ಪ್ರೀತಿ ಮಾಯೆಯೋ, ಮಾಯೆಯೇ ಪ್ರೀತಿಯೋ..?

By Deepu

ಪ್ರೀತಿ ಮಾಯೆಯೋ, ಮಾಯೆಯೇ ಪ್ರೀತಿಯೋ ಯಾರಿಗೆ ಗೊತ್ತು ಎಂಬುದು ಕವಿವಾಣಿ. ಆದರೆ ಜೀವನದ ಅದ್ಭುತವವನ್ನು ನೋಡಬೇಕು ಎಂದರೆ ಪ್ರೀತಿಯನ್ನು ಮಾಡಬೇಕು ಎಂದು ಹೇಳುತ್ತಾರೆ ತತ್ವಜ್ಞಾನಿಗಳು. ಪ್ರೀತಿ ಎಂಬುದು ಮೋಸ ಎನ್ನುತ್ತಾರೆ ಭಗ್ನ ಪ್ರೇಮಿಗಳು. ಪ್ರೀತಿಸದೆ ಇರುವವನಿಗೆ ಜೀವನದ ಸಂತೋಷವೇ ಗೊತ್ತಾಗುವುದಿಲ್ಲ. ಅವನು ಜೀವನದ ಮಧುರ ಘಳಿಗೆಗಳಿಂದ ವಂಚಿತನಾಗುತ್ತಾನೆ ಎಂದು ಹೇಳುತ್ತಾರೆ ವಾಸ್ತವವಾದಿಗಳು ಮತ್ತು ಪ್ರೇಮಿಗಳು. 20ರ ವಯಸ್ಸಿನಲ್ಲಿ ಮದುವೆ, ಮಾಡಿಕೊಂಡರೆ ಸಕತ್ ಲಾಭ!

ಆದರೆ ನಾವು ಹೇಳಲು ಹೊರಟಿರುವುದು ಪ್ರೀತಿಯಿಂದ ನಿಮ್ಮ ಆರೋಗ್ಯದ ಮೇಲೆ ಉಂಟಾಗುವ ಆರೋಗ್ಯಕಾರಿ ಪ್ರಯೋಜನಗಳ ಕುರಿತು. ನಂಬಿದರೆ ನಂಬಿ ಬಿಟ್ಟರೆ ಬಿಡಿ ಪ್ರೀತಿಯಿಂದ ಹಲವಾರು ಪ್ರಯೋಜನಗಳು ಲಭಿಸುತ್ತವೆಯಂತೆ, ಜೊತೆಗೆ ಪ್ರೀತಿಯು ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಿಸುವಷ್ಟು ಶಕ್ತಿಯನ್ನು ಹೊಂದಿದೆಯಂತೆ, ಬನ್ನಿ ಪ್ರೀತಿಯ ಕುರಿತಾದ ಕೆಲವೊಂದು ಇಂತಹ ಅಚ್ಚರಿಯ ಸಂಗತಿಗಳನ್ನು ತಿಳಿದುಕೊಳ್ಳಲು ಮುಂದೆ ಓದಿ...

ಪ್ರೀತಿಯಲ್ಲಿತೂ ವಿವಿಧ ಹಂತಗಳು ಇವೆಯಂತೆ..

ಪ್ರೀತಿಯಲ್ಲಿತೂ ವಿವಿಧ ಹಂತಗಳು ಇವೆಯಂತೆ..

ಅಧ್ಯಯನಗಳ ಪ್ರಕಾರ ಪ್ರೀತಿಯಲ್ಲಿ ಐದು ಹಂತಗಳು ಇವೆಯಂತೆ. ಇವು ನೀವು ಸಂಬಂಧದಲ್ಲಿದ್ದೀರೋ, ಅಥವಾ ಅರ್ಧ ದಾರಿಯಲ್ಲಿದ್ದೀರೋ ಎಂದು ತಿಳಿಸುತ್ತದೆಯಂತೆ. ಆ ಐದು ಹಂತಗಳು ಯಾವುವೆಂದರೆ: ಚಿಟ್ಟೆಗಳು, ಬೆಳವಣಿಗೆ, ಸಮೀಕರಣ, ಪ್ರಾಮಾಣಿಕತೆ ಮತ್ತು ಸ್ಥಿರತೆ ಇವೇ ಆ ಐದು ಹಂತಗಳು.

ಮೊದಲ ಹಂತ

ಮೊದಲ ಹಂತ

ಮೊದಲ ಹಂತದ ಚಿಟ್ಟೆಗಳು ಚಿಟ್ಟೆಯಂತೆಯೇ ನಿಮ್ಮನ್ನು ತೇಲಾಡಿಸುತ್ತದೆ. ಇಲ್ಲಿ ನಿಮ್ಮ ಸಂಗಾತಿಯ ಮೇಲೆ ನಿಮಗೆ ವಿಪರೀತ ಇಷ್ಟವಾಗುತ್ತದೆ. ಕಾಮಾಸಕ್ತಿಯ ಕಡೆಗೂ ಮನಸ್ಸು ವಾಲೂವುದು ಇದೇ ಸಮಯದಲ್ಲಿ, ಅಲ್ಲದೆ ಪ್ರೀತಿ, ಪ್ರೇಮದ ಗುಂಗಿನಲ್ಲಿ, ಜನರು ತಮ್ಮ ಊಟ ತಿಂಡಿಯನ್ನೇ ಮರೆಯುತ್ತಾರೆಂತೆ...!

ಎರಡನೆಯ ಹಂತ

ಎರಡನೆಯ ಹಂತ

ಎರಡನೆಯ ಹಂತದಲ್ಲಿ ಪ್ರೀತಿಯು ಬೆಳವಣಿಗೆಯಾಗುತ್ತದೆ. ಈ ಹಂತದಲ್ಲಿ ದೇಹದಲ್ಲಿ ನ್ಯೂರೋಕೆಮಿಕಲ್‌ಗಳು ಬಿಡುಗಡೆಯಾಗುತ್ತವೆ. ಇದು ನಿಮ್ಮ ಮನಸ್ಸಿನಲ್ಲಿ ಒಂದು ಬಗೆಯ 'ಸಂತೋಷಕರವಾದ ಉದ್ವೇಗ'ವನ್ನು ಹುಟ್ಟು ಹಾಕುತ್ತದೆ.

ಮೂರನೆಯ ಹಂತದಲ್ಲಿ

ಮೂರನೆಯ ಹಂತದಲ್ಲಿ

ಇಲ್ಲಿ ಸಂಬಂಧವು ಸರಿಯೋ ಅಥವಾ ತಪ್ಪೊ ಎಂದು ತಿಳಿದುಕೊಳ್ಳುವ ಹಂತವಾಗಿರುತ್ತದೆ. ಕೊನೆಯ ಹಂತವು ನಿಮ್ಮ ಪ್ರೀತಿಯಲ್ಲಿ ಎಂದಿಗು ಮುಗಿಯದ, ಅಳಿಯದ ಒಂದು ಬದ್ಧತೆಯನ್ನು ನೀಡುತ್ತದೆ- ಅದೇ ಸ್ಥಿರವಾದ ಶಾಶ್ವತ ಪ್ರೀತಿಯಾಗಿರುತ್ತದೆ.

ಪ್ರೀತಿ, ಪ್ರೇಮದ ಅಚ್ಚರಿಯ ಸಂಗತಿಗಳು

ಪ್ರೀತಿ, ಪ್ರೇಮದ ಅಚ್ಚರಿಯ ಸಂಗತಿಗಳು

ಯಾರು ಪ್ರೀತಿಯಲ್ಲಿ ಇರುತ್ತಾರೋ, ಅವರು ಇತರೆ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ಏಕಾಗ್ರತೆಯ ಕೊರತೆ ಇರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಸಾಬೀತು ಮಾಡಿದೆ. ಈ ಅಧ್ಯಯನವು ಮೋಟಿವೇಶನ್ ಅಂಡ್ ಎಮೋಶನ್ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಒಬ್ಬ ವ್ಯಕ್ತಿಯು ಎಷ್ಟು ಗಾಢವಾಗಿ ಪ್ರೀತಿಸುತ್ತಾನೋ, ಅವನು ತನ್ನ ಕೆಲಸ ಕಾರ್ಯಗಳಿಗೆ ಕಡಿಮೆ ಗಮನ ನೀಡುತ್ತಾನೆ ಎಂದು ತಿಳಿದು ಬಂದಿದೆ. ಪ್ರೀತಿಯಲ್ಲಿ ಬಿದ್ದರೆ ನಿಮ್ಮನ್ನು ನೀವು ಮರೆತು ಹೋಗುತ್ತೀರಾ ಎಂಬುದು ಇದನ್ನೇ...

ತೂಕ ಹೆಚ್ಚು ಮಾಡುತ್ತದೆಯಂತೆ...!

ತೂಕ ಹೆಚ್ಚು ಮಾಡುತ್ತದೆಯಂತೆ...!

ಯುಕೆಮೆಡಿಕ್ಸ್.ಕಾಂ ನಡೆಸಿದ ಅಧ್ಯಯನದಲ್ಲಿ ಹೆಂಗಸರು ಪ್ರೀತಿಯಲ್ಲಿ ಬಿದ್ದಾಗ ತೂಕ ಹೆಚ್ಚಿಸಿಕೊಂಡಿರುವುದು ಕಂಡು ಬಂದಿದೆಯಂತೆ. ಪ್ರೀತಿಯು ಮನುಷ್ಯನ ಭಾವನೆಗಳನ್ನು ಮತ್ತು ಸಂತೋಷವನ್ನಷ್ಟೇ ಅಲ್ಲದೆ ದೇಹದ ತೂಕವನ್ನು ಸಹ ಹೆಚ್ಚಿಸುತ್ತದೆ ಎಂಬುದು ಈ ಅಧ್ಯಯನದ ಫಲಿತಾಂಶ. ಸಾಮಾನ್ಯವಾಗಿ ಪ್ರೀತಿಯಲ್ಲಿ ಬಿದ್ದ ಮಹಿಳೆಯರು ಮೊದಲ ವರ್ಷದಲ್ಲಿ 3.2 ಕೆ.ಜಿ ಅಧಿಕ ತೂಕವನ್ನು ಪಡೆಯುತ್ತಾರಂತೆ.

ಮಧುರ ಸಂಗೀತ

ಮಧುರ ಸಂಗೀತ

ಜಪಾನಿನಲ್ಲಿ ನಡೆದ ಅಧ್ಯಯನದ ಪ್ರಕಾರ ಮಧುರ ಸಂಗೀತವು ನೀವು ಪ್ರೀತಿಯಲ್ಲಿ ಬೀಳಲು ಸಹಾಯ ಮಾಡುತ್ತದೆಯಂತೆ. ಲಘು ಸಂಗೀತವು ನಿಮ್ಮಲ್ಲಿ ಬದಲಾವಣೆಗಳನ್ನು ತರುತ್ತದೆಯಂತೆ. ಇದು ನಿಮ್ಮಿಬ್ಬರ ನಡುವಿನ ಸಂವಹನವು ಉತ್ತಮ ರೀತಿಯಲ್ಲಿ ಸಾಗಲು ನೆರವಾಗುತ್ತದೆಯಂತೆ. ಒಯೊಮ ಗಕ್ವಿನ್ ವಿಶ್ವವಿದ್ಯಾನಿಲಯದ ಅಧ್ಯಯನಕಾರರ ಪ್ರಕಾರ ಪ್ರೀತಿಯಲ್ಲಿ ಇರುವವರು ತಮ್ಮ ಇಷ್ಟದ ಸಂಗೀತವನ್ನು ಕೇಳುವಾಗ ಪ್ರೇಮಿಗಳ ಸಂವಹನ ಮತ್ತಷ್ಟು ಮಧುರವಾಗಿರುತ್ತದೆಯಂತೆ. ಹಾಗಾಗಿ ಪ್ರೀತಿಯನ್ನು ತಿಳಿಸುವಾಗ ನಿಮ್ಮಿಷ್ಟದ ಸಂಗೀತವನ್ನು ಕೇಳುವ ವ್ಯವಸ್ಥೆ ಮಾಡಿಕೊಳ್ಳಿ...!

ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಪ್ರೀತಿಯ ಅಧ್ಯಾಯನ

ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಪ್ರೀತಿಯ ಅಧ್ಯಾಯನ

ಚಿಕಾಗೊ ವಿವಿಯ ಅಧ್ಯಯನಕಾರರು ಒಬ್ಬರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆತ ನಿಮ್ಮನ್ನು ಇಷ್ಟಪಡುತ್ತಿದ್ದಾನೆಯೇ ಇಲ್ಲವೇ ಎಂದು ತಿಳಿಯಬಹುದು ಎಂದು ತಿಳಿಸಿದ್ದಾರೆ. ಇವರು ಕೆಲವೊಂದು ಕಣ್ಣಿನ ನಮೂನೆಗಳನ್ನು ಇರಿಸಿದ್ದಾರೆ. ಇದರಲ್ಲಿ ನಿಮ್ಮನ್ನು ನೋಡಿದಾಗ ಅವರ ಕಣ್ಣು ಹೇಗೆ ಬದಲಾಗುತ್ತದೆ ಎಂಬುದನ್ನು ಆಧರಿಸಿ, ಅವರಲ್ಲಿರುವ ಪ್ರೀತಿಯನ್ನು ತಿಳಿಯಬಹುದು ಎಂದು ಹೇಳಿದ್ದಾರೆ. ತಮ್ಮ ನಿಜವಾದ ಸಂಗಾತಿಯ ಕಣ್ಣಿನ ನಮೂನೆ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಮೂಲಕ ಸಂಗಾತಿಯನ್ನು ಆರಿಸಿಕೊಳ್ಳಬಹುದು ಎಂದು ಈ ಅಧ್ಯಯನ ಖಚೀತ ಪಡಿಸಿದೆ.

ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಪ್ರೀತಿಯ ಅಧ್ಯಾಯನ

ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಪ್ರೀತಿಯ ಅಧ್ಯಾಯನ

ಒಬ್ಬ ವ್ಯಕ್ತಿಯು ಕೇವಲ ಕಾಮಾಸಕ್ತಿಯಿಂದ ನೋಡುತ್ತಾನೆಯೇ ಇಲ್ಲವೇ ನಿಜವಾದ ಪ್ರೀತಿ ಆ ಕಣ್ಣುಗಳಲ್ಲಿ ಇದೆಯೇ ಎಂದು ವ್ಯತ್ಯಾಸ ತಿಳಿಯಬಹುದಾದ ವಿಧಾನ ಇದಾಗಿದೆ. ಇದರ ಸ್ವಯಂಚಾಲಿತ ಫಲಿತಾಂಶವು ಅರ್ಧ ಸೆಕೆಂಡಿನಲ್ಲಿ ಲಭ್ಯವಾಗುತ್ತದೆ, ಇದಕ್ಕಾಗಿ ಹಲವಾರು ಭಿನ್ನ ನಮೂನೆಯ ಕಣ್ಣಿನ ವಿನ್ಯಾಸಗಳನ್ನು ನಿಮಗೆ ತೋರಿಸಲಾಗುತ್ತದೆ. ಸುಮ್ಮನೆ ಆ ವ್ಯಕ್ತಿ ನಿಮ್ಮನ್ನು ನೋಡುವ ಬಗೆಯನ್ನು ಗ್ರಹಿಸಿ ಅವನಲ್ಲಿ ಪ್ರೀತಿ ಇದೆಯೇ ಇಲ್ಲವೇ? ಎಂದು ತಿಳಿದುಕೊಳ್ಳಬಹುದು.

Story first published: Wednesday, January 6, 2016, 17:02 [IST]
X
Desktop Bottom Promotion