Latest Updates
-
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ!
ಜಟಿಲ ವ್ಯಕ್ತಿತ್ವ: ಇವರ ಮನಸ್ಸು ಹೂವಿನಷ್ಟು ಕೋಮಲ!
ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹೇಳಲಾಗುತ್ತದೆ. ತಮ್ಮ ಬಾಳಸಂಗಾತಿಯಾಗುವವರು ತಮ್ಮನ್ನು ಅರ್ಥೈಸಿಕೊಳ್ಳುವವರಾಗಿರಬೇಕು, ಸರಳರಾಗಿರಬೇಕು, ತಮ್ಮನ್ನು ಅತೀವ ಪ್ರೀತಿಸುವವರಾಗಿರಬೇಕು ಎಂದು ಹೆಚ್ಚಿನವರು ಬಯಸುತ್ತಾರೆ. ಆದರೆ ಕೆಲವು ಮಹಿಳೆಯರು ತಮ್ಮ ಬಾಳಸಂಗಾತಿಯಾಗುವವರು ಕೊಂಚ ಕ್ಲಿಷ್ಟಕರ ಅಥವಾ ಜಟಿಲ ವ್ಯಕ್ತಿತ್ವ ಹೊಂದಿರಬೇಕೆಂದು ಬಯಸುತ್ತಾರೆ.
ಇದಕ್ಕೆ ಅವರು ತಮ್ಮದೇ ವ್ಯಾಖ್ಯಾನಗಳನ್ನೂ, ಕಾರಣಗಳನ್ನೂ ನೀಡುತ್ತಾರೆ. ಜಟಿಲ ವ್ಯಕ್ತಿತ್ವದ ವ್ಯಕ್ತಿಯೊಂದಿಗಿನ ಜೀವನ ಹೆಚ್ಚು ಪ್ರಬುದ್ಧವಾಗಿರುತ್ತದೆ, ಜೀವನದ ಪ್ರತಿ ಅವರು ಹೆಚ್ಚು ಜವಾಬ್ದಾರಿಯುತವಾಗಿರುತ್ತಾರೆ ಎಂದು ಇವರು ನಂಬುತ್ತಾರೆ.

ಆದರೆ ಈ ಪ್ರಬುದ್ಧತೆ, ಜವಾಬ್ದಾರಿಯನ್ನು ಸರಳ ವ್ಯಕ್ತಿತ್ವವುಳ್ಳವರಿಂದಲೂ ಪಡೆಯಬಹುದಲ್ಲ ಎಂಬ ಪ್ರಶ್ನೆಗೆ ಮಹಿಳೆಯರು ತಮ್ಮದೇ ವಿಚಾರವನ್ನು ಮಂಡಿಸುತ್ತಾರೆ. ಕ್ಲಿಷ್ಟ ವ್ಯಕ್ತಿತ್ವದ ವ್ಯಕ್ತಿಯೊಂದಿಗಿನ ಜೀವನ ಹಲವು ಅನಿರೀಕ್ಷಿತ ತಿರುವುಗಳನ್ನು ಪಡೆಯುವುದಾಗಿದ್ದು ಹಲವರಿಗೆ ಈ ತಿರುವುಗಳು ಜೀವನದಲ್ಲಿ ಉತ್ಸಾಹ ಅಥವಾ ಥ್ರಿಲ್ ಮೂಡಿಸುತ್ತವೆ ಎಂದು ಅವರು ನಂಬುತ್ತಾರೆ.
ಜಟಿಲ ವ್ಯಕ್ತಿತ್ವದ ವ್ಯಕ್ತಿ ಜೀವನ ಸಂಗಾತಿಯಾಗುವ ಮೂಲಕ ಜೀವನ ಸಾಹಸಮಯ, ಕುತೂಹಲಕರ, ಕಷ್ಟವನ್ನು ಎದುರಿಸುವ ರೂಪದಲ್ಲಿರುತ್ತದೆ. ಅದೇ ಸರಳ ವ್ಯಕ್ತಿತ್ವದ ಸಂಗಾತಿಯೊಂದಿಗಿನ ಜೀವನ ಯಾವುದೇ ಹೊಸತನವಿಲ್ಲದೇ ಏಕತಾನತೆಯಲ್ಲಿ ಸಪ್ಪೆಯಾಗಿರುತ್ತದೆ. ಜಟಿಲ ವ್ಯಕ್ತಿತ್ವದ ವ್ಯಕ್ತಿಯ ವಿಚಾರಗಳಲ್ಲಿ ಹೊಸತನ, ವಿಚಿತ್ರ ಆಲೋಚನೆಗಳು, ಜೀವನದಲ್ಲಿ ರಿಸ್ಕ್ ಎದುರಿಸುವ ಮನೋಭಾವ ಮೊದಲಾದವು ಆ ವ್ಯಕ್ತಿಯ ಬಗ್ಗೆ ಕುತೂಹಲ ಹೆಚ್ಚಿಸುತ್ತಾ ಹೋಗುತ್ತದೆ. ಮಹಿಳೆಯರು ಜಟಿಲ ವ್ಯಕ್ತಿಯಲ್ಲಿ ಅಪೇಕ್ಷಿಸುವ ಇಂತಹ ಇನ್ನೂ ಹಲವು ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ.. ಡೇಟಿಂಗ್ ವಿಷಯದಲ್ಲಿ ಹುಡುಗಿಯರಿಗೆ ನಾಚಿಕೆ ಜಾಸ್ತಿಯಂತೆ!
ಜಗತ್ತನ್ನು ನೋಡುವ ನಿಮ್ಮ ದೃಷ್ಟಿ ಬದಲಾಗುತ್ತದೆ
ನಿಮ್ಮ ಜೀವನಸಂಗಾಗಿ ಜಟಿಲ ವ್ಯಕ್ತಿತ್ವದವರಾಗಿದ್ದರೆ ಜಗತ್ತನ್ನು ನೋಡುವ ನಿಮ್ಮ ದೃಷ್ಟಿಕೋನ ಭಿನ್ನವಾಗಿರುತ್ತದೆ. ಇವರು ಜೀವನದ ಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಹೆಚ್ಚು ಸಮರ್ಥರಿರುತ್ತಾರೆ. ಇವರೊಂದಿಗೆ ಜಗತ್ತಿನ ಯಾವುದೇ ಸ್ಥಳಕ್ಕೆ ಯಾವುದೇ ಸಂಕೋಚವಿಲ್ಲದೇ ಹೋಗಲು ಸಾಧ್ಯವಾಗುತ್ತದೆ. ಇದರಿಂದ ಜೀವನದಲ್ಲಿ ಎಂದಿಗೂ ಬೋರ್ ಎಂಬ ಪದ ನುಸುಳಲು ಸಾಧ್ಯವೇ ಇಲ್ಲ.
ಅವರ ವ್ಯಕ್ತಿತ್ವ ಅಪೂರ್ವವಾಗಿರುತ್ತದೆ
ಜಟಿಲ ವ್ಯಕ್ತಿತ್ವದ ವ್ಯಕ್ತಿಗಳು ಒಂದು ಅಪೂರ್ವ ವ್ಯಕ್ತಿತ್ವ ಹೊಂದಿದ್ದು ಅವರ ಹೃದಯವನ್ನು ಪ್ರವೇಶಿಸಲು ಹೆಚ್ಚು ಕಷ್ಟಪಡಬೇಕಾಗುತ್ತದೆ. ಸುಲಭ ಪಟ್ಟುಗಳಿಗೆ ಬಗ್ಗದ ಇವರನ್ನು ಪಳಗಿಸಲು ಜೀವನದ ಎಲ್ಲಾ ಪಟ್ಟುಗಳನ್ನು ಪ್ರಯೋಗಿಸಬೇಕಾಗುತ್ತದೆ. ಆದರೆ ಕಷ್ಟಪಟ್ಟು ಪ್ರಯೋಗಿಸಿದ ಈ ಪಟ್ಟುಗಳಿಂದ ಒಮ್ಮೆ ವ್ಯಕ್ತಿಯ ಮನಗೆದ್ದರೆ ಆ ವ್ಯಕ್ತಿಯಿಂದ ಲಭಿಸುವ ಪ್ರೀತಿಯೂ ಅಪೂರ್ವವೇ ಆಗಿರುತ್ತದೆ. ಅಷ್ಟಕ್ಕೂ ಸುಲಭವಾಗಿ ಸಿಗುವ ಹಣ್ಣಿಗಿಂತ ಕಷ್ಟಪಟ್ಟು ಪಡೆದ ಹಣ್ಣೇ ಸಿಹಿ ಅಲ್ಲವೇ?
ಜೀವನದ ಜಂಜಾಟಗಳನ್ನು ಅವರು ಸುಲಭವಾಗಿಸುತ್ತಾರೆ
ಸರಳ ವ್ಯಕ್ತಿತ್ವದ ಜನರಿಗೆ ಜೀವನದ ಕಷ್ಟಗಳು ತಲೆಮೇಲೆ ಬಿದ್ದ ದೊಡ್ಡ ಹೊರೆಯಂತಿರುತ್ತವೆ. ಆದರೆ ಜಟಿಲ ವ್ಯಕ್ತಿತ್ವದವರಿಗೆ ಈ ಕಷ್ಟಗಳೇ ಜೀವನದ ಮೆಟ್ಟಿಲುಗಳಾಗಿವೆ. ಎಂತಹ ಪರಿಸ್ಥಿತಿಯನ್ನಾದರೂ ಇವರು ಸಮರ್ಥವಾಗಿ ಎದುರಿಸಬಲ್ಲರು. ಇದರಿಂದ ಜೀವನ ಹೆಚ್ಚು ಸುರಕ್ಷಿತವೂ ಸಂತೋಷಕರವೂ ಆಗಿರುತ್ತದೆ. ಗೆಳೆಯ ಮದುವೆಯಾಗದೇ ಕೈ ಕೊಡಬಹುದು, ಜೋಕೆ!
ಇವರು ತಮ್ಮ ಗುರಿಯ ಬಗ್ಗೆ ಹೆಚ್ಚು ಕೇಂದ್ರೀಕೃತರಾಗಿರುತ್ತಾರೆ
ಜಟಿಲ ವಕ್ತಿತ್ವದ ವ್ಯಕ್ತಿಗಳು ತಮ್ಮ ಜೀವನದ ಗುರಿಯತ್ತ ಹೆಚ್ಚು ಕೇಂದ್ರೀಕರಿಸುವುದರಿಂದಲೇ ಇತರ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಇವರ ಸ್ವಭಾವ ಭಿನ್ನವಾಗಿರುತ್ತದೆ. ಆದರೆ ತಮ್ಮ ಜೀವನದ ಮಹತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಲು ಇವರು ತಮ್ಮ ಸಮಯವನ್ನು ಮುಡಿಪಾಗಿಡುತ್ತಾರೆ. ಪ್ರಾರಂಭದಲ್ಲಿ ಇದು ಹೊಂದಿಕೊಳ್ಳಲು ಕಷ್ಟವೆನಿಸಿದರೂ ಕ್ರಮೇಣ ಅವರನ್ನು ಅರ್ಥೈಸಿಕೊಳ್ಳುತ್ತಾ ಹೋದಂತೆ ಅವರ ಗುರಿಯ ಬಗ್ಗೆ ಅಭಿಮಾನ ಮೂಡುತ್ತಾ ಹೋಗುತ್ತದೆ. ಇದಕ್ಕೆ ಸಹಕರಿಸುವ ಮೂಲಕ ಅವರಿಂದ ನಿಮಗೆ ಸಿಗುವ ಪ್ರೀತಿಯೂ ಆಗಾಧವಾಗುತ್ತಾ ಹೋಗುತ್ತದೆ.



Click it and Unblock the Notifications














