Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಏನೇ ಹೇಳಿ, ಪ್ರೀತಿಯನ್ನು ಅರ್ಥೈಸಿಕೊಳ್ಳುವುದೇ ಕಷ್ಟ!
ಪ್ರೀತಿ ಮಾಯೆಯೋ ಮಾಯೆಯೇ ಪ್ರೀತಿಯೋ ಯಾರು ಅರಿಯರು, ಎಂಬುದು ಕವಿವಾಣಿ. ಆದರೆ ಪ್ರೀತಿಯಲ್ಲಿ ಇರುವಂತಹ ರೋಮಾಂಚನ ಜಗತ್ತಿನಲ್ಲಿ ಮತ್ತೊಂದು ಸಿಕ್ಕುವುದಿಲ್ಲ ಎಂಬುದು ಜನವಾಣಿ. ತನಗೆ ಅನುರೂಪನಾದ/ಳಾದ ಸಂಗಾತಿ ಬೇಕೆನ್ನುವ ಹಂಬಲ ಎಷ್ಟು ಜನರಿಗೆ ಇರುವುದಿಲ್ಲ. ಬಹುತೇಕ ನೂರಕ್ಕೆ ನೂರು ಜನ ಹೀಗೆಯೇ ತಾನೇ ಆಲೋಚಿಸುತ್ತಾರೆ. ಒಂದು ವೇಳೆ ನೀವು ಸಹ ಪ್ರೀತಿಯಲ್ಲಿ ಬೀಳಬೇಕು ಎಂದು ಹಗಲುಗನಸು ಕಾಣುತ್ತಿದ್ದಲ್ಲಿ, ನಿಮಗಾಗಿ ಈ ಲೇಖನ.
ಎಲ್ಲರಿಗೂ ಪ್ರೀತಿಯ ಕುರಿತು ಒಂದು ಧನಾತ್ಮಕ ಮನೋಭಾವ ಇರುತ್ತದೆ. ಆದರೆ ಅದರಲ್ಲಿ ನೋವು ಅನುಭವಿಸಿದವರಿಗೆ ಮಾತ್ರ ಋಣಾತ್ಮಕ ಮನೋಭಾವ ಇರುತ್ತದೆ. ಆದರೆ ಪ್ರೀತಿಯೇ ಮಾಡದೆ ಇರುವವನಿಗೆ ಅದು ರೋಮಾಂಚನವನ್ನುಂಟು ಮಾಡುವ, ಪುಳಕಗಳನ್ನು ಮೈಮನಗಳಲ್ಲಿ ಸೃಷ್ಟಿಸುವಂತಹ ಒಂದು ಭಾವನೆಯಾಗಿರುತ್ತದೆ. ಅಂತಹವರಿಗೆ ಪ್ರೀತಿಯಲ್ಲಿ ಬೀಳಲೆ ಬೇಕೆಂಬ ತುಡಿತ ಇರುತ್ತದೆ. ಸ್ವಲ್ಪ ಹುಡುಕಾಟ ಮಾಡಿದರೆ ಅವರಿಗೆ ಈ ಪ್ರೀತಿ ಕಾಣಿಸುತ್ತದೆ. ಅಂತಹ ಹುಡುಕಾಟ ನಡೆಸುತ್ತಿರುವವರಿಗಾಗಿ ಈ ಲೇಖನ ನೆರವು ನೀಡುತ್ತದೆ. ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ...
ಪ್ರೀತಿಯಲ್ಲಿ ಬೀಳಬೇಕು ಎಂದರೆ ಅದೃಷ್ಟ, ಹಣ, ಅಂತಸ್ತು, ಅಧಿಕಾರ ಯಾವುದು ಬೇಕಾಗಿಲ್ಲ. ನಿಮ್ಮ ಹಿಂದಿನ ಸಂಬಂಧದಿಂದ ಮುಕ್ತರಾಗಿರಬೇಕು ಅಷ್ಟೇ. ನಿಮ್ಮಿಬ್ಬರ ಸಂಬಂಧ ಮುಂದಿನ ಜೀವನದಲ್ಲಿ ತುಂಬಾ ಸೊಗಸಾಗಿರುತ್ತದೆ ಎಂಬುದು ಮಾತ್ರವೇ ನಿಮ್ಮ ಮನಸ್ಸಿನಲ್ಲಿ ಇರಬೇಕು. ಎದೆಯಲ್ಲಿ ನೂರಾರು ಚಿಟ್ಟೆಗಳು ಹಾರಾಡಿದ ಅನುಭವ ನಿಮಗೆ ಆಗಬೇಕು. ಆಕೆಯ ಪ್ರೀತಿ, ಸ್ಲೋ ಪಾಯಿಸನ್ ರೀತಿ! ನಂಬಬೇಡಿ
ನೀವು ನಿಮ್ಮ ಸುತ್ತ ಇರುವವರ ಕುರಿತಾಗಿ ಸಹ ಗಮನ ನೀಡಬೇಕಾಗುತ್ತದೆ. ಪ್ರೀತಿಯು ಮಾತಿಗಿಂತ ಸಂಕೇತಗಳ ಮೂಲಕ ಮೊದಲು ವ್ಯಕ್ತವಾಗುತ್ತದೆ. ನಿಮ್ಮನ್ನು ನೋಡುವ ಮೂಲಕ ಆರಂಭವಾಗುವ ಈ ಪ್ರಕ್ರಿಯೆಯು ಮುಂದೆ ಮುಂದೆ ಬಿಟ್ಟು ಬದುಕಲಾರದ ಮಟ್ಟಕ್ಕೆ ತಲುಪುತ್ತದೆ. ಬನ್ನಿ ಪ್ರೀತಿಯನ್ನು ಅದರಲ್ಲೂ ನೈಜ ಪ್ರೀತಿಯನ್ನು ಗುರುತಿಸಲು ಇರುವ ಮಾರ್ಗಗಳನ್ನು ಇಂದು ನಿಮಗೆ ಬೋಲ್ಡ್‌ಸ್ಕೈ ತಿಳಿಸಿಕೊಡುತ್ತಿದೆ ಮುಂದೆ ಓದಿ...

ಗತವನ್ನು ಮರೆತುಬಿಡಿ
ನೀವು ಭವಿಷ್ಯದಲ್ಲಿ ಮುಂದುವರಿಯಬೇಕು ಎಂದಲ್ಲಿ, ಗತವನ್ನು ಮರೆಯಬೇಕು. ಗತವು ಎಂದಿಗೂ ನಿಮ್ಮನ್ನು ಬಿಡದೆ ಕಾಡಿಬಿಡುತ್ತದೆ. ಅದಕ್ಕಾಗಿ ಅದರ ಕಾಟವನ್ನು ತಪ್ಪಿಸಿಕೊಂಡು ಮೊದಲು ಭವಿಷ್ಯದತ್ತ ಚಿಂತಿಸಿ. ನೀವು ಕಳೆದುಕೊಂಡಿರುವುದರ ಕುರಿತಾಗಿ ಎಂದಿಗೂ ಚಿಂತಿಸಬೇಡಿ. ಅದರಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ.

ಸಂಗತಿಗಳ ಕುರಿತಾಗಿ ಆತುರಪಡಬೇಡಿ
ಆತುರಗೆಟ್ಟು ಮಾಡುವ ಕೆಲಸಗಳಿಂದ ಯಾವುದೇ ಉತ್ತಮ ಫಲಿತಾಂಶಗಳು ಬರುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಆತುರ ಎಂದಿಗೂ ಒಳ್ಳೆಯದಲ್ಲ. ಪ್ರೀತಿ ಹೂವಿನಂತೆ, ಅದು ಅದರ ಪಾಡಿಗೆ ಅರಳಬೇಕು. ಹಿಸುಕಿ ಹಿಸುಕಿ ಹಣ್ಣು ಮಾಡಬಾರದು. ಬಲವಂತವಾಗಿ ಪ್ರೀತಿ ಮಾಡಬಾರದು ಎಂಬುದನ್ನು ಮರೆಯಬೇಡಿ.

ದೇಹ ಭಾಷೆ
ನಿಮಗೆ ನಿಮ್ಮನ್ನು ಪ್ರೀತಿಸುವವರ ದೇಹ ಭಾಷೆ ಸುಲಭವಾಗಿ ಗೊತ್ತಾಗುತ್ತದೆ. ಅವರ ಹಾವ ಭಾವ, ನಡೆ ನುಡಿ, ನಿಮಗೆ ಸೂಚನೆಗಳನ್ನು ನೀಡುತ್ತದೆ. ಪ್ರೀತಿಯು ಕಣ್ಣಿಗೆ ಕಾಣಿಸುವ ಮುನ್ನ ಹೃದಯಕ್ಕೆ ಗೊತ್ತಾಗುತ್ತದೆ. ನೋಡುತ್ತಾ ಇರಿ, ಪ್ರೀತಿ ಇದ್ದಲ್ಲಿ ಕಂಡೇ ಕಾಣುತ್ತದೆ. ದೇಹವು ಮನಸ್ಸಿನ ಭಾವನೆಯಂತೆ ನಡೆಯುತ್ತದೆ.

ನಿಮ್ಮಂತೆ ನೀವಿರಿ
ನಾಟಕವು ಪ್ರೀತಿಯಲ್ಲಿ ಒಳ್ಳೆಯದಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುತ್ತಾರೆ. ಆದರೆ ಪ್ರೀತಿಯಲ್ಲಿ ಸುಳ್ಳು ಹೇಳಬಾರದು ಎಂದು ಹೇಳುತ್ತಾರೆ. ನೀವು ನಿಮ್ಮಂತೆ ಇರಿ, ಇನ್ನೊಬ್ಬರ ರೀತಿ ನಾಟಕ ಆಡಬೇಡಿ. ನಿಮಗೆ ಇರುವ ವ್ಯಕ್ತಿತ್ವವೇ ಸಾಕು ಜನರು ನಿಮ್ಮನ್ನು ಪ್ರೀತಿಸಲು.

ಹೊರಗೆ ಹೋಗಿ, ಪ್ರೀತಿಯನ್ನು ಹುಡುಕಿ
ಮನೆಯಲ್ಲಿ ಕುಳಿತಿರುವವರನ್ನು ಹುಡುಕಿಕೊಂಡು ಪ್ರೀತಿ ಬರುವುದಿಲ್ಲ. ಹೊರಗೆ ಹೋಗಿ, ಹುಡುಕಿ, ಒಂದಲ್ಲ ಒಂದು ದಿನ ನೀವು ಹುಡುಕುವ ಪ್ರೀತಿ ನಿಮಗೆ ಕಂಡೇ ಕಾಣುತ್ತದೆ. ಪ್ರೀತಿಯನ್ನು ಹುಡುಕಿಕೊಂಡು ಕೆಲವರು ಪ್ರಪಂಚ ಸುತ್ತಿದ್ದಾರೆ. ಅವರಿಗೆ ಅವರ ಪ್ರೀತಿಯು ಎಲ್ಲೋ ಒಂದು ಕಡೆ ಕಂಡೇ ಕಾಣಿಸಿದೆ. ನಿಮಗೂ ಕಾಣಬಹುದು, ಹೋಗಿ ಹುಡುಕಿ.



Click it and Unblock the Notifications