Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ರೋಮ್ಯಾನ್ಸ್ ಅತಿಯಾದರೆ, ಹುಡುಗರಿಗೆ ಇಷ್ಟವಾಗುವುದಿಲ್ಲವಂತೆ!
ಪ್ರೀತಿಸುವ ಗಂಡು ಹಾಗೂ ಹೆಣ್ಣಿನ ಮಧ್ಯೆ ರೋಮ್ಯಾನ್ಸ್ ಎನ್ನುವುದು ಇದ್ದೇ ಇರುತ್ತದೆ. ರೋಮ್ಯಾನ್ಸ್ ಇಲ್ಲದ ಜೀವನ ನೀರಿಲ್ಲದ ಬಾವಿಯಂತೆ. ಅದು ನೋಡಲು ಸುಂದರವಾಗಿದ್ದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ! ರೋಮ್ಯಾನ್ಸ್ ಎಂದಾಗ ನಮಗೆ ಥಟ್ಟನೆ ನೆನಪಿಗೆ ಬರುವುದು ಹುಡುಗಿಯರೇ. ಯಾಕೆಂದರೆ ಯಾವಾಗಲೂ ಗುಣಗಾನ ಮಾಡುವವರು ಹುಡುಗರು ಮತ್ತು ಅದನ್ನು ಸ್ವೀಕರಿಸುವವರು ಹುಡುಗಿಯರು. ರೋಮ್ಯಾನ್ಸ್ ಎನ್ನುವುದು ಹುಡುಗರಿಗೆ ಇಷ್ಟವಾಗುವುದಿಲ್ಲವೆಂದು ಕೆಲವರ ಅಭಿಪ್ರಾಯವಿದೆ.
ಆದರೆ ತುಂಬಾ ಕಠಿಣ ಮನಸ್ಸಿನ ವ್ಯಕ್ತಿ ಕೂಡ ರೋಮ್ಯಾನ್ಸ್, ಸಿಹಿ ಮಾತಿಗೆ ಬಗ್ಗದೆ ಇರುವುದಿಲ್ಲ. ಕೆಲವೊಂದು ಮೋಹಗೊಳಿಸುವ ಶಬ್ದಗಳಿಂದ ಮಾತನಾಡಿದರೆ ಅದು ಹುಡುಗರನ್ನು ಕೆರಳಿಸುವುದರಲ್ಲಿ ಸಂಶಯವೇ ಇಲ್ಲ. ರೋಮ್ಯಾನ್ಸ್ ವಿಷಯಕ್ಕೆ ಬಂದಾಗ ಕೆಲವು ಹುಡುಗರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರಿಗೆ ಇದನ್ನು ಸ್ವೀಕರಿಸಲು ಆಗಲ್ಲ, ಬಿಡಲೂ ಆಗಲ್ಲ ಎನ್ನುವಂತಹ ಸ್ಥಿತಿ.

ಈ ಲೇಖನದಲ್ಲಿ ಹುಡುಗರು ಇಷ್ಟಪಡುವಂತಹ ಕೆಲವೊಂದು ರೋಮ್ಯಾಂಟಿಕ್ ಅಲ್ಲದಂತಹ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಇಂತಹ ವಿಷಯಗಳನ್ನು ನಾವು ಕಡೆಗಣಿಸುವ ಕಾರಣ ಸ್ವಲ್ಪ ಎಚ್ಚರಿಕೆ ವಹಸಬೇಕಾಗುತ್ತದೆ. ನಿಮ್ಮ ಸಂಗಾತಿಯನ್ನು ತುಂಬಾ ಖುಷಿಯಾಗಿಡಬಲ್ಲಂತಹ ರೋಮ್ಯಾಂಟಿಕ್ ಅಲ್ಲದಂತಹ ಕೆಲವೊಂದು ವಿಷಯಗಳ ಬಗ್ಗೆ ಇಲ್ಲಿ ನಾವು ಚರ್ಚಿಸುವ. ಸಂಬಂಧದಲ್ಲಿ ರೋಮ್ಯಾನ್ಸ್‌ಗೂ ಹೆಚ್ಚಿನ ಒತ್ತು ನೀಡಿ..!
ಕಚೇರಿಗೆ ಮಧ್ಯಾಹ್ನದ ಊಟ ತಲುಪಿಸಿ
ಆತನಿಗೆ ಇಷ್ಟವಾಗಿರುವಂತಹ ಊಟವನ್ನು ಆತನ ಕಚೇರಿಗೆ ಸಾಗಿಸಿ. ಇದು ಅಚ್ಚರಿ ಜತೆಗೆ ಅವರಲ್ಲಿ ಪ್ರೀತಿ ಹೆಚ್ಚಿಸುವುದು. ಇದರಿಂದ ಆತನಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುವುದು.
ಕ್ಯಾಂಡಲ್ ಬೆಳಕಿನಲ್ಲಿ ರಾತ್ರಿ ಊಟ
ಕ್ಯಾಂಡಲ್ ಬೆಳಕಿನಲ್ಲಿ ರಾತ್ರಿ ಊಟ ಮಾಡುವುದು ಯಾವಾಗಲೂ ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಆದರೆ ಇದನ್ನು ಸಪ್ರೈಸ್ ನೀಡಿದಾಗ ಅದು ಮತ್ತಷ್ಟು ರೋಮ್ಯಾಂಟಿಕ್ ಆಗಿರುತ್ತದೆ. ನಿಮ್ಮ ಅಡುಗೆ ಮಾಡುವ ಗುಣಗಳನ್ನು ಹೊರತುಪಡಿಸಿ ರೋಮ್ಯಾಂಟಿಕ್ ಆಗಿರುವುದನ್ನು ನೀವು ತೋರಿಸಬಹುದು.
ಒಳ್ಳೆಯ ಪುಸ್ತಕ ಓದಿ
ಇದು ಆತನ ಒತ್ತಡ ಕಡಿಮೆ ಮಾಡಲು ಮತ್ತು ನಿಮ್ಮತ್ತ ಆತನನ್ನು ಸೆಳೆಯಲು ಒಳ್ಳೆಯ ವಿಧಾನ. ನಿಮ್ಮ ತೋಳಿನಲ್ಲಿ ಆತನನ್ನು ಮಲಗಿಸಿ ಆತನಿಗೆ ಇಷ್ಟವಿರುವ ಪುಸ್ತಕವನ್ನು ಓದಿ. ಇದರಿಂದ ನಿಮ್ಮಿಬ್ಬರ ನಡುವಿನ ಭಾಂದವ್ಯ ಇನ್ನಷ್ಟು ಬಲಗೊಳ್ಳುವುದು.
ಮುದ್ದಾಡಿ
ಮಲಗುವಾಗ ಆತನನ್ನು ನೀವು ಮುದ್ದಾಡಿದರೆ ನಿಮ್ಮಿಬ್ಬರ ನಡುವಿನ ಸಂಬಂಧ ಎಷ್ಟು ವಿಶೇಷವಾಗಿದೆ ಎಂದು ತಿಳಿಯುತ್ತದೆ. ನಿಮ್ಮ ತೋಳಿನಲ್ಲಿ ನಿಮ್ಮನ್ನು ತಬ್ಬಿಕೊಂಡು ಆತ ಸುಖ ನಿದ್ರೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಉಡುಗೊರೆ ನೀಡಿ
ಉಡುಗೊರೆ ನೀಡಲು ಯಾವುದೇ ಹಬ್ಬಗಳು ಬರಬೇಕೆಂದು ಕಾಯಬೇಡಿ. ನೀವು ಆತನಿಗೆ ಉಡುಗೊರೆ ಕೊಟ್ಟ ಸಪ್ರೈಸ್ ನೀಡಬೇಕೆಂದಿದ್ದರೆ ಖಂಡಿತವಾಗಿಯೂ ಇದರಿಂದ ನಿಮ್ಮ ಸಂಬಂಧ ಬಲಗೊಳ್ಳುವುದು.



Click it and Unblock the Notifications

