Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆನ್‌ಲೈನ್ ಡೇಟಿಂಗ್: ಮೊದಲು ಪ್ರೊಫೈಲ್ ಸರಿಪಡಿಸಿ!
ಕಷ್ಟ ಸುಖಕ್ಕೆ ಸ್ಪಂದಿಸಿ ಜೀವನಪೂರ್ತಿ ಪ್ರೀತಿಯ ಅಪ್ಪುಗೆಯಲ್ಲಿ ಬಂಧಿಸುವ ಜೊತೆಗಾರ ಅಥವಾ ಜೊತೆಗಾತಿ ನಮ್ಮೊಡನಿರಬೇಕೆಂಬ ಮಹದಾಸೆ ಪ್ರತಿಯೊಬ್ಬರಿಗಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಆನ್‌ಲೈನ್ ಡೇಟಿಂಗ್ ಯುವ ಜನರಿಗೆ ತಮ್ಮ ಬಾಳ ಸಂಗಾತಿಯನ್ನು ಹುಡುಕಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆನ್‌ಲೈನ್ ಡೇಟಿಂಗ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಷಯವಾಗಿ ಬಿಟ್ಟಿದೆ.
ಕೆಲವರು ಈ ವಿಧಾನವನ್ನು ಸಮಯ ಕಳೆಯಲು ಬಳಸಿದರೆ ಮತ್ತೆ ಕೆಲವರು ತಮ್ಮ ಜೀವನ ಸಂಗಾತಿಯ ನಿಜವಾದ ಆಯ್ಕೆ ಎಂದೇ ಪರಿಗಣಿಸುತ್ತಾರೆ. ಹಲವಾರು ಜನರು ಇಂತಹ ಡೇಟಿಂಗ್ ಸೈಟ್‌ಗಳ ಮೂಲಕ ಯಶಸ್ವಿ ಸಂಬಂಧಗಳನ್ನು ಹುಡುಕಿಕೊಂಡಿದ್ದಾರೆ. ಆದರೆ ಒಂದಷ್ಟು ಜನರು ಆನ್‌ಲೈನ್ ಡೇಟಿಂಗ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಸಹ ದೂರುತ್ತದ್ದಾರೆ.
ಒಂದು ವೇಳೆ ನಿಮಗೆ ಆನ್‌ಲೈನ್ ಡೇಟಿಂಗ್ ಇಷ್ಟವಾಗದಿದ್ದಲ್ಲಿ, ನೀವು ನಿಮ್ಮ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಆಗ ನೀವು ಪ್ರಯತ್ನಿಸುತ್ತಿರುವುದು ಖಂಡಿತ ಸಿಗುತ್ತದೆ. ಒಂದು ವೇಳೆ ಇಂಟರ್‌ನೆಟ್ ಡೇಟಿಂಗ್ ನಿಮಗೆ ಒಳ್ಳೆಯ ಫಲಿತಾಂಶವನ್ನು ತಂದುಕೊಡದಿದ್ದಲ್ಲಿ, ನಿಮ್ಮ ಪ್ರೊಫೈಲ್‌ನಲ್ಲಿ ಏನೋ ದೋಷವಿದೆ ಎಂದರ್ಥ. ಪ್ರೊಫೈಲ್ ಎನ್ನುವುದು ನಿಮ್ಮ ಆನ್‌ಲೈನ್ ವ್ಯಕ್ತಿತ್ವದ ಮುಖವಿದ್ದಂತೆ. ಇದೇ ಸರಿಯಾಗಿಲ್ಲದಿದ್ದಲ್ಲಿ, ನಿಮ್ಮ ಡೇಟಿಂಗ್ ಹಂಬಲ ಹೇಗೆ ಯಶಸ್ವಿಯಾಗುತ್ತದೆ?

ಹೌದು, ಸಾವಿರಾರು ಪ್ರೊಫೈಲ್‌ಗಳಲ್ಲಿ ತಮಗೆ ಮೆಚ್ಚಿನವರನ್ನು ಆರಿಸಿಕೊಳ್ಳುವ ಅವಕಾಶ ನೀವು ಹುಡುಕುತ್ತಿರುವವರಿಗೆ ಇರುತ್ತದೆ ಎಂಬುದನ್ನು ಮರೆಯಬೇಡಿ. ಮೊದಲ ನೋಟದಲ್ಲಿಯೇ ಹಿಡಿಸುವಂತಹ, ಒಳ್ಳೆಯ ಫೋಟೋ ಇರುವಂತಹ, ಆಸಕ್ತಿದಾಯಕ ಪ್ರೊಫೈಲನ್ನು ರಚಿಸಿ. ಇದರಿಂದ ನಿಮಗೆ ಒಪ್ಪುವಂತಹವರ ಜೊತೆಗೆ ಡೇಟಿಂಗ್ ಮಾಡುವ ಅವಕಾಶವನ್ನು ಪಡೆಯಬಹುದು. ಬನ್ನಿ ನಿಮ್ಮ ಆನ್‌ಲೈನ್ ಡೇಟಿಂಗ್ ಏಕೆ ಯಶಸ್ವಿಯಾಗುತ್ತಿಲ್ಲ ಎಂಬುದನ್ನು ನೋಡೋಣ... ಆನ್‌ಲೈನ್ ಡೇಟಿಂಗ್ ಮಾಡುತ್ತಿರುವ ಹುಡುಗಿಯರೇ ಸ್ವಲ್ಪ ಹುಷಾರ್!
ಮನೋಭಾವ
ನಿಮ್ಮ ಪ್ರೊಫೈಲ್ ನಿಮ್ಮ ಮನೋಭಾವವನ್ನು ಸಾರಿ ಹೇಳುವಂತಿರಬೇಕು. ಒಂದು ವೇಳೆ ಇದು ನೀವು ಡೇಟಿಂಗ್ ಮಾಡುವವರಿಗೆ ಸರಿಯಾಗಿ ಅರ್ಥವಾಗಲಿಲ್ಲವಾದಲ್ಲಿ, ಅದರಿಂದ ನಿಮ್ಮ ಮತ್ತು ಅವರ ನಡುವೆ ಸಂಬಂಧ ಮುಂದುವರಿಯಲು ವಿಫಲವಾಗುತ್ತದೆ. ಆದ್ದರಿಂದ ನಿಮ್ಮತನವನ್ನು ಪದಗಳಲ್ಲಿ ಹಿಡಿದಿಡುವ ಮತ್ತು ಒಂದು ಆಕರ್ಷಕ ಫೋಟೋವನ್ನು ಹಾಕುವ ಪ್ರಯತ್ನ ಮಾಡಿ.
ನಿರೀಕ್ಷೆಗಳು
ನೀವು ಜೀವನದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇರಿಸಿಕೊಂಡರೆ, ಎಂದಿಗೂ ತೃಪ್ತರಾಗಲು ಸಾಧ್ಯವಿಲ್ಲ. ಆದ್ದರಿಂದ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ಇವುಗಳು ಕಡಿಮೆ ಇದ್ದಷ್ಟು ನಿಮ್ಮ ಸಂಬಂಧಗಳು ದೃಢವಾಗುತ್ತವೆ. ಆದ್ದರಿಂದ ನಿರೀಕ್ಷೆಗಳ ಪಟ್ಟಿಯಲ್ಲಿ ಉದ್ದಕ್ಕೆ ಬರೆಯಲು ಹೋಗಬೇಡಿ ಮತ್ತು ಅಷ್ಟು ದೊಡ್ಡ ಪಟ್ಟಿ ತುಂಬುವಷ್ಟು ನಿರೀಕ್ಷೆಗಳನ್ನು ಇರಿಸಿಕೊಳ್ಳಲೂ ಹೋಗಬೇಡಿ. ಈ ನಿರೀಕ್ಷೆಗಳು ನಿಮ್ಮನ್ನು ಸಂಗಾತಿಯಾಗಲು ಬಯಸುವವರಿಂದ ದೂರ ಮಾಡುತ್ತವೆ.
ಯಾವಾಗಲು ಚುರುಕಾಗಿರಿ
ಒಂದು ವೇಳೆ ನಿಮ್ಮ ಜೊತೆ ಯಾರಾದರೂ ಚಾಟ್ ಮಾಡಿದರೆ, ಅವರು ನಿಮ್ಮಲ್ಲಿ ಆಸಕ್ತಿ ಕಳೆದುಕೊಳ್ಳುವ ಮೊದಲು ಶೀಘ್ರವಾಗಿ ಅವರಿಗೆ ಪ್ರತ್ಯುತ್ತರ ನೀಡಿ. ಒಂದು ವೇಳೆ ನೀವು ಅವರಿಗೆ ಪ್ರತ್ಯುತ್ತರಿಸಲು ತಡ ಮಾಡಿದರೆ, ಜನ ನಿಮ್ಮಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!
ಇತರೆ ವ್ಯಕ್ತಿಯನ್ನು ಗ್ರಹಿಸಿ
ಆನ್‌ಲೈನ್‌ನಲ್ಲಿ ಮಾತನಾಡುವಾಗ ಆ ವ್ಯಕ್ತಿಯ ಮನಸ್ಸನ್ನು ಗ್ರಹಿಸಿ. ಜಾಗರೂಕತೆಯಿಂದ ಅವರ ಒಳ ಮನಸ್ಸನ್ನು ಅರ್ಥ ಮಾಡಿಕೊಳ್ಳಿ. ಕೆಲವರು ನಿಧಾನವಾಗಿ ಮುಂದುವರಿಯಲು ಬಯಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಆತುರ ಪಡಬೇಡಿ. ಕೆಲವರಿಗೆ ಬೇಗ ಮುಂದುವರಿಯುವ ಮನಸ್ಸಿರುತ್ತದೆ, ಅಂತಹ ಸಂದರ್ಭಗಳಲ್ಲಿ ಅವರ ವೇಗಕ್ಕೆ ತಕ್ಕಂತೆ ನಿಮ್ಮ ವೇಗವನ್ನು ವೃದ್ಧಿಸಿಕೊಳ್ಳಿ. ಏನೇ ಆದರು ಆಸಕ್ತಿ ಕಳೆದುಕೊಳ್ಳುವ ಮೊದಲೆ ನಿಮ್ಮ ಸಂಗಾತಿಯನ್ನು ಪಡೆಯಿರಿ.



Click it and Unblock the Notifications

