Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚುಮುಚುಮು ಚಳಿಯಲ್ಲಿ ಪ್ರಣಯದ ಆನಂದದ ಕ್ಷಣಗಳು....
ಚಳಿಗಾಲ ಎಂದಾಕ್ಷಣ ಎಲ್ಲರೂ ಬೆಚ್ಚನೆಯ ಅನುಭವಕ್ಕೆ ಹಾತೊರೆಯುತ್ತಾರೆ. ಸೇವಿಸುವ ಆಹಾರ, ಕುಡಿಯುವ ಪಾನೀಯಗಳು ಬಿಸಿಯಾಗಿದ್ದರೆ ಚೆನ್ನ ಎಂದು ಬಿಸಿ ಆಹಾರಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಈ ಚಳಿಗಾಲದಲ್ಲಿ ಅದೇ ಹಳೆಯ ಪದ್ಧತಿಯಂತೆ ಮಾಮೂಲಿ ಊಟ ಮತ್ತು ಅದೇ ಹಳೇ ಟೀ/ಕಾಫಿ ಸೇವಿಸುವುದನ್ನು ಬಿಟ್ಟು ಹೊರಗೆ ಸಿಗುವ ಬಿಸಿ ಬಿಸಿ ತರಹೇವಾರಿ ಆಹಾರ ಪದಾರ್ಥಗಳನ್ನು ಒಮ್ಮೆ ಸವಿಯಬೇಕು ಎಂಬ ಸಂಗಾತಿಯ ತುಡಿತವನ್ನು ಒಮ್ಮೆ ಅರಿಯಲು ಪ್ರಯತ್ನಿಸಿ.
ಚಳಿಗಾಲದಲ್ಲಿ ಸಂಗಾತಿಯೊಂದಿಗಿನ ಪ್ರಣಯದ ಕ್ಷಣಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮತ್ತೇಕೆ ಯೋಚಿಸುತ್ತಿರುವಿರಿ? ನಿಮ್ಮ ಸಂಗಾತಿಯನ್ನು ಹುರಿದುಂಬಿಸಿ ಒಂದು ದಿನ ಹೊರಗೆ ಈ ಚುಮುಚುಮು ಚಳಿಯಲ್ಲಿ ಆನಂದದಿಂದ ಬಿಸಿ ಆಹಾರ ಪದಾರ್ಥಗಳನ್ನು ಸವಿಯಲು ಹೊರಬನ್ನಿ. ನಾವು ನೀಡುವ ಕೆಲ ವಿಶಿಷ್ಟ ವಿಧಾನಗಳಿಂದ ನಿಮ್ಮ ಸಂಗಾತಿಯನ್ನು ಆನಂದದಿಂದ ತಣಿಸಿರಿ...

ರಸ್ತೆ ಬದಿಯ ಆಹಾರಗಳ ಮೇಲೆ ಕಣ್ಣಾಡಿಸಿ
ಅದೇ ಹಳೆಯ ಸಾಂಪ್ರದಾಯಿಕ ಹೋಟೆಲ್ ತಿನಿಸನ್ನು ಬದಿಗೊತ್ತಿ ಚಳಿಗಾಲದ ಬಿಸಿ ಬಿಸಿ ಮಸಾಲೆ ಆಹಾರಗಳ ಮಜಾ ಸವಿಯಿರಿ. ಹೌದು, ಚಳಿಗಾಲದಲ್ಲಿ ಬಿಸಿ ಆಲೂ ಟಿಕ್ಕೀಸ್, ಕಾತಿ ಕಬಾಬ್ಸ್ ಮತ್ತು ಬಿಸಿ ಸಿಹಿ ತಿನಿಸುಗಳು ಹೇಳಿಮಾಡಿಸಿದಂತಿದೆ. ಆರಾಮದಾಯಕ ಬೂಟುಗಳನ್ನು ಧರಿಸಿಕೊಂಡು ಜಾಕೆಟ್ ಹಾಕಿಕೊಂಡು ನಗರ ಪ್ರದೇಶದ ರಸ್ತೆ ಬದಿಯ ತಿನಿಸುಗಳನ್ನು ಸೇವಿಸಲು ಸಂಗಾತಿಯೊಂದಿಗೆ ಒಮ್ಮೆ ಸುತ್ತಾಡಿ. ಆದರೆ ನೀರಿನ ಬಾಟಲ್ ಅಥವಾ ಸಂಸ್ಕರಿಸಿದ ಕುಡಿಯುವ ನೀರನ್ನು ಇಟ್ಟುಕೊಳ್ಳಲು ಮರೆಯದಿರಿ. ಈ ಪಯಣದಲ್ಲಿ ನಿಮ್ಮ ಸಂಗಾತಿಯ ಆನಂದವನ್ನು ಕಂಡು ನಕ್ಕು ನಲಿಯಿರಿ.

ರಾತ್ರಿ ಆಟವೊಂದನ್ನು ಆಯೋಜಿಸಿ
ಸಂಗಾತಿಯೊಂದಿಗಿನ ನಿಮ್ಮಿಬ್ಬರ ಸಾಂಗತ್ಯಕ್ಕೆ ಆಟವೊಂದೂ ಸಹ ಮನರಂಜನೆಯ ಮಜಾ ನೀಡುತ್ತದೆ. ಏಕೆಂದರೆ ಇರುವುದು ನೀವಿಬ್ಬರೇ ಆದ್ದರಿಂದ ಸೋತರೂ ಅಥವಾ ಗೆದ್ದರೂ ಅದು ನಿಮ್ಮಿಬ್ಬರದೇ ಆಗಿರುತ್ತದೆ. ಆಟಗಳಲ್ಲಿ ಅನೇಕ ವಿಧಗಳಿದ್ದು, ಪೋಕರ್, ಯುಎನ್ ಒ, ಕೇರಮ್, ಚಿತ್ರ ಬಿಡಿಸುವುದು, ಮೊನೊಪೊಲಿ, ಹಾವು ಏಣಿ ಆಟ ಹೀಗೆ ಅನೇಕ ರೀತಿಯ ಆಟಗಳನ್ನು ಆಡಬಹುದು. ಒಂದು ವೇಳೆ ಇದನ್ನು ನೀವು ಪ್ರಯತ್ನಿಸದಿದ್ದರೆ, ಈ ಚಳಿಗಾಗಲದಲ್ಲಿ ಒಮ್ಮೆ ಆಡಿ ನೋಡಿ. ಇದರೊಂದಿಗೆ ಮುಂಚೀಸ್ ಮತ್ತು ಚಾಕ್ ಲೇಟ್ ಸೇವಿಸುವುದನ್ನು ಮರೆಯದಿರಿ. ಇದು ನಿಮಗೆ ಮನರಂಜನೆಯ ಮತ್ತೊಂದು ಆಯಾಮವನ್ನೇ ನೀಡುತ್ತದೆ.

ಪುಸ್ತಕದ ಅಂಗಡಿಗೆ ಭೇಟಿ ಕೊಡಿ
ಒಮ್ಮೆ ಪುಸ್ತಕದ ಅಂಗಡಿಗೆ ಸಂಗಾತಿಯೊಂದಿಗೆ ಭೇಟಿ ನೀಡಿ. ಅಲ್ಲಿ ನಿಧಾನವಾಗಿ ನಿಮಗಿಷ್ಟವಾದ ಪುಸ್ತಕಗಳನ್ನು ನೋಡುತ್ತಾ ಸಾಗಿ. ಈ ಪ್ರಕ್ರಿಯೆಯಲ್ಲಿ ನಿಮ್ಮ ಸಂಗಾತಿಯೊಂದಿಗಿನ ಚರ್ಚೆ ಹೆಚ್ಚು ಉಲ್ಲಾಸ ನೀಡುತ್ತದೆ. ಪುಸ್ತಕಗಳೊಂದಿಗಿನ ಚರ್ಚೆಯಲ್ಲಿ ನಿಮ್ಮನ್ನು ನೀವು ಅರಿಯಲು ನೆರವಾಗುತ್ತದೆ. ಅಂಗಡಿಯವನಿಗೆ ನೋವುಂಟು ಮಾಡದಂತೆ ಅಂಗಡಿಯಲ್ಲಿ ಏನನ್ನಾದರೂ ಕೊಳ್ಳುವುದನ್ನು ಮರೆಯದಿರಿ.

ಚಹಾ ಸೇವಿಸಲು ಬಹುದೂರ ಸಾಗಿ
ನೀವು ಒಮ್ಮೆಯಾದರೂ ಒಂದು ಕಪ್ ಚಹಾ ಅಥವಾ ಕಾಫಿಗಾಗಿ ಹಸಿರಿನ ವಾತಾವರಣದಲ್ಲಿ ಅಥವಾ ನದಿಯ ತಟದಲ್ಲಿ ಒಂದು ಘಂಟೆಗೂ ಅಧಿಕ ವೇಳೆ ಪಯಣಿಸಿದ್ದೀರಾ? ಅದೇ ಸಾಂಪ್ರದಾಯಿಕ ಆಧುನಿಕ ಕಾಫಿ ಕೇಂದ್ರಗಳನ್ನು ಬದಿಗಿರಿಸಿ ಬಹುದೂರವಿರುವ ಚಹಾ ಕೇಂದ್ರಕ್ಕೆ ಭೇಟಿ ನೀಡಿ ಚಹಾ ಸವಿಯಿರಿ. ನೀವು ಮತ್ತು ನಿಮ್ಮ ಸಂಗಾತಿಯು ಒಂದೇ ಕಾಲೇಜಿನಲ್ಲಿದ್ದರೆ, ಕಾಲೇಜಿನ ಹೊರಗಿರುವ ಚಹಾ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಲೇಬೇಕು.

ಚಹಾ ಸೇವಿಸಲು ಬಹುದೂರ ಸಾಗಿ
ಈ ಒಂದು ಜಾಗದಲ್ಲಿ ನಿಮ್ಮಿಬ್ಬರ ಮನಸ್ಸಿನ ಸಮಾಗಮವಾಗುವ ಸನ್ನಿವೇಶ ಎದುರಾಗುತ್ತದೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕಳೆಯುವ ಸಮಯ ಈ ಜಾಗಕ್ಕಿಂತ ಮತ್ತೊಂದು ಜಾಗವು ಇಲ್ಲವೇ ಇಲ್ಲ. ಇದು ನಿಜಕ್ಕೂ ನೆನಪಿನಲ್ಲಿ ಉಳಿಯುವ ಸಂದರ್ಭಗಳನ್ನು ಸೃಷ್ಟಿಸುತ್ತದೆ.

ಕ್ಯಾಂಪಿಂಗ್‌ಗೆ ತೆರಳಿ
ಏಕ ವ್ಯಕ್ತಿಯ ಕ್ಯಾಂಪಿಂಗ್ ಭಾರತದಲ್ಲಿ ಅಷ್ಟು ಸುರಕ್ಷಿತವಿಲ್ಲ. ಇದನ್ನು ಸುರಕ್ಷಿತವಾಗಿ ಆಯೋಜಿಸಲು ಅನೇಕ ಆಯೋಜಕರು ಲಭ್ಯವಿದ್ದಾರೆ. ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಸಮೀಪವಿರುವ ಆಯೋಜಕರನ್ನು ಸಂಪರ್ಕಿಸಿ ಟೆಂಟ್ ಅನ್ನು ಕಾಯ್ದಿರಿಸಿಕೊಳ್ಳಿ ಅಥವಾ ನಿಮ್ಮದೇ ಒಂದನ್ನು ಇಟ್ಟುಕೊಳ್ಳಿ. ನಿಮಗೆ ಸೂಕ್ತ ಜಾಗದಲ್ಲಿ ಕುಲುಮೆಸ್ಥಳ ಮತ್ತು ಊಟವನ್ನು ನೀಡಲಾಗುವುದು. ಚುಚುಮು ಚಳಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಂಜೆಯನ್ನು ಅಲ್ಲೇ ಕಳೆಯಿರಿ. ಈ ಸಂದರ್ಭದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಬಾಂಧ್ಯವ್ಯ ಹೆಚ್ಚಾಗಿ ಮತ್ತೊಮ್ಮೆ ಪ್ರೇಮದ ಪಾಶಕ್ಕೆ ಸಿಲುಕಿ ಪ್ರಣಯದ ಅಮೂಲ್ಯ ಕ್ಷಣಗಳನ್ನು ಆನಂದಿಸಿ.



Click it and Unblock the Notifications
