ಇವರು ಅಂತಿಂಥ ಹುಡುಗಿಯರಲ್ಲ, ನೇರವಾಗಿ ಹೇಳಿಬಿಡುತ್ತಾರೆ!

ನೇರ ನಡವಳಿಕೆ ಅಥವಾ straightforward ವ್ಯಕ್ತಿತ್ವವನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಸಮಾಜ ಕೊಂಚ ಅನುಮಾನದಿಂದಲೇ ನೋಡುತ್ತದೆ. ಏಕೆಂದರೆ ಇವರ 'ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದನಂತೆ' ಸ್ವೀಕರಿಸುವ ಮನೋಭಾವವೇ ಹೆಚ್ಚಾಗಿರುವಾಗ ಇವರ ನೇರಮಾತುಗಳನ್ನು ಹೆಚ್ಚಿನವರು ಒಪ್ಪಿಕೊಳ್ಳುವುದಿರಲಿ, ಕೇಳಲೂ ತಯಾರಿರುವುದಿಲ್ಲ.

ಆದರೆ ಈ ವ್ಯಕ್ತಿಗಳು ನಿಷ್ಕಪಟಿಗಳೂ, ನಿಃಸ್ವಾರ್ಥಿಗಳೂ, ಎದುರಿನವರಿಗೆ ಮುಂದಾಗುವ ಅಪಾಯದಿಂದ ರಕ್ಷಿಸುವ ಮನೋಭಾವವುಳ್ಳವರೂ, ದಯಾಮಯಿಗಳೂ ಆಗಿರುತ್ತಾರೆ. ಆದರೆ ತಮ್ಮ ಭಾವನೆಯನ್ನು ನಾಟಕೀಯ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗದಿರುವುದರಿಂದಲೇ ಹೆಚ್ಚಿನವರ ದೃಷ್ಟಿಯಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಹುಡುಗಿಯರೇ ಡೇಟಿಂಗ್ ಮಾಡಿ, ಮೋಸ ಹೋಗಬೇಡಿ!

ನೇರ ನಡವಳಿಕೆಯ ಮಹಿಳೆಯರನ್ನು ಜೀವನಸಂಗಾತಿಯನ್ನಾಗಿ ಪಡೆಯಲು ಪುಣ್ಯ ಮಾಡಿರಬೇಕು. ಹೆಚ್ಚಿನ ಮಹಿಳೆಯರಲ್ಲಿ ಇರುವ ಸಮಾನ ತೊಂದರೆಯೆಂದರೆ ಇತರರಲ್ಲಿ ನೇರವಾಗಿ ತಮ್ಮ ವಿಚಾರಗಳನ್ನು ಮಂಡಿದರೆ ತಮ್ಮ ಜೀವನಸಂಗಾತಿಯಲ್ಲಿ ಮಾತ್ರ ನೇರವಾಗಿ ಏನನ್ನೂ ಹೇಳದೇ ಅವರೇ ತಾವಾಗಿ ಅರ್ಥೈಸಿಕೊಳ್ಳಬೇಕು ಎಂದು ಬಯಸುತ್ತಾರೆ. ಗೆಳೆಯ ಮದುವೆಯಾಗದೇ ಕೈ ಕೊಡಬಹುದು, ಜೋಕೆ!

ಆದರೆ ನೇರ ನಡವಳಿಕೆಯ ವ್ಯಕ್ತಿತ್ವದ ಮಹಿಳೆಯರು ತಮಗೇನು ಬೇಕು, ಬೇಡ, ತಮಗೇನು ಇಷ್ಟ, ತಮಗೇನು ಇಷ್ಟವಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ತಮ್ಮ ಜೀವನಸಂಗಾತಿಯಲ್ಲಿ ಹೇಳಿ ಪಡೆದುಕೊಳ್ಳುವ ಮೂಲಕ ಜೀವನವನ್ನು ಸಮತೋಲನದಲ್ಲಿರಿಸಿಕೊಳ್ಳಲು ನೆರವಾಗುತ್ತಾರೆ. ಇವರು ತಮ್ಮ ಆದ್ಯತೆಗಳನ್ನು ನೇರವಾಗಿ ಹೇಳುವುದರಿಂದ ಇವರನ್ನು ಜೀವನಸಂಗಾತಿಯನ್ನಾಗಿ ಸ್ವೀಕರಿಸಲು ಹೆಚ್ಚಿನ ಲೆಕ್ಕಾಚಾರ ಬೇಕಿಲ್ಲ. ಒಂದು ವೇಳೆ ನೀವು ಈಗಾಗಲೇ ಆಯ್ಕೆ ಮಾಡಿಕೊಂಡಿರುವ ಯುವತಿ ನೇರ ನಡವಳಿಕೆಯವಳಾಗಿದ್ದರೆ ನಿಮ್ಮ ಪರವಾಗಿ ಒಪ್ಪಿಗೆ ಸೂಚಿಸಲು ಕೆಳಗಿನ ಸ್ಲೈಡ್ ಶೋ ನೆರವು ನೀಡಲಿದೆ..

ಆಕೆ ನೇರ ಸ್ವಭಾವದವಳು

ಆಕೆ ನೇರ ಸ್ವಭಾವದವಳು

ಆಕೆ ನೇರ ಸ್ವಭಾವದವಳಾಗಿದ್ದು ಆಕೆಯ ಮಾತುಗಳಲ್ಲಿ ಕೃತ್ರಿಮತೆ ಇರುವುದಿಲ್ಲ. ಇರುವುದನ್ನು ಇದ್ದ ಹಾಗೇ ಹೇಳಿ ವಾಸ್ತವದಲ್ಲಿ, ಇಂದಿನ ದಿನದಲ್ಲಿ ಮತ್ತು ಸಾಧ್ಯವಾಗುವ ಕನಸುಗಳನ್ನು ಕಾಣುವ ಈಕೆಯ ಸ್ವಭಾವ ಅತ್ಯಂತ ಅಪ್ಪಟ, ಮತ್ತು ಅಮೂಲ್ಯವಾಗಿದೆ.

ತನಗೆ ಚುಂಬನ ನೀಡಿ ಎಂದು ನೇರವಾಗಿಯೇ ಕೇಳಬಹುದು

ತನಗೆ ಚುಂಬನ ನೀಡಿ ಎಂದು ನೇರವಾಗಿಯೇ ಕೇಳಬಹುದು

ಈ ವ್ಯಕ್ತಿತ್ವದ ಯುವತಿಯರು ತಮಗೇನು ಬೇಕೆಂದು ಸ್ಪಷ್ಟಮಾತುಗಳಲ್ಲಿ ಕೇಳಿ ಪಡೆಯಲು ಯತ್ನಿಸುತ್ತಾರೆ. ಇದಕ್ಕವರು ಹಿಂದೆಮುಂದೆ ನೋಡುವುದು, ನಾಚಿಕೆಪಟ್ಟುಕೊಳ್ಳುವುದು ಮೊದಲಾದ ಹಿಂಜರಿಕೆ ತೋರುವುದಿಲ್ಲ. ಅದು ಚುಂಬನವಾದರೂ ಸರಿ. ಆದರೆ ಅದಕ್ಕೆ ಸೂಕ್ತವಾದ ಸ್ಥಳ ಮತ್ತು ಸಮಯವನ್ನು ನೋಡಿಯೇ ಅಪೇಕ್ಷಿಸುತ್ತಾರೆ.

ತನಗೆ ಚುಂಬನ ನೀಡಿ ಎಂದು ನೇರವಾಗಿಯೇ ಕೇಳಬಹುದು

ತನಗೆ ಚುಂಬನ ನೀಡಿ ಎಂದು ನೇರವಾಗಿಯೇ ಕೇಳಬಹುದು

ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಇತರರಿಗೆ ಹೊಟ್ಟೆಕಿಚ್ಚು ಹಚ್ಚಿಸಲು ಕೋರುವ ಚುಂಬನವಾದರೆ ಜಾಗ್ರತೆ ವಹಿಸಿ, ಇವರು ನೇರ ವ್ಯಕ್ತಿತ್ವದವರಲ್ಲ, ಇವರು ಅಪಾಯಕಾರಿ ವ್ಯಕ್ತಿತ್ವವುಳ್ಳವರು.

ಆಕೆ ಎಂದಿಗೂ ಮೋಸ ಮಾಡುವವಳಲ್ಲ

ಆಕೆ ಎಂದಿಗೂ ಮೋಸ ಮಾಡುವವಳಲ್ಲ

ಒಂದು ವೇಳೆ ಆಕೆ ನಿಮ್ಮನ್ನು ಇಷ್ಟಪಡದೇ ಇದ್ದರೆ ನೇರವಾಗಿ ನೀವು ಇಷ್ಟವಿಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿಬಿಡುತ್ತಾಳೆ. ಇದರಿಂದ ಉಭಯರಿಗೂ ಯಾವುದೇ ತೊಂದರೆ ಇಲ್ಲದೇ ದೂರವಾಗಲು ಸಾಧ್ಯವಾಗುತ್ತದೆ.

ಆಕೆ ಎಂದಿಗೂ ಮೋಸ ಮಾಡುವವಳಲ್ಲ

ಆಕೆ ಎಂದಿಗೂ ಮೋಸ ಮಾಡುವವಳಲ್ಲ

ಅದೇ ನೀವು ನನಗೆ ಇಷ್ಟ ಎಂದು ಹೇಳಿದರೆ ಆಕೆ ನಿಜವಾಗಿಯೂ ನಿಮ್ಮನ್ನು ಇಷ್ಟಪಡುತ್ತಿದ್ದು ಜೀವನಸಂಗಾತಿಯಾಗಲು ತಯಾರಿದ್ದಾಳೆ ಎಂದು ಅರ್ಥೈಸಿಕೊಳ್ಳಬೇಕು. ಒಮ್ಮೆ ನಿಮಗೆ ಬದ್ಧಳಾದ ಆಕೆ ನಿಮ್ಮ ಅನುಪಸ್ಥಿತಿಯಲ್ಲಿಯೂ ಎಂದಿಗೂ ನಿಮಗೆ ಮೋಸ ಮಾಡಲಾರಳು.

ಆಕೆ ಧೈರ್ಯವಂತೆ

ಆಕೆ ಧೈರ್ಯವಂತೆ

ಸಮಾಜದಲ್ಲಿ ಆಕೆ ಧೈರ್ಯವಂತೆಯಾಗಿದ್ದು ಆಕೆ ಸ್ವತಃ ತನ್ನ ರಕ್ಷಣೆ ಮಾಡಬಲ್ಲವಳಾಗಿರುತ್ತಾಳೆ.

ಆಕೆ ಸ್ವತಂತ್ರಳು

ಆಕೆ ಸ್ವತಂತ್ರಳು

ಒಂದು ವೇಳೆ ಆಕೆಗೆ ಕಾಳು ಹಾಕಿ ಒಲಿಸಿಕೊಂಡು ನಂತರ ಬೇರೆ ಹಕ್ಕಿಯ ಕಡೆಗೆ ಹೋಗುವ ಇರಾದೆಯಿದ್ದರೆ ಆ ಇರಾದೆಯನ್ನು ಬಿಟ್ಟುಬಿಡಿ. ಏಕೆಂದರೆ ಆಕೆ ಸ್ವತಂತ್ರ ವ್ಯಕ್ತಿತ್ವದವಳಾಗಿದ್ದು ನಿಮ್ಮ ಯಾವುದೇ ಗುಣ ಆಕೆಯನ್ನು ಬದಲಿಸಲು ಸಾಧ್ಯವಿಲ್ಲ.

ಉದಾಹರಣೆಗೆ ನೀವು ಶ್ರೀಮಂತರಾಗಿದ್ದು ನಿಮ್ಮ ಶ್ರೀಮಂತಿಕೆಯಿಂದ ಆಕೆಯ ಪ್ರೀತಿ ಪಡೆಯಬಹುದು ಎಂದು ತಿಳಿದುಕೊಂಡಿದ್ದರೆ ಅದು ತಪ್ಪು. ಆಕೆ ನಿಮ್ಮ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿಯೇ ತನ್ನ ಇರಾದೆ ಪ್ರಕಟಿಸುತ್ತಾಳೆಯೇ ವಿನಃ ನಿಮ್ಮ ಶ್ರೀಮಂತಿಕೆಯನ್ನಲ್ಲ.

ತನ್ನ ಸಮರ್ಥನೆಗಾಗಿ ಪ್ರಾಮಾಣಿಕವಾದ ವಾದ ಮಂಡಿಸಬಲ್ಲಳು

ತನ್ನ ಸಮರ್ಥನೆಗಾಗಿ ಪ್ರಾಮಾಣಿಕವಾದ ವಾದ ಮಂಡಿಸಬಲ್ಲಳು

ಆಕೆಯ ನಿರ್ಧಾರ ಮತ್ತು ವಿಚಾರಗಳು ಸ್ಪಷ್ಟವಾಗಿದ್ದು ಇದನ್ನು ಸಮರ್ಥಿಸಿಕೊಳ್ಳಲು ಆಕೆ ನೇರವಾಗಿ ವಾದ ಮಾಡಬಲ್ಲವಳಾಗಿದ್ದಾಳೆ.ತನ್ನ ವಾದ ಮತ್ತು ತರ್ಕದ ಸಮರ್ಥನೆಗೆ ಆಕೆ ಸತ್ಯದ ಮಾರ್ಗವನ್ನು ಹಿಡಿಯುವುದು,ಸ್ವಾಭಾವಿಕವಾಗಿ ಇದಕ್ಕೆ ಅಡ್ಡಿಯಾಗುವ ತೊಂದರೆಗಳನ್ನು ಎದುರಿಸಲು ಹೆಚ್ಚಿನ ಶ್ರಮ ಮತ್ತು ಸಮಯ ವ್ಯಯಿಸುವವಳಾಗಿರುತ್ತಾಳೆ.

Story first published: Wednesday, August 26, 2015, 16:03 [IST]
X
Desktop Bottom Promotion