Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ನೀವು ಹೀಗೆಲ್ಲಾ ಮಾಡಿದರೆ ಆತನಿಗೆ ಖಂಡಿತ ಆಗಿ ಬರಲ್ಲ
ಮದುವೆ ಬಳಿಕ ನಡೆಯುವಂತಹ ಮಿಲನ ಮಹೋತ್ಸವು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಯಾಕೆಂದರೆ ಇಲ್ಲಿ ಸಂಗಾತಿಗಳು ಒಂದಾಗುತ್ತಾರೆ. ಇದು ಕೇವಲ ದೈಹಿಕ ಮಿಲನವಲ್ಲದೆ ಮನಸ್ಸುಗಳ ಮಿಲನವು ಹೌದು. ಇಲ್ಲಿ ಕೇವಲ ದೈಹಿಕ ಆಕರ್ಷಣೆ ಮಾತ್ರ ಪ್ರಾಮುಖ್ಯತೆ ಪಡೆದಿರುವುದಿಲ್ಲ. ಆದರೆ ಪರಸ್ಪರರ ಇಷ್ಟವನ್ನು ಅರಿತುಕೊಳ್ಳಬೇಕು. ಇದರಿಂದ ಮಿಲನದ ವೇಳೆ ಸಂತೋಷವಾಗಿರಬಹುದು. ಮಹಿಳೆಯರು ಮಿಲನವನ್ನು ಬಯಸದಿರಲು ಇರುವ 9 ಕಾರಣಗಳು
ಪ್ರೀತಿಯೆನ್ನುವುದು ತುಂಬಾ ಪ್ರಾಮಾಣಿಕವಾಗಿ ಬರಬೇಕು. ಮಿಲನ ಮಹೋತ್ಸವದಲ್ಲಿ ತೊಡಗಿಕೊಂಡಿರುವಾಗ ಬೇರೆ ಯಾವುದೇ ವಿಷಯವನ್ನು ತಲೆಗೆ ಹಚ್ಚಿಕೊಳ್ಳದೆ ರಮಿಸುತ್ತಿರಬೇಕು. ನೀವು ಇದನ್ನು ತುಂಬಾ ಹಗುರವಾಗಿ ಅಥವಾ ಬೇಜವಾಬ್ದಾರಿಯಿಂದ ತೆಗೆದುಕೊಂಡರೆ ಆಗ ಸಂಗಾತಿಗೆ ಕೋಪ ನೆತ್ತಿಗೇರಬಹುದು. ಮಹಿಳೆಯರು ಹಾಸಿಗೆಯಲ್ಲಿ ಮಾಡುವಂತಹ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಓದಿ, ತಿದ್ದಿಕೊಂಡು ಸಂತೋಷವಾಗಿರಿ.

ವಾಸ್ತವ #1
ಹಾಸಿಗೆಯಲ್ಲಿ ಪ್ರತಿಯೊಂದು ಕಠಿಣ ಕೆಲಸವನ್ನು ಪುರುಷನೇ ಮಾಡಬೇಕೆಂದು ಮಹಿಳೆ ಬಯಸಿದರೆ ಆಗ ಪುರುಷರಿಗೆ ಕಿರಿಕಿರಿಯಾಗುವುದು. ನೀವು ಕೇವಲ ಹಾಸಿಗೆ ಮೇಲೆ ಬಿದ್ದುಕೊಂಡು ಆತನ ನಡೆಗಳನ್ನು ಆನಂದಿಸುತ್ತಾ, ಬೇರೇನೂ ಮಾಡದೆ ಇದ್ದರೆ ಆತನಿಗೆ ಇದು ಇಷ್ಟವಾಗಲ್ಲ. ಹಾಸಿಗೆಯಲ್ಲಿ ಮಹಿಳೆಯರು ಕೂಡ ಸಮಾನವಾಗಿ ಪಾಲ್ಗೊಳ್ಳಬೇಕು ಎಂದು ಪುರುಷರು ಬಯಸುತ್ತಾರೆ.

ವಾಸ್ತವ #2
ನೀವು ಆಸಕ್ತಿಯಿಲ್ಲದೆ ಯಾವುದನ್ನು ಮಾಡುವುದು ಪುರುಷರಿಗೆ ಇಷ್ಟವಾಗಲ್ಲ. ಆತ ಏನಾದರೂ ಹೇಳಿದರೆ ನೀವು ತುಂಬಾ ನಿರಾಸಕ್ತಿಯಿಂದ ಮುಖ ಕೆಂಪಗೆ ಮಾಡಿಕೊಂಡು ಮಾಡಿದರೆ ಪುರುಷರಿಗೆ ಆಸಕ್ತಿ ಬರುವುದಿಲ್ಲ. ನೀವು ಒಳ್ಳೆಯ ಮೂಡ್ ನಲ್ಲಿ ಇರುವಾಗ ಕೋಣೆಯನ್ನು ಪ್ರವೇಶಿಸಿ.

ವಾಸ್ತವ #3
ಹಾಸಿಗೆಯಲ್ಲಿ ನೀವು ಗೋಚರವಿಲ್ಲದಂತೆ ಇರುವುದು ಆತನಿಗೆ ಕಿರಿಕಿರಿ ಅನಿಸಬಹುದು. ಆತ ನಿಮ್ಮ ದೇಹವನ್ನು ತುಂಬಾ ಪ್ರೀತಿಯಿಂದ ಸವರುತ್ತಿರುವಾಗ ನಿಮ್ಮಿಂದಲೂ ಅದನ್ನೇ ಬಯಸುತ್ತಾನೆ. ಆತನ ಸೂಕ್ಷ್ಮ ಜಾಗಕ್ಕೆ ನೀವು ಕಚ್ಚಿದರೆ ಅಥವಾ ಯಾವುದೋ ದ್ವೇಷವಿದೆಯೆಂದು ನೀವು ಆತನ ಮೈಮೇಲೆ ಉಗುರಿನ ಗುರುತುಗಳನ್ನು ಮಾಡಿದರೆ ಅದನ್ನು ಆತ ಇಷ್ಟಪಡಲ್ಲ.

ವಾಸ್ತವ #4
ಆತನೊಂದಿಗೆ ನಗ್ನವಾಗಲು ನಿಮಗೆ ಇಷ್ಟವಾಗುತ್ತಿಲ್ಲವೆಂದಾದರೆ ನಾಚಿಕೆಯನ್ನು ಬದಿಗೊಟ್ಟುಕೊಂಡು ಧನಾತ್ಮಕವಾದ ಮನೋಭಾವವನ್ನು ಬೆಳೆಸಿಕೊಳ್ಳಿ. ಆತ ನಿಮಗೆ ಹತ್ತಿರವಾಗುತ್ತಿರುವಾಗ ದೀಪ ಹಾರಿಸಲು ಹೇಳಬೇಡಿ. ಇದು ನಿಮ್ಮ ಅಸುರಕ್ಷತೆಯನ್ನು ಪ್ರತಿಪಾದಿಸುತ್ತದೆ ಮತ್ತು ಪದೇ ಪದೇ ಹೀಗೆ ಹೇಳುವುದರಿಂದ ಆತನಿಗೆ ಕಿರಿಕಿರಿಯಾಗಬಹುದು.

ವಾಸ್ತವ #5
ಪುರುಷರನ್ನು ಕಿರಿಕಿರಿ ಮಾಡುವ ಮತ್ತೊಂದು ವಿಷಯವೆಂದರೆ ಆತ ನಿಮ್ಮನ್ನು ರಮಿಸುತ್ತಾ
ಇರುವಾಗ ನೀವು ಹೊಟ್ಟೆಯ ಬೊಜ್ಜು, ಕಳೆಗುಂದುತ್ತಾ ಇರುವ ಚರ್ಮ ಮತ್ತು ಇತರ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಾ ಇದ್ದರೆ ಆತನಿಗೆ ಆಸಕ್ತಿ ಕಳೆದುಹೋಗುತ್ತದೆ.

ವಾಸ್ತವ #6
ಆತ ಇನ್ನೂ ನಿಮನ್ನು ಚುಂಚಿಸಲು ಆರಂಭಿಸಿದಷ್ಟೇ. ಆಗಲೇ ನೀವು ಬೇಗ ಮುಗಿಸಿ ಬೆಳಿಗ್ಗೆ ಬೇಗ
ಏಳಲು ಇದೆ ಎಂದು ಹೇಳಿದರೆ ಆಗ ಆತನಿಗೆ ಕಿರಿಕಿರಿಯಾಗುವುದು. ಇಂತಹ ವಿಷಯಗಳು ಆತನ ಮೂಡ್ ಕೆಡಿಸಬಹುದು. ಆತ ನಿಮಗೆ ಸುಖ ನೀಡುವತ್ತ ಗಮನಹರಿಸುತ್ತಾ ಇರುವಾಗ ನೀವು ಬದಿ ಮನೆಯವರು ತಂದಿರುವ ಹೊಸ ವಾಷಿಂಗ್ ಮೆಷಿನ್ ಬಗ್ಗೆ ಮಾತನಾಡಿದರೆ ಏನಾಗಬಹುದು ನೀವೇ ಯೋಚಿಸಿ.

ವಾಸ್ತವ #7
ಆತ ನಿಮ್ಮನ್ನು ತುಂಬಾ ಪ್ರೀತಿಸುತ್ತಾ ಇರುವಾಗ ನೀವು ಮೇಲೆ ನೋಡುತ್ತಾ ಏನೋ ಆಲೋಚನೆಯಲ್ಲಿ ಇರುವುದು ಆತನ ಆಸಕ್ತಿ ಕುಂದಿಸುತ್ತದೆ. ಆತನಿಗೆ ನಿಮ್ಮ ಸಂಪೂರ್ಣ ಸಹಕಾರ ಬೇಕಾಗಿದೆ. ನೀವು ಬೇರೆ ಲೋಕದಲ್ಲಿದ್ದರೆ ಈ ವಿಷಯದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಭಾವಿಸುತ್ತಾನೆ.



Click it and Unblock the Notifications