Latest Updates
-
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ!
ನಿಮ್ಮ ಸಂಸಾರ ಆನಂದ ಸಾಗರವಾಗಲು ಇಲ್ಲಿದೆ ಸರಳ ಸೂತ್ರ!
ಹೊಸತಾಗಿ ಒಂದು ಸಂಬಂಧದಲ್ಲಿ ಬಂಧಿತರಾದವರಿಗೆ ತಮ್ಮ ತಮ್ಮ ಸಂಗಾತಿಗಳ ಉತ್ತಮ ಗುಣಗಳೇ ಕಣ್ಣಿಗೆ ಕಾಣುತ್ತದೆ. ಆದರೆ ಪ್ರತಿ ಮನುಷ್ಯರಲ್ಲಿಯೂ ಹಲವು ದೌರ್ಬಲ್ಯಗಳಿರುತ್ತವೆ. ಕಾಲ ಕಳೆದಂತೆ ಈ ದೌರ್ಬಲ್ಯಗಳು ಸಂಗಾತಿಯನ್ನು ತಿರಸ್ಕರಿಸಲೂ ಕಾರಣವಾಗಬಹುದು. ನಿಮ್ಮ ಸಂಗಾತಿಯನ್ನು ಅರಿತುಕೊಳ್ಳುವುದು ಮುಖ್ಯವಾದರೆ ಸಂಗಾತಿಗಾಗಿ ತಮ ಕೆಲ ಗುಣಗಳನ್ನು ಬದಲಿಸಿಕೊಳ್ಳಬೇಕಾಗಿ ಬರಬಹುದು.
ಆದರೆ ಈ ಬದಲಾವಣೆ ಕೇವಲ ನಾಟಕ ಎಂದು ಅರಿತ ಬಳಿಕ ಸಂಗಾತಿಯ ಮನ ಮುದುಡಬಹುದು.
ನಿಮ್ಮ ಸಂಗಾತಿಯೊಡನೆ ಸುಖಸಂಬಂಧಕ್ಕಾಗಿ ಕೆಲವೊಂದು ಸಂಗತಿಗಳನ್ನು ಅರಿತಿರುವುದು ಅಗತ್ಯವಾಗಿದೆ. ಈ ಲೇಖನದಲ್ಲಿ ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ನೀಡಲಾಗಿದೆ. ಇವುಗಳು ಕೊಂಚ ಕಷ್ಟಕರವೆಂದು ಕಂಡುಬಂದರೂ ನಿಧಾನವಾಗೊ ಒಂದೊಂದೇ ಹೆಜ್ಜೆ ಇಡುತ್ತಾ ಮುಂದಡಿಯಿಡುವುದರಿಂದ ಇದನ್ನು ಸಾಧಿಸುವುದು ಸಾಧ್ಯ.
ಮೊತ್ತ ಮೊದಲು ನೀವು ಉತ್ತಮ ವ್ಯಕ್ತಿಯಾಗಿದ್ದೀರಿ ಎಂಬುದನ್ನು ನಿಮ್ಮ ಸಂಗಾತಿಗೆ ಸ್ಪಷ್ಟಪಡಿಸಬೇಕು. ಇದಕ್ಕಾಗಿ ನಿಮ್ಮಲ್ಲಿ ಬದಲಾವಣೆ ತರುವುದು ಅತಿ ಅಗತ್ಯ. ಬದಲಾಗುವುದು ಎಂದರೆ ನಿಮ್ಮ ಸುತ್ತಮುತ್ತಲ ಜನರು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಬೇಕು, ಮತ್ತು ಈ ಬದಲಾವಣೆ ಅತ್ಯಂತ ಪ್ರಾಮಾಣಿಕವಾಗಿರಬೇಕು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ:

ನಿಮ್ಮ ದಿನಚರಿಯನ್ನು ನಗು ನಗುತ ಕಳೆಯಿರಿ
"ನಗು ನಗುತ ನಲಿ ನಲಿ ಏನೇ ಆಗಲಿ" ಈ ಹಾಡಿನ ಸಾಲನ್ನು ನಿಮ್ಮ ಜೀವನದ ಧ್ಯೇಯವಾಗಿಸಿಕೊಳ್ಳಿ. ಹೌದು ಏನೇ ಆಗಲಿ ನಗುತ್ತ ಎದುರಿಸಿ. ಈ ನಗು ನಿಮ್ಮ ನಡುವಿನ ಕಂದಕಗಳನ್ನು, ಒತ್ತಡವನ್ನು ಮತ್ತು ಸಮಸ್ಯೆಗಳನ್ನು ಹಗುರವಾಗಿಸುತ್ತದೆ. ಎಂತಹ ಸಮಸ್ಯೆಯಲ್ಲಿಯು ಒಂದು ಜೋಕ್ ಹೇಳಿಕೊಂಡು ನಕ್ಕು ಹಗುರಾಗಿ. ಸಂಶೋಧಕರ ಪ್ರಕಾರ ನಗುವು ನಮ್ಮನ್ನು ದೀರ್ಘಾಯುಷ್ಯಿಗಳನ್ನಾಗಿ ಮಾಡುತ್ತದೆಯಂತೆ. ಇದು ನಾವು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಇದೆಲ್ಲಕ್ಕು ಮೇಲಾಗಿ ನಗುವಿನಿಂದ ನಮ್ಮಲ್ಲಿ ಧನಾತ್ಮಕ ಮನೋಭಾವ ಮತ್ತು ಒಳ್ಳೆಯ ಸ್ಫೂರ್ತಿ ಉಂಟಾಗುತ್ತದೆ.
ಸಾರ್ವಜನಿಕವಾಗಿ ಜಗಳವಾಡಬೇಡಿ
ಎಲ್ಲರಿಗು ತಿಳಿದಿರುವ ಸತ್ಯವೆಂದರೆ ಸಂಬಂಧಗಳ ಒಂದಲ್ಲ ಒಂದು ಭಿನ್ನಾಭಿಪ್ರಾಯದ ಸಲುವಾಗಿ ಮುರಿದುಬೀಳುತ್ತದೆ ಎಂಬುದು. ಇದು ಒಂದೇ ಬಾರಿ ಉದ್ಭವಿಸುವ ಭಿನ್ನಾಭಿಪ್ರಾಯದ ಸಲುವಾಗಿರಬಹುದು ಅಥವಾ ಪದೇ ಪದೇ ಉದ್ಭವಿಸುವ ಭಿನ್ನಾಭಿಪ್ರಾಯದ ಸಲುವಾಗಿರಬಹುದು. ಎಲ್ಲಾ ದಂಪತಿಗಳ ಪ್ರಕಾರ ಇದು ದಾಂಪತ್ಯದ ಅವಿಭಾಜ್ಯ ಅಂಗವಂತೆ. ಹಾಗೆಂದು ಈ ಮನಸ್ತಾಪವನ್ನು ಸಾರ್ವಜನಿಕವಾಗಿ ಜಗಳವಾಡಲು ಬಳಸಿಕೊಳ್ಳಬೇಡಿ. ಜಗಳವಾಡಲು ನೂರೊಂದು ಕಾರಣಗಳು ಇದ್ದರೆ, ಕೂಡಿ ಬಾಳಲು ಕೋಟಿ ಕಾರಣಗಳು ಇರುತ್ತವೆ ಎಂಬುದನ್ನು ಮರೆಯಬೇಡಿ. ಯಾವುದೇ ಕಾರಣಕ್ಕು ನಿಮ್ಮ ನಡುವಿನ ಅಸಮಾಧಾನವನ್ನು ಬೀದಿಗೆ ತರಬೇಡಿ, ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಅದನ್ನು ಕುಳಿತು ಮನೆಯಲ್ಲಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳಿ. ಪ್ರಣಯದ ಸಮಯದಲ್ಲಿ ಚುಂಬನದ ಸಮಸ್ಯೆ ಅಡ್ಡ ಬರುತ್ತಿದೆಯೇ?
ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ
ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ. ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು. ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.
ಸರಿಯಾದ ಸಂವಹನ ರೂಢಿಸಿಕೊಳ್ಳಿ
ಸುಮಾರು ಜನರು ತಮ್ಮ ಸಂಗಾತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳುವ ಕೆಲಸ ಮಾಡುವುದಿಲ್ಲ. ಇದರಿಂದಲೆ ಬಹುತೇಕ ಸಮಸ್ಯೆಗಳು ಉದ್ಭವಿಸುವುದು. ಇಬ್ಬರ ನಡುವೆ ಇರುವ ಈ ಹೊಂದಾಣಿಕೆಯ ಸಮಸ್ಯೆಯೆ ಇಬ್ಬರಿಗು ನಿರಾಸೆಯನ್ನು ತಂದು ಕೊಡುತ್ತದೆ. ಇದು ಅಷ್ಟು ಅಗತ್ಯವೇ ಎಂದು ಕೇಳುತ್ತೀರಾ? ಹೌದು, ಇದರ ಅಗತ್ಯ ಪ್ರತಿಯೊಬ್ಬರಿಗು ಇರುತ್ತದೆ. ಒಬ್ಬರ ಮನಸ್ಸಿನಲ್ಲಿ ಇರುವುದನ್ನು ಇನ್ನೊಬ್ಬರು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಸಾಕು, ನಿಮ್ಮ ಸಮಸ್ಯೆ ಅರ್ಧ ಪರಿಹಾರವಾಗುತ್ತದೆ. ಇದರಿಂದ ಸುಮಾರು ಸಮಯ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಗಂಡ -ಹೆಂಡತಿಯರ ಮಧ್ಯೆ ಸಂವಹನವು ಗುಪ್ತಗಾಮಿನಿಯಂತೆ ಇರಬೇಕು, ಆಗ ನೋಡಿ ನಿಮ್ಮ ಸಂಬಂಧ ಎಷ್ಟು ಗಾಢವಾಗುತ್ತದೆಯೆಂದು.



Click it and Unblock the Notifications













