Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಪ್ರೀತಿಯ ಅಪ್ಪುಗೆಯಿಂದ ಬಂಧಿಸಿ, ನಲ್ಲನನ್ನು ಮುದ್ದಾಡಿ....
ಪ್ರೀತಿ, ನಲುಮೆ, ವಾತ್ಸಲ್ಯ, ಬದ್ಧತೆ ಮೊದಲಾದವುಗಳನ್ನು ತಮ್ಮ ಸಂಗಾತಿಗೆ ಅಥವಾ ಹೃದಯಕ್ಕೆ ಅತಿ ಹತ್ತಿರಾದವರಿಗೆ ತಿಳಿಸುವ ಅತ್ಯುತ್ತಮ ವಿಧಾನವೆಂದರೆ ಅಪ್ಪುಗೆ. ದಂಪತಿಗಳಲ್ಲಿ ಅಪ್ಪುಗೆ ಇಬ್ಬರ ನಡುವೆ ಇರುವ ಎಂತಹ ವಿರಸವನ್ನಾದರೂ ಕ್ಷಣಮಾತ್ರದಲ್ಲಿ ದೂರಮಾಡಬಲ್ಲುದು. ಅಪ್ಪುಗೆಯ ಮೂಲಕ ಪ್ರೀತಿಪಾತ್ರರ ನಡುವಣ ಸಂಬಂಧ ಇನ್ನಷ್ಟು ಗಾಢವಾಗಬಲ್ಲುದು.
ಇಂದಿನ ದಿನಗಳಲ್ಲಿ ನಮ್ಮ ಜೀವನವೇ ಯಾಂತ್ರಿಕವಾಗಿರುವಾಗ ದಿನದ ಕೆಲಸಗಳನ್ನು ಮುಗಿಸಿ ಸುಸ್ತಾಗಿ ಹೈರಾಣಾಗಿ ಮನೆಗೆ ಬಂದ ಬಳಿಕ ಬಳಲಿದ ಮನಕ್ಕೆ ಮುದ ನೀಡಲು ಸಂಗಾತಿಯ ಒಂದು ಆತ್ಮೀಯ ಅಪ್ಪುಗೆಯೇ ಸಾಕು. ಅದರಲ್ಲೂ ಉದ್ಯೋಗದಿಂದ ಹಿಂದಿರುಗಿದ ಪುರುಷರಿಗೆ ಮನೆಗೆ ಬಂದ ಬಳಿಕ ತಮ್ಮ ಮನದನ್ನೆಯನ್ನು ಹಿತವಾಗಿ ಅಪ್ಪಿಕೊಳ್ಳುವುದೆಂದರೆ ತುಂಬಾ ಇಷ್ಟವಾದ ಕೆಲಸ. ಇದಕ್ಕೆ ಇವರ ಮನದನ್ನೆಯೂ ಅಷ್ಟೇ ಪ್ರೀತಿಯಿಂದ ಅಪ್ಪಿಕೊಂಡರೆ ಜೀವನವೇ ಸುಂದರ, ಸುಖಮಯವಾಗುತ್ತದೆ. ಅವಳನ್ನೊಮ್ಮೆ ಅಪ್ಪಿಕೊಳ್ಳಿ, ಆಕೆ ಅದೇ ನಿರೀಕ್ಷೆಯಲ್ಲಿರುತ್ತಾಳೆ!
ಇದರಿಂದ ಪುರುಷರಿಗೆ ತಾವು ಪರಿಪೂರ್ಣರಾದ, ಇಡಿಯ ದಿನ ಕೆಲಸ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತ ಸಂತೃಪ್ತಿಯೂ ದೊರಕುತ್ತದೆ. ಆದರೆ ಹೆಚ್ಚಿನವರಿಗೆ ತಮ್ಮ ಪ್ರಿಯತಮನನ್ನು ಹೇಗೆ ಅಪ್ಪಿಕೊಳ್ಳಬೇಕೆಂದೇ ಗೊತ್ತಿಲ್ಲ. ಆದರೆ ಸರಿಯಾದ ಕ್ರಮವನ್ನು ಅನುಸರಿಸಿದರೆ ನಿಮ್ಮ ಎತ್ತರ ಮತ್ತು ನಿಮ್ಮ ಸಂಗಾತಿಯ ಎತ್ತರವೆಷ್ಟೇ ಇರಲಿ, ಸರಿಯಾದ ಕ್ರಮದ ಮೂಲಕ ಅಪ್ಪುಗೆಯ ಮುದವನ್ನು ಗರಿಷ್ಠ ಮಟ್ಟದಲ್ಲಿ ಪಡೆಯಬಹುದು. ಈ ಕೊರತೆಯನ್ನು ನೀಗಿಸಲು ಬೋಲ್ಡ್ ಸ್ಕೈ ತಂಡ ಹಲವು ಅಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದು ಕೆಳಗಿನ ಮಾಹಿತಿಯ ಮೂಲಕ ಪ್ರಸ್ತುತಪಡಿಸಲು ಹೆಮ್ಮೆ ಪಡುತ್ತಿದೆ.

ಆತ ನಿಮ್ಮ ಭುಜಗಳನ್ನು ತಲುಪಲು ಬಿಡಿ
ನಿಮ್ಮ ಪ್ರಿಯತಮ ನಿಮ್ಮನ್ನು ಅಪ್ಪಿಕೊಳ್ಳಲು ಮುಂದಾದಾಗ ಹಿಂದಡಿಯಿಡಬೇಡಿ. ಆತನಿಗೆ ನಿಮ್ಮನ್ನು ಸ್ಪರ್ಶಿಸಲು ಬಿಡಿ. ನಿಮ್ಮ ಹಣೆ ಆತನ ಎದೆಯ ಮೇಲೆ ಬರುವಷ್ಟು ಹತ್ತಿರ ಸಾಗಿ ಆತನ ಅಪ್ಪುಗೆಯನ್ನು ಹೃದಯದಿಂದ ಸ್ವೀಕರಿಸಿ. ಆತನ ಕೈಗಳನ್ನು ಹಿಡಿದು ನೀವೂ ಆತನನ್ನು ನಿಮ್ಮೆಡೆಗೆ ಹಿತವಾಗಿ ಎಳೆದುಕೊಳ್ಳಿ. ಇದರಿಂದ ಆತ ನಿಮ್ಮ ಬಗ್ಗೆ ಅತ್ಯಂತ ಆಪ್ತವಾದ ಭಾವನೆಯನ್ನು ಹೊಂದಲು ಸಾಧ್ಯ ಹಾಗೂ ಆತನನ್ನು ವಿಶೇಷ ರೀತಿಯಂದ ಸ್ವಾಗತಿಸಿದ ಸಂತೃಪ್ತಿಯನ್ನೂ ಪಡೆಯುತ್ತಾನೆ. ಇದು ಅತ್ಯಂತ ಸಾಮಾನ್ಯವಾದ ವಿಧಾನವಾಗಿದೆ.
ಹೊಟ್ಟೆಗೆ ಕಚಗುಳಿ
ಈ ವಿಧಾನ ಕೇಳಲಿಕ್ಕೆ ಕೊಂಚ ಅಧ್ವಾನ ಎನಿಸಿದರೂ ಹೆಚ್ಚಿನ ಪುರುಷರು ಮೆಚ್ಚುವ ವಿಧಾನವಾಗಿದೆ. ನಿಮ್ಮ ಪ್ರಿಯತಮ ಅಪ್ಪುಗೆಗೆ ಮುಂದಾದಾಗ ನಿಮ್ಮ ಹಣೆಯನ್ನು ಆತನ ಎದೆಯ ಮೇಲಿಸಿದ ಕೊಂಚ ಹೊತ್ತಿನ ಬಳಿಕ ತಲೆಯನ್ನು ಕೊಂಚ ಕೆಳಗೆ ಬಗ್ಗಿಸಿ ಹೊಟ್ಟೆಗೆ ತಿವಿಯುವಂತೆ ತಲೆಯಾಡಿಸಿ ಉಜ್ಜಿರಿ. ಇದು ತಮಾಷೆಯಾಗಿದ್ದರೂ ಈ ಮೂಲಕ ಪಡೆಯುವ ಕಚಗುಳಿಯನ್ನು ಹೆಚ್ಚಿನ ಎಲ್ಲಾ ಪುರುಷರು ಇಷ್ಟಪಡುತ್ತಾರೆ.
ಮೂಗಿನಿಂದ ಆತನ ಕುತ್ತಿಗೆಯನ್ನು ಸವರಿ
ನಿಮ್ಮ ಮೂಗು ಮತ್ತು ಕೆನ್ನೆಗಳಿಂದ ನಿಮ್ಮ ಪ್ರಿಯತಮನ ಕುತ್ತಿಗೆಯ ಭಾಗವನ್ನು ಆತ್ಮೀಯವಾಗಿ ಸವರುವುದು ನಿಮ್ಮ ಪ್ರಿಯತಮನನ್ನು ಉದ್ದೀಪನಗೊಳಿಸಲು ನೆರವಾಗುತ್ತದೆ. ಅಲ್ಲದೇ ನಿಮ್ಮ ಅಪ್ಪಟ ಪ್ರೀತಿ ಮತ್ತು ಭಾವನೆಗಳನ್ನು ತೋರ್ಪಡಿಸಲು ಈ ವಿಧಾನ ಅತ್ಯಂತ ಸೂಕ್ತವಾಗಿದೆ.
ಮಲಗಿದ ಸಮಯದಲ್ಲಿ ತಲೆಯನ್ನು ಆತನ ಭುಜದ ಮೇಲಿರಿಸಿ
ಪವಡಿಸಿದ ಸಮಯದಲ್ಲಿ ನೀವು ಆತನ ಪಕ್ಕದಲ್ಲಿ ಮಲಗಿ ನಿಮ್ಮ ತಲೆಯನ್ನು ಆತನ ಭುಜದ ಮೇಲಿಗಿಸಿ ಕೈಯನ್ನು ಎದೆಯ ಮೇಲಿರಿಸಿ. ಆತನ ಕೈ ನಿಮ್ಮನ್ನು ಹಿಂದಿನಿಂದ ಆವರಿಸಲಿ. ಈ ಅಪ್ಪುಗೆಯಲ್ಲಿ ನೀವು ಅತ್ಯಂತ ಸಾಮೀಪ್ಯವನ್ನೂ ಹಿತಕರ ಮತ್ತು ಅತ್ಯಂತ ಸುರಕ್ಷಿತ ಭಾವನೆಯನ್ನೂ ಪಡೆಯುವಿರಿ. ನಿಮ್ಮ ಮನಸ್ಸಿನ ಭಾವನೆಗಳನ್ನು (ಪ್ರಾಯಶಃ ಹೊಸ ಸೀರೆಗೆ ಪೀಠಿಕೆ) ತೋರ್ಪಡಿಸಲೂ ಈ ಅಪ್ಪುಗೆ ಅತ್ಯಂತ ಸಮರ್ಪಕವಾಗಿದೆ. ಮಹಿಳೆಯರೇಕೆ ಮುದ್ದಾಟವನ್ನು ಹೆಚ್ಚು ಬಯಸುತ್ತಾರೆ?
ನಿಮ್ಮ ಬೆನ್ನು ಆತನಿಗೆ ತಾಕುವಂತೆ ಕುಳಿತುಕೊಳ್ಳಿ
ಈ ಅಪ್ಪುಗೆಯನ್ನು ಸಾಮಾನ್ಯವಾಗಿ ಇಬ್ಬರೂ ಜೊತೆಯಾಗಿ ಟೀವಿ ನೋಡುವ ಸಮಯದಲ್ಲಿ ಕುಳಿತುಕೊಳ್ಳುವ ವೇಳೆ ಅನುಸರಿಸಬಹುದು. ಇದಕ್ಕಾಗಿ ಇಬ್ಬರೂ ಒಂದೇ ಕುರ್ಚಿಯ ಅಥವಾ ಬೀನ್ ಬ್ಯಾಗ್ ಮೇಲೆ ಕುಳಿತುಕೊಂಡಿದ್ದು ನೀವು ಆತನ ಮುಂದೆ ಕುಳಿತು ಆತನ ಹೊಟ್ಟೆಗೆ ನಿಮ್ಮ ಬೆನ್ನನ್ನು ಆನಿಸಿ ಕುಳಿತುಕೊಳ್ಳಿ. ಕಾಲುಗಳು ಪರಸ್ಪರ ಹತ್ತಿರಕ್ಕಿದ್ದು ಮಡಚಿರಲಿ. ಬೆರಳುಗಳು ಬೆಸೆದಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸಾಕು.
ಈ ಮೇಲೆ ತಿಳಿಸಿರುವ ಅಪ್ಪುಗೆಯ ವಿಧಾನಗಳು ಒಂದು ಮಾದರಿಯೇ ಹೊರತು ದಂಪತಿಗಳ ನಡುವೆ ಹೀಗೇ ಆಗಬೇಕೆಂದೇನಿಲ್ಲ. ನಿಮಗೆ ಅತ್ಯಂತ ಸೂಕ್ತವಾಗಿ ಕಂಡುಬರುವ ಯಾವುದೇ ಭಂಗಿಯನ್ನು ಅನುಸರಿಸಬಹುದು. ಒಟ್ಟಾರೆ ಇಬ್ಬರಿಗೂ ಆತ್ಮೀಯವಾಗಿರುವ, ಹಿತಕರವಾದ. ಮುಖ್ಯವಾಗಿ ತಮ್ಮ ಸಮಯವನ್ನು ಒಬ್ಬರನ್ನೊಬ್ಬರೊಂದಿಗೆ ಕಳೆಯುವ ಮೂಲಕ, ತಮ್ಮ ಭಾವನೆಗಳನ್ನು ಆತ್ಮೀಯವಾಗಿ ಹಂಚಿಕೊಳ್ಳುವ ಮೂಲಕ ಬಾಂಧವ್ಯವನ್ನು ಹೃದಯದಕ್ಕೆ ಹತ್ತಿರ ತರುವುದೇ ಅಪ್ಪುಗೆಯ ಮುಖ್ಯ ಉದ್ದೇಶ, ಇದು ನೆರವೇರಿದರೆ ಸಾಕು.



Click it and Unblock the Notifications

