Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಡುಗಿಯರೇ ಡೇಟಿಂಗ್ ಮಾಡಿ, ಮೋಸ ಹೋಗಬೇಡಿ!
ಪ್ರೀತಿ ಹೇಳಿಕೇಳಿ ಮಾಡುವಂತದಲ್ಲ, ಅದು ತಾನಾಗಿಯೇ ಹುಟ್ಟುತ್ತದೆ. ಯಾರದ್ದೋ ಒತ್ತಾಯಕ್ಕೆ ಅಥವಾ ಬೇಡಿಕೆಗೆ ಪ್ರೀತಿಸಲು ಸಾಧ್ಯವಿಲ್ಲ. ಸರಿಯಾಗಿ ಯೋಜನೆ ಹಾಕಿಕೊಂಡು ಪ್ರೀತಿಸಲು ಯಾರೂ ಹೋಗುವುದಿಲ್ಲ. ಪ್ರೀತಿ ಒಂದು ರೀತಿಯ ಆಕರ್ಷಣೆ. ಇದೇ ಕಾರಣಕ್ಕಾಗಿ ಕೆಲವು ಮಂದಿ ತಮ್ಮ ಜತೆಗಾರರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿ ಬೀಳುತ್ತಾರೆ.
ಈ ರೀತಿ ಹುಟ್ಟುವ ಪ್ರೀತಿ ಕೆಲವು ಮಂದಿಗೆ ಅದೃಷ್ಟ ಮತ್ತು ಇನ್ನು ಕೆಲವು ಮಂದಿಗೆ ದುರಾದೃಷ್ಟವಾಗಿರಬಹುದು. ಆದರೆ ಇದರಲ್ಲಿ ಹೆಚ್ಚಾಗಿ ಸಂಕಷ್ಟಕ್ಕೆ ಸಿಲುಕುವುದು ಹುಡುಗಿಯರೇ. ಹುಡುಗಿಯರು ತಮ್ಮ ಜತೆಗಾರನ ಆಯ್ಕೆಯಲ್ಲಿ ತಪ್ಪು ಮಾಡಿದರೆ ಮುಂದೆ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆನ್‌ಲೈನ್ ಡೇಟಿಂಗ್: ಮೊದಲು ಪ್ರೊಫೈಲ್ ಸರಿಪಡಿಸಿ!
ಆದರೆ ಪುರುಷರು ತಮ್ಮ ಜತೆಗಾರರ ಬಗ್ಗೆ ಒಂದು ಕಲ್ಪನೆಯನ್ನು ಮಾಡಿಕೊಂಡಿರುತ್ತಾರೆ. ಅದರಲ್ಲೂ ಅವರಿಗೆ ಹುಡುಗಿಯರೊಂದಿಗಿನ ಲೈಂಗಿಕ ಸಂಬಂಧದ ಬಗ್ಗೆ ಸ್ಪಷ್ಟವಾದ ಕಲ್ಪನೆಯಿರುತ್ತಾರೆ. ಆದರೆ ಹುಡುಗಿಯರು ತಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಜತೆಗಾರನ ಬಗ್ಗೆ ಕಣ್ಣುಮುಚ್ಚಿ ನಂಬಿಕೆ ಇರಿಸಿಕೊಂಡರೆ ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ವಿಕೃತ ಮನಸ್ಸು ಹೊಂದಿರುವ ಗಂಡಸರೊಂದಿಗೆ ಡೇಟಿಂಗ್ ನಡೆಸುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!
ನೀವು ಡೇಟಿಂಗ್ ನಡೆಸುತ್ತಿರುವ ವ್ಯಕ್ತಿ ಒಳ್ಳೆಯವನಲ್ಲವೆಂದು ನಿಮಗನಿಸಿದರೆ ಆಗ ನೀವು ಎಚ್ಚರಿಕೆಯಿಂದ ಇರಬೇಕಾಗಿರುವುದು ತುಂಬಾ ಮುಖ್ಯವಾಗುತ್ತದೆ. ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಡೇಟಿಂಗ್ ನಡೆಸಿದರೆ ಸಂಕಷ್ಟದ ಸಮಯದಲ್ಲೂ ನೀವು ಸುರಕ್ಷಿತವಾಗಿರಬಹುದು.

ನಿಮ್ಮ ಜತೆಗಾರನನ್ನು ತಿಳಿದುಕೊಳ್ಳಿ
ನೀವು ಡೇಟಿಂಗ್‌ಗೆ ಹೋಗುವ ವ್ವಕ್ತಿಯು ವಯಸ್ಸಿನಲ್ಲಿ ನಿಮಗಿಂತ ತುಂಬಾ ದೊಡ್ಡವನಾಗಿದ್ದರೆ ಆಗ ಆತನ ಹಿನ್ನೆಲೆ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ಉತ್ತಮ. ನೀವು ಸ್ವಲ್ಪ ಪ್ರಯತ್ನಿಸಿದರೆ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲೂ ಆತನ ಬಗ್ಗೆ ಮಾಹಿತಿ ಸಂಗ್ರಹಿಸಬಹುದು.

ನಿಮ್ಮ ಜತೆಗಾರನನ್ನು ತಿಳಿದುಕೊಳ್ಳಿ
ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡಿದರೆ ಆಗ ನಿಮಗೆ ಡೇಟಿಂಗ್ ನಡೆಸುತ್ತಿರುವ ವ್ಯಕ್ತಿಯ ಬಗ್ಗೆ ಸ್ವಲ್ಪವಾದರೂ ಮಾಹಿತಿ ಲಭ್ಯವಾಗಬಹುದು. ವಿಕೃತ ಮನಸ್ಸಿನ ವ್ಯಕ್ತಿಯೊಂದಿಗೆ ಡೇಟಿಂಗ್ ನಡೆಸುವ ಮೊದಲು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನಿಮಗೆ ಪರಿಚಯವಿಲ್ಲದ ಸ್ಥಳಕ್ಕೆ ಭೇಟಿ ನೀಡಬೇಡಿ
ಹುಡುಗಿಯರಿಗೆ ಪರಿಚಯವಿಲ್ಲದ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗುವಂತಹ ಅಭ್ಯಾಸ ವಿಕೃತ ಮನಸ್ಸಿನ ವ್ಯಕ್ತಿಗಳದ್ದಾಗಿರುತ್ತದೆ. ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಮತ್ತು ಆದಷ್ಟು ಇದನ್ನು ತಪ್ಪಿಸಲು ಪ್ರಯತ್ನಿಸಬೇಕು.

ಡೇಟಿಂಗ್‌ಗೆ ಹೋಗುವ ಮೊದಲು ನಿಮ್ಮ ಆಪ್ತರೊಬ್ಬರಿಗೆ ಮಾಹಿತಿ ನೀಡಿ
ಡೇಟಿಂಗ್ ಅನ್ನುವುದು ತೀರ ವೈಯಕ್ತಿಕ ಹಾಗೂ ಅದನ್ನು ಗೌಪ್ಯವಾಗಿಟ್ಟುಕೊಳ್ಳುವುದು ನಿಮ್ಮ ಇಚ್ಛೆಯಾಗಿರಬಹುದು. ಆದರೆ ವಿಕೃತ ಮನಸ್ಸಿನ ವ್ಯಕ್ತಿಯೊಂದಿಗೆ ನೀವು ಡೇಟಿಂಗ್ ಗೆ ಹೋಗುತ್ತಿದ್ದೀರಿ ಎಂದಾದರೆ ಆಗ ನಿಮ್ಮ ಆಪ್ತರೊಬ್ಬರಿಗೆ ಮಾಹಿತಿ ನೀಡಬೇಕಾಗಿರುವುದು ತುಂಬಾ ಮುಖ್ಯ. ನಿಮ್ಮ ಆಪ್ತ ಗೆಳತಿಗೆ ನೀವು ಹೋಗುತ್ತಿರುವ ಸ್ಥಳ ಮತ್ತು ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದರೆ ಮುಂದೆ ಆಗುವಂತಹ ಅನಾಹುತ ತಪ್ಪಬಹುದು. ಇದು ನಿಮ್ಮ ಸುರಕ್ಷತೆಗಾಗಿ ಮಾತ್ರ. ಯಾಕೆಂದರೆ ಕೆಲವೊಂದು ಅಜ್ಞಾತ ವ್ಯಕ್ತಿಯೊಂದಿಗೆ ಡೇಟಿಂಗ್‌ಗೆ ಹೋಗುವಾಗ ಏನಾದರೂ ಸಂಭವಿಸಿದರೆ ಆಗ ಅದನ್ನು ತಪ್ಪಿಸಬಹುದಾಗಿದೆ.

ಸುಲಭವಾಗಿ ಬಿಟ್ಟುಕೊಡಬೇಡಿ
ಅಜ್ಞಾತ ವ್ಯಕ್ತಿಯೊಂದಿಗೆ ನೀವು ಡೇಟಿಂಗ್ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾಗದ ಅತ್ಯಂತ ಮುಖ್ಯ ವಿಷಯವಿದು. ನಿಮಗೆ ನಿಮ್ಮದೇ ಆದ ವ್ಯಕ್ತಿತ್ವ ಮತ್ತು ಭಾವನೆಗಳಿವೆ ಎನ್ನುವುದನ್ನು ಮರೆಯಬೇಡಿ. ನಿಮ್ಮ ಜತೆಗಾರನ ಆಸೆಗಳಿಗೆ ಅಷ್ಟು ಸುಲಭವಾಗಿ ತಲೆಬಾಗುವುದು ಬೇಡ. ಆತನೊಂದಿಗೆ ನೀವು ಲೈಂಗಿಕ ಸಂಬಂಧಕ್ಕೆ ಮುಂದಾಗುವ ಮೊದಲು ಇದನ್ನು ವಿರೋಧಿಸಲು ಪ್ರಯತ್ನಿಸಿ. ಇಲ್ಲಿ ನೀವು ಯಶಸ್ವಿಯಾದರೆ ಅದರ ಪ್ರತಿಫಲ ದೊಡ್ಡ ಮಟ್ಟದ್ದಾಗಿರುತ್ತದೆ.



Click it and Unblock the Notifications
