Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಇಂತಹ ಹುಡುಗರ ಕೈ ಹಿಡಿಯುವವರು ನಿಜಕ್ಕೂ ಅದೃಷ್ಟವಂತರು!
ಯಾವುದೇ ಸಂಬಂಧದಲ್ಲಿ ಓರ್ವ ವ್ಯಕ್ತಿ ಇನ್ನೊಬ್ಬರಿಗೆ ತೋರುವ ಗೌರವ ಮುಖ್ಯವಾಗಿದೆ. ಅದರಲ್ಲಿಯೂ ಜೀವನಸಂಗಾತಿಗಳಾಗುವವರಲ್ಲಿ ಇನ್ನಷ್ಟು ಅಗತ್ಯವಾಗಿದೆ. ಈ ಗೌರವ ಅಂತರಾಳದಿಂದ ಬರುವಂತಹದ್ದಾಗಿರಬೇಕೇ ವಿನಃ ತೋರಿಕೆಯದ್ದಾಗಿರಬಾರದು. ಆದರೆ ಎಷ್ಟೋ ಸಲ ಕೇವಲ ಸ್ನೇಹ ಗಳಿಸಲು ಅಥವಾ ತನ್ನ ಅಹಂಭಾವವನ್ನು ಎತ್ತಿಹಿಡಿಯಲು ಕೃತಕವಾದ ಗೌರವವನ್ನು ತೋರುವುದೂ ಇದೆ. ಇನ್ನು ಕೆಲವೊಮ್ಮೆ ಕೆಲವರಿಗೆ ತಮ್ಮ ಇಷ್ಟದ ಮನದನ್ನೆಯನ್ನು ಗೆಲ್ಲಲು ಕೃತಕ ಗೌರವ ತೋರುವುದು ಅವರು ಉಪಯೋಗಿಸುವ ಅಸ್ತ್ರಗಳೂ ಆಗಿವೆ .
ಅಪ್ಪಟ ಪ್ರೀತಿ ಬೆಳೆಯಲು ಪರಸ್ಪರ ವಿಶ್ವಾಸ, ಗೌರವ, ಮತ್ತು ಬದ್ಧತೆ ಅಗತ್ಯ. ಇದರಲ್ಲಿ ಕೃತ್ರಿಮತೆ, ಬೂಟಾಟಿಕೆ, ಕಪಟತನ, ನಾಟಕೀಯತೆ ಸಲ್ಲದು. ಇನ್ನೊಬ್ಬರ ಹಂಗಿಗೆ ಒಳಗಾಗಿಯೂ ಒತ್ತಡದ ಗೌರವವೂ ಸಲ್ಲದು. ಈ ಪರಿ ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳನ್ನು ಮದುವೆಯಾಗುವವರಿಗೆ ಬಹುವಾಗಿ ಕಾಡುತ್ತದೆ.
ಅಂದರೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿರುವ ಮಕ್ಕಳಿಗೆ ಗೌರವ ತೋರುವುದು ಆ ವ್ಯಕ್ತಿಗಳ ಪ್ರತಿಷ್ಠೆಗೇ ಹೊರತು ಅವರಿಗಲ್ಲ! ಆದರೆ ಈ ಪರಿಯೂ ಪ್ರೀತಿಯಲ್ಲಿದ್ದವರಿಗೆ ನಿಜವೆಂದೇ ತೋರುತ್ತದೆ. ಒಂದು ವೇಳೆ ನೀವು ಸಂಬಂಧದಲ್ಲಿರುವ ವ್ಯಕ್ತಿ ನಿಮಗೆ ನೀಡುವ ಅಥವಾ ತೋರುತ್ತಿರುವ ಗೌರವ ಅಪ್ಪಟವಾದದ್ದೇ ಅಥವಾ ಬೂಟಾಟಿಕೆಯದ್ದೇ ಎಂದು ತಿಳಿಯಲು ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ..

ನಿಮ್ಮ ಅಭಿಪ್ರಾಯಕ್ಕೂ ಬೆಲೆಯಿರುತ್ತದೆ
ಒಂದು ವೇಳೆ ನಿಮ್ಮನ್ನು ಮದುವೆಯಾಗಬಯಸುವ ವ್ಯಕ್ತಿ ನಿಮ್ಮನ್ನು ನಿಜಕ್ಕೂ ಗೌರವಿಸುವಂತಿದ್ದರೆ ನಿಮ್ಮ ಅಭಿಪ್ರಾಯಕ್ಕೂಖಂಡಿತಾ ಬೆಲೆ ನೀಡುತ್ತಾನೆ. ಒಂದು ವೇಳೆ ನಿಮ್ಮ ಜೀವನದ ನಿರ್ಧಾರಗಳನ್ನು ಆತ ಒಪ್ಪದೇ ಇದ್ದರೆ, ಅದರಲ್ಲೂ ಇದು ಆತನ ಪ್ರತಿಷ್ಠೆಗೆ ವಿರುದ್ಧ ಅಥವಾ ಎಣಿಕೆಗೆ ಅಥವಾ ಭವಿಷ್ಯದಲ್ಲಿ ಹಣ ಸಂಪಾದಿಸುವ ಗುರಿಗೆ ವಿರುದ್ಧವಾಗಿದ್ದರೆ ಆತನ ಪ್ರತಿಕ್ರಿಯೆ ವಿರುದ್ಧವಾಗಿರುತ್ತದೆ. ಮುಂದೆ ಓದಿ

ನಿಮ್ಮ ಅಭಿಪ್ರಾಯಕ್ಕೂ ಬೆಲೆಯಿರುತ್ತದೆ
ಇದನ್ನು ಪರೀಕ್ಷಿಸಬೇಕೆಂದರೆ ನೀವು ಈಗಿರುವ ಕೆಲಸ ಬಿಟ್ಟು ಸಮಾಜಸೇವೆಯತ್ತ ಗಮನ ಹರಿಯುತ್ತಿದೆ, ಈ ಬಗ್ಗೆ ಆತನ ಅಭಿಪ್ರಾಯವನ್ನು ಕೇಳಿ, ಪ್ರತಿಕ್ರಿಯೆಯನ್ನು ಗಮನಿಸಿ. ಒಂದು ವೇಳೆ ಆತ ನಿಮ್ಮ ಇಷ್ಟದ ಅಭಿಪ್ರಾಯವನ್ನು ಪರಿಗಣಿಸಿದರೆ ಆತ ನಿಜಕ್ಕೂ ನಿಮಗೆ ಗೌರವ ನೀಡುತ್ತಾನೆ ಎಂದು ಅರ್ಥೈಸಿಕೊಳ್ಳಬಹುದು.

ನೀವೇನು ಮಾಡಬೇಕೆಂದು ಆತ ಬಲವಂತ ಮಾಡುವುದಿಲ್ಲ
ಒಂದು ವೇಳೆ ಜೀವನದಲ್ಲಿ ನೀವು ಏನು ಮಾಡಬೇಕೆಂದು ಬಯಸಿದ್ದೀರೋ ಅಥವಾ ನಿಮ್ಮ ಮಹತ್ವಾಕಾಂಕ್ಷೆಯ ವಿಷಯಕ್ಕೆಂದೂ ಆತ ವಿರೋಧ ವ್ಯಕ್ತಪಡಿಸುವುದಿಲ್ಲ. ತನ್ನ ಅಭಿಪ್ರಾಯಗಳನ್ನು ಬಲವಂತ ಪಡಿಸುವುದಿಲ್ಲ. ಬದಲಿಗೆ ನಿಮ್ಮ ಆಯ್ಕೆ, ಮಹತ್ವಾಕಾಂಕ್ಷೆಗೆ ತನ್ನ ಬೆಂಬಲ ಮತ್ತು ಸಲಹೆಗಳನ್ನು ನೀಡುತ್ತಾನೆ. ನೀವು ನೋಡದ ದೃಷ್ಟಿಕೋನದಿಂದ ಮುಂಬರುವ ಸಾಧಕ ಬಾಧಕಗಳನ್ನು ವಿವರಿಸುತ್ತಾನೆ. ಇದು ಹೌದು ಎಂದಾದರೆ ಆತ ನಿಮ್ಮನ್ನು ಗೌರವಿಸುತ್ತಿರುವುದು ಸತ್ಯ. ಬದಲಿಗೆ ತನ್ನ ಇಷ್ಟಗಳನ್ನು ಬಲವಂತವಾಗಿ ನಿಮ್ಮ ಮೇಲೆ ಹೇರಿದರೆ ಆತನ ಗೌರವ ಬೂಟಾಟಿಕೆಯಾಗಿದೆ.

ನಿಮ್ಮ ಏಳ್ಗೆಗೆ ಆತನೆಂದೂ ಹೊಟ್ಟೆಕಿಚ್ಚು ಪಡುವುದಿಲ್ಲ
ಒಂದು ವೇಳೆ ನೀವು ಆತನಿಗಿಂತಲೂ ಹೆಚ್ಚಿನ ಸಾಧನೆಯನ್ನು ತೋರಿದರೆ ಆ ಸಾಧನೆಯನ್ನು ಆತ ತನ್ನದೇ ಸಾಧನೆ ಎಂದು ತೋರುತ್ತಾ ಸಂತೋಷಪಟ್ಟರೆ, ನಿಮ್ಮ ಸಾಧನೆಗೆ ಇನ್ನಷ್ಟು ಬೆಂಬಲ ಮತ್ತು ಪ್ರೋತ್ಸಾಹ ತೋರಿದರೆ ನಿಮ್ಮನ್ನಾತ ಗೌರವಿಸುತ್ತಿರುವುದು ಖಂಡಿತಾ. ಬದಲಿಗೆ ನಿಮ್ಮ ಸಾಧನೆ ಆತನಿಗೆ ಹೊಟ್ಟೆಕಿಚ್ಚು ಉಂಟುಮಾಡುವಂತಿದ್ದರೆ ಆತನ ಗೌರವ ತೋರಿಕೆಯದ್ದಾಗಿದೆ.

ನಿಮ್ಮನ್ನು ಆತ ಎಂದಿಗೂ ಬೆಂಬಲಿಸುತ್ತಾನೆ
ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಮಯದಲ್ಲಿ ಆತ ಎಂದಿಗೂ ನಿಮ್ಮೊಂದಿಗಿದ್ದು ನಿಮಗೆ ಸಾಧ್ಯವಿರುವ ಎಲ್ಲಾ ಬೆಂಬಲಗಳನ್ನು ನೀಡುತ್ತಾನೆ. ಒಂದು ವೇಳೆ ಆತನ ಮಾತುಗಳು ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದರೂ ಆತ ಸತತವಾಗಿ ನಿಮ್ಮ ಬೆಂಬಲಕ್ಕೆ ನಿಂತಿದ್ದರೆ ಆತನ ಗೌರವ ವಿಶ್ವಾಸಾರ್ಹವಾಗಿದೆ. ಆತನಿಗೆ ನಿಮ್ಮ ಘನತೆಯೇ ಮುಖ್ಯವಾಗಿದ್ದು ಅದಕ್ಕೆ ಅಡ್ಡಿಯಾಗುವ ಯಾವುದೇ ವಿಷಯವನ್ನೂ ಆತ ಸಹಿಸದೇ ಇದ್ದರೆ ಆತನ ಗೌರವ ಅಪ್ಪಟವಾಗಿದೆ.

ಆತನ ಗೌರವ ತೋರಿಕೆಯದ್ದಾಗಿರುವುದಿಲ್ಲ
ನಾಲ್ಕು ಜನರ ನಡುವೆ ಆತ ನಿಮಗೆ ಯಾವ ಗೌರವ ತೋರುತ್ತಾನೆಯೋ ಅಷ್ಟೇ ಗೌರವವನ್ನು ನೀವಿಬ್ಬರೂ ಏಕಾಂತದಲ್ಲಿದ್ದಾಗಲೂ ತೋರಿದರೆ ಮಾತ್ರ ಆತನ ಗೌರವ ನಿಜವಾದುದ್ದಾಗಿದೆ. ತನ್ನ ಬಗ್ಗೆ ಅಥವಾ ತನ್ನ ವಸ್ತುಗಳ ಬಗ್ಗೆ ನಿಮಗೆ ಇಷ್ಟವಿಲ್ಲದಿದ್ದರೆ ಆತ ಎಂದಿಗೂ ಬಲವಂತವಾಗಿ ತನ್ನ ಮಾತುಗಳನ್ನು ಹೇರುವುದಿಲ್ಲ. ನಿಮಗೆ ತೋರುವ ಗೌರವವನ್ನು ಸಮಾಜದಲ್ಲಿಯೂ ಯಾವುದೇ ಅಳುಕು ಅಥವಾ ಕೃತ್ರಿಮತೆ ಇಲ್ಲದೆ ತೋರಿದರೆ ಅದು ನಿಜವಾದುದಾಗಿದೆ.



Click it and Unblock the Notifications











