Latest Updates
-
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ
ಗರ್ಲ್ ಫ್ರೆಂಡ್‌ನ ಕಿರಿಕಿರಿ ದಿನೇ ದಿನೇ ಹೆಚ್ಚಾಗುತ್ತಿದೆ ಕಣ್ರೀ!
ಪ್ರೀತಿಯ ಮೊದಲ ಹಂತದಲ್ಲಿ ಗಂಡಸರು ಹೆಂಗಸರ ಗಮನವನ್ನು ತಮ್ಮತ್ತ ಸೆಳೆಯಲು, ಸದಾ ಅನುಸರಿಸುತ್ತ ಇರುತ್ತಾರೆ. ಅವರನ್ನು ಮೆಚ್ಚಿಸಲು ಸದಾ ಏನಾದರು ಮಾಡುತ್ತ ಇರುತ್ತಾರೆ. ಆದರೆ ಯಾವಾಗ ನಿಮ್ಮ ಹುಡುಗಿ ನಿಮ್ಮ ಮೇಲೆಯೇ ಭಾವನಾತ್ಮಕವಾಗಿ ಅವಲಂಬಿತರಾಗಿ ಬಿಡುತ್ತಾರೋ, ಆಗ ನೋಡಿ ನೀವು ಆಕೆಯಿಂದ ದೂರ ಓಡಲು ಶುರು ಮಾಡುತ್ತೀರಿ. ಏಕೆ ಹೀಗೆ ಹೆಚ್ಚಾಗಿ ಅವಲಂಬಿತರಾಗುವ ಹೆಂಗಸರು ಮತ್ತು ಗಂಡಸರು ಇತರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುತ್ತಾರೆ. ಏಕೆಂದರೆ ಈ ಅವಲಂಬಿತನವು ಅಭದ್ರತೆಯ ಸಂಕೇತ.
ಇಂತಹ ಅವಲಂಬಿತನದ ಸಂಕೇತಗಳು ಮತ್ತು ನಿಮ್ಮ ಅಗತ್ಯ ಬೇಡುವ ಗರ್ಲ್ ಫ್ರೆಂಡ್
ಒಂದು ವೇಳೆ ನಿಮ್ಮ ಗರ್ಲ್ ಫ್ರೆಂಡ್ ಅಭದ್ರತೆಯಿಂದ ನರಳುತ್ತಿದ್ದಲ್ಲಿ, ನಿಮ್ಮ ಸಂಬಂಧದಲ್ಲಿ ನಿಮಗೆ ಸ್ವಲ್ಪ ಉಸಿರುಗಟ್ಟಿಸುವ ಅನುಭವವುಂಟಾಗುತ್ತದೆ. ಬಹುಶಃ ಇದೇ ಕಾರಣದಿಂದಾಗಿ ಗಂಡಸರು ಇಂತಹ ಸಂಬಂಧದಿಂದ ದೂರ ಸರಿಯುತ್ತಾರೆ. ಇದೇ ನೀತಿಯನ್ನು ಹುಡುಗಿಯರು ಸಹ ಅನುಸರಿಸುತ್ತಾರೆ. ಹತಾಶೆಯಲ್ಲಿರುವ ಗಂಡಸು ಅಸ್ಥಿರ ಮನೋಭಾವವನ್ನು ಹೊಂದಿರುತ್ತಾನೆ. ಈ ಅಂಕಣದಲ್ಲಿ ನಿಮ್ಮ ಗರ್ಲ್ ಫ್ರೆಂಡ್ ನಿಮ್ಮ ಮೇಲೆ ಹೆಚ್ಚು ಅವಲಂಬಿತರಾದಾಗ ಏನು ಮಾಡಬೇಕು ಎಂಬುದನ್ನು ನಾವು ಚರ್ಚಿಸಿದ್ದೇವೆ ಮುಂದೆ ಓದಿ...
ಆತುರಪಡಬೇಡಿ
ನಿಮ್ಮ ಗರ್ಲ್‌ಫ್ರೆಂಡ್ ನಿಮ್ಮ ಮೇಲೆ ಭಾವನಾತ್ಮಕವಾಗಿ ತೀರಾ ಅವಲಂಬಿತರಾದರೆ, ಆ ಕ್ಷಣ ಅಲ್ಲಿಂದ ಓಡಿ ಹೋಗುವ ಪ್ರಯತ್ನ ಮಾಡಬೇಡಿ. ಆಕೆಯನ್ನು ಸುಧಾರಿಸುವ ಪ್ರಯತ್ನವನ್ನು ಮಾಡುತ್ತ, ಇನ್ನೂ ಸಂಬಂಧದಲ್ಲಿ ಮುಂದುವರಿಯುವ ಸಾಧ್ಯತೆ ನಿಮ್ಮ ಬಳಿ ಇರುತ್ತದೆ. ಹಾಗೆ ಒಂದು ವೇಳೆ ನಿಮ್ಮ ಪ್ರಯತ್ನ ವಿಫಲಗೊಂಡಲ್ಲಿ ಮತ್ತು ಆಕೆ ನಿಮಗೆ ಭಾವನಾತ್ಮಕವಾಗಿ ತೊಂದರೆ ಕೊಡುವಂತ ಸನ್ನಿವೇಶ ನಿರ್ಮಾಣಗೊಂಡಾಗ ಮಾತ್ರ ಇದನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಿ. ಅಲ್ಲಿಯವರೆಗೆ ತಾಳ್ಮೆಯಿಂದಿರಿ. ಬಾಯ್ ಫ್ರೆಂಡ್ ಸಿಕ್ಕಾಪಟ್ಟೆ ಚೆಂದ ಇದ್ದರೆ ಕಿರಿಕಿರಿ!

ಆಕೆಗೆ ಹೇಳಿ
ಹೀಗೆ ಅವಲಂಬಿತರಾಗುವುದರಿಂದ ಉಂಟಾಗುವ ತೊಂದರೆಗಳನ್ನು ಆಕೆಗೆ ವಿವರಿಸಿ ಹೇಳಿ. ಕೆಲವು ಹೆಂಗಸರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅವಲಂಬಿತರಾಗುವ ಸ್ವಭಾವವು ವ್ಯಕ್ತಿಯ ಅಭದ್ರತೆಯ ಗುಣವನ್ನು ಸಾರುತ್ತದೆ. ಆಕೆಗೆ ಇಂತಹ ಸ್ಥಿತಿ ಬರಲು ಕಾರಣವನ್ನು ಕಂಡು ಹಿಡಿಯಿರಿ. ಒಂದು ವೇಳೆ ನಿಮ್ಮ ಅಗತ್ಯವನ್ನು ಖಚಿತವಾಗಿ ಬಯಸುವಂತಹ ಸಮಸ್ಯೆ ಇದ್ದಲ್ಲಿ, ಅದನ್ನು ಮೊದಲು ಪರಿಹರಿಸಿ. ಆಗ ಓಡಿ ಹೋದರೆ, ನಿಮ್ಮ ಪರಿಸ್ಥಿತಿ ಬಿಗಡಾಯಿಸುತ್ತದೆ.
ದಿನಗಳನ್ನು ಗಮನಿಸಿ
ನೀವು ನಿಮ್ಮ ಸಂಬಂಧದಲ್ಲಿ ಒಳ್ಳೆಯ ದಿನಗಳನ್ನು ಅಥವಾ ಕೆಟ್ಟ ದಿನಗಳನ್ನು ಅನುಭವಿಸುತ್ತಿದ್ದೀರಾ? ನೋಡಿಕೊಳ್ಳಿ. ಒಂದು ವೇಳೆ ನೀವು ನಿಮ್ಮ ಸಂಬಂಧದಲ್ಲಿ ಕೆಟ್ಟ ದಿನಗಳನ್ನು ನೋಡುತ್ತಿದ್ದಲ್ಲಿ, ತಾಳ್ಮೆಯನ್ನು ವಹಿಸಿ. ನಿಂತು ಸಮಸ್ಯೆಗಳನ್ನು ಎದುರಿಸಿ. ಆದರೆ ತನ್ನ ಎಸ್,ಎಂ,ಎಸ್‌ಗೆ 3 ನಿಮಿಷ ತಡವಾಗಿ ಉತ್ತರಿಸಿದ್ದಕ್ಕೆ ಸಮಾಜಾಯಿಷಿ ಕೇಳುವ ನಿಮ್ಮ ಹುಡುಗಿಯ ಸ್ವಭಾವಕ್ಕೆ ಯಾವ ರೀತಿ ಉತ್ತರಿಸಬಹುದು ಎಂದು ನೀವೇ ಆಲೋಚಿಸಿ. ಮನಿ ಮೈಂಡ್ ಗರ್ಲ್ ಫ್ರೆಂಡ್ ಪ್ರೀತಿಗೆ ಅರ್ಹಳಲ್ಲ!
ಪ್ರೀತಿಯನ್ನು ಅರ್ಥ ಮಾಡಿಕೊಳ್ಳಿ
ಅವಲಂಬನೆ ಮತ್ತು ಪ್ರೀತಿಯ ನಡುವೆ ತೀರಾ ವ್ಯತ್ಯಾಸಗಳು ಇರುತ್ತವೆ. ನಿಮ್ಮ ಜೊತೆಗೆ ಇರಬೇಕು ಎಂದು ಮನಃಪೂರ್ವಕವಾಗಿ ಬಯಸುವ ಹುಡುಗಿಯ ಪ್ರೀತಿಯು ನಿಮಗೆ ಕಿರಿಕಿರಿಯುಂಟು ಮಾಡುವುದಿಲ್ಲ. ಆದರೆ ತನ್ನ ಪಕ್ಕದಲ್ಲಿಯೇ ಇರಬೇಕು ಎಂದು ಹಠಮಾಡುವ ಹುಡುಗಿ ಖಂಡಿತ ನಿಮಗೆ ಕಿರಿಕಿರಿ ಮಾಡುತ್ತಾಳೆ. ಪ್ರೀತಿ ಕಾಳಜಿ ತೋರುತ್ತದೆ, ಅವಲಂಬನೆ ಕಿರಿಕಿರಿ ತೋರುತ್ತದೆ. ಸಂಬಂಧಗಳಲ್ಲಿ ಇದನ್ನು ನೋಡಿಕೊಂಡು ಮುಂದುವರಿಯಿರಿ. ನಿಮಗೆ ಉಸಿರು ಕಟ್ಟುವಂತಹ ಸ್ಥಿತಿಯಲ್ಲಿ ನೀವು ಇರಲು ಹೋಗಬೇಡಿ.



Click it and Unblock the Notifications











