Latest Updates
-
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ
ಹುಡುಗಿಯರೇ ಹೀಗೆ, ಪ್ರಶಂಸೆಯ ಮಾತಿಗೆಯೇ ಕಾಯುತ್ತಿರುತ್ತಾರೆ!
ಹುಡುಗಿಯರಿಗೆ ಪ್ರಶಂಸೆ ಕೇಳುವುದು ಎಂದರೆ ತುಂಬಾ ಇಷ್ಟ. ಎಷ್ಟೇ ಸಲ ಇದನ್ನು ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕೆಂದು ಅವರಿಗನಿಸುತ್ತದೆ. ತಮ್ಮನ್ನು ಸಂತೋಷವಾಗಿಡುವ ಮತ್ತು ಸಂಬಂಧವನ್ನು ತೃಪ್ತಿದಾಯಕವಾಗಿಸುವಂತಹ ವಿಷಯವನ್ನು ಪ್ರೇಮಿ ಅಥವಾ ಪತಿಯ ಬಾಯಿಯಿಂದ ಕೇಳಬೇಕೆಂದು ಬಯಸುತ್ತಾಳೆ.
ಅದಾಗ್ಯೂ ಕೆಲವೊಂದು ಸರಳ ವಿಷಯಗಳನ್ನು ಹೇಳುವುದರಿಂದ ತಮ್ಮಿಬ್ಬರ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತದೆ ಎಂದು ಪುರುಷರು ಯಾವತ್ತೂ ಯೋಚಿಸುವುದಿಲ್ಲ. ಪ್ರಾಯೋಗಿಕವಾಗಿರುವುದು ಹುಡುಗಿಯರಿಗೆ ಇಷ್ಟವಾಗುವುದಿಲ್ಲ ಮತ್ತು ಹಿಂದೆ ಕೇಳಿದಂತಹ ಕೆಲವೊಂದು ವಿಷಯಗಳನ್ನೇ ಮರಳಿ ಕೇಳಲು ಇಷ್ಟಪಡುತ್ತಾರೆ. ಅವರನ್ನು ಕಡೆಗಣಿಸುವುದನ್ನು ಯಾವತ್ತೂ ಬಯಸದ ಹುಡುಗಿಯರು ತಮ್ಮ ಜತೆಗಾರನ ಜೀವನದಲ್ಲಿ ತಮ್ಮ ಪ್ರಾಮುಖ್ಯತೆ ಇರಬೇಕೆಂದು ಬಯಸುತ್ತಾರೆ.
ಕೆಲವೊಂದು ಸಲ ಏನಾದರೂ ಹೇಳಿದರೆ ಅದು ತಪ್ಪಾಗುತ್ತದೆ ಎಂದು ಹುಡುಗರು ಕೂಡ ಭಾವಿಸುತ್ತಾರೆ. ಇದರಿಂದಾಗಿ ಸುಮ್ಮನೆ ಕುಳಿತುಕೊಳ್ಳುವ ಹುಡುಗರು ಸಂಬಂಧವನ್ನು ಕೆಡಿಸಲು ಬಯಸುವುದಿಲ್ಲ. ಅದರಲ್ಲೂ ಕೆಲವೊಂದು ಹುಡುಗರು ಹಲವಾರು ಕಾರಣಗಳಿಂದ ಏನನ್ನೂ ಹೇಳುವುದಿಲ್ಲ. ತಮ್ಮ ಜೀವನದಲ್ಲಿ ಹುಡುಗಿ ಪ್ರಾಮುಖ್ಯವೆಂದು ತಿಳಿಯಬಾರದು ಎನ್ನುವ ಉದ್ದೇಶದಿಂದ ಕೆಲವು ಹುಡುಗರು ಏನೂ ಹೇಳಲ್ಲ. ಇನ್ನು ಕೆಲವರು ಹುಡುಗಿಯರಿಗೆ ಇದು ಮೊದಲೇ ತಿಳಿದಿದೆ ಎನ್ನುವ ಕಾರಣಕ್ಕೆ ಏನನ್ನೂ ಹೇಳಲು ಹೋಗುವುದಿಲ್ಲ. ಮೊದಲ ನೋಟದಲ್ಲೇ ಹೆಣ್ಣಿನ ಚಂಚಲ ಮನಸ್ಸನ್ನು ಗೆಲ್ಲಬಹುದೇ?

ಆದರೆ ಕೆಲವೊಂದು ಸರಳ ವಿಷಯಗಳನ್ನು ಹುಡುಗಿಗೆ ಹೇಳಲೇಬೇಕು. ಇದರಿಂದ ಅವಳಿಗೆ ಸಂತೋಷವಾಗುವುದಲ್ಲದೆ ನಿಮ್ಮಿಬ್ಬರ ಸಂಬಂಧ ಬಲಗೊಳ್ಳುತ್ತದೆ. ನಿಮ್ಮ ಹುಡುಗಿಯನ್ನು ಸಂತೋಷವಾಗಿಡಬಲ್ಲ ಕೆಲವೊಂದು ಸರಳ ವಿಷಯಗಳು ಇಲ್ಲಿವೆ.
ಆಕೆಯ ಅಭಿಪ್ರಾಯ ಕೇಳುವುದು
ಹುಡುಗಿಯ ಅಭಿಪ್ರಾಯ ಕೇಳುವುದರಿಂದ ಆಕೆ ನಿಮ್ಮ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದ್ದಾಳೆಂದು ತೋರಿಸಿಕೊಡುತ್ತದೆ. ನಿಮ್ಮ ನಿರ್ಧಾರಗಳಲ್ಲಿ ಆಕೆಯನ್ನು ಸೇರಿಸಿಕೊಳ್ಳುವುದರಿಂದ ಆಕೆಗೆ ಪ್ರಾಮುಖ್ಯತೆ ಮತ್ತು ಗೌರವ ನೀಡಿದಂತಹ ಭಾವನೆಯಾಗುತ್ತದೆ. ಆಕೆ ನೀಡುವಂತಹ ಸಲಹೆಯಿಂದಾಗಿ ನಿಮಗೆ ತುಂಬಾ ನೆರವಾಗಬಹುದು. ಯಾಕೆಂದರೆ ಅದರಲ್ಲಿ ಸ್ತ್ರೀ ಸಹಜ ಆಲೋಚನೆ ಇರುತ್ತದೆ ಮತ್ತು ಇದು ವಿಭಿನ್ನ ರೀತಿಯಿಂದ ನಿಮಗೆ ಲಾಭದಾಯಕವಾಗಿ ಪರಿಣಮಿಸಬಹುದು. ಸುಖಾಸುಮ್ಮನೆ ಗಂಡನ ಪ್ರೀತಿಯ ಮೇಲೆ ಸಂಶಯ ಪಡಬೇಡಿ!
ನಿನ್ನನ್ನು ಪಡೆದಿರುವುದು ನನ್ನ ಅದೃಷ್ಟ
ಆಕೆ ನಿಮಗೆ ಅದೃಷ್ಟವನ್ನು ಉಂಟುಮಾಡಿದ್ದಾಳೆ ಮತ್ತು ಆಕೆಯನ್ನು ಪಡೆದಿರುವುದು ನಿಮ್ಮ ಅದೃಷ್ಟವೆಂದು ಹುಡುಗಿಗೆ ಹೇಳಿದರೆ ಆಗ ಆಕೆ ಮತ್ತಷ್ಟು ನಿಮ್ಮ ಪ್ರೀತಿಯಲ್ಲಿ ಬೀಳುತ್ತಾಳೆ. ನಿಮ್ಮ ಜೀವನದಲ್ಲಿ ಆಕೆಗೆ ಇರುವಂತಹ ಪ್ರಾಮುಖ್ಯತೆ ತುಂಬಾ ಮುಖ್ಯ. ಯಾಕೆಂದರೆ ಆಕೆಯನ್ನು ಕಡೆಗಣಿಸುವುದಿಲ್ಲವೆಂದು ಆಕೆಗೆ ಅನಿಸುತ್ತದೆ. ಈ ಪದಗಳಿಂದ ನೀವು ಆಕೆಯನ್ನು ಬಿಟ್ಟಿರಲಾರಿರಿ ಎನ್ನುವುದು ತಿಳಿಯುತ್ತದೆ.
ಆಕೆಯನ್ನು ಶ್ಲಾಘಿಸಿ
ನಿಮ್ಮ ಹುಡುಗಿಯು ಹಲವು ಗಂಟೆಗಳ ಕಾಲ ಮೇಕಪ್ ಮಾಡಿಕೊಳ್ಳುವುದು ನಿಮಗೋಸ್ಕರ ಎನ್ನುವುದು ನೆನಪಿರಲಿ. ಆಕೆಯ ಸೌಂದರ್ಯದ ಬಗ್ಗೆ ನೀವು ಎರಡು ಪ್ರಶಂಸೆಯ ಮಾತುಗಳನ್ನು ಆಡಿದರೆ ಆಗ ಆಕೆಗೆ ಬೇರೆ ಜಗತ್ತೆ ಕಾಣಿಸಲ್ಲ. ಆಕೆ ನಿಮಗೋಸ್ಕರ ನೋವನ್ನು ಎದುರಿಸಲು ತಯಾರಿದ್ದಾಳೆ ಎಂದಾದರೆ ಆಕೆಗೋಸ್ಕರ ಪ್ರಶಂಸೆಯ ಕೆಲವೊಂದು ಶಬ್ದಗಳನ್ನು ಹೇಳಲೇಬೇಕು. ಆಕೆ ತುಂಬಾ ಸುಂದರವಾಗಿ ಕಾಣಿಸುತ್ತಾಳೆಂದು ಆಕೆಗೆ ಪ್ರತಿದಿನವೂ ಹೇಳಿ. ಕಪಿ ಚೇಷ್ಟೆ ಮೂಲಕ ಮನದ ಕನ್ಯೆಗೆ ಭಯ ಹುಟ್ಟಿಸಬೇಡಿ!
ನೀನು ನನ್ನ ಉತ್ತಮ ಗೆಳತಿ
ಹುಡುಗಿ ನಿಮ್ಮ ಜೀವನದ ಸಂಗಾತಿ ಮಾತ್ರವಲ್ಲದೆ ಒಳ್ಳೆಯ ಗೆಳತಿಯಾಗಿರಬೇಕೆಂದು ಬಯಸುತ್ತಾಳೆ. ಇದರಿಂದ ನೀವು ಯಾವಾಗಲೂ ಆಕೆಗೆ ನೀನು ನನ್ನ ಒಳ್ಳೆಯ ಗೆಳತಿ ಮತ್ತು ಜೀವನದ ನಿಜವಾದ ಪ್ರೀತಿ ಎಂದು ಹೇಳುತ್ತಿರಬೇಕು. ಇದರಿಂದ ಆಕೆಯ ಸೌಂದರ್ಯಕ್ಕೆ ಮಾತ್ರ ನೀವು ಆಕೆಯನ್ನು ಪ್ರೀತಿಸುತ್ತಿಲ್ಲ ಮತ್ತು ಆಕೆಯ ನಡತೆ ಕೂಡ ನಿಮಗಿಷ್ಟವೆಂದು ತಿಳಿಯುತ್ತದೆ...



Click it and Unblock the Notifications













