Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಪ್ರೀತಿ ವಿಶ್ವಾಸವೇ, ಸುಖಿ ಸಂಸಾರದ ರಹದಾರಿ
ಇತ್ತೀಚಿನ ದಿನಗಳಲ್ಲಿ ವಿಚ್ಚೇದನಗೊಂಡ ಪ್ರಸಂಗಗಳ ಅಂಕಿ ಅಂಶಗಳನ್ನು ಗಮನಿಸಿದರೆ ಒಂದು ವಿಷಯ ಗಾಬರಿಪಡಿಸುತ್ತದೆ. ಅದೆಂದರೆ ವಿಚ್ಛೇದನಗೊಂಡವರಲ್ಲಿ 68ಶೇಖಡಾದಷ್ಟು ಜೋಡಿಗಳು ಪ್ರೇಮ ವಿವಾಹವಾದವರು! ಅಂದರೆ ಮದುವೆಗೂ ಮುನ್ನವೇ ಒಬ್ಬರನ್ನೊಬ್ಬರು ಪರಸ್ಪರ ಮೆಚ್ಚಿ, ಪ್ರೀತಿಸಿ, ಮನೆಯವರನ್ನೂ ಸಮಾಜವನ್ನೂ ಎದುರು ಹಾಕಿಕೊಂಡು ವಿವಾಹಬಂಧನಕ್ಕೆ ಒಳಗಾದವರು.
ಇದು ಏನನ್ನು ಸೂಚಿಸುತ್ತದೆ ಎಂದರೆ ಮದುವೆಗೆ ಮುನ್ನ ಸೆಳೆದಿದ್ದ ಆಕರ್ಷಣೆ ತಾತ್ಕಾಲಿಕವಾಗಿದ್ದು ನಿಜಜೀವನದ ಕಷ್ಟಗಳು ಅಥವಾ ಮುಂದಿನ ಜೀವನದ ಕನಸುಗಳನ್ನು ನನಸಾಗಿಸುವಲ್ಲಿ ಇಬ್ಬರ ಮನೋಭಾವ ಬದಲಾಗುತ್ತಾ ಹೋಗುತ್ತದೆ. ಪ್ರತಿ ಪ್ರಸಂಗದಲ್ಲಿಯೂ ವಿಭಿನ್ನವಾದ ಕಾರಣಗಳನ್ನು ನೋಡಬಹುದು. ಪರೋಕ್ಷವಾಗಿ ಹಿರಿಯರು ಮಾಡಿದ ಜೋಡಿಗಳು ಹೆಚ್ಚು ಸಫಲವಾಗಿರುವುದನ್ನು ಕಾಣಬಹುದು. ಸಫಲಗೊಂಡ ಜೋಡಿಗಳನ್ನು ಕಂಡವರು 'ಈ ಮದುವೆ ಸ್ವರ್ಗದಲ್ಲಿ ನಡೆದಿದೆ' ಎಂದು ಹರಸುವುದುಂಟು. ಆಕೆಯ ಹೃದಯದ ಸಾಮ್ರಾಜ್ಯಕ್ಕೆ ನೀವೇ ದೊರೆಯಾಗಿ!
ಆದರೆ ಮದುವೆಗೂ ಮುನ್ನವೇ ಯಾವುದೇ ಜೋಡಿ ಮದುವೆಯ ಬಳಿಕ ಜೀವನಪರ್ಯಂತ ಆದರ್ಶ ಸತಿಪತಿಗಳಾಗಿ ಜೀವನ ನಡೆಸುತ್ತಾರೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಕೆಲವು ಜೋಡಿಗಳು ನಿಜವಾಗಿಯೂ ಆದರ್ಶವಾಗಿ ಬಾಳಿಯೇ ಬಾಳುತ್ತಾರೆ ಎಂಬುದನ್ನು ಕೆಲವು ಸೂಕ್ಷ್ಮ ಸಂಜ್ಞೆಗಳು ಸೂಚಿಸುತ್ತವೆ.
ಒಂದು ವೇಳೆ ನೀವು ಈಗಾಗಲೇ ಪ್ರೇಮದಲ್ಲಿದ್ದು ಶೀಘ್ರದಲ್ಲಿಯೇ ವಿವಾಹವಾಗುವವರಿದ್ದರೆ ಅಥವಾ ನಿಮ್ಮ ಮಕ್ಕಳು ಅಥವಾ ಸಂಬಂಧಿಕರು ವಿವಾಹವಾಗುವವರಿದ್ದರೆ ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ. ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ!

ಸಂಜ್ಜೆ #1
ನಿಮ್ಮ ಜೀವನಸಂಗಾತಿಗೆ ಯಾವುದೇ ನೆರವು ಬೇಕಿದ್ದರೆ ನೀವು ಅದನ್ನು ನೀಡಲು ಎಂದಿಗೂ ಹಿಂದೆ ಮುಂದೆ ನೋಡುವುದಿಲ್ಲ. ಅಲ್ಲದೇ ನನ್ನದೆಲ್ಲಾ 'ನಮ್ಮದು' ಎಂಬ ಭಾವ ಈಗಾಗಲೇ ಬಂದುಬಿಟ್ಟಿರುವುದರಿಂದ ಸುತಾರಾಂ ಎರಡನೇ ಯೋಚನೆಗೆ ಸರ್ವಥಾ ಅವಕಾಶ ನೀಡದೇ ಮುಂದುವರೆಯುವ ಪರಿ ಕಂಡುಬಂದರೆ ಇದು ನಿಜವಾಗಿ ಸಾರ್ಥಕ ಬಾಳು ನಡೆಸುವ ಜೋಡಿಯಾಗಿದೆ ಎಂದು ಅರ್ಥೈಸಿಕೊಳ್ಳಬಹುದು.

ಸಂಜ್ಜೆ #2
ಯಾವುದೇ ಜೋಡಿಯಲ್ಲಿ ಪರಸ್ಪರ ವಿಶ್ವಾಸ ಅತಿ ಮುಖ್ಯ. ವಿಶ್ವಾಸಘಾತುಕತನ ಯಾವುದೇ ಜೋಡಿಯನ್ನು ಕಡ್ಡಿಯಂತೆ ಮುರಿಯಬಹುದು. ಒಂದು ವೇಳೆ ನಿಮ್ಮ ಸಂಗಾತಿಯನ್ನು ಯಾವುದೇ ಅನುಮಾನಕ್ಕೆ ಎಡೆ ನೀಡದಂತೆ ನೀವು ನಂಬುವುದಾದರೆ ಇದು ಜನುಮದ ಜೋಡಿ ಎಂದು ತೀರ್‍ಮಾನಿಸಿ ಬಿಡಬಹುದು.

ಸಂಜ್ಜೆ #3
ಯಾವುದೇ ವ್ಯಕ್ತಿಯ ಬಗ್ಗೆ ಕೆಲವು ಬಾಹ್ಯ ಸೂಚನೆಗಳ ಮೂಲಕ ನಾವು ಒಂದು ತೀರ್ಮಾನಕ್ಕೆ ಬಂದುಬಿಡುತ್ತೇವೆ. ಉದಾಹರಣೆಗೆ ಬಟ್ಟೆ ಕೊಳಕಾಗಿ ಬಂದಿದ್ದ ವ್ಯಕ್ತಿಯನ್ನು ಪ್ರಥಮ ಬಾರಿ ಕಂಡಾಗ ಕೊಳಕ ಎಂದುಬಿಡಬಹುದು. ಆದರೆ ವಾಸ್ತವವಾಗಿ ಆತ ಈಗ ತಾನೇ ಕೆರೆಯಲ್ಲಿ ಬಿದ್ದಿದ್ದ ಮಗುವನ್ನು ರಕ್ಷಿಸಿ ಬಂದಿದ್ದ, ಆದ್ದರಿಂದ ಆತನ ಬಟ್ಟೆ ಕೊಳೆಯಾಗಿದೆ ಎಂದರೆ? ಆತನ ಬಗ್ಗೆ ಮೂಡಿದ್ದ 'ಕೊಳಕ' ನ ರೂಪ ತಳೆದು ದೇವದೂತನ ರೂಪ ಮೂಡುತ್ತದೆ, ಅಲ್ಲವೇ? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಂಜ್ಜೆ #3
ಅಂತೆಯೇ ನಿಮ್ಮ ಜೀವನಸಂಗಾತಿಯಾಗುವವರು ನಿಮ್ಮ ಬಾಹ್ಯ ಲಕ್ಷಣಗಳನ್ನು ಕಂಡು ನಿಮ್ಮ ಬಗ್ಗೆ ಥಟ್ಟನೇ ಒಂದು ಅಭಿಪ್ರಾಯ ಮೂಡಿಸದೇ ನಿಮ್ಮ ಅಂತರಾಳದ ವ್ಯಕ್ತಿಯನ್ನು ಅರಿತಿದ್ದರೆ, ಅಲ್ಲದೇ ಇಬ್ಬರಿಂದಲೂ ಈ ಬಗೆ ಕಂಡುಬಂದರೆ ಇದು ನಿಜವಾಗಿ ಸಾವಿನವರೆಗಿನ ಜೋಡಿ ಎಂದು ತೀರ್ಮಾನಿಸಬಹುದು.

ಸಂಜ್ಜೆ #4
ನಿಮ್ಮ ಜೀವನಸಂಗಾತಿಯೊಂದಿಗೆ ಮಾತನಾಡುವಾಗ ಅತ್ಯಂತ ನಯ, ವಿನಯ ಮತ್ತು ಸ್ಪಷ್ಟ ಮಾತುಗಳಲ್ಲಿ, ಮನಸ್ಸಿಗೆ ಹಿತಕರವಾಗುವಂತೆ ಮಾತನಾಡಿದರೆ ಮತ್ತು ಅಪ್ಪಿ ತಪ್ಪಿಯೂ ಅವರಿಗೆ ನೋವುಂಟಾಗುವ ಮಾತನ್ನಾಡದೇ ಸಂವಹಿಸಿದರೆ ಇದು ಅತ್ಯಂತ ಯಶಸ್ವಿ ಜೋಡಿ ಎಂದು ಅರಿತುಕೊಳ್ಳಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಂಜ್ಜೆ #4
ಇಬ್ಬರೂ ಮಾತನಾಡುವಾಗ ಒಬ್ಬರಿಗೊಬ್ಬರು ಸಮಯ ನೀಡಿ ಮಾತುಕತೆಯ ಮೂಲಕವೇ ಇಬ್ಬರಿಗೂ ಸಮರ್ಪಕವಾದ ತೀರ್ಮಾನಕ್ಕೆ ಬರುವುದನ್ನು ಕಂಡುಕೊಳ್ಳಬಹುದು.

ಸಂಜ್ಜೆ #5
ಒಂದು ವೇಳೆ ಇಬ್ಬರ ಜೀವನದ ಗುರಿ ಒಂದೇ ಆಗಿದ್ದರೆ ಪರಸ್ಪರ ಪೂರಕವಾಗಿರುತ್ತದೆ. ಆದರೆ ಜೀವನಸಂಗಾತಿಯ ವೃತ್ತಿ ಪ್ರವೃತ್ತಿಗಳು ಯಾವುದೇ ಇರಲಿ ಆ ವೃತ್ತಿಗೆ ಪೂರ್ಣವಾದ ಗೌರವ ನೀಡುವ ಮೂಲಕ ಹಾಗೂ ಜೀವನಸಂಗಾತಿಯನ್ನು ಓರ್ವ ವ್ಯಕ್ತಿಯಾಗಿ ಗೌರವಾದರ ಅಭಿಮಾನಗಳಿಂದ ನೋಡುವ ಮೂಲಕ ಯಾವುದೇ ಜೋಡಿ ಅತ್ಯಂತ ಯಶಸ್ವಿಯಾಗಬಲ್ಲದು. ಒಂದು ವೇಳೆ ಪರಸ್ಪರ ನಿಮ್ಮ ಜೀವನಸಂಗಾತಿಯಿಂದ ಈ ಪರಿ ಕಂಡುಬಂದರೆ ನಿಮ್ಮ ಜೋಡಿ ನಿಜವಾಗಿ ಸ್ವರ್ಗದಲ್ಲಿಯೇ ನಿಶ್ಚಯಿಸಲ್ಪಟ್ಟಿದೆ ಎಂದು ತೀರ್ಮಾನಿಸಬಹುದು.



Click it and Unblock the Notifications