Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫ್ಲರ್ಟಿಂಗ್ ವಿಷಯದಲ್ಲಿ ಹುಡುಗರು ಸಿಕ್ಕಾಪಟ್ಟೆ ಜಾಣರು!
ಕೆಲವೊಂದು ಮಹಿಳೆಯರಿಗೆ ಪುರುಷರೊಂದಿಗೆ ಫ್ಲರ್ಟಿಂಗ್ ಮಾಡುವುದೆಂದರೆ ತುಂಬಾನೇ ಖುಷಿ. ಇನ್ನು ಕೆಲವರು ಇದರಿಂದ ದೂರವಿರುತ್ತಾರೆ. ಯಾಕೆಂದರೆ ಮುಂದೆ ಇದರಿಂದ ಏನಾದರೂ ಅನಾಹುತವಾಗಬಹುದು ಎಂದು ಅವರಿಗೆ ತಿಳಿದಿರುತ್ತದೆ. ಮಹಿಳೆಯರಿಗೆ ಪುರುಷರು ಫ್ಲರ್ಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದಿದ್ದರೂ ಅವರು ಸುಮ್ಮನೆ ಇರುತ್ತಾರೆ. ಇನ್ನು ಕೆಲವರು ಇದನ್ನು ವಿರೋಧಿಸುತ್ತಾರೆ.
ಆದರೆ ನೀವು ಬಯಸುತ್ತಿರುವ ಪುರುಷ ನಿಮ್ಮೊಂದಿಗೆ ಫ್ಲರ್ಟಿಂಗ್ ಮಾಡಬೇಕೆಂದು ನೀವು ಬಯಸುತ್ತಿದ್ದರೆ ಆತ ಆಗಲೇ ನಿಮ್ಮೊಂದಿಗೆ ಫ್ಲರ್ಟಿಂಗ್ ಮಾಡುತ್ತಿರಬಹುದು. ಇದರ ಬಗ್ಗೆ ನಿಮಗೆ ಮಾತ್ರ ತಿಳಿದಿರುವುದಿಲ್ಲ. ಇಂತಹ ಕೆಲವೊಂದು ಉದಾಹರಣೆಗಳನ್ನು ನಿಮ್ಮ ಮುಂದಿಡಲಿದ್ದೇವೆ. ಇದನ್ನು ತಿಳಿದುಕೊಂಡು ಫ್ಲರ್ಟಿಂಗ್ ಮಾಡುತ್ತಿರುವ ಪುರುಷ ನಿಮಗೆ ಇಷ್ಟವಾದರೆ ಆತನೊಂದಿಗೆ ಮುಂದುವರಿಯಿರಿ. ಪ್ರೀತಿ ಕುರುಡು ನಿಜ, ಆದರೆ ಫ್ಲರ್ಟಿಂಗ್ ಕುರುಡಲ್ಲ!

ನಿನಗೆ ಈ ಡ್ರೆಸ್ ಸಕತ್ ಆಗಿ ಮ್ಯಾಚ್ ಆಗುತ್ತೆ!
ನಿಮ್ಮ ಹೊಸ ಡ್ರೆಸ್‌ಗೆ ಒಬ್ಬ ಹುಡುಗ ಪ್ರಶಂಸೆ ಮಾಡುತ್ತಿದ್ದಾನೆ ಎಂದರೆ ಅದು ಫ್ಲರ್ಟಿಂಗ್ ಎಂದರರ್ಥವಲ್ಲ, ಆದರೆ ಆತ ನಿಮ್ಮ ದೇಹದ ಏರಿಳಿತವನ್ನು ನೋಡಿ ಪ್ರಶಂಸೆ ಮಾಡಿದರೆ ಆತ ಫ್ಲರ್ಟಿಂಗ್ ಮಾಡುತ್ತಿದ್ದಾನೆ ಎಂದರ್ಥ. ನೀವು ಉಡುಗೆಯಲ್ಲಿ ಈ ರೀತಿ ಕಾಣಿಸಿಕೊಳ್ಳಲು ಯಾವ ರೀತಿಯ ಒಳಉಡುಪನ್ನು ಧರಿಸಿರಬಹುದು ಎನ್ನುವ ಬಗ್ಗೆ ಹುಡುಗರು ಕಲ್ಪನೆ ಮಾಡಿಕೊಳ್ಳುತ್ತಾರೆ. ಭಿನ್ನ ಉಡುಗೆಯಲ್ಲಿ ನಿಮ್ಮ ಉಬ್ಬುತಗ್ಗುಗಳು ವಿಭಿನ್ನವಾಗಿ ಕಾಣಿಸುವ ಕಾರಣದಿಂದಾಗಿ ಅವರು ಈ ಕಲ್ಪನೆ ಮಾಡಿಕೊಳ್ಳುತ್ತಾರೆ.
ನೀವು ಏದುಸಿರು ಬಿಡುವ ಸಮಯದಲ್ಲಿ....
ನೀವು ಓಡಿಕೊಂಡು ಕಚೇರಿಗೆ ಬಂದಾಗ ಅಥವಾ ಮೆಟ್ಟಿಲುಗಳನ್ನು ಏರಿಕೊಂಡು ಬಂದು ಆಯಾಸವಾದಾಗ ಏದುಸಿರು ಬಿಡುವಾಗ ಕೆಲವು ಪುರುಷರು ಅದನ್ನು ಬೆಡ್ ರೂಮ್‌ನ ಏದುಸಿರಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ನೀವು ಏದುಸಿರು ಬಿಡುತ್ತಾ ಇದ್ದರೆ ಅದಕ್ಕೆ ಕಾರಣನಾದ ಪುರುಷ ಕ್ಷಮೆ ಕೇಳಿದರೆ ಆತ ನಿಮ್ಮೊಂದಿಗೆ ಫ್ಲರ್ಟಿಂಗ್ ಮಾಡುತ್ತಿದ್ದಾನೆ ಎಂದರ್ಥ. ಚೆಲ್ಲಾಟವಾಡುವ ಹುಡುಗರ ಬುದ್ಧಿ ಹೇಗಿರುತ್ತೇ ನೋಡಿ...
ನಿಮ್ಮ ಕೆಲಸವನ್ನು ಅತಿಯಾಗಿ ಹೊಗಳಿದಾಗ
ನೀವು ಯಾವ ರೀತಿಯ ಕೆಲಸ ಮಾಡಿದ್ದೀರಿ ಎಂದು ಅರ್ಥ ಮಾಡಿಕೊಳ್ಳುವ ಮೊದಲೇ ಆತ ನಿಮ್ಮ ಕೆಲಸವನ್ನು ಹೊಗಳುತ್ತಿದ್ದಾನೆ ಎಂದರೆ ಆತ ನಿಮ್ಮೊಂದಿಗೆ ಫ್ಲರ್ಟಿಂಗ್ ಮಾಡುತ್ತಿದ್ದಾನೆ ಎಂದರ್ಥ. ಆತ ನಿಜವಾಗಿಯೂ ನಿಮ್ಮ ಸೌಂದರ್ಯವನ್ನು ಹೊಗಳುತ್ತಿದ್ದಾನೆ.
ನಿದ್ದೆಗೆಡಿಸಿದ್ದೀರಿ ಎಂದು ಹೇಳುತ್ತಿದ್ದರೆ....
ಆತ ನಿಮ್ಮ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದಾನೆ ಮತ್ತು ನಿಮ್ಮಿಂದ ನಿದ್ದೆಗೆಟ್ಟಿದ್ದಾನೆ ಎಂದು ಹೇಳುತ್ತಲಿದ್ದರೆ ಆತ ನಿಮ್ಮೊಂದಿಗೆ ಫ್ಲರ್ಟಿಂಗ್ ಮಾಡುತ್ತಿದ್ದಾನೆ ಎಂದು ಹೇಳಬಹುದು. ಮಹಿಳೆಯನ್ನು ತುಂಬಾ ಬಯಸುತ್ತಿದ್ದಾರೆ ಮಾತ್ರ ಒಬ್ಬ ಪುರುಷ ನಿದ್ದೆಗೆಡಲು ಕಾರಣವಾಗುತ್ತದೆ.



Click it and Unblock the Notifications



