ಅರೆರೆ...ಹುಡುಗಿಯರಿಗೆ ತಮಾಷೆ ಮಾಡುವ ಹುಡುಗರೇ ಇಷ್ಟವಂತೆ!

By Super

ಪುರುಷರು ಮಹಿಳೆಯರಲ್ಲಿ ಕಾಣಬಯಸುವ ಗುಣಗಳಲ್ಲಿ ಸೌಂದರ್ಯ ಪ್ರಮುಖವಾಗಿದೆ. ಅದೇ ಮಹಿಳೆಯರು ಪುರುಷರ ಯಾವ ಗುಣವನ್ನು ಮೆಚ್ಚಿಕೊಳ್ಳುತ್ತಾರೆಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಪ್ರತಿ ಮಹಿಳೆಯ ಅಪೇಕ್ಷೆಯೂ ಬೇರೆ ಬೇರೆ ತೆರನಾಗಿರುತ್ತದೆ. ಆದರೆ ಬಹುತೇಕ ಯುವತಿಯರು ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯನ್ನು ಇಷ್ಟಪಡುವುದು ಕಂಡುಬಂದಿದೆ. ಯುವತಿಯರು ಇತರರ ಗಮನ ತಮ್ಮೆಡೆಗೆ ಸೆಳೆಯಬೇಕೆಂದು ಇಷ್ಟಪಡುತ್ತಿದ್ದು ಇದಕ್ಕೆ ಕುಮ್ಮಕ್ಕು ನೀಡುವ ಯುವಕರನ್ನೇ ಹೆಚ್ಚು ಇಷ್ಟಪಡುವುದು ಸಹಾ ಕಂಡುಬಂದಿದೆ.

ಆದರೆ ಕಾಲೇಜಿನಲ್ಲಿ ವ್ಯಾಸಾಂಗ ನಡೆಸುತ್ತಿರುವ ಯುವಕರು ಈ ರಹಸ್ಯಗಳನ್ನು ಅರಿಯದೇ ತಮ್ಮಲ್ಲಿರುವ ಸೌಂದರ್ಯ, ಬೈಕು, ಒಳ್ಳೊಳ್ಳೇ ಉಡುಗೆಗಳು ಮೊದಲಾದವುಗಳ ಮೂಲಕ ಯುವತಿಯರ ಗಮನ ಸೆಳೆಯಲು ಪ್ರಯತ್ನಿಸಿದರೂ ವಿಫಲರಾಗಿ ಅದೇ ರೂಪವಂತನಲ್ಲದಿದ್ದರೂ ಕೇವಲ ಹಾಸ್ಯ ಚಟಾಕಿ ಹಾರಿಸುತ್ತಾ ಲಲ್ಲೆ ಹೊಡೆಯುತ್ತಿರುವ ಯುವಕರ ಅಕ್ಕಪಕ್ಕವೇ ಇರುವುದನ್ನು ನೋಡಿ ಕೈ ಕೈ ಹಿಸುಕಿಕೊಳ್ಳುತ್ತಾರೆ. ನಿಮ್ಮದೂ ಇದೇ ಅವಸ್ಥೆಯಾಗಿದ್ದರೆ ಇದರ ಹಿಂದಿನ ರಹಸ್ಯವನ್ನು ಮುಂದೆ ಓದಿ... ಹೆಂಗಸರಿಗೆ ಪೆದ್ದು ಗಂಡಸರು ಏಕೆ ಇಷ್ಟವಾಗುತ್ತಾರೆ?

Why Girls Fall For Funny Guys?


ಆದರೆ ಒಂದು ಎಚ್ಚರಿಕೆಯನ್ನು ಗಮನಿಸಿ: ಯಾವುದೇ ಯುವತಿ ಯುವಕರ ಹಾಸ್ಯ ತೀರಾ ಹೆಚ್ಚಾಗುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಪ್ರಯತ್ನಗಳು ತಿಳಿಹಾಸ್ಯದ ಮಿತಿಯಲ್ಲಿಯೇ ಇರಲಿ!

ಈ ಯುವಕರು ಮನರಂಜನೆಯನ್ನು ಒದಗಿಸುತ್ತಾರೆ
ದಿನದ ಯಾವುದೇ ಹೊತ್ತಿನಲ್ಲಿ, ಯಾವುದೇ ಸಂದರ್ಭದಲ್ಲಿ ಕೇಳುವವರಲ್ಲಿ ನಗು ಮೂಡಿಸುವ ಮಾತುಗಾರಿಕೆ ಇರುವ ಯುವಕರನ್ನೇ ಯುವತಿಯರು ಹೆಚ್ಚು ಇಷ್ಟಪಡುತ್ತಾರೆ. ರೂಪವಂತನಲ್ಲದಿದ್ದರೂ ಯುವತಿಯರ ಗಮನ ಪಡೆಯಲು ಇದೇ ಮುಖ್ಯ ಗುಟ್ಟು.

ಈ ಯುವಕರು ಯಾವಾಗಲೂ ಗಂಭೀರರಾಗಿ ಇರುವುದೇ ಇಲ್ಲ
ಗಂಭೀರವಾಗಿ ಇರಲೇಬೇಕಾದ ಸಂದರ್ಭಗಳಿಗೆ ಹೊರತಾಗಿ ಇತರ ಸಂದರ್ಭಗಳಲ್ಲಿ ಚುರುಕಾಗಿದ್ದು ಸುತ್ತಮುತ್ತಲಿನವರಲ್ಲಿ ನಗೆಚಟಾಕಿ ಹಾರಿಸುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ ಎನ್ನಿಸುವಂತೆ ಲಾಲಿತ್ಯದಿಂದ ವರ್ತಿಸುವ ಯುವಕರು ಸುಲಭವಾಗಿ ಯುವತಿಯರ ಗಮನ ಸೆಳೆಯುತ್ತಾರೆ. ಗಂಡಸರಿಗೆ ಇಂತಹ ಹುಡುಗಿಯರೆಂದರೆ ಎಲ್ಲಿಲ್ಲದ ಪ್ರೀತಿ!

ಈ ಯುವಕರು ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ
ಇವರು ಯಾವ ಮಾತುಗಳನ್ನಾಡಿದರೂ ಆತ್ಮವಿಶ್ವಾಸದಿಂದ ಸ್ಪಷ್ಟವಾದ ಪದಗಳಲ್ಲಿ ಮಾತನಾಡುತ್ತಾರೆ. ಅಸಂಬದ್ದವಾದ ಆಣೆ ಭಾಷೆಗಳ ಹೊರತಾಗಿ ಸ್ಪಷ್ಟವಾದ ಪದಗಳಲ್ಲಿ ಇದೇ ಹೌದು ಎಂಬಂತೆ ಮಾತನಾಡುತ್ತಾರೆ. ಈ ಯುವಕರನ್ನು ಯುವತಿಯರು ಕಣ್ಣು ಮುಚ್ಚಿ ಮೆಚ್ಚಿಬಿಡುತ್ತಾರೆ.

ಇತರರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ
ಈ ಯುವಕರಲ್ಲಿ ತಮ್ಮ ಬಗ್ಗೆ ಯಾವುದೇ ಕೀಳರಿಮೆ ಇರದಿದ್ದು ತಮ್ಮನ್ನು ಇದ್ದ ಹಾಗೇ ಇತರರಿಗೆ ಪರಿಚಯಿಸಿಕೊಂಡು ಇತರರಿಂದಲೂ ಇದನ್ನೇ ಅಪೇಕ್ಷಿಸುತ್ತಾರೆ. ಇವರು ತಮ್ಮ ಅಕ್ಕಪಕ್ಕದಲ್ಲಿರುವವರೊಂದಿಗೆ ಸ್ನೇಹದಿಂದಿದ್ದು ಎಲ್ಲರೂ ಆರಾಮವಾಗಿರಲು, ನಕ್ಕು ನಲಿಯುವ ವಾತಾವರಣವನ್ನು ಸೃಷ್ಟಿಸುತ್ತಾರೆ.

X
Desktop Bottom Promotion