Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಗಂಡಸರಿಗೆ ಇಂತಹ ಹುಡುಗಿಯರೆಂದರೆ ಎಲ್ಲಿಲ್ಲದ ಪ್ರೀತಿ!
ಕೆಟ್ಟ ಹುಡುಗಿಯರು! ಇವೆರಡೇ ಪದಗಳು ಸಾಕು, ಗಂಡಸರ ಅವರ ಕುರಿತಾಗಿ ದಿನವಿಡೀ ಕನಸು ಕಾಣಲು!, ಇವರ ಹಗಲುಗನಸುಗಳನ್ನು ತಡೆಯಲು ಯಾರಿಂದಲೂ ಸಹ ಸಾಧ್ಯವಿಲ್ಲ ಬಿಡಿ. ಈ ಬಿಂಕದ ಸಿಂಗಾರಿಗಳು, ಅವರ ಗ್ಲಾಸ್ಸಿ ಲಿಪ್ ಸ್ಟಿಕ್‌ಗಳು, ಎಲ್‌ಬಿಡಿಗಳು, ಸ್ಟಿಲೆಟ್ಟೊಗಳು, ಟ್ಯಾಟೂಗಳು, ಅದರಲ್ಲಿಯೂ ಮೈಮೇಲಿನ ಅಪಾಯಕಾರಿ ಉಬ್ಬು ತಗ್ಗುಗಳ ಮೇಲೆ ಇವರು ಬಿಡಿಸಿಕೊಂಡ ಆ ಟ್ಯಾಟೂಗಳು ಗಂಡಸರ ಎದೆ ಬಡಿತವನ್ನು ಹೆಚ್ಚಿಸುತ್ತವೆ.
ಆಗಾಗ ಹೆಂಗಸರು ಸಹ ಗೊಂದಲಕ್ಕೆ ಒಳಗಾಗುತ್ತಿರುತ್ತಾರೆ, ಈ ಗಂಡಸರೇಕೆ ಇಂತಹ ಹುಡುಗಿಯರ ಹಿಂದೆ ಬೀಳುತ್ತಾರೆ ಎಂದು. ವಾಸ್ತವ ಏನಪ್ಪಾ ಎಂದರೆ ಗಂಡಸರು ಕೆಟ್ಟ ಹುಡುಗಿಯರನ್ನು (ಮೈಮಾಟ ಎದ್ದು ಕಾಣುವಂತೆ ಉಡುಪು ಧರಿಸುವ ಹುಡುಗಿಯರು) ಇಷ್ಟಪಡುತ್ತಾರೆ, ಆದರೆ ಕೈಹಿಡಿಯುವುದು ಮಾತ್ರ ತಮ್ಮನ್ನು ಪ್ರೀತಿಸುವ, ಆರೈಕೆ ಮಾಡುವ ಒಳ್ಳೆಯ ಹುಡುಗಿಯರನ್ನು.
ಆದರೆ ಅವರ ಜೀವನದ ಒಂದು ಕಾಲ ಘಟ್ಟದಲ್ಲಿ ಈ ತುಂಟ ಹುಡುಗಿಯರು ಮಾತ್ರ ಅವರ ಮನಸ್ಸನ್ನು ಸಂಪೂರ್ಣವಾಗಿ ಕದ್ದಿರುತ್ತಾರೆ. ಗಂಡಸರು ಒಪ್ಪಿಕೊಳ್ಳಲಿ ಬಿಡಲಿ, ಇವರು ಗುಟ್ಟಾಗಿ ಕೆಟ್ಟ ಹುಡುಗಿಯರನ್ನು ಸ್ವಲ್ಪ ಮಟ್ಟಿಗೆ ಇಷ್ಟಪಟ್ಟಿರುತ್ತಾರೆ ಎಂಬುದು ಸುಳ್ಳಲ್ಲ. ಗಂಡಸರಿಗಿಂತ ಒಂದಿಷ್ಟು ಹೆಚ್ಚು ಶಾಟ್ ಟೆಕಿಲಾ ಕುಡಿಯುವ ಆ ಹುಡುಗಿಯರನ್ನು ಕಂಡರೆ ಗಂಡಸರಿಗೆ ಏಕೆ ಇಷ್ಟವಾಗದೆ ಇರುತ್ತದೆ ಹೇಳಿ? ಅವಕಾಶ ಸಿಕ್ಕರೆ ಯಾವ ಗಂಡಸು ಸಹ ಇಂತಹ ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಲು ಹಿಂದೇಟು ಹಾಕುವುದಿಲ್ಲ. ಅವರ ಬಿಂದಾಸ್ ಸ್ವಭಾವ ಗಂಡಸರನ್ನು ಸುಲಭವಾಗಿ ಆಕರ್ಷಿಸುತ್ತದೆ.
ಹೀಗಾಗಿ ಗಂಡಸರು ಕೆಟ್ಟ ಹುಡುಗಿಯರನ್ನು ಏಕೆ ಇಷ್ಟಪಡುತ್ತಾರೆ ಎಂದರೆ, ಅದಕ್ಕೆ ಹೇಳಲು ಸುಮಾರು ಕಾರಣಗಳು ದೊರೆಯುತ್ತವೆ. ನಿಮಗೆ ಗೊತ್ತಿರುವ ಹಾಗೆ ಗಂಡಸರಿಗೆ ವಿನೋದ ಎಂದರೆ ಇಷ್ಟ. ಅವರಿಗೆ ಗಂಭೀರವಾದ ವಿಚಾರಗಳೆಂದರೆ ಇಷ್ಟವಾಗುವುದಿಲ್ಲ. ಅದರಲ್ಲಿಯೂ ಗಂಭೀರವಾಗಿ ಪರಿಗಣಿಸದ ಒಂದು ಸಂಬಂಧವೊಂದು ಸಿಗುತ್ತದೆ ಎಂದರೆ ಅವರು ಖಂಡಿತ ಅದನ್ನು ಒಮ್ಮೆ ಪ್ರಯತ್ನಿಸಿ ನೋಡುತ್ತಾರೆ. ಬನ್ನಿ ಗಂಡಸರು ಕೆಟ್ಟ ಹುಡುಗಿಯರನ್ನು ಏಕೆ ಇಷ್ಟಪಡುತ್ತಾರೆ ಎಂಬುದಕ್ಕೆ ಈ ಕೆಳಕಂಡ ಕಾರಣಗಳನ್ನು ನಾವು ನೀಡಿದ್ದೇವೆ ಓದಿ.....

ಲೈಂಗಿಕ ಆಕರ್ಷಣೆ
ಹೌದು ಈ ಹುಡುಗಿಯರು ಬಿಂದಾಸ್ ಆಗಿ ಡ್ರೆಸ್ ಮಾಡಿಕೊಂಡಿರುತ್ತಾರೆ. ಮಿನಿ ಸ್ಕರ್ಟ್, ಮಿನಿ ಮಿಡಿ, ಜೀನ್ಸ್, ಟೈಟ್ ಟೀ ಶರ್ಟ್, ಟಾಪ್ ಇತ್ಯಾದಿ, ಇತ್ಯಾದಿ ನೋಡುವವರು ಕಣ್ಣು ಮಿಟುಕಿಸದೆ ಕದ್ದು ಮುಚ್ಚಿಯಾದರೂ ತಮ್ಮ ಅಂದವನ್ನು ಸವಿಯ ಬೇಕು ಎಂಬ ಮನೋಭಾವನೆಯಿಂದ ಇವರು ಉಡುಗೆ-ತೊಡುಗೆ ತೊಟ್ಟಿರುತ್ತಾರೆ. ತನಗಿಷ್ಟ ಬಂದ ಹಾಗೆ ನಾನು ಡ್ರೆಸ್ ಮಾಡಿಕೊಳ್ಳುವೆ ಎಂದರೂ ಸಹ, ಅಕ್ಕಪಕ್ಕದಲ್ಲಿರುವ ಬಕ್ರಾಗಳಿಗೆ ಹಿಡಿಸಲಿ ಎಂಬುದು ಇವರ ಒಳ ಮನಸ್ಸಿನ ಇಂಗಿತವಾಗಿರುತ್ತದೆ. ನೋಡಲು ಹಾಟ್ ಆಗಿ ಕಾಣಿಸುವ ಇವರು ಗಂಡಸರ ಕನಸಿನ ರಾಣಿಯರಾಗುತ್ತಾರೆ.

ಹಾಸಿಗೆಯಲ್ಲಿ ಸ್ವರ್ಗವನ್ನು ತೋರಿಸುತ್ತಾರೆ
ಇದು ಪ್ರತಿಯೊಬ್ಬ ಗಂಡಸಿನ ಒಂದು ಕಲ್ಪನೆ, ಆದರೆ ಈ ಕಲ್ಪನೆಗೆ ಉತ್ತರ ಸ್ಪಷ್ಟವಾಗಿ ದೊರೆತಿಲ್ಲ. ಇಷ್ಟು ಹಾಟ್ ಆಗಿ ಡ್ರೆಸ್ ಮಾಡಿಕೊಳ್ಳುವ ಇವರ ಜೊತೆಗೆ ಮಿಲನದಲ್ಲಿ ತೊಡಗಿದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಕಲ್ಪನೆ ಗಂಡಸರಿಗೆ ಇರುತ್ತದೆ. ಆದರೆ ಇದು ನಂಬುವಂತಹ ಮಾತಲ್ಲ ಬಿಡಿ. ಅಷ್ಟಕ್ಕೂ ಡ್ರೆಸ್ ಮಾಡಿಕೊಂಡ ಮಾತ್ರಕ್ಕೆ ಅವರು ಹಾಸಿಗೆ ಹಂಚಿಕೊಳ್ಳುವ ಮಟ್ಟಕ್ಕೆ ಇಳಿಯುವುದಿಲ್ಲ. ಇಳಿದರೂ ನೀವು ಅಂದುಕೊಂಡಂತೆ ಇರುವುದಿಲ್ಲ!!!

ಮುಚ್ಚು ಮರೆ ಇರುವುದಿಲ್ಲ
ಕೆಟ್ಟ ಹುಡುಗಿಯರಿಗೆ ಆ ಬಿರುದು ಬರಲು ಕಾರಣ ಎದ್ದು ಕಾಣುವ ಎದೆಯ ಉಬ್ಬು-ತಗ್ಗುಗಳು, ತೋಳೇ ಇಲ್ಲದ ಟಿ-ಶರ್ಟ್‌ಗಳು, ಅದರಿಂದ ಹೊರಗೆ ಎದ್ದು ಕಾಣುವ ಒಳ ಉಡುಪಿನ ಪಟ್ಟಿಗಳು. ದೇಹದ ಆಯಕಟ್ಟಿನ ಭಾಗದ ಮೇಲೆ ನೋಡುಗರ ಗಮನ ಸೆಳೆಯುವಂತಹ, ಒಮ್ಮೊಮ್ಮೆ ಪೋಲಿಯಾದಂತಹ ಟ್ಯಾಟೂಗಳು ಇವೆಲ್ಲವೂ ಸೇರಿ ಗಂಡಸರನ್ನು ಆಕರ್ಷಿಸುವ ಎಲ್ಲಾ ಅಂಶಗಳನ್ನು ಇವರು ಚಾಚೂ ತಪ್ಪದೆ ತಮ್ಮಲ್ಲಿ ಪ್ರದರ್ಶಿಸುತ್ತಾರೆ. ಹೀಗಾಗಿ ಗಂಡಸರು ಸೂಜಿಗಲ್ಲಿಗೆ ಆಕರ್ಷಿತರಾಗುವ ಕಬ್ಬಿಣದಂತೆ ಇವರ ಆಕರ್ಷಣೆಗೆ ಒಳಗಾಗುತ್ತಾರೆ. ಅಲ್ಲವೇನು?

ಹೊರಗೆ ಸುತ್ತಾಡಲು ಸದಾ ಸಿದ್ಧ
ನೀವು ಒಂದು ರೋಡ್ ಟ್ರಿಪ್ ಅನ್ನು ಪ್ಲಾನ್ ಮಾಡುತ್ತಿದ್ದೀರಾ? ಅಥವಾ ನಿಮ್ಮ ಸ್ನೇಹಿತರ ಮನೆಯಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದ್ದೀರಾ? ಒಳ್ಳೆಯ ಹುಡುಗಿಯರು ಯಾವತ್ತಿಗೂ ಈ ಯೋಜನೆಯ ಭಾಗವಾಗಲು ಹಿಂದೇಟು ಹಾಕುತ್ತಾರೆ. ಆದರೆ ಕೆಟ್ಟ ಹುಡುಗಿಯರು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಮನೆಯಿಂದ ಹೊರಗೆ ಹೋಗುವ ಒಂದು ಅವಕಾಶವನ್ನು ಸಹ ಅವರು ಬಿಟ್ಟು ಕೊಡುವುದಿಲ್ಲ.

ಕುಡಿಯಲು ಹಿಂದೇಟು ಹಾಕುವುದಿಲ್ಲ
ಕೆಟ್ಟ ಹುಡುಗಿಯರನ್ನು ಹುಡುಗರು ಇಷ್ಟಪಡಲು ಇರುವ ಕಾರಣಗಳಲ್ಲಿ ಒಂದು, ಆ ಹುಡುಗಿಯರು ಸಹ ಕುಡಿಯುತ್ತಾರೆ ಎಂಬುದು. ಗಂಡಸರಿಗೆ ಕಂಪನಿ ನೀಡುವ ಹುಡುಗಿಯರು ಇವರು, ಇವರ ಸಹವಾಸ ಮಾಡಿ ಕುಡಿಯುವುದನ್ನು ಕಲಿತ ಗಂಡಸರು ಸಹ ತುಂಬಾ ಜನ ಇರುತ್ತಾರೆ. ಇದೇ ಗುಣ ಗಂಡಸರನ್ನು ಇವರತ್ತ ಹೆಚ್ಚು ಆಕರ್ಷಿಸುತ್ತದೆ. ನಿಮ್ಮ ಜೊತೆಗೆ ಸ್ಪರ್ಧೆಗೆ ಬಿದ್ದು ಕುಡಿಯುವ ಇವರು, ನಿಮ್ಮನ್ನು ಕುಡಿತದಲ್ಲಿ ಸೋಲಿಸುವ ಮಟ್ಟಕ್ಕೆ ಇರುತ್ತಾರೆ ಹುಷಾರ್!!!.



Click it and Unblock the Notifications