For Quick Alerts
ALLOW NOTIFICATIONS  
For Daily Alerts

ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿ, ಆಕೆ ಖುಷಿ ಆಗಿ ಬಿಡುತ್ತಾಳೆ!

By Super
|

ಹೂವಿಗೂ ಮಹಿಳೆಯರ ಮನಸ್ಸಿಗೂ ಹೆಚ್ಚಿನ ಅಂತರವಿಲ್ಲ. ಹೂವು ಮಕರಂದವನ್ನು ನೀಡಿದರೆ ಮಹಿಳೆ ತನ್ನ ಒಳ್ಳೆಯ ಮನಸ್ಸಿನಿಂದ ಎಲ್ಲರ ಆರೈಕೆ ಹಾಗೂ ಲಾಲನೆಪಾಲನೆಯಲ್ಲಿ ತೊಡಗಿರುತ್ತಾಳೆ. ಮಹಿಳೆಯ ಮನಸ್ಸನ್ನು ತಿಳಿಯುವುದು ತುಂಬಾ ಕಷ್ಟ. ಆದರೆ ಆಕೆಯ ಮನಸ್ಸು ತುಂಬಾ ಮೃದು. ಇದನ್ನು ಅರಿತುಕೊಂಡರೆ ಮಹಿಳೆಯರೊಂದಿಗೆ ಚೆನ್ನಾಗಿರಬೇಕಾಗಿದೆ. ಒಮ್ಮೆ ಮಹಿಳೆಯ ಮನಸ್ಸಿಗೆ ನೋವಾದರೆ ಮತ್ತೆ ಅದನ್ನು ಸರಿಪಡಿಸುವುದು ತುಂಬಾ ಕಷ್ಟ.

ಹೂ ಬಾಡಿಹೋದರೆ ಮತ್ತೆ ಅದನ್ನು ಅರಳಿಸಿಲು ಸಾಧ್ಯವಿಲ್ಲ. ಅದೇ ಮಹಿಳೆಯ ಮನಸ್ಸಿಗೆ ನೋವಾದರೆ ಅದನ್ನು ಸರಿಪಡಿಸುವುದು ತುಂಬಾ ಕಷ್ಟ! ಮಹಿಳೆಯರಿಗೆ ನಾವು ಪ್ರೀತಿಸುತ್ತಿದ್ದೇವೆ ಮತ್ತು ಅವರ ಆರೈಕೆ ಮಾಡುತ್ತಿದ್ದೇವೆ ಎಂದು ತಿಳಿಸುವುದು ಕಷ್ಟ. ಆದರೆ ಇದನ್ನು ಅವರಿಗೆ ತಿಳಿಯುವಂತೆ ಮಾಡಲು ಈ ಲೇಖನದಲ್ಲಿ ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. ಇದರಿಂದ ಸಂಬಂಧಗಳು ಬಲಗೊಂಡು ನಿಮ್ಮ ಜೀವನ ಸುಖಮಯವಾಗುವುದು. ಸಂಬಂಧವನ್ನು ಉತ್ತಮಪಡಿಸಲು ಇಲ್ಲಿ ಕೆಲವೊಂದು ಸರಳ ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಗಳ ಬಗ್ಗೆ ತಿಳಿದುಕೊಳ್ಳಲು ಮುಂದಕ್ಕೆ ಓದುತ್ತಾ ಹೋಗಿ.

ಕೆಲವೊಂದು ಸಲಹೆಗಳ ಬಗ್ಗೆ ನೀವು ತಿಳಿದಿರಬಹುದು ಮತ್ತು ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ಳಲು ಇದನ್ನು ಬಳಸಿರಬಹುದು. ಸಮಯ ಕಳೆದಂತೆ ಇದನ್ನು ನೀವು ಮರೆತಿರಬಹುದು. ಇಂತಹ ಕೆಲವೊಂದು ಸಲಹೆಗಳನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ಪರೀಕ್ಷಿಸಿ. ಇದರಿಂದ ನಿಮ್ಮ ಪ್ರೀತಿಯ ಪತ್ನಿಯನ್ನು ಸಂತೋಷ ಹಾಗೂ ಹೃದಯಕ್ಕೆ ಹತ್ತಿರವಾಗಿಡಬಹುದು.

ಕಣ್ಣುಗಳನ್ನೇ ನೋಡಿ

ಕಣ್ಣುಗಳನ್ನೇ ನೋಡಿ

ನಿಮ್ಮೊಂದಿಗೆ ಆಕೆ ಮಾತನಾಡುತ್ತಿರುವಾಗ ಆಕೆಯ ಕಣ್ಣುಗಳನ್ನೇ ನೋಡಿ. ಆಕೆ ಬೇಸರದಲ್ಲಿದ್ದಾಗ ಆಕೆಯ ಕಣ್ಣುಗಳನ್ನು ನೋಡುತ್ತಾ ಕೈಗಳನ್ನು ಹಿಡಿಯಿರಿ. ಇದರಿಂದ ನೀವು ಆಕೆಗೆ ಹತ್ತಿರವಾಗಿದ್ದೀರಿ ಎಂದು ಅರ್ಥವಾಗುತ್ತದೆ.

ಆಕೆಗೋಸ್ಕರ ಕವನ ಬರೆಯಿರಿ!

ಆಕೆಗೋಸ್ಕರ ಕವನ ಬರೆಯಿರಿ!

ಆಕೆ ನಿರೀಕ್ಷೆಯಲ್ಲಿದ್ದಾಗ ಕೆಲವೊಂದು ಕವನಗಳನ್ನು ಬರೆದು ಆಕೆಯನ್ನು ಸಂತೋಷಪಡಿಸಿ. ಕೆಟ್ಟದಾಗಿದ್ದರೂ ಚಿಂತಿಲ್ಲ, ಆದರೆ ಆಕೆಯ ಬಗ್ಗೆ ಒಂದು ಸಣ್ಣ ಕವನ ಬರೆಯಿರಿ. ಇದನ್ನು ನೋಡಿ ಆಕೆ ನಗಬಹುದು ಮತ್ತು ಇದರ ಬಗ್ಗೆ ಆಕೆ ನಿಮ್ಮನ್ನು ತುಂಬಾ ಪ್ರಶಂಸಿಸಬಹುದು.

ತಿರುಗಾಡಲು ಹೋಗಿ

ತಿರುಗಾಡಲು ಹೋಗಿ

ಸಣ್ಣ ಸಣ್ಣ ವಿಷಯಗಳಿಂದ ಆಕೆಯ ಮನಸ್ಸನ್ನು ಸಂತೋಷಪಡಿಸುತ್ತಾ ಇದ್ದರೆ ಬೋರ್ ಆಗಬಹುದು. ಇದರಿಂದ ಯಾವಾಗಲೂ ಒಮ್ಮೆಯಾದರೂ ಕಿಸೆಗೆ ಕತ್ತರಿ ಹಾಕಿಸಿಕೊಳ್ಳಿ. ಆಕೆಯನ್ನು ಸ್ಪಾ ಅಥವಾ ಬೇರೆ ಸ್ಥಳಗಳಿಗೆ ತಿರುಗಾಡಲು ಕರೆದುಕೊಂಡು ಹೋಗಿ.

ಭಾವನೆಗಳನ್ನು ತಿಳಿಸಿ

ಭಾವನೆಗಳನ್ನು ತಿಳಿಸಿ

ನೀವು ಆಕೆಯನ್ನು ಪ್ರೀತಿಸುತ್ತಾ ಇದ್ದರೂ ಇದನ್ನು ತೋರಿಸಲು ತುಂಬಾ ನಾಚಿಕೆಯಾಗುತ್ತಿದೆಯಾ? ಹಾಗಾದರೆ ಆಕೆಯನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಹೇಳಿಬಿಡಿ. ಆಕೆಯೊಂದಿಗೆ ನಿಮ್ಮ ಭಾವನೆ ಹಾಗೂ ದುಃಖವನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮಿಬ್ಬರ ಸಂಬಂಧ ಬಲಗೊಳ್ಳುವುದು.

ನಿಜವಾದ ಆಕರ್ಷಣೆ ವ್ಯಕ್ತಪಡಿಸಿ

ನಿಜವಾದ ಆಕರ್ಷಣೆ ವ್ಯಕ್ತಪಡಿಸಿ

ನಿಮ್ಮ ನಿಜವಾದ ಆಕರ್ಷಣೆಯನ್ನು ತೋರಿಸಿಕೊಡಿ. ಇದರಿಂದ ಆಕೆಗೆ ತುಂಬಾ ವಿಶೇಷ ಹಾಗೂ ಪ್ರೀತಿಯ ಭಾವನೆ ಮೂಡುತ್ತದೆ. ಕದ್ದುಮುಚ್ಚಿ ಆಕೆಯ ಕತ್ತಿಗೆ ಸುಮ್ಮನೆ ಒಂದು ಮುತ್ತು ಅಥವಾ ಬೆನ್ನಿಗೆ ಕೈಬೆರಳಿನಿಂದ ಏನಾದರೂ ಮಾಡಿದರೆ ನಿಮ್ಮ ಪ್ರೀತಿ ಅರ್ಥವಾಗುತ್ತದೆ.

ಮಾಹಿತಿ ನೀಡಿ

ಮಾಹಿತಿ ನೀಡಿ

ಉದ್ಯೋಗದ ಕಾರಣದಿಂದ ನೀವು ಪತ್ನಿಯಿಂದ ದೂರವಿದ್ದರೆ ಆಗ ಆಕೆಗೆ ನಿಮ್ಮ ವಾಸದ ಬಗ್ಗೆ ಆಗಾಗ ಮಾಹಿತಿ ನೀಡುತ್ತಾ ಇರಿ. ಮಹಿಳೆಯರಲ್ಲಿ ತಾಯಿಯ ಗುಣ ಇರುವ ಕಾರಣ ನಿಮ್ಮ ಬಗ್ಗೆ ಅವರಿಗೆ ಕಾಳಜಿ ಇರುತ್ತದೆ. ಇದರಿಂದ ಆಗಾಗ ನೀವು ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿ.

ಸಲಹೆ ಪಡೆಯಿರಿ

ಸಲಹೆ ಪಡೆಯಿರಿ

ನಿಮ್ಮ ನಿರ್ಧಾರವನ್ನು ಟೀಕಿಸುತ್ತಾ ಇದ್ದರೆ ಅಥವಾ ಅದರ ಬಗ್ಗೆ ತಮಾಷೆ ಮಾಡುತ್ತಿದ್ದರೆ ಆಗ ಆಕೆಯ ಸಲಹೆ ಪಡೆಯಿರಿ. ಕೆಲವೊಂದು ವಿಷಯಗಳಲ್ಲಿ ಆಕೆಗೆ ಹೆಚ್ಚಿಗೆ ತಿಳಿದಿರಬಹುದು ಮತ್ತು ನಿಮಗೆ ಅದರಿಂದ ನೆರವಾಗಬಹುದು. ಆಕೆಯ ಸಲಹೆ ಪಡೆಯುವುದರಿಂದ ಆಕೆಯನ್ನು ನೀವು ಪ್ರೀತಿಸುತ್ತಾ ಇದ್ದೀರಿ ಮತ್ತು ಗೌರವಿಸುತ್ತಾ ಇದ್ದೀರಿ ಎನ್ನುವುದು ಆಕೆಗೆ ಅರ್ಥವಾಗುತ್ತದೆ.

English summary

How To Show A Woman That You Care

Being in love is something that needs a constant attention and care. You need to work on your relationship to make it better and stronger. The more you do this, the stronger the bond gets. Here, in this article, we've listed some of the tips on how you can show a woman that you love and care for her for life.
X
Desktop Bottom Promotion