Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದುವೆ ವಿಷಯದಲ್ಲಿ ಮಹಿಳೆಯರ ಡಿಮ್ಯಾಂಡ್ ಸಿಕ್ಕಾ ಪಟ್ಟೆ ಇರುತ್ತೆ!
ಜೀವನ ಸಂಗಾತಿಯ ಆಯ್ಕೆಯಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಜಾಗೃತೆ ವಹಿಸುತ್ತಾರಂತೆ. ಇದು ನಿಜ ಎನ್ನುವುದು ಹಲವಾರು ಕಡೆ ಸಾಬೀತು ಕೂಡ ಆಗಿದೆ. ತನಗೆ ಆ ರೀತಿಯ ಹುಡುಗಿ ಬೇಕು, ಅವಳ ಸೌಂದರ್ಯ ಎಲ್ಲರನ್ನು ಮೀರಿಸುವಂತಿರಬೇಕು ಎಂದು ಪುರುಷರು ತಮ್ಮ ಬಾಳ ಸಂಗಾತಿ ಬಗ್ಗೆ ಯೋಚಿಸುತ್ತಾ ಇರುತ್ತಾರೆ. ಆದರೆ ಮಹಿಳೆಯರು ಕೇವಲ ದೇಹ ಸೌಂದರ್ಯ ಮಾತ್ರವಲ್ಲದೆ ಜೀವನದ ಉದ್ದಕ್ಕೂ ತನ್ನನ್ನು ನೋಡಿಕೊಳ್ಳಬೇಕೆಂದು ಬಯಸುತ್ತಾಳೆ.
ಸೌಂದರ್ಯದೊಂದಿಗೆ ಸಂಪತ್ತು ಪುರುಷನಲ್ಲಿದ್ದರೆ ಆಗ ಆತನನ್ನು ಜೀವನ ಸಂಗಾತಿಯಾಗಿಸಲು ಮಹಿಳೆಯರು ಮುಂದೆ ಬರುತ್ತಾರೆ. ಒಂದು ವೇಳೆ ನೀವು ಯಾವುದೇ ಪುರುಷನ ಜೊತೆ ಡೇಟಿಂಗ್ ಮಾಡುತ್ತಿದ್ದರೆ ಆತನ ಬಗ್ಗೆ ತಿಳಿದುಕೊಳ್ಳಲು ಒಂದು ಪಟ್ಟಿ ಮಾಡಿರಬಹುದು. ಅದಕ್ಕೆ ಸೇರ್ಪಡೆಯೆಂಬಂತೆ ಮತ್ತಷ್ಟನ್ನು ಇಲ್ಲಿ ತಿಳಿದುಕೊಳ್ಳಿ.

ಸೂಕ್ಷ್ಮತೆ
ಕೆಲವು ಪುರುಷರು ತುಂಬಾ ಅಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಇಂತಹ ಸ್ವಭಾವದವರು ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸೂಕ್ಷ್ಮತೆ ಇರುವ ವ್ಯಕ್ತಿ ಮಾತ್ರ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ. ಭಾವನೆಗಳನ್ನು ವ್ಯಕ್ತಪಡಿಸುವಾತ ಮತ್ತು ಅರ್ಥ ಮಾಡಿಕೊಳ್ಳುವವ ಮಹಿಳೆಯರಿಗೆ ಒಳ್ಳೆಯ ಸಂಗಾತಿಯಾಗಬಲ್ಲ.

ಆತ ಆಸಕ್ತಿದಾಯಕ ಪ್ರಶ್ನೆ ಕೇಳುತ್ತಿದ್ದಾನೆಯಾ?
ನಿಮ್ಮ ಬಗ್ಗೆ ಯಾವುದೇ ಹುಡುಗ ಆಸಕ್ತಿ ತೋರಿಸುತ್ತಿದ್ದಾನೆ ಮತ್ತು ಇತರರು ಕೇಳಲು ಹಿಂಜರಿಯುವಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ ಎಂದಾದರೆ ಆತ ನಿಮ್ಮ ಮನಸ್ಸನ್ನು ಅರಿತು ಭಾವನೆಗಳನ್ನು ತಿಳಿದುಕೊಳ್ಳಬಲ್ಲ. ನಿಮ್ಮ ಜೀವನದ ಭಾಗವಾಗಲು ಆತ ಇಂತಹ ಪ್ರಶ್ನೆ ಕೇಳುತ್ತಾನೆ.

ನಾಚುವಂತೆ ಮಾಡಿದ್ದಾನೆಯಾ?
ಮಹಿಳೆಯನ್ನು ನಾಚುವಂತೆ ಮಾಡುವ ಪುರುಷರು ದೀರ್ಘ ಕಾಲದವರೆಗೆ ತಮ್ಮ ಆಕರ್ಷಣೆಯನ್ನು ಹೊಂದಿರುತ್ತಾರೆ. ನಿಮ್ಮ ಮುಖ ಕೆಂಪಗೆ ಆಗುವಂತಹ ಪ್ರಶಂಸೆಯನ್ನು ಯಾವತ್ತಾದರೂ ಮಾಡಿದ್ದಾನೆಯಾ?

ತುಂಟ
ಪುರುಷರು ಸಂಪೂರ್ಣವಾಗಬೇಕಾದರೆ ಆತನಲ್ಲಿ ತುಂಟತನವೆನ್ನುವುದು ಇರಲೇಬೇಕು. ಮನಸ್ಸಿನಲ್ಲಿರುವ ಮಕ್ಕಳ ಸ್ವಭಾವವು ಹೊರಗೆ ಬಂದಾಗ ಮಾತ್ರ ಜೀವನದ ಕೆಲವೊಂದು ಸುಂದರ ಕ್ಷಣಗಳು ಮೂಡಿ ಬರುವುದು.

ಆಲಿಸುತ್ತಾನೆಯಾ?
ಹೆಚ್ಚಿನ ಪುರುಷರು ತಾವು ಮಾತನಾಡುವ ಕಡೆ ಗಮನಹರಿಸುತ್ತಾರೆ. ಆದರೆ ಆಲಿಸುವುದು ಕೂಡ ಆತನಿಗೆ ತಿಳಿದಿರಬೇಕು. ಯಾಕೆಂದರೆ ಮಹಿಳೆಯರು ಹೆಚ್ಚು ಆಲಿಸುವ ಪುರುಷರನ್ನು ಬಯಸುತ್ತಾರೆ.

ಆತ ನಗುತ್ತಾನೆಯಾ?
ನಗುವಿರುವ ಮುಖವು ಶಾಂತಿ ಮತ್ತು ಸಂತೋಷದಿಂದ ಇದೆಯೆಂದರ್ಥ. ಯಾವಾಗಲೂ ನಗುತ್ತಿರುವ ಪುರುಷ ಮಹಿಳೆಯರ ಶಾಂತಿಗೆ ಭಂಗ ಉಂಟು ಮಾಡಬಹುದು.



Click it and Unblock the Notifications
