಿಂತ ಪಾನಿಪೂರಿಯನ್ನು ಹಂಚಿಕೊಂಡು ತಿಂದು ಸಂತೋಷಪಡುವ ಪ್ರವೃತ್ತಿ ಈ ಸಮಯದಲ್ಲಿರುತ್ತದೆ.

ಹೆಚ್ಚಿನ ಮಿಲನದ ಸುಖ
30 ವರ್ಷಕ್ಕಿಂತ ಮೊದಲು ಮದುವೆಯಾದವರು ಅಧಿಕ ಪ್ರಮಾಣದಲ್ಲಿ ಮಿಲನದ ಸುಖವನ್ನು ಪಡೆಯುತ್ತಾರೆ ಎಂದು ಅಧ್ಯಯನಗಳು ಸಹ ಸಾಭೀತು ಮಾಡಿವೆ. ಆ ನಂತರ ಮದುವೆಯಾದವರು ಈ ನಿಟ್ಟಿನಲ್ಲಿ ಹಿಂದೆ ಬಿದ್ದಿರುತ್ತಾರೆ. 20 ರ ಹರೆಯದಲ್ಲಿ ನಿಮ್ಮ ಕಾಮಾಸಕ್ತಿಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ದೇಹವು ಸಹ ಅದಕ್ಕೆ ಸಹಕರಿಸುತ್ತದೆ. ಹಾಗಾಗಿ ಮದುವೆಯನ್ನು ಮುಂದಕ್ಕೆ ಹಾಕದೆ, 20 ಹರೆಯದಲ್ಲಿ ಮದುವೆಯಾಗಿ, ಹೆಚ್ಚಿನ ದಾಂಪತ್ಯ ಸುಖವನ್ನು ಪಡೆಯಿರಿ!

ವೃದ್ಧಾಪ್ಯದಲ್ಲಿ ನಿಮ್ಮ ಆಸಕ್ತಿಗಳನ್ನು ಕಾಪಾಡಿಕೊಳ್ಳಿ
ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ, 40 ವರ್ಷ ತುಂಬುವಷ್ಟರಲ್ಲಿ ನಿಮ್ಮ ಮಕ್ಕಳು ಪ್ರಾಯಕ್ಕೆ ಬಂದಿರುತ್ತಾರೆ. ಆಗ 40 ರ ನಂತರ ನಿಮ್ಮ ಆಸಕ್ತಿಯ ವಿಚಾರಗಳಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಪ್ರಪಂಚ ನೋಡಬಹುದು, ನಿಮಗೆ ಆಸಕ್ತಿಯಿರುವುದನ್ನು ಕಲಿಯಬಹುದು. ಹೀಗೆ ನಾನಾ ರೀತಿಯ ಪ್ರಯೋಜನಗಳು ನಿಮಗೆ ದೊರೆಯುತ್ತವೆ.

ನೆಮ್ಮದಿಯಿರುವ ಅಜ್ಜ-ಅಜ್ಜಿಯಾಗಬಹುದು
ಬೇಗ ಮದುವೆಯಾದರೆ, ಬೇಗ ಅಪ್ಪ-ಅಮ್ಮ ಆಗಬಹುದು ಮತ್ತು ಅಜ್ಜ-ಅಜ್ಜಿಯು ಸಹ ಆಗಬಹುದು. ಆಗ ನಿಮಗೂ ಮತ್ತು ನಿಮ್ಮ ಮಕ್ಕಳು ಹಾಗು ಮೊಮ್ಮಕ್ಕಳ ನಡುವಿನ ವಯಸ್ಸಿನ ಅಂತರ ಕಡಿಮೆಯಿರುತ್ತದೆ. ಅಲ್ಲದೆ ನೀವೂ ಕೂಡ ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಅಷ್ಟೇ ಏಕೆ ಜೆನರೇಷನ್ ಗ್ಯಾಪ್ ಸಮಸ್ಯೆ ಕೂಡ ನಿಮ್ಮಲ್ಲಿ ಬರುವುದಿಲ್ಲ. ನಿಮ್ಮಲ್ಲಿ ಅವರು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಬರುತ್ತಾರೆ ಮತ್ತು ಅವರ ಸಮಸ್ಯೆಯನ್ನು ನೀವು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ವಯಸ್ಸು ನಿಮ್ಮದಾಗಿರುತ್ತದೆ.



Click it and Unblock the Notifications











