Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ತಮಾಷೆಯಾದರೂ ಸತ್ಯ, ಸಂಸಾರದಲ್ಲಿ ಹೀಗೂ ನಡೆಯುತ್ತೆ!
ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಇದು ನಿಸರ್ಗ ಎರಡು ಜೀವಗಳನ್ನು ಜೊತೆಯಾಗಿ ಕಳೆಯಲು ನೀಡಿರುವ ವರವಾಗಿದ್ದು ಒಬ್ಬರಿಗೊಬ್ಬರು ಅನುರೂಪರಾಗಿ ಬಾಳುವುದೇ ಸುಖಜೀವನದ ಗುಟ್ಟಾಗಿದೆ. ಇದಕ್ಕೆ ದಂಪತಿಗಳ ನಡುವೆ ಪರಸ್ಪರ ವಿಶ್ವಾಸ, ಪ್ರೀತಿ, ಸಹಕಾರ ಅಗತ್ಯವಾಗಿದೆ. ಬಾಳ್ವೆಯನ್ನು ಜೊತೆಯಾಗಿ ಹಂಚಿಕೊಳ್ಳುವ ದಂಪತಿಗಳು ಮನೆಯ ವಸ್ತುಗಳನ್ನೂ ಸಮನಾಗಿ ಹಂಚಿಕೊಳ್ಳಬೇಕಾಗುತ್ತದೆ. ಹೆಚ್ಚಿನ ದಂಪತಿಗಳು ಇರುವುದರಲ್ಲಿಯೇ ಎಲ್ಲವನ್ನೂ ಪರಸ್ಪರ ಹಂಚಿಕೊಂಡು ಸುಖಜೀವನ ನಡೆಸುತ್ತಾರೆ.
ಆದರೆ ದಂಪತಿಗಳ ನಡುವೆಯೂ ಕೆಲವು ವಸ್ತುಗಳಿದ್ದು ಇವನ್ನು ಪರಸ್ಪರ ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇವರು ಸಂತೋಷ, ಊಟ, ದೇಹಗಳನ್ನು ಹಂಚಿಕೊಂಡರೂ ತಮ್ಮ ವ್ಯಯಕ್ತಿಕ ವಸ್ತುಗಳಿರುವ ಕಪಾಟು, ತಮ್ಮ ವೈಯಕ್ತಿಯ ಖರ್ಚು ಮತ್ತು ಕೆಲವು ವಿಶಿಷ್ಟ ಸಮಯವನ್ನು ಹಂಚಿಕೊಳ್ಳಲು ಒಪ್ಪುವುದಿಲ್ಲ. ಪ್ರಾರಂಭದಲ್ಲಿ ಕೊಂಚ ಇರಿಸು ಮುರುಸಾದರೂ ಇದಕ್ಕೆ ಒಪ್ಪಿಕೊಂಡು ಹೋದರೆ ಸರಿ, ಇಲ್ಲದಿದ್ದರೆ ಇಬ್ಬರ ನಡುವೆ ಅಸಾಮರಸ್ಯ ಹೊಗೆಯಾಡುತ್ತದೆ. ಈ ಅಸಾಮಾರಸ್ಯಕ್ಕೆ ಕಾರಣವಾಗುವ ಐದು ಕಾರಣಗಳನ್ನು ಇಂದು ಬೋಲ್ಡ್ ಸ್ಕೈ ತಂಡ ಹಂಚಿಕೊಳ್ಳುತ್ತಿದೆ. ಇದನ್ನು ಅರ್ಥೈಸಿಕೊಂಡು ನಿಮ್ಮ ದಾಂಪತ್ಯದಲ್ಲಿ ಉಂಟಾಗುತ್ತಿರುವ ಬಿರುಕನ್ನು ಪ್ರಾರಂಭದಲ್ಲಿಯೇ ಸರಿಪಡಿಸಿದರೆ ಹೆಚ್ಚಿನ ಅನಾಹುತದಿಂದ ತಪ್ಪಿಸಬಹುದು....

ತಮ್ಮ ವೈಯಕ್ತಿಕ ವಸ್ತುಗಳ ಕಪಾಟು
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ವಸ್ತುಗಳನ್ನು ಯಾರೂ ಮುಟ್ಟಬಾರದು ಎಂಬ ಬಯಕೆಯಿರುತ್ತದೆ. ಆದರೆ ದಂಪತಿಗಳಾದ ಬಳಿಕವೂ ತಮ್ಮ ಜೀವನಸಂಗಾತಿ ತಮ್ಮ ವೈಯಕ್ತಿಕ ವಸ್ತುಗಳನ್ನು ಮುಟ್ಟಿದರೂ ಹೆಚ್ಚಿನವರಿಗೆ ಸರಿಬರುವುದಿಲ್ಲ. ಆದ್ದರಿಂದ ಇಬ್ಬರ ವಸ್ತುಗಳು ಒಂದೇ ಕಪಾಟಿನಲ್ಲಿದ್ದರೆ ನಿಧಾನವಾಗಿಯಾದರೂ ಕ್ಲೇಶ ಹೊಗೆಯಾಡುವುದು ಖಂಡಿತ. ಇದು ತಮ್ಮ ಖಾಸಗಿ ಸ್ಥಳವನ್ನು ಆಕ್ರಮಿಸುವ ಹುನ್ನಾರವಾಗಿ ಕಾಣುತ್ತದೆ. ಈ ಪರಿಸ್ಥಿತಿ ಬರದೇ ಇರಲು ದಂಪತಿಗಳು ಪರಸ್ಪರ ತಮ್ಮ ವೈಯಕ್ತಿಕ ಸ್ಥಳವನ್ನು ಗುರುತಿಸಿಕೊಂಡು ಆ ಸ್ಥಳವನ್ನು ಆಕ್ರಮಿಸದೇ ಗೌರವ ನೀಡುವುದು ಕ್ಷೇಮ. ಅಥವಾ ಪರಸ್ಪರರಿಗೆ ಸೂಕ್ತವೆನಿಸುವ ಯಾವುದೇ ಕ್ರಮ ಕೈಗೊಳ್ಳಬಹುದು.
ಹಣಕಾಸಿನ ಹಂಚುವಿಕೆ
ಮದುವೆಯ ಹೊಸದರಲ್ಲಿದ್ದ ಬಿಸಿ ಸಮಯ ಕಳೆದಂತೆ ನಿಧಾನವಾಗಿ ಸಹಜಜೀವನದತ್ತ ಬರುತ್ತಾ ತಣ್ಣಗಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಯ ಖರ್ಚುಗಳಿರುವಂತೆ ದಂಪತಿಗಳಿಗೂ ಇರುತ್ತದೆ. ಈಗ ಒಬ್ಬರ ಈ ಖರ್ಚುಗಳು ಇನ್ನೊಬ್ಬರಿಗೆ ವೃಥಾ ಎಂದೆನ್ನಿಸಬಹುದು. ಅಥವಾ ದಂಪತಿಗಳಲ್ಲೊಬ್ಬರ ಖರ್ಚು ತೀರಾ ಅತಿಯಾಗಿ ಆದಾಯ ಸಾಲದೇ ಹೋಗಬಹುದು. ಸಂಗಾತಿಯ ಒಪ್ಪಿಗೆಯಿಲ್ಲದೇ ಮಾಡಿದ ಖರ್ಚು ಮುನಿಸು ತರಿಸಬಹುದು. ಒಟ್ಟಾರೆ ದಂಪತಿಗಳ ನಡುವೆ ಹಣಕಾಸು ಸಮನಾಗಿ ಹಂಚಲು ಸಾಧ್ಯವಾಗದೇ ಇರುವ ಪಕ್ಷದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ಇದರಿಂದ ಹೊರಬರಲು ಇಬ್ಬರೂ ಒಂದಾಗಿ ಒಂದಿಷ್ಟು ಹಣ ತಮ್ಮ ವೈಯಕ್ತಿಯ ಖರ್ಚಿಗಾಗಿ ತೆಗೆದಿಟ್ಟು ಇದನ್ನು ಹೇಗೆ ಖರ್ಚು ಮಾಡಿದಿರಿ ಎಂದು ಕೇಳದೇ ಇರುವುದು ಉತ್ತಮ.
ತಮ್ಮ ಶಕ್ತಿಯ ಬಗ್ಗೆ ಮಾತನಾಡುವುದು
ಸಾಮಾನ್ಯವಾಗಿ ದಂಪತಿಗಳಲ್ಲಿ ಪುರುಷ ಪ್ರಧಾನಪಾತ್ರವನ್ನು ವಹಿಸುತ್ತಾನೆ. ಸಂಸಾರಕ್ಕಾಗಿ ಪುರುಷ ಸಂಪಾದಿಸುವುದು ಮತ್ತು ಮಹಿಳೆ ಗೃಹಿಣಿಯಾಗಿ ಮನೆ ಮತ್ತು ಮಕ್ಕಳನ್ನು ಸಂಭಾಳಿಸುವುದು ಹಿಂದಿನಿಂದ ನಡೆದು ಬಂದ ಪದ್ದತಿಯಾಗಿದೆ. ಆದರೆ ಇಂದು ಮಹಿಳೆಯರೂ ಉತ್ತಮ ಶಿಕ್ಷಣ ಪಡೆದು ಉದ್ಯೋಗಸ್ಥೆಯಾಗಿ ಉತ್ತಮ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಕೆಲವೊಮ್ಮೆ ಇವರ ಹುದ್ದೆ ಅವರ ಪತಿಗಿಂತಲೂ ಮೇಲಿನ ದರ್ಜೆಯಲ್ಲಿರಬಹುದು. ಈಗ ಮೂಡಿದ ಅಂತರವನ್ನು ಮನೆಯ ಹೊರಗಿಟ್ಟು ಮನೆಯಲ್ಲಿ ದಂಪತಿಗಳಾಗಿದ್ದರೆ ದಾಂಪತ್ಯ ಸುಲಲಿತ. ಒಂದು ವೇಳೆ ಈ ಅಂತರ ಮನೆಯೊಳಗೆ ಕಾಲಿಟ್ಟಿತೋ, ದಾಂಪತ್ಯ ಕಹಿಯಾಗುತ್ತದೆ.
ಹಾಸಿಗೆಯನ್ನು ಹಂಚಿಕೊಳ್ಳುವುದು
ವಿವಾಹದ ಬಳಿಕ ದಂಪತಿಗಳು ಒಂದೇ ಹಾಸಿಗೆಯನ್ನು ಹಂಚಿಕೊಳ್ಳುವುದು ನಿಸರ್ಗದ ನಿಯಮ. ಸೋಜಿಗವೆಂದರೆ ಕೆಲವು ದಂಪತಿಗಳು ವಿವಾಹದ ಬಳಿಕವೂ ಒಂಟಿಯಾಗಿಯೇ ಮಲಗಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಸಂಗಾತಿಯೊಂದಿಗೆ ಮಲಗುವುದು ಅತಿ ಕಷ್ಟಕರವಾದ ನಿರ್ಣಯವಾಗಿದೆ.
ಅಭಿರುಚಿ ಮತ್ತು ಕನಸುಗಳು ಬೇರೆಯಾಗಿರುವುದು
ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳಿರುತ್ತವೆ. ಅದರಲ್ಲೂ ನವವಿವಾಹಿತರಲ್ಲಿ ಈ ಕನಸುಗಳು ಇನ್ನಷ್ಟು ಹೆಚ್ಚಿರುತ್ತವೆ. ಆದರೆ ದಂಪತಿಗಳಿಬ್ಬರ ಕನಸುಗಳು ಸಮನಾಗಿರುವುದು ಮಾತ್ರ ಅಪರೂಪ. ಇಬ್ಬರ ಕನಸೂ ಬೇರೆಬೇರೆಯಾಗಿರುತ್ತವೆ. ಒಂದು ವೇಳೆ ಈ ಕನಸುಗಳಿಗೆ ಅಗತ್ಯವಾದ ಕ್ರಮಗಳು ಪರಸ್ಪರರ ಹಿತಕ್ಕೆ ತಕ್ಕಂತಿರದಿದ್ದರೆ ಇಬ್ಬರಲ್ಲೊಬ್ಬರಿಗೆ ಅನಿವಾರ್ಯವಾಗಿ ತಮ್ಮ ಕನಸುಗಳನ್ನು ಕೊಲ್ಲಲೇ ಬೇಕಾಗುತ್ತದೆ. ಆದರೆ ಇದು ಯಾರದ್ದಾಗಬೇಕು ಎಂಬ ಪ್ರಶ್ನೆ ಸಂಸಾರದಲ್ಲಿ ಹುಳಿ ಹಿಂಡಬಹುದು. ಹಿಂದೆಲ್ಲಾ ಜೊತೆಯಾಗಿ ಕೂಡುಕುಟುಂಬದೊಂದಿಗೆ ವಾಸಿಸುತ್ತಿದ್ದವರು ಈಗ ಒಂಟಿಮನೆಗಳಲ್ಲಿ ವಾಸಿಸುತ್ತಿರುವುದಕ್ಕೆ ಇದೇ ಕಾರಣ.



Click it and Unblock the Notifications













