Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಗಂಡಸರೇ ಹೀಗೆ, ನೀವೇ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ..!
ವಿವಾಹವೆಂದರೆ ಇಬ್ಬರು ಜೀವನಸಂಗಾತಿಗಳಾಗುವುದು ಮಾತ್ರವಲ್ಲ, ಎರಡು ಕುಟುಂಬಗಳ ನಡುವೆಯೂ ಬಾಂಧ್ಯವ್ಯವೇರ್ಪಡುತ್ತದೆ. ಪತಿಯ ಮನಗೆಲ್ಲಲು ಪತಿಯ ಮನೆಗೆ ಆಗಮಿಸಿದ ನವವಧು ಪತಿಯ ಇಷ್ಟದ ಜೊತೆಗೇ ಅವರ ಮನೆಯವರ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಅಂತೆಯೇ ಪತಿಯೂ ತನ್ನ ಪತ್ನಿಯಿಂದ ಹಲವು ವಿಧದ ಆರೈಕೆಯನ್ನು ಅಪೇಕ್ಷಿಸುತ್ತಾನೆ.
ಒಂದು ವೇಳೆ ನೀವು ಆ ಅಪೇಕ್ಷೆಗಳಂತೆ ನಡೆಯದಿದ್ದಲ್ಲಿ ಅಥವಾ ಆ ಅಪೇಕ್ಷೆಗಳಿಗೆ ವಿರುದ್ಧವಾಗಿ ನಡೆಯಲು ಪ್ರಾರಂಭವಾದರೆ ಮಾತ್ರ ನಿಮ್ಮ ಪತಿಯ ಮನೆಯಲ್ಲಿ ಕಷ್ಟಗಳು ಎದುರಾಗಲು ತೊಡಗಬಹುದು. ಏಕೆಂದರೆ ಪತಿಯರು ತಮ್ಮ ಪತ್ನಿಯರು ತಮ್ಮ ಮೇಲೆ ಅಧಿಕಾರ ಚಲಾಯಿಸುವುದನ್ನು ಬಯಸರು.
ಈ ವಿಷಯದಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲೂ ಇದೇ ಪ್ರತಿ ಕಂಡುಬಂದರೆ ಭಾರತೀಯರು ಕೊಂಚ ಹೆಚ್ಚಾಗಿಯೇ ಈ ಬಗ್ಗೆ ವ್ಯಾಕುಲರಾಗಿರುತ್ತಾರೆ. ಆದರೆ ಭಾರತೀಯ ಪತಿಯರು ಹೊರಗೆ ಎಷ್ಟು ಕಠಿಣರು ಎಂದು ಕಂಡುಬಂದರೂ ಭಾವೋದ್ವೇಗದ ವಿಷಯ ಬಂದಾಗ ಮಾತ್ರ ಅತಿ ಹೆಚ್ಚಾಗಿ ವ್ಯಾಕುಲರಾಗುತ್ತಾರೆ. ಅದರಲ್ಲೂ ಪತ್ನಿಯರ ಕಣ್ಣೀರಿಗೆ ಕರಗದ ಪತಿಯೇ ಇಲ್ಲ! ಇಂತಹ ಹುಡುಗರ ಕೈ ಹಿಡಿಯುವವರು ನಿಜಕ್ಕೂ ಅದೃಷ್ಟವಂತರು!
ಒಂದು ವೇಳೆ ಪತ್ನಿಯ ಭಾವನೆಗಳಿಗೆ ಪತಿ ಸರಿಯಾಗಿ ಸ್ಪಂದಿಸದಿದ್ದರೆ ಅದರಿಂದ ಬೇಸರಗೊಳ್ಳುವ ಪತ್ನಿಯನ್ನು ಓಲೈಸಿಕೊಳ್ಳಲು ಪತಿಯರು ಪಡುವ ಪಾಡು ಮಾತ್ರ ಯಾರಿಗೂ ಬೇಡ. ಏಕೆಂದರೆ ಪತಿಗೆ ಯಾವ ವಿಷಯಗಳು ಇಷ್ಟವಾಗುವುದಿಲ್ಲ ಎಂಬುದನ್ನು ನವವಧುವಾದ ನಿಮಗಿನ್ನೂ ಅರಿವಾಗಿಲ್ಲ. ಇದನ್ನು ಯಾರು ಹೇಳಿಕೊಡುವುದೂ ಇಲ್ಲ.
ಆದರೆ ಹಿರಿಯರ ಅನುಭವದ ಸಾರದಿಂದ ಸಂಗ್ರಹಿಸಲಾದ ಕೆಲವು ಹಿತವಚನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಇದನ್ನು ಅನುಸರಿಸುವ ಮೂಲಕ ನಿಮ್ಮ ದಾಂಪತ್ಯ ಜೀವನ ಸುಗಮವಾಗಲಿ ಎಂದು ಬೋಲ್ಡ್ ಸ್ಕೈ ತಂಡ ಹಾರೈಸುತ್ತದೆ. ಮದುವೆ ಮುಂಚೆ ವಧುವಿಗೆ ಕಾಡುವ ಸಂದೇಹ ಅಷ್ಟಿಷ್ಟಲ್ಲ!

ನೀವು ಆತನಿಗಾಗಿ ಅಡುಗೆ ಮಾಡದಿರುವುದು ಆತನಿಗೆ ಇಷ್ಟವಿಲ್ಲ
ಸಾಮಾನ್ಯವಾಗಿ ಪತಿ ತನ್ನ ಪತ್ನಿ ತನಗಾಗಿ ರುಚಿಯಾದ ಅಡುಗೆ ಮಾಡಿ ಬಡಿಸಬೇಕೆಂದು ಬಯಸುತ್ತಾನೆ. ಒಂದು ವೇಳೆ ನೀವು ಆತನಿಗಾಗಿ ಅಡುಗೆ ಮಾಡದೇ ಇದ್ದರೆ ಆತ ತುಂಬಾ ವ್ಯಾಕುಲನಾಗುತ್ತಾನೆ. ಇದಕ್ಕೆ ಕಾರಣವೇನು ಎಂಬ ವಿಷಯದ ಕುರಿತು ತಲೆಕೆಡಿಸಿಕೊಳ್ಳುತ್ತಾನೆ. ಆದ್ದರಿಂದ ಅನಿವಾರ್ಯ ಕಾರಣಗಳಿಲ್ಲದೇ ಇದ್ದರೆ ಆತನಿಗೆ ಅಡುಗೆ ಮಾಡದೇ ಇರಬೇಡಿ. ಉತ್ತಮ ಮಾರ್ಗವೆಂದರೆ ಆತನ ಇಷ್ಟದ ಅಡುಗೆಯನ್ನು ರುಚಿರುಚಿಯಾಗಿ ತಯಾರಿಸಿ ಬಡಿಸಿ. ಇದು ನಿಮ್ಮ ದಾಂಪತ್ಯವನ್ನು ಇನ್ನಷ್ಟು ಬಲಪಡಿಸುವುದು.

ಆತನ ತಾಯಿಯನ್ನು ಗೌರವಿಸದುರುವುದು ಆತನಿಗ ಇಷ್ಟವಿಲ್ಲ
ಬಹುತೇಕ ಭಾರತೀಯ ಪತಿಯರು ಮದುವೆಗೂ ಮುನ್ನ ತಮ್ಮ ತಾಯಿಯ ಪರವಾಗಿ ಅತಿ ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ವಿವಾಹದ ಬಳಿಕ ಅವರು ನೀಡುವಷ್ಟೇ ಗೌರವವನ್ನು ನೀವೂ ನೀಡಬೇಕೆಂದು ಬಯಸುತ್ತಾರೆ. ಆದ್ದರಿಂದ ನಿಮ್ಮ ಅತ್ತೆ, ನಾದಿನಿ ಮತ್ತಿತರ ಬಂಧುಗಳ ಜೊತೆಗೆ ಬಹಳ ನಾಜೂಕಿನಿಂದ ವ್ಯವಹರಿಸಿ ಅವರನ್ನು ಗೌರವಿಸಿ. ಪ್ರಾರಂಭದಿಂದಲೇ ಎಷ್ಟು ಸಾಧ್ಯವೋ ಅಷ್ಟು ಸೌಮ್ಯತೆಯಿಂದ ಎಲ್ಲರ ಮನಗೆಲ್ಲಿರಿ. ವಿಶೇಷವಾಗಿ ನಿಮ್ಮ ಅತ್ತೆಯ ಮನಗೆಲ್ಲಲು ಪ್ರಯತ್ನಿಸಿ. ಇದರಿಂದ ನಿಮ್ಮ ಮುಂದಿನ ಬಾಳು ಬಂಗಾರವಾಗುವುದು. ನೀವು ಅವರನ್ನು ಗೌರವಿಸಿದಂತೆಯೇ ನಿಮ್ಮನ್ನೂ ಎಲ್ಲರೂ ಗೌರವದಿಂದ ಕಾಣಲು ತೊಡಗುತ್ತಾರೆ. ಇದು ನಿಮ್ಮ ಪತಿಗೆ ಅತ್ಯಂತ ಇಷ್ಟವಾಗುವ ಸಂಗತಿಯಾಗಿದೆ.

ಆತನ ಸ್ಥಳವನ್ನು ಎಂದೂ ಆಕ್ರಮಿಸಬೇಡಿ
ಬಹುತೇಕ ಎಲ್ಲಾ ದೇಶದ ಪತಿಯರೂ ಕೆಲವು ಪ್ರತ್ಯೇಕ ಸ್ಥಳಗಳಿಗೆ ಹೆಚ್ಚಾಗಿ ಭೇಟಿ ನೀಡಲು ಮತ್ತು ಕೆಲವು ಸ್ಥಳಗಳಿಗೆ ಭೇಟಿ ನೀಡದೇ ಇರಲು ಇಚ್ಛಿಸುತ್ತಾರೆ. ಈ ಪರಿಯನ್ನು ಎಂದಿಗೂ ಪ್ರಶ್ನಿಸಲು ಹೋಗಬೇಡಿ. ವಿಶೇಷವಾಗಿ ಭಾರತೀಯ ಪತಿಯರು ತಮ್ಮ ಈ ಪ್ರತ್ಯೇಕತೆಯನ್ನು ಎಂದಿಗೂ ಬಿಡಲು ಇಚ್ಛಿಸುವುದಿಲ್ಲ. ಕೆಲವೊಮ್ಮೆ ಏಕಾಂತದಲ್ಲಿಯೂ ಇರಲು ಅವರು ಇಚ್ಛಿಸುತ್ತಾರೆ. ಎಂದಿಗೂ ಈ ಸ್ಥಳವನ್ನು ಆಕ್ರಮಿಸಲು ಹೋಗಬೇಡಿ. ಅವರು ಹೋಗಲಿಚ್ಛಿಸದಿರುವ ಸ್ಥಳಕ್ಕೆ ಹೋಗಲು ಬಲವಂತ ಮಾಡಬೇಡಿ.

ಅತಿ ಹೆಚ್ಚು ಕೆಲಸದಲ್ಲಿ ವ್ಯಸ್ತರಿರುವ ಪತ್ನಿಯನ್ನೂ ಅವರು ಸಹಿಸರು
ಪ್ರತಿಯೊಬ್ಬರಿಗೂ ತಮ್ಮ ತಮ್ಮ ಕರ್ತವ್ಯಗಳು ಇಡಿಯ ದಿನ ಇರುತ್ತದೆ. ಆದರೆ ಇಡಿಯ ದಿನ ಕೆಲಸದಲ್ಲಿಯೇ ಇರುವ ಪತ್ನಿಯನ್ನು ಯಾವುದೇ ಪತಿ ಇಚ್ಛಿಸರು. ಅದರಲ್ಲೂ ವಿಶೇಷವಾಗಿ ಭಾರತೀಯ ಪತಿಯರು ಅವರು ಮನೆಯಲ್ಲಿದ್ದಾಗ ಪತ್ನಿ ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದು ಅವರನ್ನು ಅಲಕ್ಷಿಸುವುದನ್ನು ಸಹಿಸುವುದಿಲ್ಲ. ಅದರಲ್ಲೂ ಬೇರೆ ಸಮಯದಲ್ಲಿ ಮಾಡಬಹುದಾಗಿದ್ದ ಕೆಲಸವನ್ನು ಅವರು ಬಂದ ಬಳಿಕ ಪ್ರಾರಂಭಿಸಿ ಕೊನೆಗೊಳ್ಳುವ ಮಾತೇ ಇಲ್ಲದಿದ್ದಾಗ ಇವರಿಗೆ ರೇಗುತ್ತದೆ. ಆದ್ದರಿಂದ ಪತಿ ಮನೆಯಲ್ಲಿದ್ದಾಗ ಅಗತ್ಯವಿರುವ ಕೆಲಸಗಳನ್ನು ಮಾತ್ರ ನಿರ್ವಹಿಸಿ.

ನಿಮ್ಮ ತಾಯಿಯೊಂದಿಗೆ ಅತಿ ಹೆಚ್ಚು ಸಮಯ ಕಳೆಯಬೇಡಿ
ನಿಮ್ಮ ಬಗ್ಗೆ ನಿಮ್ಮ ತಾಯಿಯೂ ಅಷ್ಟೇ ವ್ಯಾಕುಲರಾಗಿರುವುದರಿಂದ ನಿಮ್ಮ ಬಗ್ಗೆ ವಿಚಾರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈ ವಿಚಾರಣೆ ನಿಮ್ಮ ಪತಿ ಮನೆಯಲ್ಲಿದ್ದಾಗ ಅಥವಾ ಅತಿ ಹೆಚ್ಚಾಗಬಾರದು. ಏಕೆಂದರೆ ನಿಮ್ಮ ಪತಿ ನಿಮ್ಮ ತಾಯಿಯೊಂದಿಗಿನ ನಿಮ್ಮ ಒಡನಾಟ ಒಂದು ಹಂತಕ್ಕಿಂತ ಹೆಚ್ಚಾಗುವುದು ಇಷ್ಟವಾಗುವುದಿಲ್ಲ. ಆದ್ದರಿಂದ ಪತಿಯ ಉಪಸ್ಥಿತಿಯಲ್ಲಿ ನಿಮ್ಮ ತಾಯಿಯ ಜೊತೆಗೆ ಅತಿ ಕಡಿಮೆ ಸಂವಹನ ನಡೆಸಿ.

ನೀವು ಮಾತು ನೀಡಿದ ಸಮಯವನ್ನು ಪಾಲಿಸಿ
ಯಾವಾಗಲಾದರೂ ಹೊರಗೆ ಹೋಗುವ ಸಂದರ್ಭದಲ್ಲಿ ಒಂದು ಸಮಯಕ್ಕೆ ಹೊರಗೆ ಸಂಧಿಸುವ ಒಪ್ಪಂದವಾಗಿದ್ದರೆ ಅನಿವಾರ್ಯ ಸಂದರ್ಭಗಳಲ್ಲದೇ ಆ ಸಮಯವನ್ನು ಸರ್ವಥಾ ಪಾಲಿಸಿ. ಒಂದು ವೇಳೆ ತಡವಾಗಿದ್ದರೆ ಮುಂಚಿತವಾಗಿ ತಿಳಿಸಿ. ಒಂದು ವೇಳೆ ನೀವು ಸಮಯಪಾಲಿಸದಿದ್ದರೆ (ತಡವಾಗಿ ಬಂದರೆ) ಮತ್ತು ಈ ಬಗ್ಗೆ ತಿಳಿಸದೇ ಇದ್ದರೆ ಭಾರತೀಯ ಪತಿಯರು ಅತೀವವಾಗಿ ವ್ಯಾಕುಲಗೊಳ್ಳುತ್ತಾರೆ.

ಆತನಿಗೆ ಇಷ್ಟವಿಲ್ಲದ ಉಡುಗೆ ತೊಡಬೇಡಿ
ಭಾರತೀಯ ಪತಿಯರು ಸಮಾಜದಲ್ಲಿ ಎಂತಹ ಉಡುಗೆಗಳನ್ನು ಉಟ್ಟಿರುವ ಮಹಿಳೆಯರನ್ನೂ ಗಮನಿಸುತ್ತಾರಾದರೂ ತಮ್ಮ ಪತ್ನಿ ಮಾತ್ರ ಅತಿ ಸಭ್ಯ ಉಡುಗೆಯನ್ನೇ ತೊಡಬೇಕೆಂದು ಬಯಸುತ್ತಾರೆ. ಆದ್ದರಿಂದ ವಿವಾಹವಾದ ಪ್ರಾರಂಭದ ದಿನಗಳಿಂದಲೇ ನಿಮ್ಮಿಬ್ಬರಿಗೂ ಇಷ್ಟವಾಗುವ ಉಡುಗೆಗಳು ಯಾವುದೆಂದು ಕಂಡುಕೊಳ್ಳಿ ಹಾಗೂ ಆ ಪ್ರಕಾರ ಸಭ್ಯ ಉಡುಗೆಗಳನ್ನೇ ತೊಡಿರಿ.



Click it and Unblock the Notifications











