Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರೀತಿ -ಪ್ರೇಮ: ಅದೇನು ಮಾಯೆ, ಅದೇನು ಜಾದೂ!
ಪ್ರೀತಿ ಎಂಬುದು ಒಂದು ಸುಂದರ ಭಾವನೆ ಇದು ಜೀವನವನ್ನು ಸುಂದರಗೊಳಿಸುತ್ತದೆ.ಆದರೂ ಪ್ರೀತಿ ಎಂದರೆ ಕೆಲವೊಂದಿಷ್ಟು ಸಮಸ್ಯೆಗಳು ಇದ್ದೇ ಇರುತ್ತವೆ.ಪ್ರೀತಿಯಲ್ಲಿದ್ದಾಗ ಸ್ವರ್ಗ ಎನಿಸುವುದು ಸಹಜ, ಸಾಕಷ್ಟು ಜನರು ಸ್ವರ್ಗದಲ್ಲಿರುವಂತೆ ಫೀಲ್ ಮಾಡುತ್ತಾರೆ. ಪ್ರೀತಿಯಲ್ಲಿದ್ದಾಗ ಹೊರಗಿನ ಪ್ರಪಂಚದ ಅರಿವಿಲ್ಲದೆ ತಮ್ಮದೇ ಲೋಕದಲ್ಲಿ ಕಳೆದುಹೋಗಿರುತ್ತಾರೆ. ಇದು ಪ್ರೀತಿಯ ಕೆಟ್ಟ ಭಾಗದಲ್ಲಿ ಒಂದು.
ಇಡೀ ದಿನ ಪ್ರೀತಿಸಿದವರ ಬಗ್ಗೆ ಕನಸು ಕಾಣುತ್ತಾ ಇರುವುದರಿಂದ ಬೇರೆ ವಿಷಯಗಳ ಬಗ್ಗೆ ಯಾವುದೇ ಗಮನವಿರುವುದಿಲ್ಲ. ಹೀಗಿರುವುದರಿಂದ ಸುತ್ತಮುತ್ತಲ ಆಗುಹೋಗುಗಳ ಬಗ್ಗೆ ಕೂಡ ಅವರಿಗೆ ಯಾವುದೇ ಅರಿವಿರುವುದಿಲ್ಲ.

ನಿದ್ದೆ ಕೆಡುವುದು
ಅತಿಯಾದ ಪ್ರೀತಿಯಲ್ಲಿ ಮುಳುಗಿದಾಗ ನಿದ್ದೆ ಬರದಿರುವುದು ಸಾಮಾನ್ಯವಾಗಿ ಕಂಡು ಬರುವ ಅಡ್ಡ ಪರಿಣಾಮ ಎನ್ನಬಹುದು. ಪ್ರೀತಿಯಲ್ಲಿರುವವರು ಇಡೀ ದಿನ ಪ್ರೀತಿಸಿದರವ ಜೊತೆ ಕಳೆಯುವುದು ಮತ್ತು ರಾತ್ರಿ ಅವರ ಮೆಲುಕಿನಲ್ಲೇ ಕಳೆಯುವುದರಿಂದ ನಿದ್ದೆಗೆ ಭಂಗ ಬರುವುದು ಖಂಡಿತ.
ಆಸಕ್ತಿ ಕಳೆದುಕೊಳ್ಳುವುದು
ಪ್ರೀತಿಯಲ್ಲಿ ಬಿದ್ದವರು ಇತರ ವಿಷಯಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದು ಸಾಮಾನ್ಯ. ಆದ್ದರಿಂದಲೇ ಪ್ರೀತಿಯಲ್ಲಿ ಬಿದ್ದವರಿಗೆ ಬೇರೆ ವಿಷಯಗಳ ಪರಿಜ್ಞಾನವಿರುವುದಿಲ್ಲ. ಬಾಲ್ಯದ ಗೆಳತಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬಹುದೇ?
ಮಾತನಾಡುವುದು
ನೀವು ಪ್ರೀತಿಯಲ್ಲಿರುವಾಗ ಕೇವಲ ಅವರೊಂದಿಗೆ ಮಾತನಾಡುವುದು ಮಾತ್ರ ಮುಖ್ಯವಾಗುತ್ತದೆ ಇತರರೊಡನೆ ಮಾತನಾಡಲು ಸಮಯ ಸಿಗುವುದಿಲ್ಲ. ಆಗ ಇತರರಿಗೆ ಬೇಸರವಾಗುವುದು ಸಹಜ.
ಕೆಲಸ
ಕೆಲಸದಲ್ಲೂ ಪ್ರೀತಿಸಿದವರ ಬಗ್ಗೆ ಕನಸು ಕಾಣುತ್ತಾ ಕೂರುವುದರಿಂದ ಕೆಲಸದ ಬಗ್ಗೆ ಗಮನ ಕಡಿಮೆಯಾಗುತ್ತದೆ. ಇದು ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವವಿರುತ್ತದೆ. ಮೊದಲ ನೋಟದಲ್ಲೇ ಹೆಣ್ಣಿನ ಚಂಚಲ ಮನಸ್ಸನ್ನು ಗೆಲ್ಲಬಹುದೇ?
ಬಿಲ್ ಪಾವತಿ
ಪ್ರೇಮಿಗಳು ಫೋನಿನಲ್ಲಿ ಸಾಕಷ್ಟು ಸಮಯ ಮಾತನಾಡುವುದು ಸರ್ವೇ ಸಾಮಾನ್ಯ. ಸದಾ ಕಾಲ ಫೋನಿನಲ್ಲಿ ಮಾತನಾಡುತ್ತಾ ಕಳೆಯುವುದರಿಂದ ನಿಮ್ಮ ಜೇಬಿನಲ್ಲಿರುವ ಎಲ್ಲಾ ಹಣವೂ ಪೋಲಾಗುತ್ತದೆ ಆದರೂ ಕೂಡ ಇದು ಯಾವುದೇ ರೀತಿಯಲ್ಲಿ ನಿಮಗೆ ನೋವು ನೀಡುವುದಿಲ್ಲ. ಏಕೆಂದರೆ ಪ್ರೀತಿ ಎಂಬುದೇ ಮುಖ್ಯವಾಗಿ ಕಾಣಿಸುತ್ತದೆ.



Click it and Unblock the Notifications
